ಈ ರಾಶಿಯವರ ಜೊತೆ ಊಟ ಮಾಡೋದು ಅಂದ್ರೇನೇ ಖುಷಿ; ನೀವು ಇವರ ಜೊತೆ ಕೂತ್ರೆ ಎರಡು ತುತ್ತು ಜಾಸ್ತಿ ತಿನ್ನೋದು ಪಕ್ಕಾ
Feb 01, 2024 06:00 PM IST
ಸಾಂಕೇತಿಕ ಚಿತ್ರ
- Culinary Delights for Friends: ಕೆಲವರಿಗೆ ಹೊಸ ಹೊಸ ರುಚಿಗಳನ್ನು ಟ್ರೈ ಮಾಡೋದಂದ್ರೆ ಸಿಕ್ಕಾಪಟ್ಟೆ ಖುಷಿ. ಇನ್ನು ಕೆಲವರಿಗೆ ಬಗೆ ಬಗೆ ಖಾದ್ಯಗಳನ್ನು ತಯಾರಿಸುವುದೆಂದರೆ ಏನೋ ಸಂತೋಷ. ಕೆಲವು ರಾಶಿಗಳವರ ಜೊತೆಗೆ ಊಟ ಮಾಡೋದು ಅಂದ್ರೆ ತುಂಬಾನೆ ಖುಷಿ ನೀಡುತ್ತೆ. ಈ ರಾಶಿಯವರು ಅಡುಗೆ ತಯಾರಿಸುವುದರ ಜೊತೆಗೆ ಸ್ನೇಹಿತರೊಂದಿಗೆ ಊಟ ಮಾಡುವುದನ್ನು ಇಷ್ಟಪಡುತ್ತಾರೆ.
ನೀವು ಮದುವೆ, ಪಾರ್ಟಿಗಳಂತಹ ಯಾವುದೇ ಸಮಾರಂಭಕ್ಕೆ ಹೋಗಿ, ಇಲ್ಲವೇ ನಿಮ್ಮ ಸ್ನೇಹಿತರ ಮನೆಗೆ ಹೋಗಿ ಅಲ್ಲಿ ಎಲ್ಲರನ್ನು ಹೆಚ್ಚಾಗಿ ಸೆಳೆಯುವುದು ಅಲ್ಲಿನ ಊಟ. ಎಲ್ಲರೂ ಕೇಳುವು ಸಾಮಾನ್ಯ ಪ್ರಶ್ನೆ ಊಟ ಹೇಗಿತ್ತು? ಚೆನ್ನಾಗಿತ್ತಾ? ಏನು ಹೊಸ ರುಚಿ ಮಾಡಿದ್ರು? ಅನ್ನುವುದೇ ಆಗಿರುತ್ತದೆ. ನೀವು ತಯಾರಿಸುವ ಕೆಲವು ವಿಶೇಷ ಅಡುಗೆಗಳು ನಿಮ್ಮ ಸ್ನೇಹಿತರಿಗೆ ಬಹಳಷ್ಟು ಸಂತೋಷ ನೀಡುವುದಾಗಿರುತ್ತದೆ. ಊಟ ಮುಗಿದರೂ ಅದರ ರುಚಿಯ ವರ್ಣನೆ ಬಹಳ ದಿನಗಳವರೆಗೆ ಕೇಳಲು ಸಿಗುತ್ತದೆ. ಅಡುಗೆಗಳೇ ಹಾಗೆ, ಸ್ನೇಹಿತರ, ಮನೆಮಂದಿಗಳ ಮನಸ್ಸನ್ನು ಗೆಲ್ಲುತ್ತದೆ. ಕೆಲವರಿಗೆ ಹೊಸ ಹೊಸ ಅಡುಗೆಗಳನ್ನು ಮಾಡಿ ಇತರರಿಗೆ ಬಡಿಸುವುದೆಂದರೆ ಬಹಳ ಇಷ್ಟ. ಈ ರೀತಿಯ ಮನಸ್ಥಿತಿಯು ಅವರ ರಾಶಿಗಳ ಮೇಲೆ ಹೋಗುತ್ತದೆ ಎಂಬುದು ಕೆಲವರ ನಂಬಿಕೆ. ಕೆಲವು ರಾಶಿಗಳವರಿಗೆ ಅಡುಗೆ ಮಾಡಿ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾರೆ. ಅವರಿಗಿರುವ ಅಡುಗೆಯ ಮೇಲಿನ ಪ್ರೀತಿಯು ಅವರ ಸ್ನೇಹಿತರಿಗೂ ಖುಷಿ ನೀಡುತ್ತದೆ.
ತಾಜಾ ಫೋಟೊಗಳು
ಮೇಷ ರಾಶಿ
ಮೇಷ ರಾಶಿಯ ವ್ಯಕ್ತಿಗಳು ತಮ್ಮ ಊಟದ ವಿಷಯದಲ್ಲಿ ಬಹಳ ಉತ್ಸಾಹ ತೋರಿಸುವುದರ ಜೊತೆಗೆ ಹೊಸ ಹೊಸ ರುಚಿಗಳನ್ನು ಇಷ್ಟ ಪಡುತ್ತಾರೆ. ಅವರು ಗಾಢ ಮಸಾಲೆಗಳಿಂದ ಕೂಡಿದ ಆಹಾರಗಳನ್ನು ಇಷ್ಟಪಡುತ್ತಾರೆ. ಅವರು ಊಟದಲ್ಲಿ ಉತ್ಸಾಹ ತೋರಿಸುವುದರ ಜೊತೆಗೆ ನಾಲಿಗೆಗೆ ರುಚಿ ನೀಡುವ ವಿವಿಧ ಅಡುಗೆಗಳನ್ನು ತಯಾರಿಸಿ ಉಣಬಡಿಸುತ್ತಾರೆ.
ವೃಷಭ ರಾಶಿ
ಈ ರಾಶಿಯವರು ಜೀವನದಲ್ಲಿ ಒಳ್ಳೆಯದಕ್ಕೆ ಮಹತ್ವವನ್ನು ನೀಡುತ್ತಾರೆ. ಅದರಲ್ಲೂ ಒಳ್ಳೆಯ ಅಡುಗೆಗಳನ್ನು ಇಷ್ಟಪಡುತ್ತಾರೆ. ಇವರು ಸ್ನೇಹಿತರ ಜೊತೆಗೂಡಿ ಫ್ಯಾನ್ಸಿ ಊಟ ಮಾಡುವುದನ್ನು ನಿಜವಾಗಲೂ ಎಂಜಾಯ್ ಮಾಡುತ್ತಾರೆ. ಈ ರಾಶಿಯವರು ಸ್ನೇಹಿತರೊಂದಿಗೆ ಕೂಡಿ ಮಾಡುವ ಪ್ರತಿ ಊಟವು ಬಹಳಷ್ಟು ರುಚಿಯ ಅನುಭವ ನೀಡಬೇಕೆಂದು ಬಯಸುತ್ತಾರೆ.
ಕಟಕ ರಾಶಿ
ಈ ರಾಶಿಯವರು ತಮ್ಮ ಸ್ನೇಹಿತರನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅದನ್ನು ಅವರು ರುಚಿಯಾದ ಅಡುಗೆಗಳನ್ನು ತಯಾರಿಸುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಸ್ನೇಹಿತರಿಗಾಗಿ ಬೆಚ್ಚಗಿನ ಪ್ರೀತಿಯ ಅಪ್ಪುಗೆಯನ್ನು ನೀಡುವುಂತಹ ಆಹಾರಗಳನ್ನೇ ತಯಾರಿಸುತ್ತಾರೆ. ಅದು ಅವರನ್ನು ಮತ್ತಷ್ಟು ಸ್ನೇಹಶೀಲರನ್ನಾಗಿಸುತ್ತದೆ. ಜೊತೆಗೆ ಆ ಸಮಯವನ್ನು ಪ್ರೀತಿಯ ಕ್ಷಣವಾಗಿ ಪರಿವರ್ತಿಸುತ್ತದೆ.
ಇದನ್ನೂ ಓದಿ: ಮಾಘ ಮಾಸದಿಂದ ಸಂಕಷ್ಟ ಚತುರ್ಥಿವರೆಗೆ; 2024ರ ಫೆಬ್ರವರಿಯಲ್ಲಿರುವ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಸಿಂಹ ರಾಶಿ
ಸಿಂಹ ರಾಶಿಯವರು ಮೂಲತಃ ಗೆಳೆಯನ್ನು ರಂಜಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮ ಸ್ನೇಹಿತರಿಗಾಗಿ ಆಕರ್ಷಕ ಅಡುಗೆಗಳನ್ನು ತಯಾರಿಸುವುದನ್ನು ಇಷ್ಟಪಡುತ್ತಾರೆ. ಈ ರಾಶಿಯವರು ತಮ್ಮ ಸ್ನೇಹಿತರಿಗಾಗಿ ತಯಾರಿಸಿದ ಅಡುಗೆಗಳು ಒಂದು ಆಹಾರ ಪ್ರದರ್ಶನದಂತೆ ಕಾಣಿಸುತ್ತದೆ. ಮತ್ತು ನೋಡುಗರ ಕಣ್ಣಿಗೆ ವಿಶೇಷ ಅನುಭವ ಮೂಡುವಂತೆ ಮಾಡುತ್ತದೆ.
ಕನ್ಯಾ ರಾಶಿ
ಈ ರಾಶಿಯವರು ಯಾವುದೇ ವಿಷಯವಿರಲಿ ಅದಕ್ಕೆ ಹೆಚ್ಚು ಗಮನ ನೀಡುತ್ತಾರೆ. ಅದನ್ನು ಅವರು ತಯಾರಿಸುವ ಅಡುಗೆಯಲ್ಲೂ ಕಾಣಬಹುದು. ಜೊತೆಗೆ ಸ್ನೇಹಿತರೊಂದಿಗೆ ರುಚಿಕರವಾದ ಊಟವನ್ನು ಇವರು ಆನಂದಿಸುತ್ತಾರೆ. ಇವರು ತಮ್ಮ ಸ್ನೇಹಿತರಿಗಾಗಿ ಪರ್ಫೆಕ್ಟ್ ಅಡುಗೆ ತಯಾರಿಸಲು ಸಾಕಷ್ಟು ಶ್ರಮವಹಿಸುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಆಹಾರದ ವಿಷಯದಲ್ಲೂ ಸಹ ಸಮತೋಲನ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಇವರು ವಿಭಿನ್ನ ಅಭಿರುಚಿಗಳ ಆಹಾರಗಳನ್ನು ತಯಾರಿಸುತ್ತಾರೆ. ಊಟದ ಸಮಯದಲ್ಲಿ ಪ್ರತಿಯೊಬ್ಬರು ಅಡುಗೆಯನ್ನು ಆನಂದಿಸುವಂತೆ ತಯಾರಿಸುತ್ತಾರೆ.
ಧನು ರಾಶಿ
ಈ ರಾಶಿಯವರು ಅಡುಗೆ ವಿಷಯದಲ್ಲಿ ಹೊಸರುಚಿಯನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಇವರು ತಮ್ಮ ಸ್ನೇಹಿತರಿಗಾಗಿ ವಿಭಿನ್ನ ರುಚಿಯ ಅಡುಗೆ ತಯಾರಿಸುವುದರಲ್ಲಿ ಖುಷಿ ಕಾಣುತ್ತಾರೆ. ಜೊತೆಗೆ ವಿವಿಧ ಪಾಕಪದ್ಧತಿಗಳನ್ನು ಅನುಸರಿಸುತ್ತಾರೆ. ಇವರು ತಯಾರಿಸುವ ರುಚಿಯಾದ ಅಡುಗೆಗಳು ಸ್ನೇಹಿತರ ಮೇಲೆ ಮ್ಯಾಜಿಕ್ ಮಾಡುತ್ತದೆ.
ಇದನ್ನೂ ಓದಿ: Study room vastu tips: ನಿಮ್ಮ ಮಕ್ಕಳು ಪರೀಕ್ಷೆ ಚೆನ್ನಾಗಿ ಬರೆಯಬೇಕಾ; ಮನೆಯಲ್ಲಿ ಓದುವ ಕೋಣೆ ಹೀಗಿರಲಿ
ಮೀನ ರಾಶಿ
ಈ ರಾಶಿಯವರು ತಯಾರಿಸುವ ಅಡುಗೆಯಲ್ಲಿ ಕ್ರಿಯೇಟಿವಿಟಿಯನ್ನು ಕಾಣಬಹುದು. ಇವರು ತಮ್ಮ ಅಡುಗೆಗೆ ಹೊಸ ಕಲ್ಪನೆಯ ಸ್ಪರ್ಶವನ್ನು ನೀಡುತ್ತಾರೆ. ವಿಶಿಷ್ಟವಾದ ಸುವಾಸನೆಗಳನ್ನು ಅದರಲ್ಲಿ ಬೆರೆಸುತ್ತಾರೆ. ಈ ರಾಶಿಯವರು ಸಾಮನ್ಯ ಭೋಜನಕೂಟವನ್ನು ಸಹ ವಿಶೇಷವನ್ನಾಗಿಸುತ್ತಾರೆ.
ಮಿಥುನ ರಾಶಿ
ಈ ರಾಶಿಯವರು ಸಂಘ ಜೀವಿಗಳಾಗಿದ್ದು, ಅಡುಗೆ, ಊಟವನ್ನು ಪ್ರೀತಿಸುವವರಾಗಿರುತ್ತಾರೆ. ಇವರು ಊಟದ ಸಮಯದಲ್ಲಿ ಉತ್ಸಾಹಭರಿತ ಮಾತುಗಳನ್ನಾಡುತ್ತಾ ಎಲ್ಲರೊಂದಿಗೆ ಊಟವನ್ನು ಸವಿಯುತ್ತಾರೆ. ಇವರೊಟ್ಟಿಗೆ ಸೇರಿ ಮಾಡುವ ಪ್ರತಿ ಊಟವು ಉತ್ತಮ ಬಾಂಧ್ಯವದಿಂದ ಕೂಡಿರುವಂತೆ ಮಾಡುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)