logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Makar Sankranti: ಸಂಕ್ರಾಂತಿ ಹಬ್ಬದಂದು ಎಳ್ಳು-ಬೆಲ್ಲ ಹಂಚುವ ಉದ್ದೇಶವೇನು, ಮಕರ ಸಂಕ್ರಾಂತಿ ಆಚರಣೆಯ ವೈಶಿಷ್ಟ್ಯ ತಿಳಿಯಿರಿ

Makar Sankranti: ಸಂಕ್ರಾಂತಿ ಹಬ್ಬದಂದು ಎಳ್ಳು-ಬೆಲ್ಲ ಹಂಚುವ ಉದ್ದೇಶವೇನು, ಮಕರ ಸಂಕ್ರಾಂತಿ ಆಚರಣೆಯ ವೈಶಿಷ್ಟ್ಯ ತಿಳಿಯಿರಿ

HT Kannada Desk HT Kannada

Jan 11, 2024 12:11 PM IST

google News

ಮಕರ ಸಂಕ್ರಾಂತಿ

    • ಪ್ರತಿವರ್ಷ ಜನವರಿ 14 ಅಥವಾ 15 ರಂದು ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಸಂಕ್ರಾಂತಿ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹಬ್ಬದ ಆಚರಣೆಯ ವೈಶಿಷ್ಟ್ಯ, ಸಂಕ್ರಾಂತಿ ದೇವಿಯ ಕಥೆ ತಿಳಿಯಲು ಈ ಸ್ಟೋರಿ ಓದಿ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ) 
ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ಭಾರತದಲ್ಲಿ ಆಚರಿಸುವ ಬಹುದೊಡ್ಡ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಬಹುತೇಕ ಭಾರತ ಎಲ್ಲಾ ರಾಜ್ಯಗಳಲ್ಲೂ ಆಚರಿಸುತ್ತಾರೆ. ಧಾರ್ಮಿಕತೆಯ ಅನುಗುಣವಾಗಿ ಸಂಕ್ರಾಂತಿಯನ್ನು ಮಂಗಳಕರ ದಿನವೆಂದು ಕರೆಯುತ್ತೇವೆ. ಕಾರಣ ಈ ದಿನ ಸೂರ್ಯನು ತನ್ನ ಪಥವನ್ನು ಬದಲಾಯಿಸುತ್ತಾನೆ. ಇದು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ಮಕರ ಸಂಕ್ರಮಣ ಎಂದು ಕರೆಯುತ್ತಾರೆ. ವಿಭಿನ್ನ ಆಚರಣೆಗೆ ಸಂಬಂಧಿಸಿದಂತೆ ಇಂದು ಗತಿಸಿದ ಹಿರಿಯರಿಗೆ ತರ್ಪಣವನ್ನು ನೀಡುತ್ತಾರೆ. ಈ ದಿನವನ್ನು ಕರೆಯುವುದೇ ಉತ್ತರಾಯಣ ಪುಣ್ಯಕಾಲ ಎಂಬ ಹೆಸರಿನಿಂದ. ಮುಖ್ಯವಾದ ವಿಚಾರವೆಂದರೆ ಇದು ರೈತರ ಹಬ್ಬ. ಈ ದಿನದಂದು ದೇಶಾದ್ಯಂತ ರೈತರು ಉತ್ತಮ ಫಸಲು ಬರಲಿ ಎಂದು ಪೂಜಿಸುವ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪುರಾಣದ ಕಥೆಯೊಂದರ ಪ್ರಕಾರ ಶಂಕರಾಸುರ ಎಂಬ ರಾಕ್ಷಸನ ವಧೆ ಮಾಡಿದ ದೇವತೆಯೇ ಸಂಕ್ರಾಂತಿ. ಈ ದಿನ ಅರುಣ ಪೂರ್ವಕ ಸೂರ್ಯ ನಮಸ್ಕಾರವನ್ನು ಮಾಡುವ ರೂಢಿ ಇದೆ. ಸ್ನಾನದ ನಂತರ ಸೂರ್ಯ ಹಾಗೂ ಮನೆ ದೇವರ ಪೂಜೆಯನ್ನು ಮಾಡಿ ಧಾನ್ಯವನ್ನು ಅರ್ಪಿಸಬೇಕು. ಭಕ್ತರು ಈ ದಿನದಂದು ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನವನ್ನು ಮಾಡುತ್ತಾರೆ. ಮಕರ ರಾಶಿಯು ಶನಿಯ ರಾಶಿ ಆದರೂ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ವೇಳೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ವೇಳೆಯಲ್ಲಿ ಪ್ರತಿಯೊಂದು ರಾಶಿಯ ಮೇಲು ಜನನ ಲಗ್ನ ಮತ್ತು ಪ್ರಸಕ್ತ ನಡೆಯುತ್ತಿರುವ ದಶಾ ಭುಕ್ತಿಗಳನ್ನು ಆಧರಿಸಿ ಸೂರ್ಯದೇವನು ಫಲಾಪಲಗಳನ್ನು ನೀಡುತ್ತಾನೆ. ಆದ್ದರಿಂದ ಈ ಅವಧಿಯಿಂದ ಋಣಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕ ಶಕ್ತಿಯು ಪ್ರಸಾರವಾಗುತ್ತದೆ.

ಕರ್ನಾಟಕದಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ವಿಶೇಷವಾದ ಸಂಭ್ರಮವಿರುತ್ತದೆ. ಸಂಕ್ರಮಣವಿದ್ದರೂ ಹೊಸ ಬಟ್ಟೆಗಳನ್ನು ಧರಿಸಿ ಪೂಜೆಯಲ್ಲಿ ನಿರತರಾಗುತ್ತಾರೆ. ಈ ದಿನದಂದು ಮುಖ್ಯವಾಗಿ ಬಿಳಿ ಎಳ್ಳು, ಒಣಕೊಬ್ಬರಿ, ಬೆಲ್ಲದ ಮಿಶ್ರಣವನ್ನು ಆತ್ಮೀಯರಿಗೆ ನೀಡುತ್ತಾರೆ. ಇದರಿಂದ ಸ್ನೇಹ ಸಂಬಂಧಗಳು ಶಾಶ್ವತವಾಗಿ ನೆಲೆಸುತ್ತವೆ ಎಂಬ ನಂಬಿಕೆ ಇದೆ. ಎಳ್ಳಿನ ಅಧಿಪತಿ ಶನಿ. ಕರಿ ಎಳ್ಳು ಶ್ರಾದ್ದದ ದಿನ ತರ್ಪಣ ನೀಡಲು ಬಳಸುತ್ತಾರೆ. ಆದರೆ ಸಂಕ್ರಾಂತಿಯ ದಿನದಂದು ಶುಭ ಸೂಚಕವಾದ ಬಿಳಿ ಎಳ್ಳನ್ನು ಬಳಸುತ್ತಾರೆ. ಹಿರಿಯರು ಕಿರಿಯರು ಎಂಬ ಭೇದ ಭಾವವಿಲ್ಲದೆ ಬೆರೆಸಿದ ಎಳ್ಳನ್ನು ಪರಸ್ಪರ ಹಂಚಿ ತಿನ್ನುವುದರಿಂದ ಸ್ನೇಹ ಸಂಬಂಧಗಳು ದೀರ್ಘಕಾಲದವರೆಗೆ ಗಟ್ಟಿಯಾಗಿ ನಿಲ್ಲುತ್ತವೆ ಎಂಬುದು ನಂಬಿಕೆ.

ಇದನ್ನೂ ಓದಿ: Makar Sankranti: ಈ ವರ್ಷ ಜ 14ಕ್ಕೆ ಮಕರ ಸಂಕ್ರಾಂತಿ ಅಲ್ಲ; ಸಂಕ್ರಾಂತಿ ಆಚರಣೆ ಯಾವಾಗ, ಈ ದಿನದ ಮಹತ್ವವೇನು? ಇಲ್ಲಿದೆ ವಿವರ

ಇದರ ಜೊತೆಯಲ್ಲಿ ಚಿಕ್ಕ ಮಣ್ಣಿನ ಕುಡಿಕೆಯಲ್ಲಿ ಕಬ್ಬಿಣದ ತುಂಡುಗಳು ಹುರಿಗಳಡೆ, ಕಡಲೆಕಾಯಿ ಬೀಜ, ಎಳ್ಳು, ಅವರೆಕಾಯಿ ಬೆರೆಸಿ ಬಾಳೆಹಣ್ಣಿನ ಜೊತೆ ನೀಡುತ್ತಾರೆ. ಆಡು ಭಾಷೆಯಲ್ಲಿ ಎಳ್ಳು ತಿಂದು ಒಳ್ಳೆಯ ಮಾತನಾಡು ಎಂಬ ಮಾತೂ ಇದೆ. ವಿವಾಹವಾದ ನಂತರ ಮೊದಲ ಐದು ವರ್ಷಗಳು ವಿಶೇಷವಾದಂತಹ ಆಚರಣೆ ಇರುತ್ತದೆ. ಕರ್ನಾಟಕದ ಕೆಲವೆಡೆ ಗಾಳಿಪಟವನ್ನು ಹಾರಿಸುವ ಸಂಪ್ರದಾಯವಿದೆ. ಇದೆ ಹಳ್ಳಿಗಳಲ್ಲಿ ಹಸು ಎತ್ತುಗಳಿಗೆ ಅಲಂಕಾರವನ್ನು ಮಾಡಿ ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸುತ್ತಾರೆ.

ನೆರೆರಾಜ್ಯವಾದ ತಮಿಳುನಾಡಿನಲ್ಲಿ ಈ ದಿನವನ್ನು ಪೊಂಗಲ್ ಎಂದು ಕರೆಯುತ್ತಾರೆ. ಒಟ್ಟು ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಭೋಗಿಯ ದಿನದಂದು ಹೊಸ ಬಟ್ಟೆ ಒಡವೆಗಳನ್ನು ಧರಿಸುವುದು ಶ್ರೇಯಸ್ಕರ ಎಂಬ ನಂಬಿಕೆ ಇದೆ. ಪೊಂಗಲ್ ದಿನದಂದು ಹಾಲಿಗೆ ಬೆಲ್ಲವನ್ನು ಬೆರೆಸಿ ಹಾಲು ಉಕ್ಕಿಸುವ ಶಾಸ್ತ್ರವನ್ನು ಮಾಡುತ್ತಾರೆ. ಇದರಿಂದ ಜೀವನದಲ್ಲಿ ನಿರೀಕ್ಷಿಸಿದ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಕರ್ನಾಟಕವು ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲಿಯೂ ಮುಂಜಾನೆಯ ಸಮಯದಲ್ಲಿ ಗೋಪೂಜೆಯನ್ನು ಮಾಡಲಾಗುತ್ತದೆ

ಕೇರಳದಲ್ಲಿ ಇದೇ ದಿನದಂದು ಮಕರ ಜ್ಯೋತಿಯನ್ನು ವೀಕ್ಷಿಸಿ ಸಂಭ್ರಮಿಸುತ್ತಾರೆ. ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಿದ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಇದನ್ನು ಮಕರವಿಳಕ್ಕು ಎಂದು ಕರೆಯುತ್ತಾರೆ. ಎಲ್ಲರಿಗೂ ತಿಳಿದಂತೆ ಒಂದು ಪ್ರತ್ಯೇಕ ದಿಕ್ಕಿನಲ್ಲಿ ಬೆಟ್ಟದ ಮೇಲ್ಭಾಗದಲ್ಲಿ ಮೂರು ಬಾರಿ ಮಕರ ಜ್ಯೋತಿಯು ಕಾಣಿಸುತ್ತದೆ. ಇದು ಆಧ್ಯಾತ್ಮಕವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಭಾರತದ ದಕ್ಷಿಣದ ರಾಜ್ಯಗಳಲ್ಲಿ ಈ ಹಬ್ಬವು ಬಹುಮುಖ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಸಂಕ್ರಾಂತಿಯ ಆಚರಣೆ ಕರ್ನಾಟಕವನ್ನು ಕೊಂಚ ಹೋಲುತ್ತದೆ. ವಿಶೇಷವಾಗಿ ಎಳ್ಳಿನಿಂದ ಮಾಡಿದ ಲಡ್ಡುಗಳನ್ನು ಆತ್ಮೀಯರಿಗೆ ಹಂಚುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ