logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tarot Card: ಈ ವರ್ಷ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿಯಲಿದೆ, ಯಾರಿಗೆ ಅಶುಭ; 2024ರ ಟ್ಯಾರೋ ಕಾರ್ಡ್‌ ರೀಡಿಂಗ್‌ ಭವಿಷ್ಯ ತಿಳಿಯಿರಿ

Tarot Card: ಈ ವರ್ಷ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿಯಲಿದೆ, ಯಾರಿಗೆ ಅಶುಭ; 2024ರ ಟ್ಯಾರೋ ಕಾರ್ಡ್‌ ರೀಡಿಂಗ್‌ ಭವಿಷ್ಯ ತಿಳಿಯಿರಿ

Reshma HT Kannada

Jan 02, 2024 09:40 AM IST

google News

ಟ್ಯಾರೋ ಕಾರ್ಡ್‌ ರೀಡಿಂಗ್‌

    • 2024ರಲ್ಲಿ ರಾಶಿಗೆ ಅನುಗುಣವಾಗಿ ನಿಮ್ಮ ಭವಿಷ್ಯ ಹೇಗಿದೆ? ವೈಯಕ್ತಿಕ ಜೀವನ, ವೃತ್ತಿಜೀವನ, ವಿದ್ಯಾರ್ಥಿ ಬದುಕು, ವ್ಯವಹಾರ, ಹಣಕಾಸು ಈ ಎಲ್ಲದರ ಬಗ್ಗೆ ಟ್ಯಾರೋ ಕಾರ್ಡ್‌ ರೀಡಿಂಗ್‌ ಭವಿಷ್ಯ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.
ಟ್ಯಾರೋ ಕಾರ್ಡ್‌ ರೀಡಿಂಗ್‌
ಟ್ಯಾರೋ ಕಾರ್ಡ್‌ ರೀಡಿಂಗ್‌

ಹೊಸ ವರ್ಷದಲ್ಲಿ ನಮ್ಮ ಭವಿಷ್ಯ ಹೇಗಿರಬಹುದು, ಜಾತಕದ ಅನುಸಾರ ನಮಗೆ ಒಳ್ಳೆಯದಾಗುವುದೋ, ಕೆಟ್ಟದ್ದಾಗುವುದೋ ಹೀಗೆ ಹಲವು ಯೋಚನೆಗಳು ಮನಸ್ಸನಲ್ಲಿ ಮೂಡುವುದು ಸಹಜ. ನಕ್ಷತ್ರ ಮತ್ತು ಹುಟ್ಟಿದ ದಿನಾಂಕದ ಆಧಾರದ ನಮ್ಮಲ್ಲಿ ಜಾತಕಗಳನ್ನು ಬರೆದಿರುತ್ತಾರೆ. ಅದರ ಆಧಾರದ ಮೇಲೆ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹಳ್ಳಿಗಳಲ್ಲಿ ಗಿಳಿ ಭವಿಷ್ಯ ಹೇಳುವವರನ್ನು ನಾವು ನೋಡಿರುತ್ತೇವೆ. ಗಿಳಿ ಭವಿಷ್ಯ ಎಂದರೆ ಪಂಜರದಲ್ಲಿರುವ ಗಿಳಿಯೊಂದ ಹೊರ ಬಂದು ತನ್ನೆದುರು ಇರುವ ಕಾರ್ಡ್‌ವೊಂದನ್ನು ತನ್ನ ಕೊಕ್ಕಿನಿಂದ ತೆಗೆಯುತ್ತದೆ. ಅದರ ಆಧಾರದ ಮೇಲೆ ಗಿಳಿಯ ಮಾಲೀಕ ಎದುರಿಗಿರುವ ವ್ಯಕ್ತಿಯ ಭವಿಷ್ಯ ಹೇಳುತ್ತಾನೆ. ಈ ಕಾರ್ಡ್‌ ಭವಿಷ್ಯವೇ ಆಧುನಿಕ ಸ್ವರೂಪ ಪಡೆದುಕೊಂಡು ಟ್ಯಾರೋ ಕಾರ್ಡ್‌ ರೀಡಿಂಗ್‌ ಎಂಬುದಾಗಿದೆ.

ಟ್ಯಾರೋ ಕಾರ್ಡ್ ರೀಡಿಂಗ್‌ ವಿದೇಶದಲ್ಲಿ ಬಹಳ ಪ್ರಸಿದ್ಧವಾಗಿದೆ. ಇದನ್ನು ನಂಬುವವರ ಸಂಖ್ಯೆಯೂ ನಮ್ಮಲ್ಲಿಯೂ ಇದೆ. ಟ್ಯಾರೋ ಕಾರ್ಡ್ ರೀಡಿಂಗ್‌ನಲ್ಲಿ ನಿರ್ಧಾರವಾಗುವ ನಮ್ಮ ಭವಿಷ್ಯವು ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ನಂಬಲಾಗಿದೆ.

ಹೊಸ ವರ್ಷಕ್ಕೆ ಟ್ಯಾರೋ ಕಾರ್ಡ್‌ ರೀಡಿಂಗ್‌ ಮೂಲಕ ಯಾವ ರಾಶಿಚಕ್ರದ ಚಿಹ್ನೆಗಳು ಯಾವ ರೀತಿಯ ಫಲಿತಾಂಶಗಳನ್ನು ಪಡೆಯಲಿವೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

2024ರಲ್ಲಿ ವೃತ್ತಿಜೀವನದ ಬಗ್ಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ನಾಯಕತ್ವದ ಗುಣಗಳಿವೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಒಂಟಿಯಾಗಿರುವವರು ಜಂಟಿಯಾಗುತ್ತಾರೆ. ಸಂಗಾತಿಯೊಂದಿಗಿನ ಸಂಬಂಧವು ತುಂಬಾ ಮಧುರವಾಗಿರುತ್ತದೆ. ಭೂಮಿ ಅಥವಾ ಮನೆ ಖರೀದಿಸುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವಿರಿ. ಆರೋಗ್ಯವಾಗಿರಲು ಯೋಗ ಮತ್ತು ಧ್ಯಾನ ಮಾಡುವುದು ಒಳ್ಳೆಯದು.

ವೃಷಭ ರಾಶಿ

ಹೊಸ ವರ್ಷವು ವೃಷಭ ರಾಶಿಯವರ ಪ್ರೀತಿಯ ಜೀವನದಲ್ಲಿ ನಿರ್ಣಾಯಕ ತಿರುವು ತೆಗೆದುಕೊಳ್ಳುತ್ತದೆ. ಪತಿ-ಪತ್ನಿಯರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ. ಹೊಸ ವರ್ಷದಲ್ಲಿ, ಹಣದ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ದತ್ತಿ ಚಟುವಟಿಕೆಗಳಲ್ಲಿ ಆಸಕ್ತಿ. ವೃಷಭ ರಾಶಿಯ ಮಹಿಳೆಯರಿಗೆ ವೃತ್ತಿಯಲ್ಲಿ ಮುನ್ನಡೆಯಲು ಸುವರ್ಣಾವಕಾಶಗಳು ದೊರೆಯುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಪ್ರೇಮಿಗಳು ಮದುವೆಯಾಗಲಿದ್ದಾರೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಗಳು ಕೆಲವರಿಗೆ ಕಳವಳವನ್ನು ಉಂಟುಮಾಡಬಹುದು. ಹೊಸ ಕೆಲಸದ ಆಫರ್ ಬರುತ್ತದೆ. ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದ ಜನರು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಕಟಕ ರಾಶಿ

ಹೊಸ ವರ್ಷದಲ್ಲಿ ಕಟಕ ರಾಶಿಯವರು ತಮ್ಮ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಾರೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ವರ್ಷ ಕಠಿಣ ಸಮಯ. ಕೆಲಸದ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: Jadatva Yoga: ಜಡತ್ವಯೋಗದ ಪರಿಣಾಮ; ಹೊಸ ವರ್ಷದಲ್ಲಿ ಈ 3 ರಾಶಿಯವರ ಬಾಳಿನಲ್ಲಿ ಎದುರಾಗಲಿದೆ ನಾನಾ ಸಂಕಟ, ಜಾಗೃತೆ ಇರಲಿ

ಸಿಂಹ

ಹೊಸ ವರ್ಷದಲ್ಲಿ ಸಿಂಹ ರಾಶಿಯವರು ಅದೃಷ್ಟವಂತರು. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಸಂಬಂಧದಲ್ಲಿ ಜಗಳಗಳು ಹೆಚ್ಚು ಬೆಳೆಯಲು ಬಿಡದಿರುವುದು ಉತ್ತಮ. ಈ ವರ್ಷ ಹಣದ ಬಗ್ಗೆ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ವೃತ್ತಿರಂಗದಲ್ಲಿ ಪ್ರಗತಿ ಕಾಣಲಿದೆ. ಆರೋಗ್ಯದ ವಿಷಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಕನ್ಯಾ

ಕನ್ಯಾರಾಶಿಯವರು 2024ರಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಾರೆ. ಪ್ರೇಮ ಜೀವನದಲ್ಲಿ ಅವರು ಭಾವುಕರಾಗಿರುತ್ತಾರೆ. ಸಮಸ್ಯೆಗಳನ್ನು ಬಹಳ ಬುದ್ಧಿವಂತಿಕೆಯಿಂದ ಪರಿಹರಿಸಬೇಕು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಯೋಚಿಸುವುದು ಉತ್ತಮ. ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಕಷ್ಟಪಡುತ್ತಾರೆ. ಕಚೇರಿ ರಾಜಕೀಯದಿಂದ ದೂರವಿರಿ.

ತುಲಾ

2024ರಲ್ಲಿ ತುಲಾ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ವಿಯಾಗುತ್ತಾರೆ. ನೀವು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಹೊಸ ಸಾಧನೆಗಳನ್ನು ಮಾಡಲಿದ್ದೀರಿ. ಜೀವನದಲ್ಲಿ ಹೊಸ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಪ್ರೇಮ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಬಲವಾಗಿರುತ್ತದೆ. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ಹೊಸ ಕೆಲಸದ ಆಫರ್ ಬರುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ 2024ರ ವರ್ಷವು ತುಂಬಾ ಅನುಕೂಲಕರವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುವುದು. ಅತಿಯಾದ ಖರ್ಚಿನ ಬಗ್ಗೆ ಎಚ್ಚರದಿಂದಿರಿ. ಅಜೀರ್ಣ, ಶೀತ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕೆಲಸದಲ್ಲಿ ರಾಜಕೀಯದಿಂದ ದೂರವಿರುವುದು ಉತ್ತಮ.

ಧನು

ಧನು ರಾಶಿಯವರ ವೈಯಕ್ತಿಕ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಅನಿರೀಕ್ಷಿತ ಆದಾಯದ ಮೂಲಗಳ ಮೂಲಕ ಹಣವನ್ನು ಗಳಿಸಲಿದ್ದೀರಿ. ಆರೋಗ್ಯ ಸ್ವಲ್ಪ ಚಿಂತಾಜನಕವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ನೀವು ವೃತ್ತಿಯಲ್ಲಿ ಹೊಸ ಯಶಸ್ಸನ್ನು ಪಡೆಯುತ್ತೀರಿ.

ಇದನ್ನೂ ಓದಿ: Finance Horoscope: 2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ; ಆದಾಯದಷ್ಟೇ ಖರ್ಚು ಇರಲಿದೆ, ಷೇರು ಹೂಡಿಕೆಗೂ ಮುನ್ನ ತಜ್ಞರ ಸಲಹೆ ಪಡೆಯಿರಿ

ಮಕರ

ಮಕರ ರಾಶಿಯವರು 2024ರಲ್ಲಿ ತಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಂಬಂಧಿತ ಸಮಸ್ಯೆಗಳನ್ನು ಸಾಕಷ್ಟು ತಾಳ್ಮೆಯಿಂದ ಪರಿಹರಿಸಬೇಕು. ಸಂಗಾತಿಯ ಮೇಲೆ ತಪ್ಪು ತಿಳುವಳಿಕೆ ಮೂಡಿಸಿಕೊಳ್ಳದಿರಿ. ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ.

ಕುಂಭ

ಕುಂಭ ರಾಶಿಯವರು ತಮ್ಮ ಜೀವನದ ಗುರಿಗಳನ್ನು ಸಾಧಿಸಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಅಪಾರ ಯಶಸ್ಸನ್ನು ಸಾಧಿಸುವಿರಿ. ಸಂಸಾರದಲ್ಲಿ ನೆಮ್ಮದಿಯಿಂದ ಕಳೆಯುತ್ತಾರೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಕೂಡಿಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವಿರಿ. ವೃತ್ತಿ ಜೀವನದಲ್ಲಿ ಅವಕಾಶಗಳು ದೊರೆಯಲಿವೆ.

ಮೀನ ರಾಶಿ

ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗುತ್ತಾರೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ ಎದುರಾಗಲಿದೆ. ಹೊಸ ವರ್ಷದಲ್ಲಿ ಆರ್ಥಿಕವಾಗಿ ಅದೃಷ್ಟವಂತರು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಒಂಟಿಯಾಗಿರುವವರಿಗೆ ಜೀವನ ಸಂಗಾತಿ ಸಿಗುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ