ರಾಶಿಗೆ ಅನುಗುಣವಾಗಿ ನಿಮ್ಮ ಫಸ್ಟ್‌ಡೇಟ್ ಹೇಗಿದ್ರೆ ನಿಮಗಿಷ್ಟ ಆಗುತ್ತೆ ನೋಡಿ
Feb 18, 2024 12:46 PM IST
ರಾಶಿಗೆ ಅನುಗುಣವಾಗಿ ನಿಮ್ಮ ಫಸ್ಟ್‌ಡೇಟ್ ಹೇಗಿದ್ರೆ ನಿಮಗಿಷ್ಟ ಆಗುತ್ತೆ ನೋಡಿ
- ಫಸ್ಟ್‌ಡೇಟ್ ಬಗ್ಗೆ ಹಲವರು ಕನಸು ಕಾಣುತ್ತಾರೆ. ತಮ್ಮ ಮನಮೆಚ್ಚಿದವರನ್ನು ಭೇಟಿಯಾಗಲು ಸೂಕ್ತ ದಿನ ಹಾಗೂ ಸ್ಥಳಕ್ಕಾಗಿ ಕಾಯುವುದು ಸಹಜ. ಅದೆಲ್ಲಾ ಸರಿ, ನಿಮ್ಮ ರಾಶಿಗೆ ಪ್ರಕಾರ ನಿಮ್ಮ ಫಸ್ಟ್‌ಡೇಟ್ ಹೇಗಿರುವುದು ನಿಮಗಿಷ್ಟ, ಇಲ್ಲಿದೆ ನೋಡಿ ಉತ್ತರ.
ಫಸ್ಟ್‌ಡೇಟ್ ಅಥವಾ ನಮ್ಮ ಮನ ಮೆಚ್ಚಿದ ಸಂಗಾತಿಯನ್ನು ಮೊದಲ ಬಾರಿ ಭೇಟಿ ಮಾಡುವುದು ಪ್ರತಿಯೊಬ್ಬರು ಕುತೂಹಲ, ನಿರೀಕ್ಷೆ, ಒಂಥರಾ ಭಯ ಹೀಗೆ ವಿವಿಧ ಭಾವನೆಗಳ ಏರಿಳಿತ ಇರುವುದು ಸಹಜ. ನನ್ನ ಫಸ್ಟ್ ಡೇಟ್ ಹೇಗಿರಬಹುದು ಎಂದು ಕೆಲವರಲ್ಲಿ ಕುತೂಹಲವೂ ಇರಬಹುದು. ಜ್ಯೋತಿಷ್ಯದ ಪ್ರಕಾರ ವಿವಿಧ ರಾಶಿಯವರ ಫಸ್ಟ್‌ಡೇಟ್ ಒಂದೊಂದು ರೀತಿ ಇರುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಫಸ್ಟ್‌ಡೇಟ್ ಅನುಭವ ಏನಿರುತ್ತೆ ನೋಡಿ.
ತಾಜಾ ಫೋಟೊಗಳು
ಮೇಷ
ಈ ರಾಶಿಯವರು ಫಸ್ಟ್‌ಡೇಟ್ ಜವಾಬ್ದಾರಿ ತಾವೇ ತೆಗೆದುಕೊಳ್ಳುತ್ತಾರೆ. ಯಾವುದಾದರೂ ಹೊರ ರೆಸ್ಟೋರೆಂಟ್‌ನಲ್ಲಿ ನಮ್ಮ ಸಂಗಾತಿಯನ್ನು ಭೇಟಿ ಮಾಡುತ್ತಾರೆ. ಇವರು ಮೊದಲ ಭೇಟಿಯಂದು ಆತ್ಮವಿಶ್ವಾಸ ಹೊಂದಿರುತ್ತಾರೆ.
ವೃಷಭ
ಇವರು ಆರಾಮವಾಗಿರುವುದನ್ನು ಇಷ್ಟಪಡುತ್ತಾರೆ. ಇವರು ಒಂದು ಹೋಟೆಲ್ ಅಥವಾ ಕೆಫೆಯಲ್ಲಿ ಭೇಟಿಯಾಗುವುದನ್ನು ಇಷ್ಟಪಡುತ್ತಾರೆ. ಬಾಯಿಗೂ ಮನಸ್ಸಿಗೂ ಇಷ್ಟವಾಗುವ ಆಹಾರ ಸೇವಿಸುತ್ತಾ ಮಾತನಾಡುವುದು ಇವರ ಮೊದಲ ಡೇಟ್ ಅನುಭವವಾಗಿರುತ್ತದೆ.
ಮಿಥುನ ರಾಶಿ
ಇವರು ವೈವಿದ್ಯತೆಯನ್ನು ಬಯಸುತ್ತಾರೆ. ಆರ್ಟ್ ಗ್ಯಾಲರಿಯಂತಹ ಕಥೆ ಭೇಟಿ ಮಾಡುವುದು ಇವರಿಗೆ ಇಷ್ಟವಾಗುತ್ತದೆ. ಮೊದಲ ಭೇಟಿಗೆ ಇವರು ಆಯ್ಕೆ ಮಾಡುವ ದಿನಾಂಕ ಕೂಡ ಭಿನ್ನವಾಗಿರುತ್ತದೆ.
ಕಟಕ
ಇವರು ಸೂಕ್ಷ್ಮ ಮನೋಭಾವದವರು. ಶಾಂತವಾಗಿ ಕುಳಿತು ಊಟ ಮಾಡುವುದು, ದೀರ್ಘ ಸಂಭಾಷಣೆಗೆ ಸೂಕ್ತ ಎನ್ನಿಸುವ ಸ್ನೇಹಪರ ಜಾಗದಲ್ಲಿ ಭೇಟಿಯಾಗಲು ಇಷ್ಟಪಡುತ್ತಾರೆ. ಇವರು ನಮ್ಮ ಮೊದಲ ಭೇಟಿಗಾಗಿ ಸುರಕ್ಷಿತ ಜಾಗವನ್ನು ಹುಡುಕಬಹುದು.
ಸಿಂಹ ರಾಶಿ
ಇವರು ತಮ್ಮ ಮೊದಲ ಡೇಟ್ ರೋಮಾಂಚಕವಾಗಿರಬೇಕು ಎಂದುಕೊಳ್ಳುತ್ತಾರೆ. ತಮ್ಮ ರೋಮಾಂಚರ ವ್ಯಕ್ತಿತ್ವವನ್ನು ಪ್ರದರ್ಶಿಸಲು ಮೋಜಿನ ಈವೆಂಟ್ ಇರುವ ರೆಸಾರ್ಟ್‌ನಂತಹ ಸ್ಥಳದಲ್ಲಿ ಭೇಟಿಯಾಗಲು ಇಷ್ಟಪಡುತ್ತಾರೆ.
ಕನ್ಯಾರಾಶಿ
ಕನ್ಯಾರಾಶಿಯವರು ಚಿಂತನಶೀಲ ಚಟುವಟಿಕೆಯನ್ನು ಇಷ್ಟಪಡುತ್ತಾರೆ. ಈ ರಾಶಿಯವರು ಇಬ್ಬರಿಗೂ ಇಷ್ಟವಾಗುವ ಜಾಗಕ್ಕೆ ಹೋಗಬಹುದು. ಹೆಚ್ಚು ಜನಜಂಗುಳಿ ಇಲ್ಲದೇ ನಿರಾಳವಾಗಿರುವ ಶಾಂತ ಸ್ಥಳದಲ್ಲಿ ಭೇಟಿ ಮಾಡುವುದು ಇವರಿಗೆ ಇಷ್ಟವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಸಾಮರಸ್ಯವನ್ನು ಬಯಸುತ್ತಾರೆ. ಇವರು ಮೊದಲ ಭೇಟಿಯ ದಿನ ಅರ್ಥಪೂರ್ಣವಾಗಿ ಮನಸ್ಸು ಬಿಚ್ಚಿ ಮಾತನಾಡುವ ಇಷ್ಟಪಡುತ್ತಾರೆ. ಇವರು ಮೊದಲ ಭೇಟಿಯನ್ನು ಪಾರ್ಕ್ ಅಥವಾ ಸಿನಿಮಾ ಇಂತಹ ಸ್ಥಳದಲ್ಲಿ ಆಯೋಜಿಸಲು ಇಷ್ಟಪಡುತ್ತಾರೆ.
ವೃಶ್ಚಿಕ
ಇವರು ಸಂಬಂಧ ಆಳವಾಗಿ ಇರಬೇಕು ಎಂದು ಬಯಸುವವರು. ತಮ್ಮ ಫಸ್ಟ್‌ಡೇಟ್ ಅರ್ಥಪೂರ್ಣವಾಗಿರಬೇಕು ಎಂದು ಬಯಸುವ ಮನೋಭಾವದವರು.
ಧನುರಾಶಿ
ಧನುರಾಶಿಯವರು ಸಾಹಸವನ್ನು ಇಷ್ಟಪಡುತ್ತಾರೆ. ಇವರು ಹೊರಾಂಗಣ ಚಟುವಟಿಕೆ ಇರುವ ಜಾಗದಲ್ಲಿ ಫಸ್ಟ್‌ಡೇಟ್ ಮಾಡಿಕೊಳ್ಳಲು ಇಪ್ಟಪಡುತ್ತಾರೆ. ಇವರು ಮೊದಲ ಭೇಟಿಯ ದಿನ ಮುಕ್ತ ಮನೋಭಾವ ಹೊಂದಿರುವುದನ್ನು ಇಷ್ಟಪಡುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಸಾಂಪ್ರದಾಯಿಕ ಮನೋಭಾವದವರು. ಇವರು ಹೋಟೆಲ್‌ನಲ್ಲಿ ಲಂಚ್, ಡಿನ್ನರ್ ಅಥವಾ ಸಿನಿಮಾಕ್ಕೆ ಹೋಗುವುದು ಇಂತಹದ್ದನ್ನು ಇಷ್ಟಪಡುತ್ತಾರೆ.
ಕುಂಭ ರಾಶಿ
ಇವರು ಮುಕ್ತ ಮನಸ್ಸಿನವರು. ಇವರು ಫಸ್ಟ್‌ಡೇಟ್‌ನಂದು ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಪಾರ್ಕ್, ರೆಸಾರ್ಟ್ ಇಂತಹ ಕಡೆ ಮೊದಲ ಭೇಟಿಯನ್ನು ಇಷ್ಟಪಡುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ರೋಮ್ಯಾಂಟಿಕ್ ಮನೋಭಾವದವರು. ಇವರು ತಮ್ಮ ಫಸ್ಟ್‌ಡೇಟ್ ರೋಮಾಂಚನಕಾರಿಯಾಗಿರಬೇಕು ಎಂದು ಬಯಸುತ್ತಾರೆ. ಅದರಂತೆ ಫಸ್ಟ್‌ಡೇಟ್ ಅನ್ನು ಆಯೋಜಿಸುತ್ತಾರೆ.
ಇದು ನಿಮ್ಮ ರಾಶಿ ಪ್ರಕಾರ ನೀವು ನಿಮ್ಮ ಫಸ್ಟ್‌ಡೇಟ್ ಹೇಗಿರಲು ಇಷ್ಟಪಡುತ್ತೀರಿ ಎಂಬುದನ್ನು ಸೂಚಿಸುತ್ತದೆ. ಆದರೆ ಅದೇನೇ ಇದ್ದರೂ ಸಂಬಂಧದ ಆರಂಭ ಎಂಬುದು ಅರ್ಥಪೂರ್ಣವಾಗಿರಬೇಕು. ಸಂಬಂಧ ಎಂದಿಗೂ ಗಟ್ಟಿಯಾಗಿರಬೇಕು ಅಂತಹ ಅನುಬಂಧ ಸೃಷ್ಟಿಸುವಂತಿರಬೇಕು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ʼಹಿಂದೂಸ್ತಾನ್ ಟೈಮ್ಸ್ ಕನ್ನಡʼ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
(This copy first appeared in Hindustan Times Kannada website. To read more like this please logon to kannada.hindustantimes.com )