logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Spiritual News: ಬದುಕಿನ ಕಷ್ಟಗಳೆಲ್ಲಾ ದೂರಾಗಿ, ಅದೃಷ್ಟ ಒಲಿಬೇಕು ಅಂದ್ರೆ ಶನಿವಾರ ಆಂಜನೇಯನನ್ನು ಆರಾಧಿಸಿ; ಹೀಗಿರಲಿ ಪೂಜಾ ಕ್ರಮ

Spiritual News: ಬದುಕಿನ ಕಷ್ಟಗಳೆಲ್ಲಾ ದೂರಾಗಿ, ಅದೃಷ್ಟ ಒಲಿಬೇಕು ಅಂದ್ರೆ ಶನಿವಾರ ಆಂಜನೇಯನನ್ನು ಆರಾಧಿಸಿ; ಹೀಗಿರಲಿ ಪೂಜಾ ಕ್ರಮ

Reshma HT Kannada

Jan 06, 2024 05:45 AM IST

google News

ಸಾಂಕೇತಿಕ ಚಿತ್ರ

    • ಹಿಂದೂ ಧರ್ಮದಲ್ಲಿ ಆಂಜನೇಯ ಅತ್ಯಂತ ಪವರ್‌ಫುಲ್‌ ದೇವರು ಎಂಬ ನಂಬಿಕೆ ಇದೆ. ಶನಿವಾರದಂದು ಆಂಜನೇಯನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ. ಹಲವು ಕಾರಣಗಳಿಂದ ಶನಿವಾರ ಆಂಜನೇಯನನ್ನು ಪೂಜಿಸಬೇಕು. ಸದಾ ಅದೃಷ್ಟ ನಿಮ್ಮನ್ನು ಹಿಂಬಾಲಿಸಬೇಕು ಅಂದ್ರೆ ಶನಿವಾರ ಅಂಜನೇಯನನ್ನು ಹೀಗೆ ಪೂಜಿಸಿ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಭಾರತ ದೇಶದಾದ್ಯಂತ ಅಂಜನೇಯನನ್ನು ಬಹಳ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಆಚಲವಾದ ಭಕ್ತಿ ಹಾಗೂ ವಿಧೇಯತೆ ಕಾರಣಗಳಿಂದ ಹನುಮಂತನು ಖ್ಯಾತಿ ಪಡೆದಿದ್ದಾರೆ. ಆಂಜನೇಯ, ಹನುಮಂತ, ಭಜರಂಗ ಬಲಿ ಹೀಗೆ ಹಲವು ಹೆಸರುಗಳಿಂದ ಇವನನ್ನು ಕರೆಯಲಾಗುತ್ತದೆ. ಆಂಜನೇಯ ಅತ್ಯಂತ ಶಕ್ತಿಶಾಲಿ ದೇವರು ಎಂದು ಹಿಂದೂಗಳಲ್ಲಿ ನಂಬಿಕೆ ಇದೆ. ಶ್ರೀರಾಮನ ಅಪ್ಪಟ ಭಕ್ತವಾಗಿರುವ ಆಂಜನೇಯನಿಗೆ ಶನಿವಾರ ಪೂಜೆ ಸಲ್ಲಿಸುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಉತ್ತರದ ಭಾಗದಲ್ಲಿ ಮಂಗಳವಾರದಂದು ಆಂಜನೇಯನನ್ನು ಪೂಜಿಸುತ್ತಾರೆ. ದಕ್ಷಿಣಭಾಗದಲ್ಲಿ ಸಾಮಾನ್ಯವಾಗಿ ಶನಿವಾರಗಳಂದು ಹನುಮಾನ್‌ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಮನ ಎಲ್ಲಾ ಇಷ್ಟಾರ್ಥಗಳು ನೆರವೇರಬೇಕು ಎಂದರೆ ಶನಿವಾರ ಹನುಮಂತ ಪೂಜೆ ಮಾಡಬೇಕು. ಆಂಜನೇಯ ಆಶೀರ್ವಾದ ಪಡೆಯಲು ಪೂಜಾ ವಿಧಿ-ವಿಧಾನ, ಕ್ರಮಗಳು ಹೇಗಿರಬೇಕು ಎಂಬುದರ ವಿವರ ಇಲ್ಲಿದೆ.

ಹೀಗಿರಲಿ ಶನಿವಾರದಂದು ಹನುಮಂತನನ್ನು ಪೂಜಿಸುವ ವಿಧಾನ

ಆಂಜನೇಯನ ಕೃಪೆಗೆ ಪಾತ್ರರಾಗಲು ಶನಿವಾರ ಉಪವಾಸ ಆಚರಣೆ ಮಾಡಬಹುದು. ದೇಹ, ಮನಸ್ಸು ಹಾಗೂ ಆತ್ಮವನ್ನು ಶುದ್ಧೀಕರಿಸಲು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು.

ನಿಮಗೆ ಹತ್ತಿರವಿರುವ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಕೆಂಪು ಬಟ್ಟೆಯನ್ನು ಅರ್ಪಿಸಬೇಕು. ದೇವರ ಮುಂದೆ ತುಪ್ಪದ ದೀಪ ಹಚ್ಚಿ ಧೂಪದ್ರವ್ಯಗಳನ್ನು ಬೆಳಗಿಸಬೇಕು.

ಇದನ್ನೂ ಓದಿ: Human Chalisa: ಹನುಮಾನ್‌ ಚಾಲೀಸಾದಲ್ಲಿದೆ ಅದ್ಭುತ ಮಾಂತ್ರಿಕ ಶಕ್ತಿ; ಇದನ್ನು ಪ್ರತಿನಿತ್ಯ ಪಠಿಸುವುದರಿಂದಾಗುವ ಪ್ರಯೋಜನಗಳಿವು

ಹನುಮಂತನಿಗೆ ಪರಿಮಳ ಬೀರುವ ಸುಗಂಧ ತೈಲ, ವೀಳ್ಯದೆಲೆಯ ಹಾರಗಳನ್ನು ಅರ್ಪಿಸಬಹುದು. ಮದುವೆಯಾಗಿರುವ ಹೆಣ್ಣುಮಕ್ಕಳು ಗಂಡನ ದೀರ್ಘಾಯಸ್ಸಿಗಾಗಿ ಹನುಮಂತನನ್ನು ಪ್ರಾರ್ಥಿಸಬಹುದು. ಹನುಮಂತ ದೇಗುಲದಲ್ಲಿ ಸಿಗುವ ಸಿಂಧೂರವನ್ನು ಹಚ್ಚುವುದರಿಂದ ದುಷ್ಟಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆಯೂ ಇದೆ.

ಆಲದ ಮರದ ಎಲೆಯಲ್ಲಿ ಕುಂಕುಮ ಹಾಗೂ ಚಂದನವನ್ನು ಬಳಸಿ, ಅದರ ಮೇಲೆ ಶ್ರೀರಾಮ ಎಂದು ಬರೆಯಿರಿ. ಹೀಗೆ ಶ್ರೀರಾಮ ಎಂದು ಬರೆದ ಎಲೆಗಳಿಂದ ಮಾಲೆ ತಯಾರಿಸಿ ಅದನ್ನು ಹನುಮಂತನಿಗೆ ಅರ್ಪಿಸಬಹುದು.

ಹನುಮಾನ್‌ ಚಾಲೀಸಾ ಓದುವುದು ಕೂಡ ಬಹಳ ಮುಖ್ಯ. ಇದನ್ನು ನಿಯಮಿತವಾಗಿ ಓದುವುದರಿಂದ ನಕಾರಾತ್ಮಕ ಅಂಶಗಳು ದೂರಾಗಿ ಸಕಾರಾತ್ಮಕ ಭಾವ ಆವರಿಸುತ್ತದೆ. ಅಲ್ಲದೆ ಶೃದ್ಧೆಯಿಂದ ಹನುಮಾನ್‌ ಚಾಲೀಸಾ ಪಠಿಸುವುದರಿಂದ ಮನಸ್ಸಿನ ಆಸೆಗಳನ್ನು ಪೂರೈಸಿಕೊಳ್ಳಬಹುದು.

ʼಓಂ ಹನುಮತೇ ನಮಃʼ, ʼಓಂ ಆಂಜನೇಯಾಯ ವಿದ್ಮಹೇ, ವಾಯು ಪುತ್ರಾಯ ಧೀಮಹಿ, ತನ್ನೋ ಹನುಮತ್ ಪ್ರಚೋದಯಾತ್ʼ ಮುಂತಾದ ಹನುಮಾನ್‌ ಮಂತ್ರಗಳನ್ನು ಪಠಿಸಬಹುದು. ಭಗವಾನ್‌ ಶ್ರೀರಾಮನ ಹೆಸರನ್ನು ಭಜಿಸುವುದರಿಂದಲೂ ಹನುಮಂತನ ಕೃಪೆಗೆ ಪಾತ್ರರಾಗಬಹುದು.

ನೀವು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪ್ರತಿ ಶನಿವಾರ ನಿಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಬೆಲ್ಲ ಹಾಗೂ ಧಾನ್ಯಗಳನ್ನು ದಾನ ಮಾಡಿ. ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುವುದರಿಂದಲೂ ಆಂಜನೇಯನನ್ನು ಒಲಿಸಿಕೊಳ್ಳಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ