logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Paurnami: ಸಾಲಬಾಧೆ ನಿವಾರಣೆಯಾಗಿ, ಲಕ್ಷ್ಮೀ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಹುಣ್ಣಿಮೆಯ ದಿನ ತಪ್ಪದೇ ಈ ಕೆಲಸ ಮಾಡಿ

Paurnami: ಸಾಲಬಾಧೆ ನಿವಾರಣೆಯಾಗಿ, ಲಕ್ಷ್ಮೀ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಹುಣ್ಣಿಮೆಯ ದಿನ ತಪ್ಪದೇ ಈ ಕೆಲಸ ಮಾಡಿ

Reshma HT Kannada

Jan 24, 2024 10:46 AM IST

google News

ಹುಣ್ಣಿಮೆ

    • ಮೂರು ರಾಜಯೋಗಗಳು ರಚನೆಯಾಗುವ ಕಾರಣ ಈ ಬಾರಿಯ ಹುಣ್ಣಿಮೆ ಬಹಳ ವಿಶೇಷವಾಗಿದೆ. ನೀವು ಸಾಲಬಾಧೆಯಿಂದ ಬಳಲುತ್ತಿದ್ದು, ಲಕ್ಷೀದೇವಿ ನಿಮಗೆ ಒಲಿಯಬೇಕು ಅಂದರೆ ತಪ್ಪದೇ ಕೆಳಗಿ ಸೂಚಿಸಿರುವ ಕೆಲಸಗಳನ್ನು ಮಾಡಬೇಕು. ಅಂದ ಹಾಗೆ ನಾಳೆ (ಜ.25) ಶಾಕಾಂಬರಿ ಹುಣ್ಣಿಮ ಇದೆ.
ಹುಣ್ಣಿಮೆ
ಹುಣ್ಣಿಮೆ

ಪುಷ್ಯ ಮಾಸದ ಹುಣ್ಣಿಮೆಯನ್ನು ಪುಷ್ಯ ಪೌರ್ಣಮಿ ಎಂದು ಕರೆಯಲಾಗುತ್ತದೆ. ಇದನ್ನೂ ಶಾಕಾಂಬರಿ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಹುಣ್ಣಿಮೆಯ ದಿನ ಸಮುದ್ರ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಸನಾತನ ಧರ್ಮದಲ್ಲಿ ಪರಿಗಣಿಸಲಾಗಿದೆ. ಈ ವರ್ಷ ನಾಳೆ ಅಂದರೆ ಜ. 25 ರಂದು ಹುಣ್ಣಿಮೆ ಇದೆ. ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ, ಹುಣ್ಣಿಮೆಯ ದಿನದಂದು ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಹಣಕ್ಕೆ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ನಂಬಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹುಣ್ಣಿಮೆ ಸಮಯ

ಹಿಂದೂ ಕ್ಯಾಲೆಂಡರ್ ಪ್ರಕಾರ, 2024ರ ಪುಷ್ಯ ಮಾಸದ ಹುಣ್ಣಿಮೆಯು, ಜನವರಿ 24ರ ರಾತ್ರಿ 9.24ಕ್ಕೆ ಪ್ರಾರಂಭವಾಗುತ್ತದೆ. ಮರುದಿನ, ಜನವರಿ 25ರ ರಾತ್ರಿ 11.23ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕಾಗಿಯೇ ಜನವರಿ 25ರಂದು ಪ್ರಕಾರ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಹುಣ್ಣಿಮೆಯಂದು ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಗುರು ಪುಷ್ಯ ಯೋಗಗಳು ರೂಪುಗೊಳ್ಳಲಿವೆ. ಈ ಪವಿತ್ರ ಯೋಗದಲ್ಲಿ ಸ್ನಾನ ಮಾಡುವುದು, ದಾನ ಮತ್ತು ದತ್ತಿ ಚಟುವಟಿಕೆಗಳನ್ನು ಮಾಡುವುದರಿಂದ ಹಲವು ರೀತಿಯ ಪ್ರತಿಫಲಗಳನ್ನು ಪಡೆಯಬಹುದಾಗಿದೆ. ಹಾಗಾಗಿಯೇ ಈ ಹುಣ್ಣಿಮೆ ಹೆಚ್ಚು ವಿಶೇಷವಾಗಿದೆ. ಈ ಸಮಯದಲ್ಲಿ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು.

ಪುಷ್ಯ ಹುಣ್ಣಿಮೆಯ ಮಹತ್ವ

ಹುಣ್ಣಿಮೆಯ ದಿನದಂದು ಸ್ನಾನ ಮಾಡುವುದು ಬಹಳ ಮುಖ್ಯ. ಸಮುದ್ರ ಸ್ನಾನ ಮಾಡಿದರೆ ಇನ್ನೂ ಹೆಚ್ಚು ಪುಣ್ಯ ಲಭಿಸುತ್ತದೆ. ಸೂರ್ಯನ ಜೊತೆಗೆ ಚಂದ್ರನನ್ನೂ ಇಂದು ಪೂಜಿಸಲಾಗುತ್ತದೆ. ಸ್ನಾನ ಮತ್ತು ಧರ್ಮ ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ. ಹುಣ್ಣಿಮೆಯ ದಿನ ಬೆಳಗ್ಗೆ ಬೇಗ ಏಳಬೇಕು. ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ಇಲ್ಲವಾದರೆ ಮನೆಯಲ್ಲಿ ಹಿಂದೆ ತಂದ ಗಂಗಾಜಲವಿದ್ದರೆ ಅವುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು. ಸೂರ್ಯನಿಗೆ ನಮನ ಮತ್ತು ಅರ್ಘ್ಯವನ್ನು ಅರ್ಪಿಸಿ. ಇಂದು ಬಡವರಿಗೆ ಮತ್ತು ಬ್ರಾಹ್ಮಣರಿಗೆ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.

ಲಕ್ಷ್ಮೀದೇವಿ ಆಶೀರ್ವಾದ ಪಡೆಯುವ ಮಾರ್ಗಗಳು

ಪುಷ್ಯ ಪೌರ್ಣಮಿಯ ದಿನದಂದು ಕಮಲದ ಹೂಗಳಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ದೇವಿ ಕಟಾಕ್ಷ ದೊರೆಯುತ್ತದೆ. ಪೂಜೆಯಲ್ಲಿ ಕಮಲದ ಹೂಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ. ಪೂಜೆಯ ಸಮಯದಲ್ಲಿ ಲಕ್ಷ್ಮೀದೇವಿಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹಣದ ಕೊರತೆ ದೂರವಾಗುತ್ತದೆ. ಸಂಪತ್ತು ಹೆಚ್ಚುತ್ತದೆ. ಈ ಕ್ರಮವನ್ನು ಅನುಸರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ನಂಬಲಾಗಿದೆ.

ಸಂಪತ್ತು ಹೆಚ್ಚಲು ಹೀಗೆ ಮಾಡಿ

ಪುಷ್ಯ ಪೌರ್ಣಮಿಯ ದಿನದಂದು ಲಕ್ಷ್ಮೀದೇವಿಗೆ 11 ಗೋಧಿಕಾಳುಗಳನ್ನು ಅರ್ಪಿಸಿ. ಹಾಗೆಯೇ ಅವುಗಳನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿ ಇರಿಸಿ. ಈ ಕ್ರಮವನ್ನು ಅನುಸರಿಸುವುದರಿಂದ ಹಣದ ತೊಂದರೆ ದೂರವಾಗುತ್ತದೆ ಮತ್ತು ಸಂಪತ್ತು ಹೆಚ್ಚಾಗಲು ದಾರಿ ತೆರೆಯುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಹುಣ್ಣಿಮೆಯಂದು ಹಗಲು-ರಾತ್ರಿ ಲಕ್ಷ್ಮೀದೇವಿಯನ್ನು ಪೂಜಿಸಬೇಕು. ಅರ್ಪಣೆ ಮಾಡಬೇಕು. ನಂತರ ಕನಕಧಾರಾ ಸ್ತೋತ್ರಂ, ಶ್ರೀ ಸೂಕ್ತಂ ಮತ್ತು ವಿಷ್ಣುಸಹಸ್ರನಾಮ ಪಠಿಸಬೇಕು. ಈ ಪರಿಹಾರಗಳನ್ನು ಅನುಸರಿಸಿದರೆ ಹಣದ ಸಮಸ್ಯೆಗಳು ದೂರವಾಗುತ್ತವೆ ಎಂದು ಭಕ್ತರು ನಂಬುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantime.com )

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ