logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಹಣಕಾಸಿನ ತೊಂದರೆ ಕಾಡುತ್ತಿದ್ದರೆ ಲಕ್ಷ್ಮೀದೇವಿ ವಿಗ್ರಹದ ಜತೆ ಈ ವಸ್ತುಗಳನ್ನು ತಪ್ಪದೇ ಮನೆಯಲ್ಲಿ ಇರಿಸಿ

Vastu Tips: ಹಣಕಾಸಿನ ತೊಂದರೆ ಕಾಡುತ್ತಿದ್ದರೆ ಲಕ್ಷ್ಮೀದೇವಿ ವಿಗ್ರಹದ ಜತೆ ಈ ವಸ್ತುಗಳನ್ನು ತಪ್ಪದೇ ಮನೆಯಲ್ಲಿ ಇರಿಸಿ

Reshma HT Kannada

Feb 18, 2024 03:56 PM IST

google News

ವಾಸ್ತು ಪ್ರಕಾರ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸುವುದರಿಂದ ಹಣದ ಕೊರತೆ ಬರುವುದಿಲ್ಲ

    • ಹಣಕಾಸಿನ ಸಮಸ್ಯೆಗಳಿಂದ ಕಂಗಾಲಾಗಿದ್ದೀರಾ? ಎಷ್ಟೇ ದುಡುದ್ರು ಕೈಯಲ್ಲಿ ದುಡ್ಡು ನಿಲ್ತಾ ಇಲ್ಲ ಅನ್ನೋ ಬೇಸರ ಕಾಡ್ತಾ ಇದ್ಯಾ? ನಿಮ್ಮ ಮನೆಯಲ್ಲಿ ಸದಾ ಸಂಪತ್ತು ತುಂಬಿರಬೇಕು ಅಂದ್ರೆ ಲಕ್ಷ್ಮೀದೇವಿಯ ಜೊತೆ ಈ ದೇವರ ವಿಗ್ರಹಗಳನ್ನೂ ಇರಿಸಿ. ವಾಸ್ತು ಪ್ರಕಾರ ಹಣಕಾಸಿನ ಸಮಸ್ಯೆ ನಿವಾರಣೆಗೆ ಮನೆಯಲ್ಲಿ ಯಾವ ದೇವರ ವಿಗ್ರಹ ಇರಿಸಿದರೆ ಉತ್ತಮ ನೋಡಿ.
ವಾಸ್ತು ಪ್ರಕಾರ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸುವುದರಿಂದ ಹಣದ ಕೊರತೆ ಬರುವುದಿಲ್ಲ
ವಾಸ್ತು ಪ್ರಕಾರ ಈ ವಿಗ್ರಹಗಳನ್ನು ಮನೆಯಲ್ಲಿ ಇರಿಸುವುದರಿಂದ ಹಣದ ಕೊರತೆ ಬರುವುದಿಲ್ಲ

ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ. ಎಷ್ಟೇ ದುಡಿಮೆ ಮಾಡಿದ್ರು ಸಾಲೊಲ್ಲ, ಕೈಯಲ್ಲಿ ದುಡ್ಡು ನಿಲ್ಲೊಲ್ಲ ಅನ್ನುವವರೇ ಹೆಚ್ಚು. ನೀವು ಹಣಕಾಸಿನ ಸಮಸ್ಯೆಯಿಂದ ತೊಂದರೆ ಎದುರಿಸುತ್ತಿದ್ದರೆ, ನಿಮ್ಮ ಮನೆಯ ಪೂಜಾಕೋಣೆಯಲ್ಲಿ ಲಕ್ಷ್ಮೀದೇವಿಯ ವಿಗ್ರಹದ ಜೊತೆಗೆ ಈ ಕೆಲವು ವಿಗ್ರಹಗಳನ್ನೂ ಇರಿಸಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾಸ್ತು ಪ್ರಕಾರ ಆರ್ಥಿಕ ಪ್ರಗತಿಯು ಮನೆಯ ಪೂರ್ವ ಮತ್ತು ಈಶಾನ್ಯ ದಿಕ್ಕಿನೊಂದಿಗೆ ನೇರ ಸಂಬಂಧ ಹೊಂದಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವಾಸ್ತು ತಜ್ಞರ ಪ್ರಕಾರ ಈ ದಿಕ್ಕುಗಳಲ್ಲಿ ವಾಸ್ತು ಕೊರತೆಯಿದ್ದರೆ ಅಂತಹ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಈ ದಿಕ್ಕಿಗಳಲ್ಲಿ ಕೆಲವು ವಸ್ತುಗಳನ್ನು ಇರಿಸುವ ಮೂಲಕ, ನೀವು ಹಣಕಾಸಿನ ಸಮಸ್ಯೆಗಳಿಂದ ಹೊರ ಬರಬಹುದು.

ನೀಲಿ ಪಿರಮಿಡ್

ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪಿರಮಿಡ್ ಅನ್ನು ಇರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ವ್ಯಕ್ತಿಗೆ ಹಣದ ಕೊರತೆಯಾಗುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಗಾಜಿನ ಬೌಲ್

ಕೆಲವರು ತಮ್ಮ ಮನೆಯಲ್ಲಿ ಅಲಂಕಾರಕ್ಕಾಗಿ ಗಾಜಿನ ವಸ್ತುಗಳನ್ನು ಸುಂದರವಾಗಿ ಜೋಡಿಸುತ್ತಾರೆ. ವಾಸ್ತು ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ಗಾಜಿನ ಬಟ್ಟಲನ್ನು ಇಡಬೇಕು. ಬೆಳ್ಳಿಯ ನಾಣ್ಯವನ್ನು ಅದರೊಂದಿಗೆ ಬಟ್ಟಲಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.

ತುಳಸಿ ಗಿಡ

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಇವುಗಳ ಜೊತೆಗೆ ನೆಲ್ಲಿ ಮರವನ್ನು ನೆಡುವುದು ಸಹ ಪ್ರಯೋಜನಕಾರಿ. ಕುಟುಂಬ ಆರ್ಥಿಕವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.

ಗಣೇಶ ಮತ್ತು ಲಕ್ಷ್ಮೀದೇವಿಯ ಪ್ರತಿಮೆ

ವಾಸ್ತು ಪ್ರಕಾರ ಗಣೇಶ ಮತ್ತು ಲಕ್ಷ್ಮೀದೇವಿಯ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹಾಗೆಯೇ ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳ ಮುಂದೆ ಪ್ರತಿನಿತ್ಯ ದೀಪಗಳನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ.

ಉತ್ತರ

ವಾಸ್ತು ಪ್ರಕಾರ ಉತ್ತರ ದಿಕ್ಕಿನ ಅಧಿಪತಿ ಕುಬೇರ. ಹಾಗಾಗಿ ಆ ದಿಕ್ಕಿನಲ್ಲಿ ಹಣ ಹಾಕಲು ಸೇಫ್ ಮತ್ತು ಲಾಕರ್ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ವಿದ್ವಾಂಸರು. ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗಿದೆ. ಅವರ ಆಶೀರ್ವಾದವನ್ನು ಪಡೆಯಲು ಈ ದಿಕ್ಕಿನಲ್ಲಿ ಹಣವನ್ನು ಸುರಕ್ಷಿತವಾಗಿರಿಸಿದರೆ, ಮನೆಯಲ್ಲಿ ಹಣದ ಸಮಸ್ಯೆಗಳು ಇರುವುದಿಲ್ಲ.

ಪೂಜೆಗೆ ಈಶಾನ್ಯ ದಿಕ್ಕು

ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಅಥವಾ ಮಂದಿರ ಇರಬೇಕು. ಪೂಜೆಗೆ ಈಶಾನ್ಯ ದಿಕ್ಕು ಉತ್ತಮ. ಅಲ್ಲದೆ, ಪೂಜೆ ಮಾಡುವಾಗ ನಿಮ್ಮ ಮುಖವು ಪೂರ್ವದ ಕಡೆಗೆ ಇರಬೇಕು.

ಪೂಜಾ ಕೊಠಡಿಯಲ್ಲಿರುವ ವಿಗ್ರಹಗಳು 9 ಇಂಚುಗಳಷ್ಟು ಎತ್ತರ ಇರಬಾರದು. ಯಾವುದೇ ದೇವತೆಯ ಪ್ರತಿಮೆ ಅಥವಾ ಭಾವಚಿತ್ರವನ್ನು ಸಂತೋಷದ ಭಂಗಿಯಲ್ಲಿ ಜೋಡಿಸಬೇಕು. ಕೋಪಗೊಂಡ ವಿಗ್ರಹಗಳ ಭಾವಚಿತ್ರಗಳನ್ನು ಹಾಕಬೇಡಿ. ಮುರಿದ ಮತ್ತು ಬಿರುಕು ಬಿಟ್ಟ ವಿಗ್ರಹಗಳನ್ನು ಅಪ್ಪಿತಪ್ಪಿಯೂ ಇಡಬಾರದು. ದೇವಸ್ಥಾನದಲ್ಲಿ ಅರ್ಚಕರಿಗೆ ಕೊಟ್ಟರೆ ಮುಳುಗಿಸುತ್ತಾರೆ. ದೇವತೆಗಳ ವಿಗ್ರಹಗಳನ್ನು ನೆಲದ ಮೇಲೆ ಇಡಬಾರದು. ನೆಲದಿಂದ ಕನಿಷ್ಠ ಎರಡು ಇಂಚು ಎತ್ತರ. ಪೂರ್ವಜರ ಭಾವಚಿತ್ರಗಳನ್ನು ಪೂಜಾ ಕೋಣೆಯಲ್ಲಿ ಇಡಬಾರದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ