logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರು ಕಾಲೇಜ್‌ ಕ್ಯಾಂಪಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡ್ತಾರೆ, ಇವ್ರಿಗೆ ಕಾಲೇಜು ಗೋಲ್ಡನ್‌ ಲೈಫ್‌ ಅನ್ನಿಸೋದು ಖಂಡಿತ

ಈ ರಾಶಿಯವರು ಕಾಲೇಜ್‌ ಕ್ಯಾಂಪಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡ್ತಾರೆ, ಇವ್ರಿಗೆ ಕಾಲೇಜು ಗೋಲ್ಡನ್‌ ಲೈಫ್‌ ಅನ್ನಿಸೋದು ಖಂಡಿತ

HT Kannada Desk HT Kannada

Feb 18, 2024 12:45 PM IST

google News

ಪ್ರಾತಿನಿಧಿಕ ಚಿತ್ರ

    • Zodiac Signs: ಕಾಲೇಜು ಜೀವನ ಎಂದರೆ ಬಹಳಷ್ಟು ಸಂತೋಷಗಳನ್ನು ತರುವ ಸಮಯ. ಅದರಲ್ಲೂ ಕೆಲವು ರಾಶಿಯವರಿಗೆ ಕಾಲೇಜು ಕ್ಯಾಂಪಸ್‌ ಅನ್ನೋದು ಅವರಿಷ್ಟದ ಸ್ಥಳವಾಗಿರುತ್ತದೆ. ಅವರು ಹೊಸ ವಿಷಯಗಳನ್ನು ಅಭ್ಯಾಸ ಮಾಡುತ್ತಾ ಕಾಲೇಜು ಜೀವನ ಎಂಜಾಯ್‌ ಕೂಡಾ ಮಾಡುತ್ತಾರೆ. ಹಾಗಾದ್ರೆ ಯಾವ ರಾಶಿಯವರಿಗೆ ಕಾಲೇಜು ಎಂದರೆ ಬಹಳಷ್ಟು ಇಷ್ಟ?
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ (PC: Pinterest )

ಕಾಲೇಜು ದಿನಗಳೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಬರುವ ಗೋಲ್ಡನ್‌ ಟೈಮ್‌. ಕಾಲೇಜು ಜೀವನ ಕೇವಲ ತರಗತಿಗಳಿಗೆ ಸೀಮಿತವಾಗಿರುವುದಿಲ್ಲ. ಆ ದಿನಗಳಲ್ಲಿ ಓದು, ಬರಹ, ಭವಿಷ್ಯದ ನಿರ್ಧಾರಗಳ ಜೊತೆಗೆ ಹಲವಾರು ಸ್ನೇಹಿತರನ್ನು ಮಾಡಿಕೊಳ್ಳುವ ಸಮಯ. ಕಾಲೇಜು ದಿನಗಳಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹವಿರುತ್ತದೆ. ಇಲ್ಲಿ ವೈಯಕ್ತಿಕ ಬೆಳವಣಿಗೆ, ಕಲಿಕೆಯ ಜೊತೆಗೆ ವೈವಿಧ್ಯಮಯ ಅನುಭವಗಳನ್ನು ಆನಂದಿಸುವ ದಿನಗಳನ್ನು ಎದುರಿಸುತ್ತೇವೆ. ಬಹಳಷ್ಟು ಮಕ್ಕಳಿಗೆ ಕಾಲೇಜು ದಿನಗಳೆಂದರೆ ಒಂದು ಸುಂದರವಾದ ಪ್ರಯಾಣವಿದ್ದಂತೆ. ಹೊಸ ಸವಾಲುಗಳನ್ನು ಎದುರಿಸುತ್ತಾ ಅದರಲ್ಲಿ ಯಶಸ್ಸು ಕಾಣುತ್ತಾ ಜೊತೆಗೆ ಮರೆಯಾಲರದ ಸಂತೋಷವನ್ನು ನೀಡುವ ಸ್ಥಳ ಎಂದು ಭಾವಿಸುತ್ತಾರೆ. ಕೆಲವು ರಾಶಿಯವರು ಕಾಲೇಜು ದಿನಗಳನ್ನು ಬಹಳಷ್ಟು ಎಂಜಾಯ್ ಮಾಡುತ್ತಾರೆ. ಆ ರಾಶಿಯವರ ಗುಣವೇ ಹಾಗಿರುತ್ತದೆ. ಅವರು ವಿಭಿನ್ನ ರೀತಿಯಲ್ಲಿ ಕಾಲೇಜು ದಿನಗಳನ್ನು ಆನಂದಿಸುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಕಾಲೇಜು ದಿನಗಳನ್ನು ಬಹಳಷ್ಟು ಎಂಜಾಯ್‌ ಮಾಡುತ್ತಾರೆ ಇಲ್ಲಿದೆ ಓದಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಇದನ್ನೂ ಓದಿ: Sankashta Chaturthi: ನೂರು ವರ್ಷಗಳ ಬಳಿಕ ಕೂಡಿ ಬಂದಿದೆ ಅಪರೂಪದ ರಾಜಯೋಗ; 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಮೇಷ ರಾಶಿ

ಈ ರಾಶಿಯವರು ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಉತ್ಸಾಹದ ಕಾಲೇಜು ಜೀವನವನ್ನು ಇಷ್ಟಪಡುತ್ತಾರೆ. ಫ್ರೀಡಮ್‌ ಲೈಫ್‌ ಇಷ್ಟಪಡುವ ಇವರು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಮೇಷ ರಾಶಿಯವರು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ಮುಂದಾಳತ್ವ ವಹಿಸುವುದನ್ನು ಇಷ್ಟಪಡುತ್ತಾರೆ.

ಮಿಥುನ ರಾಶಿ

ಈ ರಾಶಿಯವರಿಗೆ ಕಾಲೇಜು ಎಂದರೆ ಸಂತೋಷವನ್ನು ನೀಡುವ ಆಟದ ಮೈದಾನವಿದ್ದಂತೆ. ಇವರು ಹೊಸ ಜನರನ್ನು ಭೇಟಿಯಾಗಲು ಇಷ್ಟಪಡುತ್ತಾರೆ. ಇವರು ಸ್ನೇಹ ಜೀವಿಯಾಗಿದ್ದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಅವರು ತಮ್ಮ ಆಸಕ್ತಿಗಳಿಗೆ ಹೆಚ್ಚು ಗಮನ ನೀಡುತ್ತಾರೆ. ವಿವಿಧ ವಿಷಯಗಳನ್ನು ತಿಳಿಯುವ ಮತ್ತು ಇತರರಿಂದ ಕಲಿಯುವ ಅವಕಾಶವನ್ನು ಆನಂದಿಸುತ್ತಾರೆ.

ಸಿಂಹ ರಾಶಿ

ಆತ್ಮ ವಿಶ್ವಾಸ ಮತ್ತು ನಾಯಕನ ಗುಣ ಇವರದ್ದಾಗಿದೆ. ಇವರು ಕಾಲೇಜು ಜೀವನವನ್ನು ನಿಜವಾಗಿಯೂ ಇಷ್ಟ ಪಡುತ್ತಾರೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದೆಂದರೆ ಈ ರಾಶಿಯವರಿಗೆ ತುಂಬಾನೆ ಇಷ್ಟ. ಕ್ಲಬ್‌ಗಳಿಗೆ ಸೇರಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಸಿಂಹ ರಾಶಿಯವರು ಕಾಲೇಜು ಅಂದರೆ ಅದು ಧನಾತ್ಮಕ ಬದಲಾವಣೆಗಳನ್ನು ತರುವ ಸ್ಥಳವೆಂದು ಭಾವಿಸುತ್ತಾರೆ.

ಇದನ್ನೂ ಓದಿ: Maha Shivaratri 2024: ಈ ವರ್ಷದ ಮಹಾ ಶಿವರಾತ್ರಿ ಯಾವಾಗ, ಆಚರಣೆ ಹೇಗಿರಬೇಕು: ಇಲ್ಲಿದೆ ಮಾಹಿತಿ

ತುಲಾ ರಾಶಿ

ಈ ರಾಶಿಯವರಿಗೆ ಇತರರೊಂದಿಗೆ ಬೆರೆಯುವುದೆಂದರೆ ಬಹಳಷ್ಟು ಇಷ್ಟ. ಇವರು ಸಮತೋಲಿತ ಜೀವನವನ್ನು ಇಷ್ಟ ಪಡುತ್ತಾರೆ. ಇವರು ಸಾಮಾಜಿಕ ಜೀವನದ ಜೊತೆಗೆ ಕಲಿಕೆಗೂ ಅಷ್ಟೇ ಮಹತ್ವ ನೀಡುವುದರಿಂದ ಕಾಲೇಜು ಅವರಿಗೆ ಬಹಳಷ್ಟು ಸಂತೋಷ ನೀಡುತ್ತದೆ. ತುಲಾ ರಾಶಿಯವರು ಸ್ನೇಹಕ್ಕೆ ಹೆಚ್ಚು ಮಹತ್ವ ಕೊಡುವುದರ ಜೊತೆಗೆ, ಸ್ನೇಹಿತರನ್ನು ಗೌರವಿಸುತ್ತಾರೆ. ಇವರು ಅಧ್ಯಯನದ ಮತ್ತು ಕಾಲೇಜು ಜೀವನ ಎರಡನ್ನು ಸರಿಯಾಗಿ ಬ್ಯಾಲೆನ್ಸ್‌ ಮಾಡುತ್ತಾರೆ.

ಧನು ರಾಶಿ

ಈ ರಾಶಿಯವರದ್ದು ಹೊಸ ವಿಷಯಗಳನ್ನು ಕಲಿಯುವ ಮತ್ತು ಸಾಹಸಮಯ ಪ್ರವರ್ತಿಯಾಗಿದೆ. ಇವರಿಗೆ ಕಾಲೇಜು ಜೀವನ ಎಂದರೆ ವಿವಿಧ ಕೋರ್ಸ್‌ಗಳನ್ನು ಮಾಡುವ ಮತ್ತು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುವ ಸುಂದರ ಪ್ರಯಾಣವಾಗಿದೆ. ಇವರು ಹೊಸ ವಿಷಯಗಳನ್ನು ಅನ್ವೇಷಿಸುವ ಮತ್ತು ಕಲಿಯುವ ಅವಕಾಶಗಳನ್ನು ಇಷ್ಟಪಡುತ್ತಾರೆ.

ಕುಂಭ ರಾಶಿ

ಈ ರಾಶಿಯವರು ಕ್ರಿಯೇಟೀವ್‌ ಆಗಿ ಯೋಚಿಸುವವರಾಗಿರುತ್ತಾರೆ. ಇವರು ಮುಂದಾಲೋಚನೆಯನ್ನು ಮಾಡುತ್ತಾರೆ. ಕುಂಭ ರಾಶಿಯವರು ಕಾಲೇಜು ಜೀವನವನ್ನು ಬಹಳಷ್ಟು ಎಂಜಾಯ್‌ ಮಾಡುತ್ತಾರೆ. ಇವರು ಹೊಸ ಸ್ನೇಹಿತರನ್ನು ಮಾಡಿಕೊಂಡು ತಮ್ಮ ಐಡಿಯಾಗಳನ್ನು ಹಂಚಿಕೊಳ್ಳುತ್ತಾರೆ. ಇವರಿಗೆ ಕಾಲೇಜು ಎಂದರೆ ಅವರ ಮಾತು, ಹೊಸ ವಿಚಾರ, ಹೊಸ ಕೆಲಸಗಳನ್ನು ಪ್ರದರ್ಶಿಸುವ ಸ್ಥಳವಾಗಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ