Venus Transit: ಪ್ರೇಮಿಗಳ ದಿನಕ್ಕೂ ಮುನ್ನ ಶುಕ್ರನ ಸ್ಥಾನಪಲ್ಲಟ; ದ್ವಾದಶ ರಾಶಿಗಳ ಮೇಲಾಗುವ ಪರಿಣಾಮ ತಿಳಿಯಿರಿ
Feb 13, 2024 05:49 PM IST
ಪ್ರೇಮಿಗಳ ದಿನಕ್ಕೂ ಮುನ್ನ ಶುಕ್ರನ ಸ್ಥಾನಪಲ್ಲಟ; ದಾದ್ವಶ ರಾಶಿಗಳ ಮೇಲಾಗುವ ಪರಿಣಾಮ ತಿಳಿಯಿರಿ
- ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಹಾಗೂ ಕ್ಯುಪಿಡ್‌ನ ಸಂಕೇತವಾದ ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಿಸಿದೆ. ಈ ರಾಶಿ ಬದಲಾವಣೆಯು ಪ್ರೀತಿಯನ್ನು ನಿಭಾಯಿಸುವಲ್ಲಿ ಪ್ರಾಯೋಗಿಕತೆ ಮತ್ತು ಪ್ರಬುದ್ಧತೆಯನ್ನು ಒತ್ತಿ ಹೇಳುತ್ತದೆ. ಮಕರ ರಾಶಿಯಲ್ಲಿ ಶುಕ್ರ ಇರುವ ಕಾರಣ ಕೆಲವು ರಾಶಿಯವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಕೆಲವ ಬದಲಾವಣೆಗಳು ಉಂಟಾಗಲಿದೆ.
ಪ್ರೇಮಿಗಳ ದಿನಕ್ಕೂ ಮೊದಲು ಪ್ರೀತಿ ಹಾಗೂ ಕ್ಯುಪಿಡ್‌ನ ಸಂಕೇತವಾದ ಶುಕ್ರ ಗ್ರಹವು ತನ್ನ ರಾಶಿ ಚಕ್ರವನ್ನು ಬದಲಿಸಿದೆ. ಶುಕ್ರನು ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಲಿದೆ. ಕ್ಯುಪಿಡ್ ಜೀವನದಲ್ಲಿ ಹೊಸ ಉತ್ಸಾಹ ಹಾಗೂ ಶಕ್ತಿ ಮೂಡಲು ಕಾರಣವಾಗುತ್ತದೆ.
ತಾಜಾ ಫೋಟೊಗಳು
ಮೇಷ ರಾಶಿ: ಮಕರ ರಾಶಿಗೆ ಪ್ರವೇಶಿಸಿರುವ ಶುಕ್ರನು ಮೇಷ ರಾಶಿಯವರಿಗೆ ಹಣ ಹಾಗೂ ವೃತ್ತಿ ಜೀವನದ ಸುಧಾರಣೆಗೆ ಒತ್ತು ನೀಡುತ್ತಾನೆ. ನಿಮಗೆ ವೃತ್ತಿಯಲ್ಲಿ ಯಶಸ್ಸು ಸಿಗಬಹುದು. ನೀವು ಹೂಡಿಕೆಗಳ ಮೇಲೆ ಹೆಚ್ಚು ಗಮನ ಹರಿಸಬಹುದು. ನಿಮ್ಮ ಸಾಂಸಾರಿಕ ಜೀವನವು ಸುಂದರ ಹಾಗೂ ಅನ್ಯೋನ್ಯವಾಗಿರುತ್ತದೆ. ಪ್ರೇಮಿಗಳು ತಮ್ಮ ಪ್ರೀತಿಯನ್ನ ಪಡೆಯಲಿದ್ದಾರೆ.
ವೃಷಭ: ಶುಕ್ರನು ವೃಷಭ ರಾಶಿಯವರಲ್ಲಿ ಆಧ್ಯಾತ್ಮದ ಮೇಲೆ ಒಲವು ಹೆಚ್ಚುವಂತೆ ಮಾಡಬಹುದು. ವಿದೇಶ ಪ್ರವಾಸದಿಂದ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಬಹುದು. ಈ ರಾಶಿಯವರು ಹಣಕಾಸಿನ ಮೇಲೆ ಸಾಕಷ್ಟು ಗಮನ ಹರಿಸಬೇಕು. ಖರ್ಚು ವೆಚ್ಚದ ಮೇಲೆ ನಿಗಾ ವಹಿಸದಿದ್ದರೆ ತೊಂದರೆ ಎದುರಿಸಬೇಕಾಗಬಹುದು. ಪಾಲುದಾರರೊಂದಿಗೆ ಜಗಳ ಉಂಟಾಗಬಹುದು. ಈ ಅವಧಿಯಲ್ಲಿ ನಿಮ್ಮ ಕಣ್ಣುಗಳ ಮೇಲೆ ವಿಶೇಷ ಗಮನ ಹರಿಸಬೇಕು.
ಮಿಥುನ: ಈ ರಾಶಿಯವರಿಗೆ ವೃತ್ತಿ ತೊಂದರೆ ಎದುರಾಗಬಹುದು. ಹೊಂದಾಣಿಕೆ ಅಗತ್ಯ. ಕೌಟುಂಬಿಕ ವಿಚಾರದಲ್ಲೂ ತೊಂದರೆಗಳು ಎದುರಾಗಬಹುದು. ನಿಮ್ಮ ಪ್ರೇಮ ಜೀವನದಲ್ಲಿ ಬಿರುಕು ಮೂಡಬಹುದು. ಸಾಕಷ್ಟು ತಾಳ್ಮೆ ಅಗತ್ಯ. ಹಲ್ಲುನೋವು ನಿಮ್ಮನ್ನು ಬಾಧಿಸಬಹುದು. ಧ್ಯಾನ, ಆಧ್ಯಾತ್ಮದ ಮೇಲೆ ಗಮನ ನೀಡಿ.
ಕಟಕ ರಾಶಿ: ಈ ರಾಶಿಯವರ ಪ್ರೇಮ ಅಥವಾ ಸಾಂಸಾರಿಕ ಜೀವನದಲ್ಲಿ ಮನಸ್ತಾಪ ಮೂಡಬಹುದು. ವೃತ್ತಿ ಹಾಗೂ ವ್ಯವಹಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಮೊಣಕಾಲು ನೋವು ಹಾಗೂ ಕೀಲು ನೋವು ಬಾಧಿಸಬಹುದು. ಪ್ರಯಾಣ ಮಾಡುವ ಸಾಕಷ್ಟು ಎಚ್ಚರ ವಹಿಸುವುದು ಒಳಿತು.
ಸಿಂಹ: ಈ ರಾಶಿಯವರು ಕೆಲಸವನ್ನು ಬದಲಿಸಬಹುದು. ಇದು ವ್ಯವಹಾರದಲ್ಲಿ ಯಶಸ್ಸು ಸಾಧಿಸಬಹುದು. ದೈಹಿಕ ಆರೋಗ್ಯದ ಮೇಲೆ ಗಮನ ನೀಡಿ.
ಕನ್ಯಾ: ಮಕರ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಕನ್ಯಾ ರಾಶಿಯವರಿಗೆ ಶುಭವಾಗಲಿದೆ. ಇವರಿಗೆ ವೃತ್ತಿ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಲಾಭವಿರಲಿದೆ. ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಬಹುದು. ಈ ರಾಶಿಯವರು ಫಿಟ್ನೆಸ್ ಮೇಲೆ ಗಮನ ಹರಿಸುವುದರಿಂದ ಆರೋಗ್ಯ ಸುಧಾರಿಸಲಿದೆ.
ತುಲಾ: ಶುಕ್ರನ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಒಳಿತು ಮಾಡಲಿದೆ. ವ್ಯವಹಾರದಲ್ಲಿ ಈ ರಾಶಿಯವರು ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ. ಈ ರಾಶಿಯವರ ಬಾಳಿನಲ್ಲಿ ಶುಕ್ರ, ಶಾಂತಿ ಹಾಗೂ ನೆಮ್ಮದಿ ತರಲಿದ್ದಾನೆ.
ವೃಶ್ಚಿಕ ರಾಶಿ: ಈ ರಾಶಿಯವರು ಕೆಲಸ ಬದಲಿಸಲು ಇದು ಸಕಾಲ. ಆದರೆ ಅತಿಯಾದ ಹಣಕಾಸಿನ ಸಮಸ್ಯೆ ಹಾಗೂ ಖರ್ಚು ಕಾಡಬಹುದು. ಯಾವುದೇ ಸಮಸ್ಯೆಯನ್ನು ಎದುರಿಸಲು ಮುಕ್ತ ಸಂವಹನ ಅಗತ್ಯ. ಆರೋಗ್ಯ ಮೇಲೆ ಕಾಳಜಿ ವಹಿಸಿ.
ಧನು: ಈ ರಾಶಿಯವರಿಗೂ ಶುಕ್ರ ಸ್ಥಾನ ಬದಲಾವಣೆ ಅಷ್ಟೊಂದು ಒಳಿತಲ್ಲ. ಭಾವಾನಾತ್ಮಕ ಅಂಶಗಳಲ್ಲಿ ಸ್ಥಿರತೆ ಇರುವುದು ಮುಖ್ಯವಾಗುತ್ತದೆ. ಶುಕ್ರನ ಕಾರಣದಿಂದ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗಬಹುದು. ಹಣಕಾಸು ಹೂಡಿಕೆಗೂ ಮುನ್ನ ತಜ್ಞರನ್ನು ಸಂಪರ್ಕಿಸಿ. ದೈಹಿಕ ಸ್ವಾಸ್ಥಕ್ಕೆ ಒತ್ತು ನೀಡಿ.
ಮಕರ ರಾಶಿ: ಮಕರ ರಾಶಿಗೆ ಶುಕ್ರನ ಪ್ರವೇಶದಿಂದ ಒಳಿತಾಗಲಿದೆ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ಆರ್ಥಿಕ ಲಾಭ ಕಾಣಲಿದ್ದೀರಿ. ಪ್ರೇಮ ಹಾಗೂ ಕೌಟುಂಬಿಕ ಜೀವನ ಸುಧಾರಿಸಲಿದೆ.
ಕುಂಭ ರಾಶಿ: ಈ ಸಮಯದಲ್ಲಿ ಕುಂಭ ರಾಶಿಯವರನ್ನು ಏಕಾಂಗಿತನ ಕಾಡಬಹುದು. ಅದಕ್ಕಾಗಿ ಇವರು ಕುಟುಂಬದ ಜೊತೆ ಸಮಯ ಕಳೆಯಲು ಬಯಸುತ್ತಾರೆ. ನಿಮಗೆ ಸಾಕಷ್ಟು ವೃತ್ತಿ ಅವಕಾಶಗಳು ಸಿಗಬಹುದು. ಪ್ರಯಾಣದ ವೇಳೆ ತೊಂದರೆ ಎದುರಾಗಬಹುದು. ಎಚ್ಚರ ಅವಶ್ಯ. ಪ್ರೇಮ ಹಾಗೂ ಸಾಂಸಾರಿಕ ಬಂಧ ಬಿಗಿಯಾಗುತ್ತದೆ.
ಮೀನ: ಶುಕ್ರನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಬದುಕಿನಲ್ಲಿ ಸ್ಥಿರತೆ ಇರುತ್ತದೆ. ನೀವು ಬಯಸಿದ್ದೆಲ್ಲವೂ ನಿಮಗೆ ದಕ್ಕುತ್ತದೆ. ಉದ್ಯೋಗರಂಗದಲ್ಲಿ ಯಶಸ್ಸು ಕಾಣುತ್ತೀರಿ. ಹೂಡಿಕೆಯಿಂದ ಲಾಭ ಪಡೆಯಬಹುದು. ಪ್ರೀತಿಪಾತ್ರರ ಜೊತೆ ಬುದ್ಧಿವಂತಿಕೆಯಿಂದ ಸಂವಹನ ನಡೆಸುವುದು ಮುಖ್ಯವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)