Avidhava Navami: ಏನಿದು ಅವಿಧವ ನವಮಿ; ಪಿತೃಪಕ್ಷದಲ್ಲಿ ಬರುವ ಈ ವಿಶೇಷ ದಿನದ ಮಹತ್ವ, ಆಚರಣೆ ಕುರಿತ ಲೇಖನ
Sep 10, 2024 11:01 AM IST
ಅವಿಧವ ನವಮಿ ಆಚರಣೆ
- ಅವಿಧವ ನವಮಿಯು ವಿಧುರರಿಗೆ ಅತಿ ಮುಖ್ಯವಾದ ದಿನ. ಇಂದಿನ ದಿನ ಧುರಿಲೋಚನ ಎಂಬ ದೇವತೆಯನ್ನು ಪೂಜೆಸುತ್ತಾರೆ. ಲೋಚನ ಎಂದರೆ ಕನ್ನಡದಲ್ಲಿ ಕಣ್ಣುಗಳು ಎಂದು ಅರ್ಥ ಬರುತ್ತದೆ. ಧುರಿ ಎಂದರೆ ದೂಮ ಎಂದು ಹೇಳಲಾಗಿದೆ. ಈ ಬಾರಿ ಅಕ್ಟೋಬರ್ 7 ಅಂದರೆ ನಾಳೆ ಅವಿಧವ ನವಮಿಯನ್ನು ಆಚರಿಸಲಾಗುತ್ತದೆ. ಬರಹ: ಜ್ಯೋತಿಷಿ ಎಚ್. ಸತೀಶ್
ಅವಿಧವ ನವಮಿಯು ಪಿತೃ ಪಕ್ಷದ 9ನೇ ದಿನದಂದು ಬರುತ್ತದೆ. ಇದನ್ನು ಐನವಮಿ ಎಂದೂ ಕರೆಯುತ್ತಾರೆ. ಪಿತೃಪಕ್ಷದಲ್ಲಿ ಆಚರಿಸಿದರೂ ಇದನ್ನು ಮಂಗಳಕರ ಆಚರಣೆ ಎಂದು ಕರೆಯಲಾಗಿದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ನವಮಿಯಂದು ಇದನ್ನು ಆಚರಿಸಲಾಗುತ್ತದೆ.
ತಾಜಾ ಫೋಟೊಗಳು
ಈ ದಿನ ಪೂಜೆ ಪುನಸ್ಕಾರಗಳು ಗಂಡನಿಗಿಂತ ಮುಂಚೆಯೇ ಮರಣ ಹೊಂದಿದ ವಿವಾಹಿತ ಮಹಿಳೆಯರಿಗೆ ಸಂಬಂಧ ಪಟ್ಟಿದೆ. ಆದ್ದರಿಂದ ಅವಿಧವ ನವಮಿಯು ವಿಧುರರಿಗೆ ಅತಿ ಮುಖ್ಯವಾದ ದಿನವಾಗುತ್ತದೆ. ಇಂದಿನ ದಿನ ಧುರಿಲೋಚನ ಎಂಬ ದೇವತೆಯನ್ನು ಪೂಜೆಸುತ್ತಾರೆ. ಲೋಚನ ಎಂದರೆ ಕನ್ನಡದಲ್ಲಿ ಕಣ್ಣುಗಳು ಎಂದು ಅರ್ಥ ಬರುತ್ತದೆ. ಧುರಿ ಎಂದರೆ ದೂಮ ಎಂದು ಹೇಳಲಾಗಿದೆ. ಈ ದಿನ ಪೂಜಿಸುವ ದೇವತೆಗೆ ಅರ್ಧ ತೆರೆದ ಕಣ್ಣಿರುತ್ತದೆ ಎನ್ನಲಾಗಿದೆ.
ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ದಿನದಂದು ವಿಧುರರು ದೇವರುಗಳನ್ನು ಆವಾಹಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಪೂಜಿಸುತ್ತಾರೆ. ಅವಿಧವ ನವಮಿಯ ಆಚರಣೆಗಳು ಎಲ್ಲೆಡೆ ಒಂದೇ ಮಾದರಿ ಇರುವುದಿಲ್ಲ. ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಇದರ ಆಚರಣೆ ಬದಲಾಗುತ್ತವೆ. ಜಾತಿ, ಸಮುದಾಯ, ಪಂಗಡಗಳಿಗೆ ಆಧರಿಸಿ ಇದರ ಆಚರಣೆ ಬದಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಅದುಖ ನವಮಿ ಎಂದೂ ಜನಪ್ರಿಯವಾಗಿ ಕರೆಯಲಾಗುತ್ತದೆ.
ಕೆಲವೆಡೆ ಈ ಕಾರ್ಯವಿಧಾನಗಳನ್ನು ಗಂಡನೇ ಮಾಡಬೇಕೆಂದು ಹೇಳಲಾಗಿದೆ. ಇನ್ನೂ ಕೆಲವೆಡೆ ಗಂಡ ಬದುಕ್ಕಿದ್ದರೂ ಆಕೆಯ ಹಿರಿಯ ಮಗ ಮಾಡಬೇಕೆಂದು ಹೇಳಲಾಗಿದೆ. ಈ ಆಚರಣೆಯಿಂದ ಮೃತ ಮಹಿಳೆಯರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಆತ್ಮವು ಸ್ವರ್ಗ ಸೇರಲು ಈ ದಿನದಂದು ತರ್ಪಣ ನೀಡಬೇಕಾಗುತ್ತದೆ. ಪಿಂಡ ಪ್ರದಾನವೂ ಪ್ರಮುಖವಾದ ಆಚರಣೆ ಆಗುತ್ತದೆ. ಹಾಗೆಯೇ ಅವಿಧವ ನವಮಿಯಂದು ಮುತ್ತೈದೆ ಭೋಜನವನ್ನು ಏರ್ಪಡಿಸಬೇಕು. ಅನ್ನವನ್ನು ಅರ್ಪಿಸಿದ ನಂತರ ಸೀರೆ, ಕುಪ್ಪಸ, ಕುಂಕುಮ, ಕನ್ನಡಿ ಮತ್ತು ಹೂವುಗಳನ್ನು ನೀಡಿ ಕಾಲಾನುಕ್ರಮದಂತೆ ದಕ್ಷಿಣೆಯನ್ನು ನೀಡಲಾಗುತ್ತದೆ. ಕೆಲವೆಡೆ ಮೂರು ಪಿಂಡಗಳನ್ನು ನೀಡಿದರೆ, ಇನ್ನೂ ಕೆಲವು ಕಡೆ ಹತ್ತು ಪಿಂಡಗಳನ್ನು ನೀಡಲಾಗುತ್ತದೆ. ಕೆಲವೆಡೆ ಅಕ್ಕಿ, ಕಪ್ಪು ಎಳ್ಳಿನಿಂದ ಮಾಡಿದರೆ. ಕೆಲವು ಜನಾಂಗದವರು ನದಿಯ ದಡದ ಮಣ್ಣಿನಿಂದ ಮಾಡುತ್ತಾರೆ.
ಇನ್ನೂ ಕೆಲವರು ಅವಿಧವ ನವಮಿಯಂದು ಪಿಂಡಪ್ರಧಾನ ಶ್ರಾದ್ಧ ಆಚರಣೆಗಳನ್ನು ಮಾಡುವುದಿಲ್ಲ. ಅದರ ಬದಲು, ಅಸುನೀಗಿದ ಮಹಿಳೆಯ ಆತ್ಮಕ್ಕೆ ಆಕೆಗೆ ಇಷ್ಟವಾದ ಊಟವನ್ನು ನೀಡುತ್ತಾರೆ.
ಅವಿದವ ನವಮಿಯನ್ನು ತಂದೆಯ ಮರಣಾನಂತರ ಆಚರಿಸುವುದಿಲ್ಲ. ಈ ಆಚರಣೆಯಿಂದ ಅಸುನೀಗಿದ ಮಹಿಳೆಯು ತನ್ನ ಸಂತತಿಗಳ ಮೇಲೆ ಕೃಪೆ ತೋರಿ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗಿದೆ. ಅವಿಧವ ನವಮಿ ಶ್ರಾದ್ಧ ಕರ್ಮವನ್ನು ಕೇವಲ ಅಸುನೀಗಿದ ಮಹಿಳಾ ಪೂರ್ವಜರಿಗೆ ಮಾತ್ರ ಮಾಡಲಾಗುತ್ತದೆ. ಒಂದುವೇಳೆ ಅವಿಧವ ನವಮಿಯ ದಿನ ಶ್ರಾದ್ಧ ಕಾರ್ಯವನ್ನು ಮಾಡದೇಹೋದಲ್ಲಿ ಮಹಾಲಯ ಅಮಾವಾಸ್ಯೆಯ ದಿನದಂದು ಶಾಸ್ತ್ರಾನುಸಾರ ಮಾಡಬಹುದು ಎನ್ನಲಾಗಿದೆ.
ಬರಹ: ಜ್ಯೋತಿಷಿ ಎಚ್. ಸತೀಶ್