logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಫ್ಯಾಷನ್‌ ಟ್ರೆಂಡ್‌ ಮೂಲಕ ಗಮನ ಸೆಳೆವ ರಾಶಿಯವರಿವರು; ಸ್ಟೈಲಿಶ್‌ ಆಗಿ ಕಾಣಿಸೋದು ಇವರಿಗೆ ತುಂಬಾ ಇಷ್ಟವಂತೆ

ಫ್ಯಾಷನ್‌ ಟ್ರೆಂಡ್‌ ಮೂಲಕ ಗಮನ ಸೆಳೆವ ರಾಶಿಯವರಿವರು; ಸ್ಟೈಲಿಶ್‌ ಆಗಿ ಕಾಣಿಸೋದು ಇವರಿಗೆ ತುಂಬಾ ಇಷ್ಟವಂತೆ

Reshma HT Kannada

Jan 23, 2024 08:08 AM IST

google News

ಫ್ಯಾಷನ್‌ ಟ್ರೆಂಡ್‌ ಮೂಲಕ ಗಮನ ಸೆಳೆವ ರಾಶಿಯವರಿವರು

    • ಮಾರುಕಟ್ಟೆಯನ್ನು ದಿನಕ್ಕೊಂದು ಆವರಿಸುವ ಫ್ಯಾಷನ್‌ ಟ್ರೆಂಡ್‌ ಅನ್ನು ಎಲ್ಲರಿಂದಲೂ ಅನುಸರಿಸಲು ಸಾಧ್ಯವಿಲ್ಲ, ಆದರೆ ಜ್ಯೋತಿಷ್ಯದ ಪ್ರಕಾರ ನೋಡಿದ್ರೆ ಈ 5 ರಾಶಿಯವರು ಫ್ಯಾಷನ್‌ ಟ್ರೆಂಡ್‌ ಸೆಟ್ಟರ್‌ಗಳಂತೆ. ಇವರು ಸದಾ ಸ್ಟೈಲಿಶ್‌ ಆಗಿ ಕಾಣಬೇಕು ಅಂತಲೇ ಬಯಸುತ್ತಾರಂತೆ. ಹಾಗಾದ್ರೆ ಆ 5 ರಾಶಿಯವರು ಯಾರೂ, ನಿಮ್ಮ ರಾಶಿನೂ ಅದ್ರಲ್ಲಿ ಇದ್ಯಾ ಗಮನಿಸಿ. 
ಫ್ಯಾಷನ್‌ ಟ್ರೆಂಡ್‌ ಮೂಲಕ ಗಮನ ಸೆಳೆವ ರಾಶಿಯವರಿವರು
ಫ್ಯಾಷನ್‌ ಟ್ರೆಂಡ್‌ ಮೂಲಕ ಗಮನ ಸೆಳೆವ ರಾಶಿಯವರಿವರು

ಫ್ಯಾಷನ್‌ ಮಾಡೋದು ಯಾರಿಗೆ ಇಷ್ಟವಾಗೊಲ್ಲ ಹೇಳಿ. ಫ್ಯಾಷನ್‌ ಕ್ಷೇತ್ರದಲ್ಲಿ ಪ್ರತಿಯೊಂದು ದಿನಕ್ಕೊಂದು ಟ್ರೆಂಡ್‌ ಬಂದ್ರೂ ಅದನ್ನು ಅನುಸರಿಸುವ ಜನ ನಮ್ಮ ನಡುವೆ ಇದ್ದಾರೆ. ರಾಶಿಫಲದ ಪ್ರಕಾರ ಈ ಕೆಲವು ರಾಶಿಯವರು ಫ್ಯಾಷನ್‌ ಟ್ರೆಂಡ್‌ ಸೆಟ್ಟರ್‌ಗಳಂತೆ. ಸದಾ ಸ್ಟ್ರೈಲಿಶ್‌ ಆಗಿ ಕಾಣಿಸೋದು ಅಂದ್ರೆ ಇವರಿಗೆ ಬಹಳ ಇಷ್ಟ. ತಮ್ಮ ವಿಭಿನ್ನ ಫ್ಯಾಷನ್‌ ಶೈಲಿಯೊಂದಿಗೆ ಗಮನ ಸೆಳೆವ ರಾಶಿಯವರ ಬಗ್ಗೆ ಇಂದು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕುಂಭ ರಾಶಿ

ಈ ರಾಶಿಯವರು ಚಿಂತಕರು. ಇವರು ಫ್ಯಾಷನ್‌ಗೆ ಹೊಸ ಆಲೋಚನೆಗಳನ್ನು ತರುತ್ತಾರೆ. ಇವರ ಶೈಲಿಯು ಭಿನ್ನವಾಗಿರುತ್ತದೆ. ಗಾಢ ಬಣ್ಣ ಇವರಿಗೆ ಇಷ್ಟವಾಗುತ್ತದೆ. ಇವರು ಸ್ಟೈಲಿಶ್‌ ಆಗಿ ಕಾಣಿಸುವ ಮೂಲಕ ಜನರ ಗಮನ ಸೆಳೆಯುತ್ತಾರೆ. ತಮ್ಮ ವಾರ್ಡ್‌ರೋಬ್‌ನಲ್ಲಿ ಭಿನ್ನವಾದ ಉಡುಪುಗಳು ಇರಬೇಕು ಎಂದು ಬಯಸುವ ರಾಶಿಯವರಿವರು.

ಮಿಥುನ ರಾಶಿ

ಈ ರಾಶಿಯ ಚಿಹ್ನೆಯಂತೆ ಇವರು ಎರಡು ರೀತಿಯ ಸ್ವಭಾವ ಹೊಂದಿರುತ್ತಾರೆ. ಈ ರಾಶಿಯವರು ಹಲವು ಬಗೆಯ ಸ್ಟೈಲ್‌ಗೆ ಒಗ್ಗಿಕೊಳ್ಳುತ್ತಾರೆ. ಮಿಥನ ರಾಶಿಯವರು ಆಗಾಗ ಹೊಸ ಹೊಸ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ವಿಭಿನ್ನ ನೋಟದ ಮೂಲಕ ಗಮನ ಸೆಳೆಯುತ್ತಾರೆ. ಇವರು ಕೂಡ ಟ್ರೆಂಡ್‌ ಸೆಟ್ಟರ್‌, ಆ ಮೂಲಕ ಜನರಿಗೆ ಇಷ್ಟವಾಗುತ್ತಾರೆ.

ಧನುರಾಶಿ

ಈ ರಾಶಿಯವರು ಹೊಸತನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಅದನ್ನು ಅವರ ಶೈಲಿಯಲ್ಲೇ ಕಾಣಬಹುದಾಗಿದೆ. ಈ ರಾಶಿಯವರು ಪ್ರಪಂಚದಾದ್ಯಂತ ಇರುವ ಸ್ಟೈಲಿಶ್‌ ಟ್ರೆಂಡ್‌ಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಇವರು ತಮ್ಮದೇ ಆದ ಸ್ಟೈಲಿಶ್‌ ಟ್ರೆಂಡ್‌ ಅನ್ನು ಕೂಡ ಸೃಷ್ಟಿಸುವವರು.

ಮೇಷ ರಾಶಿ

ಈ ರಾಶಿಯವರು ಕೂಡ ಸದಾ ಫ್ಯಾಷನ್‌ ಟ್ರೆಂಡ್‌ ಮೇಲೆ ಗಮನಹರಿಸುತ್ತಾರೆ. ಇವರ ಸ್ಟೈಲಿಶ್‌ ಮನೋಭಾವವನ್ನು ಅವರ ಡ್ರೆಸ್ಸಿಂಗ್‌ ಸೆನ್ಸ್‌ನಲ್ಲೇ ಕಾಣಬಹುದಾಗಿದೆ. ಗಾಢ ಬಣ್ಣ ಇವರಿಗೆ ಇಷ್ಟವಾಗುತ್ತದೆ. ಇವರನ್ನೂ ಕೂಡ ಟ್ರೆಂಡ್‌ ಸೆಟ್ಟರ್‌ಗಳು ಎಂದು ಕರೆಯಬಹುದು. ಇವರು ಇತರರಿಗೂ ಸ್ಟೈಲಿಶ್‌ ಆಗಿ ಇರುವುದು ಹೇಗೆ ಎಂಬುದನ್ನು ಕಲಿಸುತ್ತಾರೆ.

ಸಿಂಹ ರಾಶಿ

ಇವರು ಫ್ಯಾಷನ್‌ ಕ್ಷೇತ್ರಕ್ಕೆ ನಾಯಕರಿದ್ದಂತೆ. ಇವರು ತಮ್ಮ ಮೇಲೆ ಎಲ್ಲರ ಗಮನ ಇರಬೇಕು ಎಂದು ಬಯಸುತ್ತಾರೆ. ಇವರು ಅಲಂಕಾರಿಕ ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ಗಮನ ಸೆಳೆಯುವ ಮನಮೋಹಕ ಉಡುಪುಗಳನ್ನು ಧರಿಸುವುದು ಇವರಿಗೆ ಇಷ್ಟವಾಗುತ್ತದೆ. ಗ್ಲಾಮರ್‌ ಹಾಗೂ ಐಷರಾಮಿ ಜಗತ್ತಿನಲ್ಲೇ ಬದುಕಲು ಇಷ್ಟಪಡುವ ರಾಶಿಯವರಿವರು.

ಈ 5 ರಾಶಿಯವರು ಫ್ಯಾಷನ್‌ ಜಗತ್ತಿನಲ್ಲಿ ತಮ್ಮದೇ ಆದ ಟ್ರೆಂಡ್‌ ಸೃಷ್ಟಿಸುತ್ತಾರೆ. ಬಟ್ಟೆಯ ಮೇಲೆ ಒಲವು ತೋರುವ ಜೊತೆಗೆ ಇತರರಿಗೂ ಒಲವು ಮೂಡುವಂತೆ ಮಾಡುತ್ತಾರೆ. ಬದಲಾಗುವ ಫ್ಯಾಷನ್‌ ಕ್ಷೇತ್ರಕ್ಕೆ ತಕ್ಕಂತೆ ಇವರು ಬದಲಾಗುತ್ತಾರೆ. ಜಗತ್ತಿನ ಫ್ಯಾಷನ್‌ ಟ್ರೆಂಡ್‌ ಸೆಟ್ಟರ್‌ಗಳಲ್ಲಿ ಈ 5 ರಾಶಿಯವರು ಪ್ರಮುಖರಾಗಿರುತ್ತಾರೆ.

ಇದನ್ನೂ ಓದಿ

Shani Dev Blessings: ಈ ವರ್ಷ ಮೂರು ಬಾರಿ ಶನಿದೇವನ ಸ್ಥಾನಪಲ್ಲಟ; 3 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Shanidev Sade Sat Relief: ಈ ವರ್ಷ 3 ರಾಶಿಯವರಿಗೆ ಶನಿದೇವನ ಸಾಡೆ ಸಾತ್‌ ದೋಷದಿಂದ ಮುಕ್ತಿ ಹೊಂದುವ ಸಮಯ ಬಂದಿದೆ. ಇನ್ನು ಮುಂದೆ ಇವರ ಬದುಕಿನಲ್ಲಿ ಎಲ್ಲವೂ ಒಳಿತಾಗಲಿದೆ. ಹಾಗಾದ್ರೆ ಆ ಮೂರು ರಾಶಿಯವರು ಯಾರು ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ