ಧನು ರಾಶಿ ಭವಿಷ್ಯ ಆಗಸ್ಟ್ 28: ಹೊಸ ಕೆಲಸಕ್ಕೆ ಸೇರಲಿದ್ದೀರಿ, ನಿಮ್ಮ ಕುಟಂಬದ ಆರೋಗ್ಯದ ಬಗ್ಗೆ ಕಾಳಜಿ ಅತಿಮುಖ್ಯ
Aug 28, 2024 06:36 AM IST
ಧನು ರಾಶಿ ಭವಿಷ್ಯ ಆಗಸ್ಟ್ 28
- Sagittarius Daily Horoscope August 28, 2024:ರಾಶಿಚಕ್ರದ 9ನೇ ಚಿಹ್ನೆ ಧನು ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಧನು ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯೇ ಧನು ರಾಶಿ. ಆಗಸ್ಟ್ 28ರ ಧನು ರಾಶಿ ಭವಿಷ್ಯದ ಪ್ರಕಾರ, ಅಪರಿಚಿತ ವ್ಯಕ್ತಿಯ ಭೇಟಿಯಾಗಲಿದೆ, ಹೊರಗಡೆ ಆಹಾರ ಸೇವಿಸಿ ಆರೋಗ್ಯ ಕೆಡಬಹುದು.
ಧನು ರಾಶಿಯವರ ಇಂದಿನ (ಆಗಸ್ಟ್ 28, ಬುಧವಾರ) ದಿನ ಭವಿಷ್ಯದಲ್ಲಿ ಕಚೇರಿಯಲ್ಲಿ ಹೊಸ ಕೆಲಸದ ಜವಾಬ್ದಾರಿಯನ್ನು ಪಡೆಯುತ್ತೀರಿ. ಪ್ರೇಮ ಜೀವನದ ಸಮಸ್ಯೆಗಳು ಬಗೆಹರಿಯುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಧನು ರಾಶಿ ಲವ್ ಜಾತಕ (Sagittarius Love Horoscope): ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ನೀವಿಬ್ಬರೂ ಪರಸ್ಪರ ಬೆಂಬಲಿಸಬೇಕು. ಯಾವತ್ತೂ ಜಗಳ ಮಾಡಬೇಡಿ. ಇದು ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ. ನಿಮಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲ ಸಂಗಾತಿ ಸಿಗುತ್ತಾರೆ. ಅವರೊಂದಿಗೆ ಸುಂದರ ಸಂಬಂಧವನ್ನು ಬೆಸೆದುಕೊಳ್ಳುವುದು ನಿಮಗೆ ಬಿಟ್ಟದ್ದು. ಅವು ಹೇಳಿದಂತೆ ನೀವು, ನೀವು ಹೇಳಿದಂತೆ ಅವರು ನಡೆದುಕೊಂಡರೆ ಎಲ್ಲವೂ ಸುಖಮಯ.
ಧನು ರಾಶಿ ವೃತ್ತಿ ಜಾತಕ (Sagittarius Professional Horoscope): ನಿಮ್ಮ ವೃತ್ತಿಪರ ಜಾಣತನ ಇಂದು ಕೆಲಸಕ್ಕೆ ಬರಲಿದೆ. ಹಣಕಾಸಿನ ನಿರ್ಧಾರಗಳನ್ನು ಒಳಗೊಂಡಂತೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದೊಂದು ಉತ್ತಮ ದಿನವಾಗಿರುತ್ತದೆ. ಕೆಲವು ವೃತ್ತಿಪರರು ಇಂದು ಕ್ಲೈಂಟ್ನ ಸ್ಥಳಕ್ಕೆ ಪ್ರಯಾಣಿಸುತ್ತಾರೆ ಮತ್ತು ಉದ್ಯೋಗವನ್ನು ಬದಲಾಯಿಸಲು ಉತ್ಸುಕರಾಗಿರುವವರು ದಿನದ ದ್ವಿತೀಯಾರ್ಧದಲ್ಲಿ ಸಂದರ್ಶನವನ್ನು ತೆಗೆದುಕೊಳ್ಳುತ್ತಾರೆ. ಹಿರಿಯ ಹುದ್ದೆಯಲ್ಲಿರುವವರು ಇಂದಿನ ನಿರ್ಣಾಯಕ ಸಭೆಗಳಲ್ಲಿ ತಂಡದ ಪ್ರದರ್ಶನವನ್ನು ಸಮರ್ಥಿಸಿಕೊಳ್ಳಬೇಕಾಗಿ ಬರುತ್ತದೆ.
ಧನು ರಾಶಿ ಆರ್ಥಿಕ ಜಾತಕ (Sagittarius Money Horoscope): ಸಂಪತ್ತು ಬರುತ್ತದೆ ಆದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಲ್ಲ. ಸಾಲವನ್ನು ಮರುಪಾವತಿ ಮಾಡುವಲ್ಲಿ ಸಮಸ್ಯೆಗಳಿರಬಹುದು. ಕೆಲವು ಮಹಿಳೆಯರಿಗೆ ಮನೆಯನ್ನು ನವೀಕರಿಸಲು ಹಣದ ಅಗತ್ಯವಿರುತ್ತದೆ. ಇಂದು ಖರ್ಚುಗಳನ್ನು ಕಡಿಮೆ ಮಾಡಿ. ಹೆಚ್ಚುವರಿ ಹಣವನ್ನು ನಿಮ್ಮ ವ್ಯವಹಾರವನ್ನು ಮುಂದುವರೆಸಲು ಉಪಯೋಗ ಮಾಡಿ. ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಸಹಾಯ ಆಗುತ್ತದೆ. ದಿನದ ಅಂತ್ಯದ ಮೊದಲು ಹಣಕಾಸಿನ ವಿವಾದವನ್ನು ಇತ್ಯರ್ಥಪಡಿಸಲು ಸಹ ನೀವು ಪ್ರಯತ್ನಿಸುವಿರಿ.
ಧನು ರಾಶಿ ಆರೋಗ್ಯ ಜಾತಕ (Sagittarius Health Horoscope): ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲ. ಒಡಹುಟ್ಟಿದವರಿಗೆ ತುರ್ತು ಸಹಾಯದ ಅಗತ್ಯವಿರುತ್ತದೆ.ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಯೋಗ ಮತ್ತು ಧ್ಯಾನ ಸೇರಿದಂತೆ ನೈಸರ್ಗಿಕ ಪರಿಹಾರಗಳ ಮೊರೆ ಹೋಗಬೇಕು. ಕೆಟ್ಟ ವೈಬ್ಗಳನ್ನು ಹೊಂದಿರುವ ಜನ ಅದರಿಂದ ಹೊರಬರಬೇಕು. ಒಟ್ಟಿನಲ್ಲಿ ನೀವು ಇಂದು ನಿಮ್ಮ ಕಾಳಜಿಗಿಂತ ಹೆಚ್ಚಾಗಿ ನಿಮ್ಮ ಮನೆಯವರ ಕಾಳಜಿ ಮಾಡುವುದು ಮುಖ್ಯವಾಗಿದೆ.
ಧನು ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಧನು ರಾಶಿಯ ಅಧಿಪತಿ: ಗುರು, ಧನು ರಾಶಿಯವರಿಗೆ ಶುಭ ದಿನಾಂಕಗಳು: 3, 5, 6 ಮತ್ತು 8. ಧನು ರಾಶಿಯವರಿಗೆ ಶುಭ ವಾರಗಳು: ಭಾನುವಾರ, ಬುಧವಾರ, ಶುಕ್ರವಾರ ಮತ್ತು ಗುರುವಾರ. ಧನು ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ, ಕಿತ್ತಳೆ ಮತ್ತು ಕ್ರೀಂ. ಧನು ರಾಶಿಯವರಿಗೆ ಅಶುಭ ವರ್ಣ: ಕೆಂಪು, ಮುತ್ತು. ಧನು ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಈಶಾನ್ಯ. ಧನು ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15ರಿಂದ ಸೆಪ್ಟಂಬರ್ 14. ಧನು ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು, ಕನಕ ಪುಷ್ಯರಾಗ. ಧನು ರಾಶಿಯವರಿಗೆ ಶುಭ ರಾಶಿ: ಮೀನ, ಮೇಷ ಮತ್ತು ಸಿಂಹ. ಧನು ರಾಶಿಯವರಿಗೆ ಅಶುಭ ರಾಶಿ: ಮಕರ, ಕುಂಭ, ಮಿಥುನ, ವೃಷಭ ಮತ್ತು ತುಲಾ.
ಧನು ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಆದಿತ್ಯ ಹೃದಯ: ಪ್ರತಿದಿನ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.
2) ಈ ದಾನಗಳಿಂದ ಶುಭ ಫಲ: ಹೆಸರು ಬೇಳೆ ಮತ್ತು ಹಸಿರುಬಟ್ಟೆ ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ದಂಪತಿಗಳ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ದುರ್ಗಾಮಾತೆಯ ದೇವಾಲಯಕ್ಕೆ ಪೂಜಾಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಗುರುಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು , ಕೇಸರಿ ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.