ಶನಿ ಸಂಕ್ರಮಣ 2025: ಮೇಷ ರಾಶಿಗೆ ಸಾಡೇ ಸಾತಿ ಆರಂಭ, ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡೆತಡೆ; ಪರಿಹಾರ ಇಲ್ಲಿದೆ
Nov 29, 2024 01:30 PM IST
ಶನಿ ಸಂಕ್ರಮಣ 2025: ಮೇಷ , ವೃಷಭ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ
Saturn Transit 2025: ಶನಿಯು ಮುಂದಿನ ವರ್ಷ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮೇಷ ಹಾಗೂ ವೃಷಭ ರಾಶಿಯವರಿಗೆ ಕರ್ಮಕಾರಕ ಶನಿ ಏನು ಫಲ ನೀಡಲಿದ್ದಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ.
ಶನಿ ಸಂಕ್ರಮಣ 2025: ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ಸ್ಥಾನ ಬದಲಿಸುವ ಶನಿಯು 29 ಮಾರ್ಚ್ 2025 ರಾತ್ರಿ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಮುಕ್ತಾಯವಾಗುತ್ತದೆ. ಮೇಷ ರಾಶಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ.
ತಾಜಾ ಫೋಟೊಗಳು
ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮೇಷ , ವೃಷಭ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ 10 ಮತ್ತು 11ನೇ ಮನೆಗಳ ಅಧಿಪತಿ ಶನಿಯು 12ನೇ ಮನೆಗೆ ಪ್ರವೇಶಿಸುತ್ತಾನೆ, ನಿಮ್ಮ ಸಾಡೇಸಾತಿ ಅವಧಿ ಪ್ರಾರಂಭವಾಗುತ್ತದೆ. ಈ ಸ್ಥಾನದಿಂದ, ಶನಿಯು ನಿಮ್ಮ ಎರಡನೇ, ಆರನೇ ಮತ್ತು ಒಂಬತ್ತನೇ ಮನೆಗಳ ಮೇಲೆ ಪ್ರಭಾವ ಬೀರುತ್ತದೆ, ಇದು ನಿಮ್ಮ ಕೆಲಸಗಳಿಗೆ ಅಡೆತಡೆಗಳನ್ನು ತರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಹಣಕಾಸಿನ ವ್ಯವಹಾರವನ್ನು ಎಚ್ಚರಿಕೆಯಿಂದ ನಿಭಾಯಿಸುವುದು ಬಹಳ ಅಗತ್ಯ.
ಈ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಕಣ್ಣಿನ ಕಿರಿಕಿರಿ, ಕಣ್ಣುಗಳಲ್ಲಿ ನೀರು ಬರುವುದು, ದೃಷ್ಟಿ ಕಡಿಮೆಯಾಗುವುದು, ಕಾಲಿನಲ್ಲಿ ಗಾಯ ಸೇರಿದಂತೆ ಮುಂತಾದ ಸಮಸ್ಯೆಗಳು ತಲೆದೋರಬಹುದು. ಈ ಅವಧಿಯಲ್ಲಿ, ನಿಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ನೀವು ಅನಾರೋಗ್ಯದಿಂದ ಬಳಲಬಹುದು. ಜುಲೈನಿಂದ ನವೆಂಬರ್‌ವರೆಗೆ, ಶನಿಯು ಹಿಮ್ಮೆಟ್ಟಿದಾಗ, ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಹಿಮ್ಮುಖ ಅವಧಿಯ ನಂತರ ನಿಮಗೆ ಸ್ವಲ್ಪ ನಿರಾಳವಾಗಬಹುದು.
ಪರಿಹಾರ: ಪ್ರತಿ ಶನಿವಾರ ಶ್ರೀ ಬಜರಂಗಬಾನ್ ಪಠಿಸಿ
ವೃಷಭ ರಾಶಿ
ವೃಷಭ ರಾಶಿಯವರಿಗೆ, ಶನಿಯು 9 ಮತ್ತು 10ನೇ ಮನೆಗಳನ್ನು ಆಳುವುದರಿಂದ ಲಾಭದಾಯಕ ಗ್ರಹವಾಗಿದೆ. ರಾಶಿ ಬದಲಾವಣೆ ನಂತರ ಶನಿಯು ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸಲಿದ್ದು, ವಿವಿಧ ಅನುಕೂಲಗಳನ್ನು ತರುತ್ತದೆ. ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನಿಮ್ಮ ಐದನೇ ಮತ್ತು ಎಂಟನೇ ಮನೆಯ ಮೇಲೆ ಪ್ರಭಾವ ಬೀರುತ್ತದೆ. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ. ಹನ್ನೊಂದನೇ ಮನೆಯಲ್ಲಿ ಶನಿಯ ಸಂಚಾರವು ಅತ್ಯಂತ ಮಂಗಳಕರವಾಗಿದೆ. ಆದರೂ ವಿದ್ಯಾರ್ಥಿಗಳು ಕೆಲವು ಅಡೆತಡೆಗಳನ್ನು ಎದುರಿಸಬಹುದು.
ಈ ಸಮಯದಲ್ಲಿ ನಿಮ್ಮ ಮಕ್ಕಳ ಬಗ್ಗೆ ನೀವು ಕಾಳಜಿ ಹೆಚ್ಚಿಸಬೇಕು. ಆದರೆ ಅದರ ನಂತರದ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ನಿಮ್ಮ ಆಸೆಗಳು ಈಡೇರುತ್ತವೆ ಮತ್ತು ಹಿರಿಯ ಅಧಿಕಾರಿಗಳ ಬೆಂಬಲವು ನಿಮ್ಮ ವೃತ್ತಿಜೀವನದಲ್ಲಿ ಬಡ್ತಿಗೆ ಕಾರಣವಾಗಬಹುದು. ವ್ಯವಹಾರದಲ್ಲಿ ಗಮನಾರ್ಹ ಯಶಸ್ಸನ್ನು ಸಹ ಸಾಧಿಸಬಹುದು. ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ.
ಪರಿಹಾರ: ದುರ್ಗಾ ಮಾತೆಯ ಬೀಜ ಮಂತ್ರವನ್ನು ಪಠಿಸುವುದು ನಿಮಗೆ ಶುಭ ಫಲಗಳನ್ನು ತರುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.