logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ಸಂಕ್ರಮಣ 2025: ಮಿಥುನ ರಾಶಿಯವರು ವೃತ್ತಿಯಲ್ಲಿ ಸಾಧನೆ ಮಾಡಲಿದ್ದಾರೆ, ಕರ್ಕಾಟಕ ರಾಶಿಯವರಿಗೆ ಆರೋಗ್ಯ ಸಮಸ್ಯೆ

ಶನಿ ಸಂಕ್ರಮಣ 2025: ಮಿಥುನ ರಾಶಿಯವರು ವೃತ್ತಿಯಲ್ಲಿ ಸಾಧನೆ ಮಾಡಲಿದ್ದಾರೆ, ಕರ್ಕಾಟಕ ರಾಶಿಯವರಿಗೆ ಆರೋಗ್ಯ ಸಮಸ್ಯೆ

Rakshitha Sowmya HT Kannada

Nov 29, 2024 02:14 PM IST

google News

ಶನಿ ಸಂಕ್ರಮಣ 2025: ಮಿಥುನ, ಕರ್ಕಾಟಕ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ

  • Saturn Transit 2025: ಶನಿಯು ಮುಂದಿನ ವರ್ಷ ಮಾರ್ಚ್‌ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಿಥುನ ಹಾಗೂ ಕರ್ಕಾಟಕ ರಾಶಿಯವರಿಗೆ ಕರ್ಮಕಾರಕ ಶನಿ ಏನು ಫಲ ನೀಡಲಿದ್ದಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ.

ಶನಿ ಸಂಕ್ರಮಣ 2025: ಮಿಥುನ, ಕರ್ಕಾಟಕ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ
ಶನಿ ಸಂಕ್ರಮಣ 2025: ಮಿಥುನ, ಕರ್ಕಾಟಕ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ (PC: canva)

ಶನಿ ಸಂಕ್ರಮಣ 2025: ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ಸ್ಥಾನ ಬದಲಿಸುವ ಶನಿಯು 29 ಮಾರ್ಚ್‌ 2025 ರಾತ್ರಿ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಮುಕ್ತಾಯವಾಗುತ್ತದೆ. ಮೇಷ ರಾಶಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಿಥುನ, ಕರ್ಕಾಟಕ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ, ಶನಿಯು 8 ಮತ್ತು 9ನೇ ಮನೆಗಳನ್ನು ಆಳುತ್ತಾನೆ. ಆದರೆ 2025 ಶನಿ ಸಂಕ್ರಮಣದ ಸಮಯದಲ್ಲಿ 10ನೇ ಮನೆಗೆ ಹೋಗುತ್ತಾನೆ. ಶನಿಯು ನಿಮ್ಮ ಆಡಳಿತ ಗ್ರಹವಾದ ಬುಧದ ಮಿತ್ರನಾಗಿರುವುದರಿಂದ, ಈ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಲು ಇದು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಕೆಲಸದಲ್ಲಿ ಹೆಚ್ಚಿನ ಒತ್ತಡ ಅನುಭವಿಸಿದರೂ, ಶ್ರದ್ಧೆ, ಪ್ರಾಮಾಣಿಕತೆ ಮೂಲಕ ಯಶಸ್ಸು ಒಲಿದು ಬರುತ್ತದೆ.

ಶನಿಯ ಸ್ಥಾನವು ಹನ್ನೆರಡನೇ, ನಾಲ್ಕನೇ ಮತ್ತು ಏಳನೇ ಮನೆಗಳನ್ನು ಸಂಪೂರ್ಣವಾಗಿ ನೋಡುತ್ತದೆ. ಇದರಿಂದ ಖರ್ಚು ಕಡಿಮೆ ಆಗಿ ಉಳಿತಾಯ ಹೆಚ್ಚಾದರೂ ಕೌಂಟುಂಬಿಕ ಜೀವನದಲ್ಲಿ ಏರುಪೇರುಗಳನ್ನು ಉಂಟುಮಾಡಬಹುದು. ಜುಲೈ ಮತ್ತು ನವೆಂಬರ್ ತಿಂಗಳ ನಡುವೆ, ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನೀವು ವ್ಯಾಪಾರಸ್ಥರಾಗಿದ್ದು ಎಚ್ಚರಿಕೆಯಿಂದ ಇದ್ದರೆ ಲಾಭ ಹೆಚ್ಚಾಗುತ್ತದೆ. ಶನಿ ಸಂಕ್ರಮಣದಿಂದ ನಿಮ್ಮ ದೀರ್ಘಕಾಲದ ಆಸೆಯೊಂದು ಈಡೇರುತ್ತದೆ. ಅದೃಷ್ಟದ ಬೆಂಬಲದಿಂದ ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ, ಒಟ್ಟಾರೆಯಾಗಿ ಜೀವನದಲ್ಲಿ ಯಶಸ್ಸನ್ನು ತರುತ್ತವೆ.

ಪರಿಹಾರ: ಪ್ರತಿ ಶನಿವಾರ ವಿಶೇಷಚೇತನರಿಗೆ ಅನ್ನದಾನ ಮಾಡಿ

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರ 7 ಮತ್ತು 8ನೇ ಮನೆಗಳನ್ನು ಆಳುವ ಶನಿಯು ಸಂಕ್ರಮಣದ ಸಮಯದಲ್ಲಿ ನಿಮ್ಮ 9 ಮನೆಗೆ ಚಲಿಸುತ್ತಾನೆ. ಈ ಪರಿವರ್ತನೆಯು ಕರ್ಕ ರಾಶಿಯವರಿಗೆ ಸಮಸ್ಯೆಗಳ ಅಂತ್ಯವನ್ನು ಸೂಚಿಸುತ್ತದೆ, ಕ್ರಮೇಣ ಕೆಲಸಕ್ಕೆ ಸಂಬಂಧಿಸಿದ ಅಡೆತಡೆಗಳು ಸುಧಾರಿಸುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಸುಧಾರಿಸುತ್ತದೆ. ಒಟ್ಟಿಗೆ ಪ್ರವಾಸ ಮಾಡುವುದರಿಂದ ನಿಮ್ಮ ನಡುವಿನ ಬಂಧ ಹೆಚ್ಚಾಗುತ್ತದೆ. ತಪ್ಪು ತಿಳುವಳಿಕೆ ದೂರವಾಗುತ್ತದೆ. ವಿವಿಧ ಮೂಲಗಳಿಂದ ಹಣದ ಹರಿವು ಬರುತ್ತದೆ.

ಜುಲೈನಿಂದ ನವೆಂಬರ್‌ವರೆಗೆ, ಆರೋಗ್ಯ ಸಮಸ್ಯೆಗಳು ಉಂಟಾಗಬಹುದಾದ ಕಾರಣ ನೀವು ಜಾಗರೂಕರಾಗಿರಬೇಕು. ಈ ಅವಧಿಯ ನಂತರ, ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗುತ್ತವೆ. ಹನ್ನೊಂದು, ಮೂರು ಮತ್ತು ಆರನೇ ಮನೆಗಳ ಮೇಲೆ ಶನಿಯ ಪ್ರಭಾವವು ನಿಮ್ಮ ವಿರೋಧಿಗಳ ಸೋಲಿಗೆ ಕಾರಣವಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಆಸೆಗಳು ಈಡೇರುತ್ತವೆ ಮತ್ತು ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಅನುಭವಿಸಬಹುದು. ಈ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳು ಲಾಭವನ್ನು ನೀಡಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಪರಿಹಾರ: ಶನಿವಾರ ಕಪ್ಪು ಉದ್ದಿನ ಕಾಳನ್ನು ದಾನ ಮಾಡಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ