ಶನಿ ಸಂಕ್ರಮಣ 2025: ತುಲಾ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ, ವೃಶ್ಚಿಕ ರಾಶಿಯವರ ಆದಾಯದಲ್ಲಿ ಹೆಚ್ಚಳ
Nov 29, 2024 04:05 PM IST
ಶನಿ ಸಂಕ್ರಮಣ 2025: ತುಲಾ, ವೃಶ್ಚಿಕ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ
Saturn Transit 2025: ಶನಿಯು ಮುಂದಿನ ವರ್ಷ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ತುಲಾ, ವೃಶ್ಚಿಕ ರಾಶಿಯವರಿಗೆ ಕರ್ಮಕಾರಕ ಶನಿ ಏನು ಫಲ ನೀಡಲಿದ್ದಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ.
ಶನಿ ಸಂಕ್ರಮಣ 2025: ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ಸ್ಥಾನ ಬದಲಿಸುವ ಶನಿಯು 29 ಮಾರ್ಚ್ 2025 ರಾತ್ರಿ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಮುಕ್ತಾಯವಾಗುತ್ತದೆ. ಮೇಷ ರಾಶಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ.
ತಾಜಾ ಫೋಟೊಗಳು
ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತುಲಾ, ವೃಶ್ಚಿಕ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.
ತುಲಾ ರಾಶಿ
ಶನಿ ಸಂಕ್ರಮಣ 2025 ರ ಸಮಯದಲ್ಲಿ, ತುಲಾ ರಾಶಿಯ ನಾಲ್ಕನೇ ಮತ್ತು ಐದನೇ ಮನೆಗಳನ್ನು ಆಳುವ ಶನಿಯು ನಿಮ್ಮ 6ನೇ ಮನೆಗೆ ಚಲಿಸುತ್ತದೆ. ಇದು ನಿಮಗೆ ಬಹಳ ಶುಭಫಲಗಳನ್ನು ತರುತ್ತದೆ. ಎದುರಾಳಿಗಳ ಮೇಲೆ ವಿಜಯದ ಭರವಸೆ ನೀಡುತ್ತದೆ ಮತ್ತು ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ನಿಮ್ಮ ಶ್ರದ್ಧೆಯ ಪ್ರಯತ್ನಗಳು ಅರ್ಹ ಪ್ರತಿಫಲ ನೀಡುತ್ತದೆ, ನಿಮ್ಮ ಸ್ಥಾನವನ್ನು ಬಲಪಡಿಸುತ್ತದೆ. ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ. ವಿಶೇಷವಾಗಿ ಜುಲೈ ಮತ್ತು ನವೆಂಬರ್ ನಡುವೆ ಪರಿಸ್ಥಿತಿ ಅನುಕೂಲವಾಗಿದೆ. ಕೌಟುಂಬಿಕ ವಿಷಯಗಳು, ನಿರ್ದಿಷ್ಟವಾಗಿ ಆಸ್ತಿ ವಿವಾದಗಳು ಉದ್ಭವಿಸಬಹುದು. ಇದರನ್ನು ಎಚ್ಚರಿಕೆಯಿಂದ ನಿಭಾಯಿಸಿದರೆ ಗೆಲುವು ಖಚಿತ.
8, 12 ಮತ್ತು 3ನೇ ಮನೆಗಳ ಮೇಲೆ ಶನಿಯ ಪ್ರಭಾವವು ಸಮಸ್ಯೆಗಳನ್ನು ಪರಿಹರಿಸಲು, ಆರೋಗ್ಯವನ್ನು ಸುಧಾರಿಸಲು ಮತ್ತು ಪ್ರಗತಿಯನ್ನು ತರಲು ಸಹಾಯ ಮಾಡುತ್ತದೆ. ಯಶಸ್ಸಿಗೆ ಪರಿಶ್ರಮ ಬಹಳ ಮುಖ್ಯವಾಗಿದೆ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯನ್ನು ಶ್ರಮದಿಂದ ಬಳಸಿಕೊಂಡರೆ ಉತ್ತಮ ಯಶಸ್ಸು ನಿಮ್ಮದಾಗುತ್ತದೆ. ಜುಲೈನಿಂದ ನವೆಂಬರ್ವರೆಗೂ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ
ಪರಿಹಾರ: ಪ್ರತಿ ಶನಿವಾರ ಅಗತ್ಯವಿರುವವರಿಗೆ ಆಹಾರ ನೀಡಿ, ದೇವಸ್ಥಾನಕ್ಕೆ ಎಣ್ಣೆ ದಾನ ಮಾಡಿ್
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 3, 4ನೇ ಮನೆಗಳ ಅಧಿಪತಿ ಶನಿಯು ಸಂಕ್ರಮಣದ ಸಮಯದಲ್ಲಿ 5ನೇ ಮನೆಗೆ ಚಲಿಸುತ್ತಾನೆ. ಇದು ನಿಮ್ಮ ಪ್ರಣಯ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮ ಪ್ರೀತಿಪಾತ್ರರನ್ನು ನಿಮ್ಮ ಹತ್ತಿರ ತರುತ್ತದೆ ಮತ್ತು ನಿಮ್ಮ ಬಂಧವನ್ನು ಗಟ್ಟಿಗೊಳಿಸುತ್ತದೆ. ನೀವು ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ, ಇದು ಮದುವೆಯ ಹಂತಕ್ಕೂ ಹೋಗಲಿದೆ.
ಈ ಅವಧಿಯಲ್ಲಿ, ನೀವು ಯಶಸ್ವಿಯಾಗಿ ಉದ್ಯೋಗಗಳನ್ನು ಬದಲಾಯಿಸಬಹುದು, ಆದರೆ ಜುಲೈ ಮತ್ತು ನವೆಂಬರ್ ನಡುವೆ ಯಾವುದೇ ಉದ್ಯೋಗ ಬದಲಾವಣೆಯನ್ನು ತಪ್ಪಿಸಿ, ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಶುಭವಿದೆ, ನಿಮ್ಮ ಆದಾಯದಲ್ಲಿ ಹೆಚ್ಚಳವಾಗಿಲಿದೆ, ವ್ಯಾಪಾರಸ್ಥರಿಗೆ, ಹೊಸ ಹೂಡಿಕೆ ಲಾಭ ತರಲಿದೆ. ಷೇರು ಮಾರುಕಟ್ಟೆ ಹೂಡಿಕೆ ಲಾಭದಾಯಕವಾಗಬಹುದು.
ಪರಿಹಾರ: ಪ್ರತಿ ಶನಿವಾರ 8 ಬಾರಿ ಹನುಮಾನ್ ಚಾಲೀಸಾ ಪಠಿಸಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.