logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ಸಂಕ್ರಮಣ 2025: ಧನಸ್ಸು ರಾಶಿಯವರಿಗೆ ಧೈಯಾ ಆರಂಭ, ಮಕರ ರಾಶಿಯವರಿಗೆ ಸಾಡೇಸಾತಿ ಅಂತ್ಯ, ಮಹತ್ತರ ಬದಲಾವಣೆ

ಶನಿ ಸಂಕ್ರಮಣ 2025: ಧನಸ್ಸು ರಾಶಿಯವರಿಗೆ ಧೈಯಾ ಆರಂಭ, ಮಕರ ರಾಶಿಯವರಿಗೆ ಸಾಡೇಸಾತಿ ಅಂತ್ಯ, ಮಹತ್ತರ ಬದಲಾವಣೆ

Rakshitha Sowmya HT Kannada

Nov 29, 2024 04:03 PM IST

google News

ಶನಿ ಸಂಕ್ರಮಣ 2025: ಧನಸ್ಸು, ಮಕರ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ

  • Saturn Transit 2025: ಶನಿಯು ಮುಂದಿನ ವರ್ಷ ಮಾರ್ಚ್‌ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಧನಸ್ಸು, ಮಕರ ರಾಶಿಯವರಿಗೆ ಕರ್ಮಕಾರಕ ಶನಿ ಏನು ಫಲ ನೀಡಲಿದ್ದಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ.

ಶನಿ ಸಂಕ್ರಮಣ 2025: ಧನಸ್ಸು, ಮಕರ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ
ಶನಿ ಸಂಕ್ರಮಣ 2025: ಧನಸ್ಸು, ಮಕರ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ (PC: Canva)

ಶನಿ ಸಂಕ್ರಮಣ 2025: ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ಸ್ಥಾನ ಬದಲಿಸುವ ಶನಿಯು 29 ಮಾರ್ಚ್‌ 2025 ರಾತ್ರಿ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಮುಕ್ತಾಯವಾಗುತ್ತದೆ. ಮೇಷ ರಾಶಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಧನಸ್ಸು, ಮಕರ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.

ಧನಸ್ಸು ರಾಶಿ

ಧನು ರಾಶಿಯ ಸ್ಥಳೀಯರಿಗೆ, 2 ಮತ್ತು 3 ಮನೆಗಳ ಅಧಿಪತಿ ಶನಿಯು ನಿಮ್ಮ ಸಂಕ್ರಮಣದ ಸಮಯದಲ್ಲಿ 4ನೇ ಮನೆಗೆ ಪ್ರಯಾಣಿಸುತ್ತಾನೆ. ಈ ಸ್ಥಾನದಿಂದ, ಶನಿಯು ನಿಮ್ಮ ಆರು, 10 ಮತ್ತು ಒಂದನೇ ಮನೆಗಳ ಮೇಲೆ ಪ್ರಭಾವ ಬೀರುತ್ತಾನೆ. ಇದು ಧೈಯಾ ಅವಧಿಯ ಆರಂಭವನ್ನು ಸೂಚಿಸುತ್ತದೆ. ಇದರಿಂದ ನೀವು ನಿಮ್ಮ ಕುಟುಂಬದಿಂದ ದೂರವಿರಬಹುದು, ಕೆಲಸ ಅಥವಾ ಇತರ ಕಾರಣಗಳಿಂದ ಬೇರೆ ಸ್ಥಳಕ್ಕೆ ಹೋಗುವ ಸಾಧ್ಯತೆ ಇದೆ. ಇದರಿಂದ ನೀವು ನಿಮ್ಮ ಕುಟುಂಬದ ಸದಸ್ಯರ ಜೊತೆ ಅಂತರ ಹೆಚ್ಚಾಗುತ್ತದೆ. ಆದರೆ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ.

ಆದರೂ ನೀವು ದೂರ ಹೋಗುವುದರಿಂದ ನಿಮಗೆ ಬಹಳ ಒಳ್ಳೆಯದಾಗುತ್ತದೆ. ಕಾನೂನು ವಿಷಯಗಳಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು. ಆದರೂ, ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಕಷ್ಟು ಪ್ರಯತ್ನದ ಅಗತ್ಯವಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಶಿಸ್ತುಬದ್ಧ ಜೀವನಶೈಲಿಯನ್ನು ಅನುಸರಿಸುವುದು ಯಶಸ್ಸನ್ನು ಸುಲಭಗೊಳಿಸುತ್ತದೆ. ಜುಲೈ ಮತ್ತು ನವೆಂಬರ್ ತಿಂಗಳ ಅವಧಿಯಲ್ಲಿ ಎದೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡಬಹುದು. ಈ ಅವಧಿಯ ನಂತರ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ.

ಪರಿಹಾರ: ಪ್ರತಿ ಶನಿವಾರ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ದಾನ ಮಾಡಿ.

ಮಕರ ರಾಶಿ

2025 ರಲ್ಲಿ ಶನಿಯು ನಿಮ್ಮ ಮೂರನೇ ಮನೆಗೆ ಸಾಗುವುದರಿಂದ, ನಿಮ್ಮ ಸಾಡೇಸಾತಿಯ ಅಂತ್ಯವನ್ನು ಸೂಚಿಸುತ್ತಾರೆ. ಇದರಿಂದ ಮಕರ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಶನಿ, ಮಕರ ರಾಶಿಯ ಎರಡನೇ ಮನೆಯನ್ನು ಆಳುತ್ತಾನೆ, ಸಾಮಾನ್ಯವಾಗಿ ಮೂರನೇ ಮನೆಯಲ್ಲಿ ಅನುಕೂಲಕರ ಪ್ರಭಾವವನ್ನು ಬೀರುತ್ತದೆ. ಈ ಸ್ಥಾನದಿಂದ, ಶನಿಯು ನಿಮ್ಮ ಐದನೇ, ಒಂಬತ್ತನೇ ಮತ್ತು ಹನ್ನೆರಡನೇ ಮನೆಗಳನ್ನು ನೋಡುತ್ತಾನೆ. ಇದರಿಂದ ಸಣ್ಣ ಪ್ರವಾಸ, ವಿದೇಶಿ ಪ್ರಯಾಣ ಸಾಧ್ಯತೆ ಇದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರುವಿರಿ. ನಿಮ್ಮ ಒಡಹುಟ್ಟಿದವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಕ್ಕಳು ಗಮನಾರ್ಹ ಪ್ರಗತಿ ಸಾಧಿಸುತ್ತಾರೆ. ನಿಮ್ಮ ಬುದ್ಧಿವಂತಿಕೆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ನೀವು ಯಶಸ್ಸು ಕಾಣಲಿದ್ದೀರಿ.

ಜುಲೈನಿಂದ ನವೆಂಬರ್‌ವರೆಗೆ, ಜೀರ್ಣಕಾರಿ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ನಿಮ್ಮ ಪೋಷಕರ ಆರೋಗ್ಯದ ಮೇಲೆ ನಿಗಾ ವಹಿಸಿ. ನವೆಂಬರ್ ನಂತರ, ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಪ್ರಯತ್ನ ಬಹಳ ಮುಖ್ಯ. ಹಣಕಾಸಿನ ಪರಿಸ್ಥಿತಿ ಕೂಡಾ ಸುಧಾರಿಸಲಿದೆ.

ಪರಿಹಾರ: ಪ್ರತಿ ಶನಿವಾರ ಶನಿವಾರ ಉಪವಾಸವಿದ್ದು ಶನೈಶ್ಚರನನ್ನು ಪೂಜಿಸಿ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ