logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಕ್ಷಿಣ ಕನ್ನಡ: ಕಾರಿಂಜ, ನರಹರಿ ಪರ್ವತಗಳಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ; ಭಕ್ತಿಯಲ್ಲಿ ಮಿಂದೆದ್ದ ಜನ

ದಕ್ಷಿಣ ಕನ್ನಡ: ಕಾರಿಂಜ, ನರಹರಿ ಪರ್ವತಗಳಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ; ಭಕ್ತಿಯಲ್ಲಿ ಮಿಂದೆದ್ದ ಜನ

Raghavendra M Y HT Kannada

Aug 04, 2024 12:39 PM IST

google News

ದಕ್ಷಿಣ ಕನ್ನಡ: ಕಾರಿಂಜ, ನರಹರಿ ಪರ್ವತಗಳಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ; ಭಕ್ತಿಯಲ್ಲಿ ಮಿಂದೆದ್ದ ಜನ

    • ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ. ಈ ಆಷಾಢ ಅಮಾವಾಸ್ಯೆಯ ದಿನ ಕಾರಿಂಜ, ನರಹರಿ ಪರ್ವತಗಳಲ್ಲಿ ತೀರ್ಥಸ್ನಾನ ಮಾಡಿದ್ದಾರೆ. ( ವರದಿ: ಹರೀಶ್ ಮಾಂಬಾಡಿ)
ದಕ್ಷಿಣ ಕನ್ನಡ: ಕಾರಿಂಜ, ನರಹರಿ ಪರ್ವತಗಳಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ; ಭಕ್ತಿಯಲ್ಲಿ ಮಿಂದೆದ್ದ ಜನ
ದಕ್ಷಿಣ ಕನ್ನಡ: ಕಾರಿಂಜ, ನರಹರಿ ಪರ್ವತಗಳಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ; ಭಕ್ತಿಯಲ್ಲಿ ಮಿಂದೆದ್ದ ಜನ

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಎರಡು ಪ್ರಸಿದ್ಧ ಪರ್ವತ ಪುಣ್ಯ ಕ್ಷೇತ್ರಗಳಾದ ಕಾರಿಂಜ ಕಾರಿಂಜೇಶ್ವರ ಸನ್ನಿಧಿ ಹಾಗೂ ನರಹರಿ ಸದಾಶಿವ ರುದ್ರ ಸನ್ನಿಧಿಯಲ್ಲಿ ಇಂದು (ಆಗಸ್ಟ್ 4, ಭಾನುವಾರ) ನಸುಕಿನ ಜಾವ ಭಕ್ತರ ಗಡಣವಿತ್ತು. ವೈದಿಕರು ವೇದಮಂತ್ರಗಳ ಪಠಣವನ್ನು ಮಾಡುತ್ತಿದ್ದರೆ, ಭಕ್ತರು, ತೀರ್ಥಸ್ನಾನ ಮಾಡಿ ಪುನೀತರಾದರು. ಆಟಿ ತಿಂಗಳು ಎಂದೇ ಹೇಳಲಾಗುವ ಈ ತಿಂಗಳಲ್ಲಿ ಅಮವಾಸ್ಯೆಯಂದು ತೀರ್ಥಸ್ನಾನ ಮಾಡಿದರೆ, ಪುಣ್ಯಪ್ರಾಪ್ತಿ, ಸಕಲ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ ಈ ಅಮಾವಾಸ್ಯೆ ಆಷಾಡ ಅಮಾವಾಸ್ಯೆ. ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ ಶಿವ ಸನ್ನಿಧಿಗಳಲ್ಲಿರುವ ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನದ ಸಂಭ್ರಮ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆ.

ಪಾಲೆದ ಕೆತ್ತೆ ಕಷಾಯ

ಆಟಿಯ ಅಮಾವಾಸ್ಯೆಯ ದಿನ ತುಳುನಾಡಿನ ಜನರು ಬೆಳ್ಳಗೆ ಬೇಗನೇ ಎದ್ದು, ಹಾಲೆಯ ಮರದ ಕೆತ್ತೆಯನ್ನು ಕಲ್ಲಿನಲ್ಲಿ ಜಜ್ಜಿ ತಂದು, ಕಶಾಯ ಮಾಡಿ, ಸ್ನಾನ ಮಾಡಿ, ಕಷಾಯವನ್ನು ಕುಡಿದು. ದೇವಸ್ಥಾನಕ್ಕೆ ಹೋಗಿ ತೀರ್ಥಸ್ನಾನ ಮಾಡುವ ವಾಡಿಕೆ ಇದೆ.

ಶಂಖ, ಚಕ್ರ, ಗದಾ, ಪದ್ಮ ತೀರ್ಥಗಳು

ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನ ನಡೆಯಿತು. ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ಸಪ್ತವರ್ಣ ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪರಂಪರೆಯ ದಿನ ಆಟಿ ಅಮಾವಾಸ್ಯೆ ಪವಿತ್ರವಾಗಿದ್ದು ಮುಂಜಾನೆಯೇ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗಧಾ, ಪದ್ಮ ಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ಪಾಣೆಮಂಗಳೂರು ಗೋಳ್ತಮಜಲು ಮತ್ತು ಅಮ್ಟೂರು ಮೂರು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶದಲ್ಲಿ ರಮ್ಯ ಮನೋಹರ ಹಚ್ಚ ಹಸಿರಿನಿಂದ ಕಂಗೊಳಿಸುವ ಪರ್ವತ ಬರೀ ದೇಗುಲವಲ್ಲ. ನಿಸರ್ಗ ಪ್ರಿಯರಿಗೆ ಪ್ರಕೃತಿ ಸೌಂದರ್ಯದ ಮಡಿಲು ಭಾವುಕರಿಗೆ ನಂದಗೋಕುಲ ನೊಂದವರಿಗೆ ಶಾಂತಿಧಾಮ ಎನ್ನಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಪರ್ವತದ ತುತ್ತ ತುದಿಯವರೆಗೆ ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.( ವರದಿ: ಹರೀಶ್ ಮಾಂಬಾಡಿ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ