logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬದುಕಿನ ಪಾಠ ಕಲಿಸುವ ಮಹಾಭಾರತದ ಪಾತ್ರಗಳು; ಈ ಪಾತ್ರಗಳನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಎಂದಿಗೂ ಸೋಲಿಲ್ಲ

ಬದುಕಿನ ಪಾಠ ಕಲಿಸುವ ಮಹಾಭಾರತದ ಪಾತ್ರಗಳು; ಈ ಪಾತ್ರಗಳನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಎಂದಿಗೂ ಸೋಲಿಲ್ಲ

Reshma HT Kannada

Nov 04, 2024 12:19 PM IST

google News

ಬದುಕಿನ ಪಾಠ ಕಲಿಸುವ ಮಹಾಭಾರತದ ಪಾತ್ರಗಳು

    • ಮಹಾಭಾರತ ಕೇವಲ ಒಂದು ಧರ್ಮಗ್ರಂಥವಲ್ಲ. ಇದು ಸಹೋದರರ ನಡುವಿನ ಯುದ್ಧವೂ ಅಲ್ಲ. ಮಹಾಭಾರತ ಎಂಬ ಮಹಾಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ವ್ಯಕ್ತಿಯ ಜೀವನದಲ್ಲಿ ಪರೀಕ್ಷೆಗಳನ್ನು ಎದುರಿಸಬಹುದು. ಬದುಕಿನಲ್ಲಿ ನಾವು ಹೇಗೆ ವರ್ತಿಸಬಾರದು ಎಂಬುದನ್ನ ಈ ಪಾತ್ರಗಳನ್ನು ನೋಡಿ ಕಲಿಯಬಹುದು.
ಬದುಕಿನ ಪಾಠ ಕಲಿಸುವ ಮಹಾಭಾರತದ ಪಾತ್ರಗಳು
ಬದುಕಿನ ಪಾಠ ಕಲಿಸುವ ಮಹಾಭಾರತದ ಪಾತ್ರಗಳು

ಮಹಾಭಾರತ ಹಿಂದೂಗಳ ಪವಿತ್ರ ಗ್ರಂಥ, ಇದೊಂದು ಮಹಾಕಾವ್ಯ. ಪ್ರಪಂಚದಲ್ಲಿರುವುದೆಲ್ಲ ಮಹಾಭಾರತದಲ್ಲಿದೆ, ಮಹಾಭಾರತದಲ್ಲಿ ಇಲ್ಲದಿರುವುದು ಪ್ರಪಂಚದಲ್ಲಿಲ್ಲ ಎಂಬ ಮಾತಿದೆ. ಧರ್ಮ, ನ್ಯಾಯ, ವಂಚನೆ, ಸ್ನೇಹ, ಬೆನ್ನಿಗೆ ಚೂರಿ ಹಾಕುವುದು... ಹೀಗೆ ಹಲವು ಬಗೆಯ ಗುಣಲಕ್ಷಣಗಳು ಹಾಗೂ ಆ ಗುಣಗಳಿಗೆ ಹೊಂದುವ ವ್ಯಕ್ತಿಗಳು ಮಹಾಭಾರತದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಮಹಾಭಾರತ ಜೀವನದ ಪಾಠವನ್ನು ಕಲಿಸುತ್ತದೆ ಎಂದು ಹೇಳಲಾಗುತ್ತದೆ. ಮಹಾಭಾರತವನ್ನು ಅಧ್ಯಯನ ಮಾಡುವವರು ಮತ್ತು ಅದರಲ್ಲಿನ ಪ್ರತಿಯೊಂದು ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ಆ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಶಕ್ತಿ, ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪಡೆಯುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಮಹಾಭಾರತದಲ್ಲಿ ಬರುವ ಯಾವೆಲ್ಲಾ ಪಾತ್ರಗಳಿಂದ ನಾವು ಪಾಠಗಳನ್ನು ಕಲಿಯಬಹುದು ನೋಡಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶಕುನಿ - ಕೆಟ್ಟ ಸ್ನೇಹ

ಜೀವನದಲ್ಲಿ ಕೆಟ್ಟ ಸ್ನೇಹವು ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಶಕುನ ಸೂಚಿಸುತ್ತದೆ. ಶಕುನಿ ಕೌರವರ ಜೊತೆ ಸ್ನೇಹ ಬೆಳೆಸಿ ಅವರ ನಾಶಕ್ಕೆ ಕಾರಣನಾದ. ಕೌರವರು ಶಕುನಿಯೊಂದಿಗೆ ಸ್ನೇಹ ಬೆಳೆಸದಿದ್ದರೆ ಅವರಿಗೆ ಇಂತಹ ಹೀನಾಯ ಸಾವು ಬರುತ್ತಿರಲಿಲ್ಲ. ಶಕುನಿಯ ಚಾಡಿಮಾತಿಗೆ ಕಿವಿಗೊಟ್ಟ ಪಾಂಡವರು ಅನ್ಯಾಯ ಮಾಡಿ, ಅನ್ಯಾಯದ ಸಾವು ತಂದುಕೊಂಡರಯ. ಆ ಕಾರಣಕ್ಕೆ ಕೆಟ್ಟ ಮನಸ್ಥಿತಿಯ ಸ್ನೇಹಿತನನ್ನು ಪಡೆಯುವ ಬದಲು ಸ್ನೇಹ ಮಾಡದೇ ಇರುವುದು ಉತ್ತಮ.

ಕರ್ಣ - ಅತಿಯಾದ ಒಳ್ಳೆಯತನ

ದಯೆ, ಕರುಣೆ ಮತ್ತು ಮಮಕಾರ ಈ ಎಲ್ಲವೂ ನಿಮ್ಮ ಜೀವನವನ್ನು ಸುಡುತ್ತದೆ ಎಂಬುದಕ್ಕೆ ಕರ್ಣ ಉದಾಹರಣೆ. ಕರ್ಣನು ತನ್ನ ವಿಪರೀತ ದಯೆ ಮತ್ತು ದಾನದಿಂದ ಅವನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಕೊನೆಗೆ ದುಷ್ಟರ ಕಡೆ ನಿಂತು ಪ್ರಾಣ ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಗೆಲ್ಲಬೇಕಾದರೆ ಒಳ್ಳೆಯವರ ಜೊತೆ ಬೆರೆಯಬೇಕು. ಅನಾವಶ್ಯಕ ಸಂದರ್ಭಗಳಲ್ಲಿ, ಅನಾವಶ್ಯಕ ವ್ಯಕ್ತಿಗಳಿಗೆ ದಾನ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಇದು ಕರ್ಣನಿಂದ ಕಲಿಯಬೇಕಾದ ಪಾಠಗಳು.

ಗಾಂಧಾರಿ - ಮಕ್ಕಳ ಪಾಲನೆ

ಮಕ್ಕಳನ್ನು ಶಿಸ್ತಿನಿಂದ ಬೆಳೆಸದೇ ಇದ್ದರೆ ಅವರು ದಾರಿ ತಪ್ಪುತ್ತಾರೆ, ಮಕ್ಕಳನ್ನ ಸರಿಯಾಗಿ ಬೆಳೆಸದೇ ಇರುವುದು ಪೋಷಕರ ತಪ್ಪು ಎಂದು ಮಹಾಭಾರತ ಹೇಳುತ್ತದೆ. ಗಾಂಧಾರಿ 100 ಮಕ್ಕಳಿಗೆ ಜನ್ಮ ನೀಡಿದಳು. ಆದರೆ 100 ಜನರಲ್ಲಿ ಒಬ್ಬರನ್ನೂ ಸರಿ ದಾರಿಗೆ ತರಲು ಸಾಧ್ಯವಾಗಲಿಲ್ಲ. ಮಕ್ಕಳ ನಡುವೆ ರಾಜ್ಯ ಹಂಚಿಕೆಗೆ ಸಂಬಂಧಿಸಿದಂತೆ ಜಗಳಗಳೂ ನಡೆಯುತ್ತಿದ್ದವು. ಅವರ ಶಿಸ್ತು ದಾರಿ ತಪ್ಪಿದೆ. ಕೂತು ಮಕ್ಕಳನ್ನು ನೋಡಿಕೊಳ್ಳಲಾಗದೆ ಗಾಂಧಾರಿ ಅವರತ್ತ ಗಮನ ಹರಿಸುವುದನ್ನು ನಿಲ್ಲಿಸಿದಳು. ಕೊನೆಗೆ ಕೌರವರೆಲ್ಲರೂ ದುರ್ಯೋಧನನ ಮಾರ್ಗವನ್ನು ಅನುಸರಿಸಿ ದುಷ್ಟರಾದರು. ಅವರು ಶಕುನಿಯಂತಹ ಕೆಟ್ಟ ಸ್ನೇಹಿತರೊಡನೆ ನಾಶವಾದರು.

ಧೃತರಾಷ್ಟ್ರ - ಮಕ್ಕಳ ಮೇಲೆ ವಿಪರೀತ ಪ್ರೀತಿ

ಮಕ್ಕಳನ್ನು ಪ್ರೀತಿಸುವುದು ಒಳ್ಳೆಯದು, ಆದರೆ ಅತಿಯಾದ ಪ್ರೀತಿ ಅವರ ನಾಶಕ್ಕೆ ಕಾರಣವಾಗುತ್ತದೆ. ಧೃತರಾಷ್ಟ್ರ ಮಹಾಭಾರತದಲ್ಲಿ ಇದನ್ನು ಸಾಬೀತುಪಡಿಸಿದ್ದಾನೆ. ಅವರ ಅತಿಯಾದ ಪ್ರೀತಿ ಮಕ್ಕಳನ್ನು ಖಳನಾಯಕರನ್ನಾಗಿ ಮಾಡಿತು. ತನ್ನ ಮಕ್ಕಳ ನಾಶಕ್ಕೆ ಧೃತರಾಷ್ಟ್ರನು ಪರೋಕ್ಷವಾಗಿ ಕಾರಣನಾದನು. ಬಾಲ್ಯದಿಂದಲೇ ಶಿಸ್ತನ್ನು ರೂಢಿಸಿಕೊಂಡಿದ್ದರೆ, ದೊಡ್ಡವರಾದ ಮೇಲೆ ಅವರು ಅನೇಕ ಮೌಲ್ಯಗಳನ್ನು ಕಲಿಯುತ್ತಿದ್ದರು. ಆದರೆ ದೃತರಾಷ್ಟ್ರನ ಅತಿಯಾದ ಪ್ರೀತಿ ಮತ್ತು ವಿಶ್ವಾಸವು ಕೌರವರ ನಾಶಕ್ಕೆ ಕಾರಣವಾಯಿತು.

ಅರ್ಜುನ - ಶಾಶ್ವತ ವಿದ್ಯಾರ್ಥಿ

ಜೀವನದಲ್ಲಿ ಸದಾ ಕಲಿಯುತ್ತಿರುವ ವಿದ್ಯಾರ್ಥಿಯಾಗಬೇಕು ಎಂದು ಅರ್ಜುನ ಹೇಳಿದರು. ಅರ್ಜುನನು ತನ್ನ ಜೀವನದುದ್ದಕ್ಕೂ ಕೆಲವು ರೀತಿಯ ಶಿಕ್ಷಣವನ್ನು ಕಲಿಯುವುದನ್ನು ಮುಂದುವರೆಸಿದನು. ಯಾವುದೇ ವಿದ್ಯೆಯನ್ನು ಕಲಿಯಲು ನಾಚಿಕೆ ಪಡಬಾರದು. ವಿದ್ಯೆ ಕಲಿಯಲು ವಯಸ್ಸಿನ ಹಂಗು ಇರಬಾರದು. ಹೀಗೆ ಪ್ರತಿ ಹಂತದಲ್ಲೂ ಕಲಿಕೆ ಮುಂದುವರಿಸಿದ ಅರ್ಜುನ ಅಂತಿಮವಾಗಿ ಮಹಾಭಾರತದಲ್ಲಿ ಮಹಾನ್ ಯೋಧ ಎಂದು ಪ್ರಸಿದ್ಧನಾಗುತ್ತಾನೆ.

ಅಭಿಮನ್ಯು - ಅರ್ಧ ಜ್ಞಾನ

ಯಾವುದೇ ವಿಷಯದ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವುದು ಮುಖ್ಯ ಎಂಬುದನ್ನು ಅಭಿಮನ್ಯುವನ್ನು ನೋಡಿ ಕಲಿಯಬೇಕು. ಅಭಿಮನ್ಯುವಿಗೆ ಪದ್ಮ ತಂತ್ರವನ್ನು ಪ್ರವೇಶಿಸುವುದು ತಿಳಿದಿತ್ತು, ಆದರೆ ಪದ್ಮ ತಂತ್ರದಿಂದ ಹೊರಬರುವುದು ಹೇಗೆ ಎಂದು ತಿಳಿಯದೆ ವೀರ ಮರಣ ಹೊಂದಿದನು. ಅರೆಜ್ಞಾನ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಪದ್ಮವ್ಯೂಹಕ್ಕೆ ಹೋಗಿದ್ದು ಅಭಿಮನ್ಯುವಿನ ತಪ್ಪು. ಅರ್ಧ ಜ್ಞಾನದಿಂದ ಏನನ್ನೂ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಆ ಕಾರಣಕ್ಕೆ ಯಾವುದೇ ವಿಚಾರದಲ್ಲಿ ಸಂಪೂರ್ಣ ಜ್ಞಾನ ಹೊಂದುವುದು ಮುಖ್ಯವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ದ್ರೌಪದಿ - ಮಹಿಳೆಯ ಗೌರವ

ಮಹಾಭಾರತದ ದ್ರೌಪದಿಯ ಪಾತ್ರವು ಮಹಿಳೆಯರನ್ನು ಹೆಚ್ಚು ಗೌರವಿಸಬೇಕು ಮತ್ತು ಅವರ ಕೋಪ, ಅವಮಾನ ಮತ್ತು ಶಾಪವು ರಾಜ್ಯವನ್ನು ನಾಶಮಾಡುತ್ತದೆ ಎಂದು ಹೇಳುತ್ತದೆ. ಆಕೆಗೆ ಆದ ಅವಮಾನ ಕೌರವ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು. ಮಹಿಳೆಯರು ದೇವರ ಸಮಾನ. ಅವರನ್ನು ಅವಮಾನಿಸುವ ಮುನ್ನ ಯೋಚಿಸಬೇಕು. ಮಹಿಳೆಯರನ್ನು ಇತರರ ಮುಂದೆ ಅವಮಾನಿಸುವುದು ಮತ್ತು ಅಳುವಂತೆ ಮಾಡುವುದು ಇತರರಿಗೆ ಅಪಾಯಕಾರಿ.

ಹೀಗೆ ಹೇಳುತ್ತಾ, ಮಹಾಭಾರತದ ಪ್ರತಿಯೊಂದು ಪಾತ್ರವೂ ವಿಭಿನ್ನ ಜೀವನ ಪಾಠವನ್ನು ಕಲಿಸುತ್ತದೆ. ಮಹಾಭಾರತವನ್ನು ಅರ್ಥಮಾಡಿಕೊಂಡ ವ್ಯಕ್ತಿಯು ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ