logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mokshada Ekadashi 2024: ಪಾಪಗಳಿಂದ ಮುಕ್ತಿ ಪಡೆಯಲು ಆಚರಿಸುವ ಮೋಕ್ಷದ ಏಕಾದಶಿ ಯಾವಾಗ? ದಿನಾಂಕ, ಪೂಜಾ ವಿಧಾನ ಹೀಗಿರುತ್ತೆ

Mokshada Ekadashi 2024: ಪಾಪಗಳಿಂದ ಮುಕ್ತಿ ಪಡೆಯಲು ಆಚರಿಸುವ ಮೋಕ್ಷದ ಏಕಾದಶಿ ಯಾವಾಗ? ದಿನಾಂಕ, ಪೂಜಾ ವಿಧಾನ ಹೀಗಿರುತ್ತೆ

Raghavendra M Y HT Kannada

Nov 29, 2024 05:38 PM IST

google News

2024 ರಲ್ಲಿ ಮೋಕ್ಷದ ಏಕಾದಶಿ ಯಾವಾಗ, ದಿನಾಂಕ, ಮಹತ್ವ ಹಾಗೂ ವ್ರತಾಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ

    • ಏಕಾದಶಿ ಉಪವಾಸವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ, ಆದರೆ ಲಕ್ಷ್ಮಿ ದೇವಿಯನ್ನು ವಿಷ್ಣುವಿನೊಂದಿಗೆ ಪೂಜಿಸುವ ಸಂಪ್ರದಾಯವಿದೆ. ಬ್ರಹ್ಮಾಂಡ ಪುರಾಣದ ನಂಬಿಕೆಗಳ ಪ್ರಕಾರ, ಮೋಕ್ಷದ ಏಕಾದಶಿಯಂದು ಉಪವಾಸ ಮಾಡುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ. 2024ರ ಮೋಕ್ಷದ ಏಕಾದಶಿಯ ವಿವರ ಇಲ್ಲಿದೆ.
2024 ರಲ್ಲಿ ಮೋಕ್ಷದ ಏಕಾದಶಿ ಯಾವಾಗ, ದಿನಾಂಕ, ಮಹತ್ವ ಹಾಗೂ ವ್ರತಾಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ
2024 ರಲ್ಲಿ ಮೋಕ್ಷದ ಏಕಾದಶಿ ಯಾವಾಗ, ದಿನಾಂಕ, ಮಹತ್ವ ಹಾಗೂ ವ್ರತಾಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ

ಮೋಕ್ಷದ ಏಕಾದಶಿ 2024: ಏಕಾದಶಿಗಳಲ್ಲಿ ಅತ್ಯುತ್ತಮವಾದುದು ಮೋಕ್ಷದ ಏಕಾದಶಿ. ಏಕಾದಶಿ ಉಪವಾಸವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ, ಆದರೆ ಲಕ್ಷ್ಮಿ ದೇವಿಯನ್ನು ವಿಷ್ಣುವಿನೊಂದಿಗೆ ಪೂಜಿಸುವ ಸಂಪ್ರದಾಯವಿದೆ. ಬ್ರಹ್ಮಾಂಡ ಪುರಾಣದ ನಂಬಿಕೆಗಳ ಪ್ರಕಾರ, ಮೋಕ್ಷದ ಏಕಾದಶಿಯಂದು ಉಪವಾಸ ಮಾಡುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ. ಈ ಉಪವಾಸದಿಂದ, ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ. ಮದುವೆಯಾದವರು ಮಕ್ಕಳನ್ನು ಪಡೆಯುವ ಆಶೀರ್ವಾದವನ್ನು ಪಡೆಯುತ್ತಾರೆ. ಮೋಕ್ಷದ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೋಕ್ಷದ ಏಕಾದಶಿಯ ಕಥೆ

ದಂತಕಥೆಯ ಪ್ರಕಾರ, ಗೋಕುಲ ಎಂಬ ರಾಜ್ಯದಲ್ಲಿ ವೈಖಾನಸ ಎಂಬ ಜನಪ್ರಿಯ ಮತ್ತು ಧಾರ್ಮಿಕ ರಾಜನಿದ್ದನು. ಎಲ್ಲಾ ವೇದಗಳ ಬುದ್ಧಿವಂತರು ಅವನ ರಾಜ್ಯದಲ್ಲಿ ವಾಸಿಸುತ್ತಿದ್ದರು. ಒಮ್ಮೆ ರಾಜನು ತನ್ನ ತಂದೆ ನರಕದಲ್ಲಿ ಸಾಕಷ್ಟು ಬಳಲುತ್ತಿದ್ದಾನೆ ಮತ್ತು ಅವನನ್ನು ನರಕದಿಂದ ಹೊರತರಲು ಪ್ರಾರ್ಥಿಸುತ್ತಿರುವವನಂತೆ ಕನಸು ಕಾಣುತ್ತಾನೆ. ಕನಸಿನಿಂದ ಹೊರಬಂದ ನಂತರ ರಾಜನು ತುಂಬಾ ತೊಂದರೆಗಳನ್ನು ಎದುರಿಸುತ್ತಾನೆ. ಕಾರಣವನ್ನು ತಿಳಿದುಕೊಳ್ಳಲು ಮತ್ತು ಅದನ್ನು ಪರಿಹರಿಸಲು, ಎಲ್ಲಾ ವಿದ್ವಾಂಸರನ್ನು ಕರೆದು ತನ್ನ ಕನಸಿನ ಬಗ್ಗೆ ಹೇಳುತ್ತಾನೆ. ಯಾರೂ ಏನನ್ನೂ ಹೇಳಲು ಸಾಧ್ಯವಾಗದಿದ್ದಾಗ, ಭೂತ, ಭವಿಷ್ಯ ಮತ್ತು ವರ್ತಮಾನ ಎಲ್ಲವನ್ನೂ ನೋಡಬಲ್ಲ ಪರ್ವತ ಮುನಿಯ ಆಶ್ರಮಕ್ಕೆ ಹೋಗುವಂತೆ ರಾಜನಿಗೆ ಸೂಚಿಸಲಾಗುತ್ತೆ.

ವಿದ್ವಾಂಸರ ಸಲಹೆಯಂತೆ ರಾಜನು ಪರ್ವತ ಮುನಿಯ ಆಶ್ರಮಕ್ಕೆ ಹೋಗುತ್ತಾನೆ. ನಮಸ್ಕಾರಗಳನ್ನು ಸಲ್ಲಿಸಿದ ನಂತರ, ಅವನು ತನ್ನ ಕಾಳಜಿಯ ಕಾರಣವನ್ನು ವಿವರಿಸಿದನು. ಪರ್ವತ ಮುನಿಯು ತನ್ನ ಧ್ಯಾನದ ಮೂಲಕ ರಾಜನ ತಂದೆಯ ಪಾಪಕಾರ್ಯಗಳನ್ನು ತಿಳಿದುಕೊಂಡನು ಮತ್ತು ಮೋಕ್ಷದ ಏಕಾದಶಿಯಂದು ಉಪವಾಸ ಮಾಡಲು ಹೇಳುತ್ತಾನೆ. ಈ ಉಪವಾಸವು ಎಲ್ಲಾ ತಿಂಗಳುಗಳಲ್ಲಿ ಅತ್ಯುತ್ತಮ ಮಾರ್ಗಶಿರ ತಿಂಗಳಲ್ಲಿ ಬರುತ್ತದೆ. ರಾಜನು ತನ್ನ ಕುಟುಂಬದೊಂದಿಗೆ ಮೋಕ್ಷದ ಏಕಾದಶಿಯಂದು ಉಪವಾಸ ಮಾಡಿದನು. ಅದರಿಂದ ಪಡೆದ ಪುಣ್ಯವನ್ನು ಅವನು ತನ್ನ ತಂದೆಗೆ ಹಸ್ತಾಂತರಿಸಿದನು, ಅದು ಅವನನ್ನು ನರಕದಿಂದ ಮುಕ್ತಗೊಳಿಸಿತು. ತಂದೆ ಸಂತೋಷಪಟ್ಟರು ಮತ್ತು ರಾಜನಿಗೆ ಅನೇಕ ಆಶೀರ್ವಾದಗಳನ್ನು ನೀಡಿದರು. ಏಕಾದಶಿಯಂದು ಮನುಕುಲವು ಉಪವಾಸವನ್ನು ಆಚರಿಸಬೇಕು ಎಂದು ಸತ್ಯ ಕೃಷ್ಣ ದಾಸ್ ಹೇಳಿದ್ದಾರೆ. ರಾಧಾ ಗೋವಿಂದ ಮಂದಿರದ ಮೂಲಕ ಈ ಉಪವಾಸದ ವ್ಯಾಪಕ ಪ್ರಚಾರಕ್ಕೆ ಅವರು ಕರೆ ನೀಡಿದ್ದರು.

ಮೋಕ್ಷದ ಏಕಾದಶಿ ಯಾವಾಗ, ಶುಭ ಮುಹೂರ್ತದ ವಿವರ

  • 2024ರ ಡಿಸೆಂಬರ್ 11 ರ ಬುಧವಾರ ಮೋಕ್ಷದ ಏಕಾದಶಿಯನ್ನು ಆಚರಿಸಲಾಗುತ್ತದೆ
  • ಮೋಕ್ಷದ ಏಕಾದಶಿ ಶುಭ ಮುಹೂರ್ತ: ತಿಥಿ ಪ್ರಾರಂಭದ ದಿನಾಂಕ: ಡಿಸೆಂಬರ್ 11 ಬೆಳಿಗ್ಗೆ 03:42
  • ಏಕಾದಶಿ ತಿಥಿ ಕೊನೆಗೊಳ್ಳುವ ಸಮಯ: ಡಿಸೆಂಬರ್ 12 ಬೆಳಿಗ್ಗೆ 01:09
  • ವ್ರತ ಪರಣ ಸಮಯ: ಡಿಸೆಂಬರ್ 12 ರಂದು ಬೆಳಗ್ಗೆ 07:05 ರಿಂದ ಬೆಳಿಗ್ಗೆ 09:09 ಸಮಯದಲ್ಲಿ ಉಪವಾಸವನ್ನು ಮುಕ್ತಾಯಗೊಳಿಸಲಾಗುತ್ತದೆ.
  • ಪರಣ ತಿಥಿಯಂದು ದ್ವಾದಶಿ ಮುಕ್ತಾಯ ಸಮಯ: ರಾತ್ರಿ 10:26

ಇದನ್ನೂ ಓದಿ: ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?

ಮೋಕ್ಷದ ಏಕಾದಶಿ ಪೂಜಾ ವಿಧಿ

  • ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು
  • ಮನೆಯ ದೇವಾಲಯದಲ್ಲಿ ದೀಪವನ್ನು ಬೆಳಗಿಸಿ
  • ವಿಷ್ಣುವಿಗೆ ಗಂಗಾ ನೀರಿನಿಂದ ಅಭಿಷೇಕ ಮಾಡಿ
  • ವಿಷ್ಣುವಿಗೆ ಹೂವುಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ
  • ಸಾಧ್ಯವಾದರೆ, ಈ ದಿನ ಉಪವಾಸ ಮಾಡಿ
  • ಅಂತಿಮವಾಗಿ ದೇವರಿಗೆ ಆರತಿ ಮಾಡಿ

ಇದನ್ನೂ ಓದಿ: ದೇವಶಯನಿ ಏಕಾದಶಿ; ಈ ದಿನ ಅನ್ನ ಏಕೆ ಸೇವಿಸಬಾರದು, ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಮಾಹಿತಿ

ಮೋಕ್ಷದ ಏಕಾದಶಿಯಂದು ದೇವರಿಗೆ ಸಾತ್ವಿಕ ವಸ್ತುಗಳನ್ನು ಮಾತ್ರ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಿಷ್ಣುವಿನ ಆನಂದದಲ್ಲಿ ತುಳಸಿಯ ಪಾತ್ರ ಮಹತ್ವದ್ದಾಗಿರುತ್ತದೆ. ತುಳಸಿ ಇಲ್ಲದೆ, ವಿಷ್ಣುವು ಆನಂದವನ್ನು ಅನುಭವಿಸುವುದಿಲ್ಲ ಎಂದು ನಂಬಲಾಗಿದೆ. ಹೀಗಾಗಿ ಪೂಜೆಯಲ್ಲಿ ತಪ್ಪಗೆ ತುಳಸಿಯನ್ನು ಬಳಸಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ