logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pitru Dosha: ಈ ಎಲ್ಲಾ ಸಮಸ್ಯೆಗಳು ಪಿತೃ ದೋಷದ ಲಕ್ಷಣಗಳು; ಪರಿಹಾರಕ್ಕಾಗಿ ಹೀಗೆ ಪ್ರಯತ್ನಿಸಿ ನೋಡಿ

Pitru Dosha: ಈ ಎಲ್ಲಾ ಸಮಸ್ಯೆಗಳು ಪಿತೃ ದೋಷದ ಲಕ್ಷಣಗಳು; ಪರಿಹಾರಕ್ಕಾಗಿ ಹೀಗೆ ಪ್ರಯತ್ನಿಸಿ ನೋಡಿ

Raghavendra M Y HT Kannada

Sep 12, 2024 11:42 AM IST

google News

Pitru Dosha: ಈ ಎಲ್ಲಾ ಸಮಸ್ಯೆಗಳು ಪಿತೃ ದೋಷದ ಲಕ್ಷಣಗಳು; ಪರಿಹಾರಕ್ಕಾಗಿ ಹೀಗೆ ಪ್ರಯತ್ನಿಸಿ ನೋಡಿ

  • Pitru Dosha: ಜಾತಕದಲ್ಲಿ ಪಿತೃ ದೋಷವಿದ್ದರೆ ಜೀವನದಲ್ಲಿ ನಿರಂತರ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳು ಆಗುವುದಿಲ್ಲ. ಹದಿನೈದು ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಹಲವು ಕಾರ್ಯಗಳನ್ನು ಮಾಡಬೇಕಾಗುತ್ತೆ. ಪಿತೃ ದೋಷದ ಲಕ್ಷಣಗಳೇನು? ಅವುಗಳಿಗೆ ಇರುವ ಪರಿಹಾರ ತಿಳಿಯಿರಿ.

Pitru Dosha: ಈ ಎಲ್ಲಾ ಸಮಸ್ಯೆಗಳು ಪಿತೃ ದೋಷದ ಲಕ್ಷಣಗಳು; ಪರಿಹಾರಕ್ಕಾಗಿ ಹೀಗೆ ಪ್ರಯತ್ನಿಸಿ ನೋಡಿ
Pitru Dosha: ಈ ಎಲ್ಲಾ ಸಮಸ್ಯೆಗಳು ಪಿತೃ ದೋಷದ ಲಕ್ಷಣಗಳು; ಪರಿಹಾರಕ್ಕಾಗಿ ಹೀಗೆ ಪ್ರಯತ್ನಿಸಿ ನೋಡಿ

Pitru Dosha 2024: ದೇವಾನುದೇವತೆಗಳನ್ನು ಮೆಚ್ಚಿಸಲು ನಾವು ಪ್ರತಿದಿನ ಪೂಜೆಯನ್ನು ಮಾಡುವಂತೆಯೇ ಪೂರ್ವಜರ ಆಶೀರ್ವಾದ ಪಡೆಯಲು ಶ್ರಾದ್ಧ, ಕರ್ಮ ಮತ್ತು ತರ್ಪಣವನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಪೂರ್ವಜರನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಪೂರ್ವಜರಿಗೆ ತರ್ಪಣ, ಪಿಂಡ ದಾನ ಮತ್ತು ಶ್ರಾದ್ಧವನ್ನು ಸರಿಯಾಗಿ ಮಾಡದಿದ್ದರೆ ಕುಟುಂಬವು ಪಿತೃ ದೋಷದಿಂದ ಬಳಲುತ್ತದೆ ಎಂದು ನಂಬಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಜನ್ಮ ರಾಶಿಯಲ್ಲಿ ಪಿತೃದೋಷವನ್ನು ಹೊಂದಿದ್ದರೆ, ಅವನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಪಿತೃ ದೋಷದ ಲಕ್ಷಣಗಳೇನು? ಈ ದೋಷವು ಸಂಭವಿಸಿದಾಗ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಂಡಬರುವ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪಿತೃ ದೋಷ ಲಕ್ಷಣಗಳು

1. ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ ಒಬ್ಬ ವ್ಯಕ್ತಿಯು ಪಿತೃ ದೋಷದಿಂದ ಬಳಲುತ್ತಿದ್ದರೆ ಅವನು ವಂಶ ವೃದ್ಧಿಗೆ ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶಗಳು ಸಿಗುವುದಿಲ್ಲ. ಇದರಲ್ಲಿ ಆತ ಯಶಸ್ಸು ಕಾಣುವುದಿಲ್ಲ. ಅಂತಹ ವ್ಯಕ್ತಿಯು ಸಂತಾನೋತ್ಪತ್ತಿಯಲ್ಲಿ ತೊಂದರೆಗಳನ್ನು ಎದುರಿಸಬಹುದು. ಇವರಿಗೆ ಸಂತಾನ ಸಮಸ್ಯೆ ಕಾಡುತ್ತದೆ.

2. ಮನೆ ಬಳಿ ಅರಳಿ (ಅಶ್ವತ್ಥ) ಮರ ಬೆಳೆಸುವುದು ಕೂಡ ಪಿತೃ ದೋಷದ ಲಕ್ಷಣವೆಂದು ಪರಿಗಣಿಸಲಾಗಿದೆ. ಮನೆಯ ಆವರಣದಲ್ಲಿ ಅರಳಿ ಗಿಡ ಬೆಳೆಸುವುದು ಸೂಕ್ತವಲ್ಲ. ಒಡೆದ ಕುಂಡಗಳಲ್ಲಿ ಅಶ್ವತ್ಥ ಗಿಡ ಬೆಳೆಯುವುದು ಕೂಡ ಸಮಸ್ಯೆಗಳ ಮುನ್ಸೂಚನೆಯಾಗಿರುತ್ತೆ

3. ಒಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಕೆಲಸ ಅಥವಾ ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಾಗುತ್ತಲೇ ಇದ್ದರೆ ಅದನ್ನು ಪಿತೃ ದೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪಿತೃದೋಷವಿದ್ದರೆ ಜೀವನದಲ್ಲಿ ಪ್ರಗತಿ ಇರುವುದಿಲ್ಲ.

4. ಮಕ್ಕಳು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಇದು ಕೂಡ ಪಿತೃ ದೋಷದ ಮತ್ತೊಂದು ಚಿಹ್ನೆ ಎಂದು ಪರಿಗಣಿಸಲಾಗುತ್ತದೆ.

5. ಯಾವುದೇ ಕಾರಣವಿಲ್ಲದೆ ಕುಟುಂಬದ ಸದಸ್ಯರ ನಡುವೆ ಆಗಾಗ್ಗೆ ವಿವಾದಗಳು ಈ ದೋಷದ ಸಂಕೇತವೆಂದು ಪರಿಗಣಿಸಬಹುದು.

6. ಜೀವನದಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ, ಆದರೆ ಈ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಅಥವಾ ಒಂದರ ನಂತರ ಒಂದರಂತೆ ಸಂಭವಿಸಿದರೆ ಅದನ್ನು ಪಿತೃ ದೋಷದ ಸಂಕೇತವೆಂದು ಪರಿಗಣಿಸಬೇಕು.

ಪಿತೃ ದೋಷವನ್ನು ಹೋಗಲಾಡಿಸುವ ಮಾರ್ಗಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ಪಕ್ಷದಲ್ಲಿ ಅವರ ಹೆಸರಿನಲ್ಲಿ ಆಹಾರ ಮತ್ತು ನೀರನ್ನು ಅರ್ಪಿಸಬೇಕು. ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷದಲ್ಲಿ ಪಿಂಡದಾನ, ತರ್ಪಣ ಮತ್ತು ಪುರಿವಶ್ರಾದ್ಧವನ್ನು ಮಾಡಬೇಕು. ಪಿತೃಪಕ್ಷದ ಸಮಯದಲ್ಲಿ ಪೂರ್ವಜರ ಹೆಸರಿನಲ್ಲಿ ದೀಪವನ್ನು ಹಚ್ಚಬೇಕು. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ಭೂಮಿಗೆ ಬಂದು ತಮ್ಮ ವಂಶಸ್ಥರಿಗೆ ಆಶೀರ್ವಾದ ನೀಡುತ್ತಾರೆ ಎಂದು ನಂಬಲಾಗಿದೆ.

ಪಿತೃಪಕ್ಷ ಯಾವಾಗ ಆರಂಭವಾಗುತ್ತೆ?

ಭಾದ್ರಪದ ಮಾಸದ ಹುಣ್ಣಿಮೆಯಿಂದ ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಹತ್ತು ದಿನಗಳ ಕಾಲ ಪಿತೃದೇವತೆಗಳನ್ನು ಮಾತ್ರ ಪ್ರಸನ್ನಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಅವರ ಆಶೀರ್ವಾದ ಪಡೆಯಲು ಅವರ ಹೆಸರಿನಲ್ಲಿ ದಾನ ಮಾಡುವುದು ಉತ್ತಮ.

2024ರ ಸೆಪ್ಟೆಂಬರ್ 17 ರಂದು ಆರಂಭವಾಗುವ ಪಿತೃ ಪಕ್ಷ ಅಕ್ಟೋಬರ್ 2 ರವರೆಗೆ ಮುಂದುವರಿಯುತ್ತದೆ. ಭಾದ್ರಪದ ಅಮಾವಾಸ್ಯೆಯೊಂದಿಗೆ ಪಿತೃಪಕ್ಷ ಮುಗಿಯುತ್ತದೆ. ಇದನ್ನು ಸರ್ವಪಿತೃ ಅಮಾವಾಸ್ಯೆ ಎನ್ನುತ್ತಾರೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಪಿತೃಕಾರ್ಯಗಳನ್ನು ಮಾಡುವುದು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ಈ 15 ದಿನಗಳಲ್ಲಿ ತರ್ಪಣ, ಶ್ರಾದ್ಧ ಮತ್ತು ಕರ್ಮಗಳನ್ನು ಮಾಡುವುದರಿಂದ ಪಿತೃ ದೇವತೆಗಳಿಗೆ ಸಂತೋಷವಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ