logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ದ್ರೋಣಾಚಾರ್ಯರಿಗೂ ದ್ರುಪದನಿಗೆ ರಾಜಕೀಯ ಕಲಹದ ನಂತರ ಮುಂದೇನಾಯ್ತು? ಗೀತೆಯಲ್ಲಿ ತಿಳಿಯಿರಿ

ಭಗವದ್ಗೀತೆ: ದ್ರೋಣಾಚಾರ್ಯರಿಗೂ ದ್ರುಪದನಿಗೆ ರಾಜಕೀಯ ಕಲಹದ ನಂತರ ಮುಂದೇನಾಯ್ತು? ಗೀತೆಯಲ್ಲಿ ತಿಳಿಯಿರಿ

Raghavendra M Y HT Kannada

Sep 29, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ದ್ರೋಣಾಚಾರ್ಯರಿಗೂ ದ್ರುಪದನಿಗೆ ಒಂದು ರಾಜಕೀಯ ಕಲಹದ ನಂತರ ಮುಂದೇನಾಯ್ತು ಎಂಬುದನ್ನು ಗೀತೆಯಲ್ಲಿ ತಿಳಿಯಿರಿ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಶ್ಲೋಕ - 2

ಸಞ್ಜಯ ಉವಾಚ

ದೃಷ್ಟ್ವಾತು ಪಾಣ್ಡವಾನೀಕಂ ವ್ಯೂಢಂ ದುರ್ಯೋಧನಸ್ತದಾ |

ಆಚಾರ್ಯಮುಪಸನ್ಗಮ್ಯ ರಾಜಾ ವಚನಮಬ್ರವೀತ್ ||2||

ಸಞ್ಜಯಃಉವಾಚ-ಸಂಜಯನು ಹೇಳಿದನು; ದೃಷ್ಟ್ವಾ-ನೋಡಿದನಂತರ; ತು-ಆದರೆ; ಪಾಣ್ಡವ ಅನೀಕಮ್-ಪಾಂಡವರ ಸೈನ್ಯವನ್ನು; ವ್ಯೂಢಮ್-ವ್ಯೂಹದ ವ್ಯವಸ್ಥೆಯಲ್ಲಿದ್ದ; ದುರ್ಯೋಧನಃ - ದುರ್ಯೋಧನ ರಾಜನ; ತದಾ-ಆಗ; ಆಚಾರ್ಯಮ್-ಗುರುಗಳನ್ನು; ಉಪಸನ್ಗಮ್ಮ-ಸಮೀಪಿಸಿ; ರಾಜಾ-ರಾಜನಾದ; ವಚನಮ್-ಮಾತುಗಳನ್ನು; ಅಬ್ರವೀತ್-ಹೇಳಿದನು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅನುವಾದ

ಸಂಜಯನು ಹೇಳಿದ - ರಾಜನೇ, ಪಾಂಡವರ ಸೇನಾವ್ಯೂಹವನ್ನು ವೀಕ್ಷಿಸಿ ರಾಜಾ ದುರ್ಯೋಧನನು ತನ್ನ ಗುರುಗಳ ಬಳಿಗೆ ಹೋಗಿ ಹೀಗೆಂದನು.

ಭಾವಾರ್ಥ

ಧೃತರಾಷ್ಟ್ರನು ಹುಟ್ಟುಗುರುಡ. ದುರದೃಷ್ಟವತಾಶತ್ ಅವನು ಆಧ್ಯಾತ್ಮಿಕವಾಗಿಯೂ ಕುರುಡ. ಧರ್ಮದ ವಿಷಯದಲ್ಲಿ ತನ್ನ ಮಕ್ಕಳು ತನ್ನಷ್ಟೇ ಕುರುಡರು ಎಂದು ಅವನಿಗೆ ತಿಳಿದಿತ್ತು. ಹುಟ್ಟಿದಾಗಿನಿಂದ ಧರ್ಮಿಷ್ಠರಾಗಿದ್ದ ಪಾಂಡವರೊಡನೆ ತನ್ನ ಮಕ್ಕಳು ಒಪ್ಪಂದ ಮಾಡಿಕೊಳ್ಳಲು ಎಂದೂ ಸಾಧ್ಯವೇ ಇಲ್ಲ ಎಂದು ಅವನಿಗೆ ಖಚಿತವಾಗಿತ್ತು. ಆದರೂ ಅವನಿಗೆ ಯಾತ್ರಾಸ್ಥಳದ ಪ್ರಭಾವದ ಬಗ್ಗೆ ಅನುಮಾನವಿದ್ದೇ ಇತ್ತು. ರಣರಂಗದಲ್ಲಿ ಏನಾಯಿತು ಎಂದು ಕೇಳುವುದರಲ್ಲಿ ಧೃತರಾಷ್ಟ್ರನ ಉದ್ದೇಶವೇನು ಎಂದು ಸಂಜಯ ಅರ್ಥಮಾಡಿಕೊಳ್ಳಬಲ್ಲವನಾಗಿದ್ದ. ಆದುದರಿಂದ ಸಂಜಯನು ವಿಷಣ್ಣನಾಗಿದ್ದ ರಾಜನಿಗೆ ಉತ್ಸಾಹ ಬರಿಸಲು ಬಯಸಿದ.

ರಾಜನಿಗೆ, ಅವನ ಮಕ್ಕಳು ಧರ್ಮಕ್ಷೇತ್ರದ ಪ್ರಭಾವದಿಂದ ಯಾವುದೇ ರೀತಿಯ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ. ದುರ್ಯೋಧನನು ಪಾಂಡವರ ಸೇನಾಬಲವನ್ನು ವೀಕ್ಷಿಸಿದನಂತರ ಸನ್ನಿವೇಶವನ್ನು ವಾಸ್ತವವಾಗಿ ತಿಳಿಸಿಕೊಡಲು ಸೈನ್ಯಾಧಿಪತಿ ದ್ರೋಣಾಚಾರ್ಯರ ಬಳಿಗೆ ಹೋದ ಎಂದು ಹೇಳಿದ. ದುರ್ಯೋಧನನು ರಾಜನೆಂದು ಹೇಳಿದ್ದರೂ ಸನ್ನಿವೇಶವು ಗಂಭೀರವಾಗಿದ್ದುದರಿಂದ ಅವನು ಸೈನ್ಯಾಧಿಪತಿಗಳ ಬಳಿಗೆ ಹೋಗಬೇಕಾಯಿತು. ಆದುದರಿಂದ ಅವನಿಗೆ ರಾಜಕಾರಣಿಯಾಗವ ಅರ್ಹತೆ ಇತ್ತು. ಆದರೆ ದುರ್ಯೋಧನನ ವ್ಯವಹಾರ ಕೌಶಲಕ್ಕೆ ಪಾಂಡವರ ಸೇನಾವ್ಯೂಹವನ್ನು ಕಂಡಾಗ ಆತನಿಗಾದ ಭಯವನ್ನು ಮುಚ್ಚಿಡಲಾಗಲಿಲ್ಲ.

ಶ್ಲೋಕ - 3

ಪಶ್ಯೈತಾಂ ಪಾಣ್ಡು ಪುತ್ರಾಣಾಂ ಆಚಾರ್ಯ ಮುಹತೀಂ ಚಮೂಮ್ |

ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ||3||

ಪಶ್ಯ-ನೋಡಿರಿ; ಏತಾಮ್ - ಈ; ಪಾಣ್ಡು ಪುತ್ರಾಣಾಮ್ - ಪಾಂಡು ಪುತ್ರ; ಆಚಾರ್ಯ - ಗುರುಗಳೇ; ಮಹತೀಮ್ - ಮಹತ್ತಾದ; ಚಮೂಮ್ - ಸೇನಾ ಬಲವನ್ನು; ವ್ಯೂಢಾಮ್ - ವ್ಯೂಹರಚನೆಯಲ್ಲಿರುವ; ದ್ರುಪದ ಪುತ್ರೇಣ - ದ್ರುಪದನ ಮಗನಿಂದ; ತವ - ನಿಮ್ಮ; ಶಿಷ್ಯೇಣ - ಶಿಷ್ಯನಾದ; ಧೀ-ಮತಾ - ಬಹಳ ಬುದ್ಧಿವಂತನಾದ.

ಅನುವಾದ

ಆಚಾರ್ಯರೇ, ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನು ಕೌಶಲದಿಂದ ವ್ಯೂಹರೂಪವಾಗಿ ರಚಿಸಿರುವ ಈ ಪಾಂಡವ ಸೈನ್ಯವನ್ನು ನೋಡಿ.

ಭಾವಾರ್ಥ

ವ್ಯವಹಾರ ಚತುರನಾದ ದುರ್ಯೋಧನನು ಶ್ರೇಷ್ಠ ಬ್ರಾಹ್ಮಣ ಸೈನ್ಯಾಧಿಪತಿಯಾದ ದ್ರೋಣಾಚಾರ್ಯನ ದೋಷಗಳನ್ನು ಎತ್ತಿತೋರಿಸಲು ಬಯಸಿದ. ಅರ್ಜನನ ಹೆಂಡತಿ ದ್ರೌಪತಿ; ಅವಳ ತಂದೆ ದ್ರುಪದ. ದ್ರೋಣಾಚಾರ್ಯರಿಗೂ ದ್ರುಪದನಿಗೂ ಒಂದು ರಾಜಕೀಯ ಕಲಹವಾಯಿತು.

ಕಲಹದ ಫಲವಾಗಿ ದ್ರುಪದನು ಒಂದು ಮಹಾಯಾಗವನ್ನು ಮಾಡಿ, ದ್ರೋಣಾಚಾರ್ಯರಿಗೆ ಕೊಲ್ಲಬಲ್ಲ ಮಗನನ್ನು ಪಡೆಯುವ ವರವನ್ನು ಗಳಿಸಿದ. ಇದು ದ್ರೋಣಾಚಾರ್ಯರಿಗೆ ಚೆನ್ನಾಗಿ ತಿಳಿದಿತ್ತು. ಆದರೂ ದ್ರುಪದನ ಮಗ ಧೃಷ್ಟದ್ಯುಮ್ನನಿಗೆ ಯುದ್ಧ ವಿದ್ಯೆಯನ್ನು ಕಲಿಸಲು ಅವರಿಗೆ ಒಪ್ಪಿಸಿದಾಗ ಉದಾರ ಮನಸ್ಸಿನ ಬ್ರಾಹ್ಮಣರಾಗಿ ಅವರು, ತಮಗೆ ತಿಳಿದ ಎಲ್ಲ ಅಸ್ತ್ರಶಸ್ತ್ರರಹಸ್ಯಗಳನ್ನೂ ಅವನಿಗೆ ಹೇಳಿಕೊಡಲು ಒಂದೆಗೆಯಲಿಲ್ಲ.

ಕುರುಕ್ಷೇತ್ರ ರಣಭೂಮಿಯಲ್ಲೀಗ ಧೃಷ್ಟದ್ಯುಮ್ನನು ಪಾಂಡವರ ಪಕ್ಷವನ್ನು ಸೇರಿದ್ದ ಸೇನಾವ್ಯೂಹದ ರಚನೆಯ ಕಲೆಯನ್ನು ದ್ರೋಣಾಚಾರ್ಯರಿಂದ ಕಲಿತು ಈಗ ಅವನೇ ವ್ಯೂಹರಚನೆ ಮಾಡಿದ್ದ. ದ್ರೋಣಾಚಾರ್ಯರು ಸಮರದಲ್ಲಿ ಎಚ್‌ಚರದಿಂದಿದ್ದು ಯಾವ ರೀತಿಯಲ್ಲಿಯೂ ಬಿಗಿ ಸಡಿಲಿಸದಂತೆ ಇರಬೇಕೆಂಬ ಉದ್ದೇಶದಿಂದ ದುರ್ಯೋಧನನು ಅವರ ತಪ್ಪನ್ನು ಅವರಿಗೆ ತೋರಿಸಿಕೊಟ್ಟ.

ಅವನಿಗೆ ಮತ್ತೊಂದು ಉದ್ದೇಶವೂ ಇತ್ತು. ದ್ರೋಣಾಚಾರ್ಯರು ತಮ್ಮ ಪ್ರಿಯಶಿಷ್ಯರಾಗಿದ್ದ ಪಾಂಡವರ ವಿಷಯದಲ್ಲಿ ಇದೇ ರೀತಿ ಉದಾರವಾಗಿರಬಾರದು ಎಂದು ಎತ್ತಿ ಹೇಳಲು ಬಯಸಿದ. ಅರ್ಜನನಂತೂ ದ್ರೋಣಾಚಾರ್ಯ ಅತ್ಯಂತ ಪ್ರೀತಿಪಾತ್ರನಾದ ಮತ್ತು ತೀಕ್ಷ್ಣ ಬುದ್ಧಿಯ ಶಿಷ್ಯ. ಹಿಂದೆ ತೋರಿದಂತಹ ಔದಾರ್ಯವನ್ನೇ ಯುದ್ಧದಲ್ಲಿ ತೋರಿಸಿದರೆ ಅದರಿಂದ ಸೋಲಾಗುತ್ತದೆ ಎಂದೂ ದುರ್ಯೋಧನನು ಎಚ್ಚರ ಹೇಳಿದ. ಮೂಲ: ಭಗವದ್ಗೀತಾ ಯತಾರೂಪ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ