logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ದ್ರೋಣಾಚಾರ್ಯರಿಗೆ ಅರ್ಜುನವೆಂದರೆ ಬಹಳ ಪ್ರೀತಿ; ಯಾಕೆ ಅನ್ನೋದನ್ನು ಗೀತೆಯಲ್ಲಿ ತಿಳಿಯಿರಿ

ಭಗವದ್ಗೀತೆ: ದ್ರೋಣಾಚಾರ್ಯರಿಗೆ ಅರ್ಜುನವೆಂದರೆ ಬಹಳ ಪ್ರೀತಿ; ಯಾಕೆ ಅನ್ನೋದನ್ನು ಗೀತೆಯಲ್ಲಿ ತಿಳಿಯಿರಿ

HT Kannada Desk HT Kannada

Oct 05, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ದ್ರೋಣಾಚಾರ್ಯರಿಗೆ ಅರ್ಜುನ ಎಂದರೆ ಬಹಳ ಪ್ರೀತಿ. ಯಾಕೆ ಅನ್ನೋದನ್ನು ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ದುರ್ಯೋಧನನು ಪಾಂಡವರ ಪಕ್ಷದಲ್ಲಿರುವ ವೀರ ಯೋಧರ ಹೆಸರುಗಳನ್ನು ತಿಳಿಸುತ್ತಿದ್ದಾನೆ. ಪುರುಜಿತ್ ಮತ್ತು ಕುಂತಿಭೋ ಜರು ಕುಂತಿ ದೇಶಕ್ಕೆ ಸೇರಿದವರು. ವಸುದೇವ ಮತ್ತು ಪೃಥಾ, ಈ ಇಬ್ಬರು ಯಾದವ ವೀರನಾದ ಶೂರ ಸೇನನ ಮಕ್ಕಳು. ಪೃಥೆಯನ್ನು ರಾಜ ಕುಂತಿಬೋ ಜನಿಗೆ ದತ್ತು ನೀಡಿದ್ದರಿಂದ ಆಕೆಯ ಹೆಸರು ಕುಂತಿ ಎಂದಾಯಿತು. ಈ ದತ್ತು ಸಂಬಂಧದಿಂದಾಗಿ ಪುರಜಿತ್ ಮತ್ತು ಕುಂತಿಭೋ ಜರು ಪಾಂಡವರ ಪಕ್ಷವನ್ನು ಸೇರಿಕೊಂಡಿದ್ದಾರೆ ಎಂದು ದುರ್ಯೋಧನನು ಬೇಸರಗೊಂಡನು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶೈಭ್ಯನು ಶಿಬಿದೇಶದ ರಾಜ. ಈತನ ಮಗನು ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಯನ್ನು ಅಪಹರಿಸಲು ಪ್ರಯತ್ನ ಪಟ್ಟಂತಹ ಜಯದ್ರಥನಿಗೆ ಸಹಾಯ ಮಾಡಿದನು. ಈ ದುಷ್ಟ ಕಾರ್ಯಕ್ಕಾಗಿ ಆತನು ಭೀಮಸೇನನಿಂದ ಸಂಹರಿಸಲ್ಪಟ್ಟನು. ಹೀಗಿದ್ದು ಕೂಡ ಶೈಭ್ಯನು ಪಾಂಡವರ ಪಕ್ಷವನ್ನು ಸೇರಿದ್ದಾನೆ. ಇದು ಕೂಡ ದುರ್ಯೋಧನನ ಅಳಲಿಗೆ ಕಾರಣವಾಗಿತ್ತು.

ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।

ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥1.6॥

ಬಲಶಾಲಿ ಯುಧಾಮನ್ಯು, ಬಹುಶಕ್ತಿವಂತನಾದ ಉತ್ತಮೌಜ, ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು, ಈ ಎಲ್ಲಾ ಮಹಾರಥರು ಪಾಂಡವರ ಪಕ್ಷದಲ್ಲಿಇದ್ದಾರೆ. ಯುಧಾಮನ್ಯು ಮತ್ತು ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ಸುಭದ್ರೆಯ ಮಗ ಅಭಿಮನ್ಯು. ದ್ರೌಪದಿಗೆ ಪಾಂಡವರಲ್ಲಿ ಐವರು ಮಕ್ಕಳು. ಪ್ರತಿವಿಂದ್ಯ, ಸುತಸೋಮ, ಶ್ರುತಕರ್ಮ, ಶತಾನೀಕ ಮತ್ತು ಶ್ರುತಸೇನಾ. ದುರ್ಯೋಧನನು ತನ್ನಲ್ಲಿ 11 ಅಕ್ಷೋಹಿಣಿ ಸೇನೆ ಇದ್ದರೂ ಸಹ ಪಾಂಡವರ ಸಣ್ಣ ಸೇನೆಯನ್ನು ಕಂಡು ಭಯಭೀತನಾಗಿದ್ದಾನೆ. ಪಾಂಡವ ಯೋಧರಲ್ಲಿ ಕಾಣುತ್ತಿರುವ ಯುದ್ಧೋತ್ಸಹವೇ ಇದಕ್ಕೆ ಕಾರಣ. ದುರ್ಯೋಧನನು ಇಲ್ಲಿ

18 ವೀರ ಯೋಧರ ಹೆಸರುಗಳನ್ನು ಪಟ್ಟಿ ಮಾಡಿದ್ದಾನೆ ಎಂಬುದು ವಿಶೇಷ. ದುರ್ಯೋಧನನು ಒಬ್ಬ ಚತುರ ರಾಜಕಾರಣಿಯಾಗಿದ್ದರೂ ಸಹ, ಆತನು ಭಗವಾನ್ ಶ್ರೀಕೃಷ್ಣನನ್ನು ಪಾಂಡವರ ಪಕ್ಷದಲ್ಲಿ ಗುರುತಿಸಲು ವಿಫಲನಾದ. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾನೆ. ಧರ್ಮ ಕ್ಷೇತ್ರ ವಾದ ಕುರುಕ್ಷೇತ್ರದಲ್ಲಿ ದುರ್ಯೋಧನಂತಹ ಕಳೆ ಗಿಡಗಳನ್ನು ಕಿತ್ತು ಧರ್ಮದ ಮೂರ್ತಿಯಾದಂತಹ ಯುಧಿಷ್ಠಿರನನ್ನು ರಾಜಸಿಂಹಸನದ ಮೇಲೆ ಕುಳ್ಳಿರಿಸುವುದು ಶ್ರೀಕೃಷ್ಣನ ನಿರ್ಧಾರವಾಗಿದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ಜಯಸ್ತುಪಾಂಡು ಪತ್ರಾಣಾಂ ಏಶಾಂ ಪಕ್ಷೇ ಜನಾರ್ಧನಃ. ಭಗವಾನ್ ಶ್ರೀಕೃಷ್ಣನು ಪಾಂಡವರ ಪಕ್ಷವನ್ನು ವಹಿಸಿರುವುದರಿಂದ ಖಂಡಿತವಾಗಿಯೂ ಯುದ್ಧದ ಗೆಲುವು ಪಾಂಡವರಿಗೆ ದೊರಕುತ್ತದೆ. ಪಾಂಡವರ ಸೇನಾವಲೋಕನವನ್ನು ಮಾಡಿದ ನಂತರ, ದುರ್ಯೋಧನನು ತನ್ನ ಸೇನೆಯಲ್ಲಿರುವಂತಹ ವಿಶಿಷ್ಟ ವ್ಯಕ್ತಿಗಳ ಕುರಿತಾಗಿ ತಿಳಿಸುತ್ತಾನೆ.

ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋ ಧ ದ್ವಿಜೋತ್ತಮ ।

ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥1.7॥

ಬ್ರಾಹ್ಮಣೋತ್ತಮರೇ, ನಿಮಗೆ ತಿಳಿಸಲೆಂದು ನನ್ನ ಸೈನ್ಯವನ್ನು ನಡೆಸಬಲ್ಲ ವಿಶೇಷ ಅರ್ಹತೆ ಇರುವ ನಾಯಕರ ವಿಷಯವನ್ನು ಹೇಳಬಯಸುತ್ತೇನೆ.

ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।

ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥1.8॥

ತಾವು, ಭೀಷ್ಮ, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ ಇವರೆಲ್ಲಯಾವಾಗಲೂ ಯುದ್ಧದಲ್ಲಿ ವಿಜಯಿಗಳಾಗುವವರು. ಇಲ್ಲಿ ತಾವು ಎಂದರೆ ದ್ರೋಣಾಚಾರ್ಯರು. ದ್ರೋಣಾಚಾರ್ಯರಿಗೆ ಅರ್ಜುನವೆಂದರೆ ಬಹಳ ಪ್ರೀತಿ. ಅರ್ಜುನನನ್ನು ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡಬೇಕೆಂದು ದ್ರೋಣಾಚಾರ್ಯರು ಅಪೇಕ್ಷೆ ಪಟ್ಟಿದ್ದರು. ದ್ರೋಣಾಚಾರ್ಯರು ತಮ್ಮ ಸ್ವಂತ ಮಗನಾದಂತಹ ಅಶ್ವತ್ಥಾಮನಿಗೂ ತಿಳಿಸದೆ ಇರುವಂತಹ ಕೆಲವೊಂದು ಯುದ್ಧ ಕಲೆಗಳನ್ನು ಅರ್ಜುನನಿಗೆ ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ದುರ್ಯೋಧನನು ದ್ರೋಣಾಚಾರ್ಯರನ್ನು ಪಾಂಡವರ ಆಚಾರ್ಯ ಎಂದು ಕರೆಯುತ್ತಾನೆ.

ಭೀಷ್ಮಾಚಾರ್ಯರು ಕುರುಕುಲದ ಪಿತಾಮಹರಾಗಿದ್ದಾರೆ. ಅವರಿಗೂ ಪಾಂಡವರು ಎಂದರೆ ಬಹಳ ಪ್ರೀತಿ. ಅವರು ಎಂದಿಗೂ ಪಾಂಡವರಲ್ಲಿಯಾರೊ ಬ್ಬರನ್ನು ಸಾಯಿಸಲು ಸಿದ್ಧವಿಲ್ಲ. ಹಸ್ತಿನಾಪುರದ ರಾಜಸಿಂಹಸನಕ್ಕೆ ತಮ್ಮ ನಿಯತ್ತನ್ನು ತೋರಿಸುವ ಕಾರಣಕ್ಕಾಗಿ ಭೀಷ್ಮಾಚಾರ್ಯರು ದುರ್ಯೋಧನನ ಪಕ್ಷವನ್ನು ವಹಿಸಿದ್ದಾರೆ. ದುರ್ಯೋಧನನಿಗೆ ಯುದ್ಧದಲ್ಲಿ

ಜಯವನ್ನು ತಂದು ಕೊಡುವುದಕ್ಕಿಂತಲೂ, ಯುದ್ಧವನ್ನು ನಿಲ್ಲಿಸುವುದು ಹೇಗೆ ಎಂಬ ವಿಚಾರವಾಗಿ ಭೀಷ್ಮಾಚಾರ್ಯರಿಗೆ ಅತ್ಯಂತ ಕಾಳಜಿ ಇತ್ತು. ಭೀಷ್ಮಾಚಾರ್ಯರ ಗುರುಗಳಾದಂತಹ ಪರಶುರಾಮರಲ್ಲಿ ಕರ್ಣನು ಮೋಸದಿಂದ ಬಿಲ್ಲು ವಿದ್ಯೆಯನ್ನು ಕಲಿತ ಎಂಬ ಕಾರಣಕ್ಕಾಗಿ, ಕರ್ಣನನ್ನು ಭೀಷ್ಮಾಚಾರ್ಯರು ಯುದ್ಧ ರಂಗಕ್ಕೆ ಪ್ರವೇಶಿಸಲು ಬಿಡಲಿಲ್ಲ. ಮಹಾಭಾರತ ಯುದ್ಧದ ಮೊದಲ 10 ದಿನಗಳಲ್ಲಿ ಕರ್ಣನು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ದುರ್ಯೋಧನನಿಗೆ ಯುದ್ಧದಲ್ಲಿ ಜಯವನ್ನು ಗಳಿಸಿಕೊಡುವುದೇ ಮುಖ್ಯವಾದ ಉದ್ದೇಶವಾಗಿದ್ದರೆ, ಭೀಷ್ಮಾಚಾರ್ಯರು ಇಂತಹ ಶರತ್ತನ್ನು ವಿಧಿಸುತ್ತಿರಲಿಲ್ಲ. ಭೀಷ್ಮಾಚಾರ್ಯರು ಯುಧಿಷ್ಠಿರ ಮಹಾರಾಜನಿಗೆ ಯುದ್ಧದಲ್ಲಿ ಜಯವಾಗಲಿ ಎಂದು ಆಶೀರ್ವದಿಸಿದರು.

ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರ.

ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್‌ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ