logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ದುರ್ಯೋಧನನಿಗೆ ಭೀಮಾರ್ಜುನರನ್ನು ಕಂಡರೆ ಹಿಂದಿನಿಂದಲೂ ಭಯ ಯಾಕೆ ಅನ್ನೋದಿಕ್ಕೆ ಗೀತೆಯಲ್ಲಿ ಉತ್ತರ

ಭಗವದ್ಗೀತೆ: ದುರ್ಯೋಧನನಿಗೆ ಭೀಮಾರ್ಜುನರನ್ನು ಕಂಡರೆ ಹಿಂದಿನಿಂದಲೂ ಭಯ ಯಾಕೆ ಅನ್ನೋದಿಕ್ಕೆ ಗೀತೆಯಲ್ಲಿ ಉತ್ತರ

Raghavendra M Y HT Kannada

Oct 04, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ದುರ್ಯೋಧನನಿಗೆ ಭೀಮಾರ್ಜುನರನ್ನು ಕಂಡರೆ ಹಿಂದಿನಿಂದಲೂ ಭಯ ಯಾಕೆ ಅನ್ನೋದನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಮಹಾಭಾರತ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನ್ಯಗಳು ಭಾಗವಹಿಸಿದ್ದರೂ, ಸಂಪೂರ್ಣ ಸೇನೆಯು ಒಂದೇ ಸಲಕ್ಕೆ ಪರಸ್ಪರ ಆಕ್ರಮಣದಲ್ಲಿ ತೊಡಗುವುದಿಲ್ಲ. ಸೇನೆಯಲ್ಲಿಅನೇಕ ವಿಭಾಗಗಳಿರುತ್ತವೆ. ಒಂದು ಆನೆ, ಒಂದು ರಥ, ಮೂರು ಕುದುರೆಗಳು ಹಾಗೂ ಐದು ಕಾಲಾಳುಗಳು ಇರುವ ಒಂದು ತುಕಡಿಯನ್ನು ಪತ್ತಿ ಎಂದು ಕರೆಯುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೂರು ಪತ್ತಿಗಳು ಸೇರಿ ಒಂದು ಸೇನಾ ಮುಖವಾಗುತ್ತದೆ. ಮೂರು ಸೇನಾ ಮುಖಗಳು ಸೇರಿದರೆ ಒಂದು ಗುಲ್ಮ. ಮೂರು ಗುಲ್ಮ ಸೇರಿ ಒಂದು ಗಣ. ಮೂರು ಗಣಗಳು ಸೇರಿ ಒಂದು ವಾಹಿನಿ ಆಗುತ್ತದೆ. ಮೂರು ವಾಹಿನಿಗಳನ್ನು ಪೃತನಾ ಎಂದು ಕರೆಯುತ್ತಾರೆ. ಮೂರು ಪೃತನಾ ಸೇರಿದರೆ ಒಂದು ಚಮು. ಮೂರು ಚಮುಗಳು ಸೇರಿದರೆ ಒಂದು ಅನೀಕಿನಿ. ಅನೀಕಿನಿಗಳು ಸೇರಿದರೆ ಒಂದು ಅಕ್ಷೋಹಿಣಿ ಸೇನೆಯಾಗುತ್ತದೆ. ಅಂದರೆ ಒಂದು ಅಕ್ಷೋಹಿಣಿ ಸೇನೆಯಲ್ಲಿ21,870 ಆನೆಗಳು, 21,870 ರಥಗಳು, 65,610 ಕುದುರೆಗಳು ಮತ್ತು 1,09,350 ಕಾಲಾಳುಗಳು ಇರುತ್ತಾರೆ. ಈ ಎಲ್ಲಾ ಸಂಖ್ಯೆಗಳನ್ನು ಬಿಡಿಬಿಡಿಯಾಗಿ ಕೂಡಿಸಿದರೆ 18 ಆಗುತ್ತದೆ.

ದೃಷ್ಟದ್ಯುಮ್ನನು ಯುದ್ಧ ಕುಶಲತೆಯಿಂದ ಸಜ್ಜಾಗಿ ನಿಲ್ಲಿಸಿರುವಂತಹ ಒಂದು ಅನೀಕಿನಿ ಸೇನೆಯನ್ನು ಕಂಡಾಗ ದುರ್ಯೋಧನನಿಗೆ ದುಗುಡ ಉಂಟಾಗುತ್ತದೆ. ಯುದ್ಧದ ತುರ್ತು ಪರಿಸ್ಥಿತಿಯನ್ನು ಮನಗಂಡಂತಹ ದುರ್ಯೋಧನ ತಾನೇ ಸ್ವತಃ ದ್ರೋಣಾಚಾರ್ಯರ ಬಳಿ ಹೋಗಿ ಭೀಮಾರ್ಜುನರಿಗೆ ಸಮಾನವಾಗಿರುವಂತಹ ಪಾಂಡವ ಪಕ್ಷದ ಸೇನಾನಿಗಳ ವಿಚಾರಗಳನ್ನು ತಿಳಿಸುತ್ತಾನೆ.

ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾಯುಧಿ |

ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ || 1.4 ||

ಹೋರಾಟದಲ್ಲಿ ಭೀಮಾರ್ಜುನರಿಗೆ ಸಮಾನರಾದ ಅನೇಕ ವೀರ ಬಿಲ್ಲಾಳುಗಳು ಈ ಸೈನ್ಯದಲ್ಲಿದ್ದಾರೆ. ಯುಯುಧಾನ, ವಿರಾಟ ಮತ್ತು ದ್ರುಪದರಂತಹ ಮಹಾರಥರಿದ್ದಾರೆ. ದುರ್ಯೋಧನನಿಗೆ ಭೀಮಾರ್ಜುನರನ್ನು ಕಂಡರೆ ಹಿಂದಿನಿಂದಲೂ ಭಯ. ತನಗೆ ಸಾವು ಬರುವುದಿದ್ದರೆ ಅದು ಭೀಮನ ಕೈಯಿಂದಲೇ ಎಂಬುದು ಆತನಿಗೆ ಖಚಿತವಾಗಿತ್ತು. ಈ ಕಾರಣಕ್ಕಾಗಿ ದುರ್ಯೋಧನನು ಎದುರು ಪಕ್ಷದಲ್ಲಿನೆರೆದಿದ್ದ ಎಲ್ಲಾ ಯೋಧರನ್ನು ಭೀಮಾರ್ಜುನರಿಗೆ ಹೋಲಿಸುತ್ತಾನೆ.

ಯುಯುಧಾನ ಅಥವಾ ಸಾತ್ಯಕಿ, ಈತನು ಒಬ್ಬ ಯಾದವವೀರ. ಅರ್ಜುನನ ಶಿಷ್ಯ. ವಿರಾಟನು ಮತ್ಸ್ಯ ದೇಶದ ರಾಜ. ಪಾಂಡವರು ಅಜ್ಞಾತವಾಸವನ್ನು ಈ ಮತ್ಸ್ಯ ದೇಶದಲ್ಲಿಯೇ ಕಳೆದರು. ವಿರಾಟರಾಜನ ಮಗಳಾದಂತಹ ಉತ್ತರೆಯನ್ನು

ಅರ್ಜುನನ ಮಗನಾದ ಅಭಿಮನ್ಯುವಿಗೆ ವಿವಾಹ ಮಾಡಿಕೊಡಲಾಯಿತು. ಯುಯುಧಾನ, ವಿರಾಟ ಮತ್ತು ದ್ರುಪದ ಈ ಮೂರು ಯೋಧರು ತನ್ನ ಪಕ್ಷವನ್ನು ಸೇರಬೇಕೆಂದು ದುರ್ಯೋಧನನ ಅಪೇಕ್ಷೆಯಾಗಿತ್ತು. ದ್ರುಪದನು ಹಿಂದೆ ಜರಾಸಂಧನೊಂದಿಗೆ ಸೇರಿ ಶ್ರೀಕೃಷ್ಣನೊಡನೆ ಹೋರಾಟಕ್ಕೆ ನಿಂತಿದ್ದ. ಪಾಂಡವರು ದ್ರುಪದನನ್ನು ಯುದ್ಧದಲ್ಲಿಸೋಲಿಸಿ ದ್ರೋಣಾಚಾರ್ಯರಿಗೆ ಒಪ್ಪಿಸಿದರು. ಆದರೆ ದ್ರುಪದನು ಆ ಎಲ್ಲ ಘಟನೆಗಳನ್ನು ಮರೆತು ಈಗ ಪಾಂಡವರ ಪಕ್ಷದಲ್ಲಿ ಬಂದು ನಿಂತಿದ್ದಾನೆ. ತನ್ನ ಮಗಳಾದಂತಹ ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಕೊಟ್ಟಿದ್ದಾನೆ.

ವಿರಾಟರಾಜನು ತನ್ನ ಸೇನಾಧಿಪತಿಯಾದ ಕೀಚಕನಿಗೆ ಹೆದರಿಕೊಂಡು ರಾಜ್ಯಭಾರ ಮಾಡುತ್ತಿದ್ದ. ಕೀಚಕನನ್ನು ಭೀಮನು ಸಂಹರಿಸಿದ್ದರಿಂದ ರಾಜ ವಿರಾಟನೂ ಪಾಂಡವರನ್ನು ಸೇರಿಕೊಂಡ. ಸಾತ್ಯಕಿಯು ಬಲರಾಮನ ಆಣತಿಯನ್ನು ಎಂದಿಗೂ ಮೀರಲಾರ. ಆದರೆ ಬಲರಾಮನು ಯುದ್ಧದಲ್ಲಿ ಪಾಲ್ಗೊಳ್ಳದೆ ತೀರ್ಥಯಾತ್ರೆಗೆ ತೆರಳಿದ್ದರಿಂದ ಸಾದ್ಯಕಿಯು ಪಾಂಡವರ ಪಕ್ಷವನ್ನು ಸೇರಿದ. ಹೀಗೆ ಈ ಮೂವರು ಯೋಧರೂ ದುರ್ಯೋಧನನ ಕೈತಪ್ಪಿ ಪಾಂಡವರ ಪಕ್ಷವನ್ನು ಸೇರಿದರು. ತನ್ನ ಪಕ್ಷವನ್ನು ಸೇರಬೇಕಾಗಿದ್ದಂತಹ ಮಹಾಯೋಧರು ಪಾಂಡವರ ಪಕ್ಷವನ್ನು ಸೇರಿದ್ದಾರೆ ಎಂಬಂತಹ ವಿಚಾರದ ಕುರಿತಾಗಿ ದುರ್ಯೋಧನನಿಗೆ ಬೇಸರವಿತ್ತು. ದುರ್ಯೋಧನನು ಹೆಸರಿಸುತ್ತಿದ್ದ ಪ್ರತಿಯೊಬ್ಬ ಪಾಂಡವ ವೀರರ ಹಿಂದೆಯೂ ಒಂದು ಇತಿಹಾಸವಿದೆ. ಆ ವಿಷಯವಾಗಿ ದುರ್ಯೋಧನನಿಗೆ ಬೇಸರವಿದೆ.

ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ ।

ಪುರುಜಿತ್ ಕುಂತಿಭೋ ಜಶ್ಚ ಶೈಬ್ಯಶ್ಚ ನರಪುಂಗವಃ ॥5॥

ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ ಮತ್ತು ಶೈಬ್ಯನಂತಹ ನರಪುಂಗವರು ಇದ್ದಾರೆ. ಇಲ್ಲಿ ದುರ್ಯೋಧನನು ಆರು ಜನ ವೀರರನ್ನು ಹೆಸರಿಸಿದ್ದಾನೆ. ಧೃಷ್ಟಕೇತುವು ಶಿಶುಪಾಲನ ಮಗ. ರಾಜಸೂಯಾಗದ ಕಾಲದಲ್ಲಿ ಶ್ರೀಕೃಷ್ಣನು ಶಿಶುಪಾಲನನ್ನು ಸಂಹಾರ ಮಾಡಿದನು. ದುರ್ಯೋಧನನ ಸ್ನೇಹಿತನಾದ ಶಿಶುಪಾಲನ ಮಗ ಪಾಂಡವರ ಪಕ್ಷವನ್ನು ಸೇರಿದ್ದಾನೆ. ಈ ವಿಚಾರವಾಗಿ ದುರ್ಯೋಧನ ನಿಗೆ ಬೇಸರವಿತ್ತು. ಚೇಕಿತಾನನೂ ಒಬ್ಬ ಯಾದವವೀರ. ಕಾಶಿರಾಜನ ಮಗಳು ಕಾಳಿಯನ್ನು ಭೀಮಸೇನನು ವಿವಾಹವಾಗಿದ್ದ. ಇದರಿಂದ ಸಹಜವಾಗಿಯೇ ಕಾಶಿರಾಜನು ಪಾಂಡವರ ಪಕ್ಷವನ್ನು ಸೇರಿಕೊಂಡ.

ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು.

ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್‌ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ