logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣನ ಪರಿಶುದ್ಧ ಭಕ್ತ ಅರ್ಜುನನಿಗೆ ತನ್ನ ದಾಯಾದಿಗಳು, ಸೋದರರೊಡನೆ ಯುದ್ಧ ಮಾಡಲು ಮನಸೇ ಇರಲಿಲ್ಲ ಯಾಕೆ?

ಭಗವದ್ಗೀತೆ: ಶ್ರೀಕೃಷ್ಣನ ಪರಿಶುದ್ಧ ಭಕ್ತ ಅರ್ಜುನನಿಗೆ ತನ್ನ ದಾಯಾದಿಗಳು, ಸೋದರರೊಡನೆ ಯುದ್ಧ ಮಾಡಲು ಮನಸೇ ಇರಲಿಲ್ಲ ಯಾಕೆ?

HT Kannada Desk HT Kannada

Oct 09, 2023 09:05 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಶ್ರೀಕೃಷ್ಣನ ಪರಿಶುದ್ಧ ಭಕ್ತ ಅರ್ಜನನಿಗೆ ತನ್ನ ದಾಯಾದಿಗಳು, ಸೋದರರೊಡನೆ ಯುದ್ಧ ಮಾಡಲು ಮನಸೇ ಇರಲಿಲ್ಲ ಯಾಕೆ ಅನ್ನೋದನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತಸ್ಯ ಸಞ್ಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |

ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ||12||

ಕುರುಕುಲ ಪಿತಾಮಹರಾದ ಮತ್ತು ಪ್ರತಾಪಶಾಲಿಗಳಾದ ಭೀಷ್ಮರು ಉಚ್ಚಸ್ವರದಿಂದ ಸಿಂಹನಾದವನ್ನು ಮಾಡಿ ಶಂಖವನ್ನು ಊದಿದರು. ಇದರಿಂದ ದುರ್ಯೋಧನನಿಗೆ ಹರ್ಷವಾಯಿತು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕುರುಕುಲ ಪಿತಾಮಹರು ತಮ್ಮ ಮೊಮ್ಮಗ ದುರ್ಯೋಧನನ ಹೃದಯದ ಆಂತರ್ಯವನ್ನು ಅರಿಯಬಲ್ಲವರಾಗಿದ್ದರು. ಅವರಿಗೆ ಅವನಲ್ಲಿ ಕರುಣೆಯುಂಟಾಯಿತು. ಸಿಂಹಸದೃಶರಾದ ಅವರು ತಮ್ಮ ಘನತೆಗೆ ತಕ್ಕಂತೆ ಗಟ್ಟಿಯಾಗಿ ಶಂಖನಾದವನ್ನು ಮಾಡಿ ದುರ್ಯೋಧನನಿಗೆ ಹರ್ಷವನ್ನುಂಟುಮಾಡಲು ಬಯಸಿದರು. ಅವರ ಶಂಖನಾದ ಸಾಂಕೇತಿಕವಾಗಿತ್ತುು. ಪರಮ ಪ್ರಭು ಶ್ರೀಕೃಷ್ಣನು ಎದುರು ಪಕ್ಷದಲ್ಲಿ ಇರುವುದರಿಂದ ದುರ್ಯೋಧನನಿಗೆ ಜಯದ ಸಾಧ್ಯತೆಯೇ ಇಲ್ಲ ಎನ್ನುವುದನ್ನು ಅದು ಪರೋಕ್ಷವಾಗಿ ಸೂಚಿಸಿತು. ಆದರೂ ಯುದ್ಧವನ್ನು ನಿರ್ವಹಿಸುವುದು ಅವರ ಕರ್ತವ್ಯ ನಿರ್ವಹಣೆಯಲ್ಲಿ ಅವರು ಶ್ರಮವನ್ನು ಸ್ವಲ್ಪವೂ ಲೆಕ್ಕಿಸುವವರಾಗಿರಲಿಲ್ಲ.

ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ |

ಯಾವದೇತಾನ್ನಿರೀಕ್ಷೆಹಂ ಯೋದ್ಧುಕಾಮಾನವಸ್ಥಿತಾನ್ ||21||

ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||22||

ಅರ್ಜುನ ಹೇಳಿದ ಹೇ ಅತ್ಯುತ, ಯುದ್ಧ ಮಾಡಲು ಸನ್ನದ್ಧವಾಗಿರುವ ಇವರನ್ನು ಮತ್ತು ಈ ಘೋರ ಶಸ್ತ್ರಸ್ಪರ್ಧೆಯಲ್ಲಿ ನಾನು ಯಾರೊಡನೆ ಹೋರಾಡಬೇಕೋ ಅವರನ್ನು ನೋಡಲು ಸಾಧ್ಯವಾಗುವಂತೆ ಈ ಎರಡು ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು.

ಶ್ರೀಕೃಷ್ಣನು ದೇವೋತ್ತಮ ಪರಮ ಪುರುಷನೇ ಆದರೂ ಅನಿಮಿತ್ತ ಕಾರಣದಿಂದ ಆತನು ತನ್ನ ಗೆಳೆಯನ ಸೇವೆಯಲ್ಲಿ ತೊಡಗಿದ್ದನು. ತನ್ನ ಭಕ್ತರಲ್ಲಿ ಎಂದೂ ಅವನು ಪ್ರೀತಿಯನ್ನು ತೋರದಿರುವುದಿಲ್ಲ. ಆದ್ದರಿಂದ ಇಲ್ಲಿ ಆತನನ್ನು ಅತ್ಯುತ ಎಂದು ಸಂಭೋಧಿಸಿದೆ. ಸಾರಥಿಯಾಗಿ ಅವನ ಅರ್ಜುನನ ಅಪ್ಪಣೆಯಂತೆ ನಡೆಯಬೇಕಾಗಿತ್ತು. ಹೀಗೆ ನಡೆದುಕೊಳ್ಳಲು ಆತನು ಹಿಂದೆಗೆಯದಿದ್ದುದರಿಂದ ಆತನನ್ನು ಅಚ್ಯುತ ಎಂದು ಸಂಬೋಧಿಸಿದೆ.

ತನ್ನ ಭಕ್ತನಿಗಾಗಿ ಸಾರಥಿಯ ಸ್ಥಾನವನ್ನು ಒಪ್ಪಿಕೊಂಡಿದ್ದರೂ ಅವನ ಸರ್ವೋಚ್ಚ ಸ್ಥಾನಕ್ಕೆ ಎದುರಿಲ್ಲ. ಎಲ್ಲ ಸನ್ನಿವೇಶಗಳಲ್ಲಿಯೂ ಅವನು ದೇವೋತ್ತಮ ಪರಮ ಪುರುಷ. ಹೃಷಿಕೇಶ ಎಂದರೆ ಸಕಲೇಂದ್ರಿಯಗಳ ಸ್ವಾಮಿ. ಭಗವಂತನಿಗೂ ಅವನ ಸೇವಕನಿಗೂ ನಡುವಣ ಸಂಬಂಧ ಅತಿ ಮಧುರ ಮತ್ತು ಅಲೌಕಿಕ. ಸೇವಕನು ಭಗವಂತನ ಸೇವೆಗೆ ಸದಾ ಸಿದ್ಧ. ಹಾಗೆಯೇ ಭಗವಂತನು ತನ್ನ ಭಕ್ತನಿಗೆ ಒಂದಿಷ್ಟು ಸೇವೆ ಮಾಡಲು ಸದಾ ಅವಕಾಶವನ್ನು ಹುಡುಕುತ್ತಿರುತ್ತಾನೆ.

ತಾನೇ ಅಪ್ಪಣೆ ನೀಡುವ ಪ್ರಭುವಾಗುವುದಕ್ಕಿಂತ ತನ್ನ ಪರಿಶುದ್ಧ ಭಕ್ತನೇ ತನಗೆ ಅಪ್ಪಣೆ ನೀಡುವ ಸ್ಥಾನವನ್ನು ವಹಿಸಿಕೊಂಡಾಗ ಭಗವಂತನಿಗೆ ಹೆಚ್ಚು ಸಂತೋಷ. ಅವನೇ ಪ್ರಭುವಾದುದರಿಂದ ಎಲ್ಲರೂ ಅವನ ಆಜ್ಞಾಧಾರಕರು. ಅವನಿಗೆ ಅಪ್ಪಣೆ ಮಾಡಲು ಅವನಿಗಿಂತ ಉಚ್ಟರಾದವರು ಇಲ್ಲ. ಹೀಗೆ ತಾನೇ ಎಲ್ಲ ಆಗುಹೋಗುಗಳ ಪ್ರಭುವಾದರೂ ಪರಿಶುದ್ಧ ಭಕ್ತನೊಬ್ಬನು ತನಗೆ ಅಪ್ಪಣೆ ಮಾಡುವುದನ್ನು ಕಂಡಾಗ ಭಗವಂತನಿಗೆ ಅಲೌಕಿಕ ಆನಂದವಾಗುತ್ತದೆ.

ಭಗವಂತನ ಪರಿಶುದ್ಧ ಭಕ್ತನಾದ ಅರ್ಜುನನಿಗೆ ತನ್ನ ದಾಯಾದಿಗಳೊಡನೆ ಮತ್ತು ಸೋದರರೊಡನೆ ಯುದ್ಧ ಮಾಡಲು ಇಚ್ಛೆಯೇ ಇರಲಿಲ್ಲ. ಆದರೆ ಶಾಂತಿಯ ಮಾರ್ಗದ ಯಾವುದೇ ಸಂಧಾನಕ್ಕೆ ಒಪ್ಪದ ದುರ್ಯೋಧನನ ಹಠಮಾರಿತನದಿಂದ ಆತನು ರಣಭೂಮಿಗೆ ಬರಬೇಕಾಯಿತು. ಆತನಿಗೆ ರಣಭೂಮಿಯಲ್ಲಿದ್ದ ಪ್ರಮುಖರನ್ನು ಕಾಣುವ ಕುತೂಹಲ ಉಂಟಾಯಿತು. ರಣಭೂಮಿಯಲ್ಲಿ ಶಾಂತಿಯ ಪ್ರಯತ್ನದ ಸಾಧ್ಯತೆಯೇ ಇಲ್ಲವಾದರೂ ಅವರನ್ನು ಮತ್ತೆ ನೋಡುವ ಮತ್ತು ಈ ಅನಗತ್ಯವಾದ ಯುದ್ಧಕ್ಕೆ ಅವರು ಎಷ್ಟು ಕಾತರರಾಗಿದ್ದಾರೆ ಎಂದು ಕಾಣುವ ಬಯಕೆ ಅವನಿಗಾಯಿತು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ