logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರದ್ಧೆ ಎಂದರೆ ಭವ್ಯವಾದ ವಿಷಯವೊಂದರಲ್ಲಿ ಅಚಲ ನಂಬಿಕೆ; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಶ್ರದ್ಧೆ ಎಂದರೆ ಭವ್ಯವಾದ ವಿಷಯವೊಂದರಲ್ಲಿ ಅಚಲ ನಂಬಿಕೆ; ಗೀತೆಯಲ್ಲಿನ ಅರ್ಥ ಹೀಗಿದೆ

HT Kannada Desk HT Kannada

Nov 07, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರದ್ಧೆ ಎಂದರೆ ಭವ್ಯವಾದ ವಿಷಯವೊಂದರಲ್ಲಿ ಅಚಲ ನಂಬಿಕೆ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನನ್ದನ |

ಬಹುಶಾಖಾ ಹ್ಯನನ್ತಾಶ್ಚ ಬುದ್ಧ ಯೋವ್ಯವಸಾಯಿನಾಮ್ ||41||

ಈ ಮಾರ್ಗದಲ್ಲಿ ಇರುವವರು ದೃಢಸಂಕಲ್ಪ ಹೊಂದಿರುತ್ತಾರೆ ಮತ್ತು ಅವರಿಗೆ ಒಂದೇ ಗುರಿ. ಪ್ರೀತಿಯ ಕುರುನಂದನನೇ, ನಿಶ್ಚಯ ಸ್ವಭಾವವಿಲ್ಲದವರ ಬುದ್ದಿಗೆ ಅನೇಕ ಶಾಖೆಗಳಿರುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕೃಷ್ಣಪ್ರಜ್ಞೆಯಿಂದ ಮನುಷ್ಯನು ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ಪಡೆಯಬಹುದೆನ್ನುವ ದೃಢವಿಶ್ವಾಸಕ್ಕೆ ವ್ಯವಸಾಯಾತ್ಮಿಕಾ ಬುದ್ಧಿ ಎಂದು ಹೆಸರು. ಚೈತನ್ಯ ಚರಿತಾಮೃತದಲ್ಲಿ (ಮಧ್ಯ 22.62) ಹೀಗೆ ಹೇಳಿದೆ -

ಶ್ರದ್ಧಾ ಶಬ್ದೇ ವಿಶ್ವಾಸ ಕಹೇ ಸುದೃಢ ನಿಶ್ಚಯ

ಕೃಷ್ಣೇ ಭಕ್ತಿ ಕೈಲೇ ಸರ್ವಕರ್ಮ ಕೃತ ಹಯ

ಶ್ರದ್ಧೆ ಎಂದರೆ ಭವ್ಯವಾದ ವಿಷಯವೊಂದರಲ್ಲಿ ಅಚಲ ನಂಬಿಕೆ. ಮನುಷ್ಯನು ಕೃಷ್ಣಪ್ರಜ್ಞೆಯ ಕರ್ತವ್ಯಗಳಲ್ಲಿ ನಿರತನಾಗಿರುವಾಗ ಸಂಸಾರದ ಸಂಪ್ರದಾಯಗಳು, ಮಾನವ ಕುಲ ಅಥವಾ ರಾಷ್ಟ್ರೀಯತೆ ಇಂತಹ ಐಹಿಕ ಜಗತ್ತಿನ ಕರ್ತವ್ಯಗಳಿಗಾಗಿ ಕೆಲಸ ಮಾಡಬೇಕಾಗಿಲ್ಲ. ಹಿಂದಿನ ಒಳ್ಳೆಯ ಅಥವಾ ದುಷ್ಟಕಾರ್ಯಗಳಿಗೆ ವ್ಯಕ್ತಿಯು ತೋರರುವ ಪ್ರತಿಕ್ರಿಯೆಗಳ ಫಲವೇ, ಫಲಾಪೇಕ್ಷೆಯಾದ ಕರ್ಮ.

ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಜಾಗೃತನಾಗಿರುವಾಗ ತನ್ನ ಕರ್ಮಗಳ ಒಳ್ಳೆಯ ಫಲಗಳಿಗಾಗಿ ಶ್ರಮಿಸಬೇಕಾಗಿಲ್ಲ. ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಜಾಗೃತನಾಗಿರುವಾಗ ತನ್ನ ಕರ್ಮಗಳ ಒಳ್ಳೆಯ ಫಲಗಳಿಗಾಗಿ ಶ್ರಮಿಸಬೇಕಾಗಿಲ್ಲ. ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಸ್ಥಿರನಾಗಿರುವಾಗ ಅವನ ಎಲ್ಲ ಕೆಲಸಕಾರ್ಯಗಳು ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ದ್ವಂದ್ವಕ್ಕೆ ಒಳಗಾಗುವುದಿಲ್ಲ.

ಎಲ್ಲ ಕೆಲಸಕಾರ್ಯಗಳು ಒಂದು ಪರಾತ್ಪರ ಮಟ್ಟದಲ್ಲೇ ಇರುತ್ತವೆ. ಕೃಷ್ಣಪ್ರಜ್ಞೆಯ ಅತ್ಯುನ್ನತ ಪರಿಪೂರ್ಣತೆಯೆಂದರೆ ಬದುಕಿನ ಐಹಿಕ ಕಲ್ಪನೆಯನ್ನು ತೊರೆದುಬಿಡುವುದು. ಕೃಷ್ಣಪ್ರಜ್ಞೆಯಲ್ಲಿ ಮುಂದುವರಿದಂತೆ ಈ ಸ್ಥಿತಿಯನ್ನು ತಂತಾನೇ ಮುಟ್ಟಬಹುದು.

ಕೃಷ್ಣಪ್ರಜ್ಞೆಯಲ್ಲಿ ನೆಲಸಿದವನ ದೃಢಸಂಕಲ್ಪಕ್ಕೆ ಜ್ಞಾನವೇ ಆಧಾರ. ವಾಸುದೇವಹ್ ಸರ್ವಮ್ ಇತಿ ಸ ಮಹಾತ್ಮಾ ಸು ದುರ್ಲಭಃ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನೆಂದರೆ ವಾಸುದೇವ ಅಥವಾ ಕೃಷ್ಣನೇ ಎಲ್ಲ ವ್ಯಕ್ತ ಕಾರಣಗಳಿಗೂ ತಾಯಿಬೇರು ಎಂದು ಸಂಪೂರ್ಣವಾಗಿ ಅರಿತಿರುವ ದುರ್ಲಭನಾದ ಒಳ್ಳೆಯ ಆತ್ಮ. ಮರದ ಬೇರಿಗೆ ನೀರೆರೆದರೆ ತಾನಾಗಿಯೇ ಎಲೆಗಳಿಗೂ ಕೊಂಬೆಗಳಿಗೂ ನೀರು ಲಭ್ಯವಾಗುವಂತೆ ಕೃಷ್ಣಪ್ರಜ್ಞೆಯಿಂದ ಕೆಲಸ ಮಾಡುವುದರಿಂದ ಮನುಷ್ಯನು ತನಗೂ, ಸಂಸಾರಕ್ಕೂ, ಸಮಾಜಕ್ಕೂ, ದೇಶಕ್ಕೂ, ಮನುಕುಲಕ್ಕೂ, ಎಲ್ಲರಿಗೂ ಅತ್ಯುನ್ನತ ಸೇವೆಯನ್ನು ಸಲ್ಲಿಸಬಹುದು. ಮನುಷ್ಯನ ಕಾರ್ಯದಿಂದ ಕೃಷ್ಣನಿಗೆ ತೃಪ್ತಿಯಾದರೆ ಎಲ್ಲರಿಗೂ ತೃಪ್ತಿಯಾಗುತ್ತದೆ.

ಕೃಷ್ಣನ ಪ್ರತಿನಿಧಿಯಾದ ಗುರುವಿನ ಸಮರ್ಥ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದೇ ಕೃಷ್ಣಪ್ರಜ್ಞೆಯಲ್ಲಿನ ಸೇವೆಯ ಅತ್ಯುತ್ತಮ ಅನುಷ್ಠಾನ. ಇಂತಹ ಗುರುವಿನ ಶಿಷ್ಯನ ಸ್ವಭಾವವು ತಿಳಿದರುತ್ತದೆ. ಕೃಷ್ಣಪ್ರಜ್ಞೆಯಲ್ಲಿ ಕರ್ಮನಿರತನಾಗುವಂತೆ ಅವನಿಗೆ (ಶಿಷ್ಯನಿಗೆ) ಮಾರ್ಗದರ್ಶನ ಮಾಡಬಲ್ಲ. ಕೃಷ್ಣಪ್ರಜ್ಞೆಯಲ್ಲಿ ಪ್ರವೀಣನಾಗಲು ಮನುಷ್ಯನು ದೃಢವಾಗಿ ಕೆಲಸಮಾಡಬೇಕು ಮತ್ತು ಕೃಷ್ಣನ ಪ್ರತಿನಿಧಿಗೆ ವಿಧೇಯನಾಗಿರಬೇಕು. ನಿಜವಾದ ಗುರುವಿನ ಮಾರ್ಗದರ್ಶನದಂತೆ ನಡೆಯುವುದೇ ಅವನ ಬದುಕಿನ ಮಹದುದ್ದೇಶವಾಗಿರಬೇಕು. ಶ್ರೀ ವಿಶ್ವನಾಥ ಚಕ್ರವರ್ತಿ ಠಾಕೂರರು ಪ್ರಸಿದ್ಧವಾದ ತಮ್ಮ ಗುರು ಸ್ತೋತ್ರದಲ್ಲಿ ಹೀಗೆ ಮಾರ್ಗದರ್ಶನ ಮಾಡುತ್ತಾರೆ.

ಯಸ್ಯ ಪ್ರಸಾದದ್ ಭಗವತ್ಪ್ರಸಾದೋ

ಯಸ್ಯಾಪ್ರಸಾದಾನ್ ನ ಗತಿಃ ಕುತೋಪಿ |

ಧ್ಯಾಯನ್‌ಸ್ತುವಂಸ್ತಸ್ಯ ಯಶಸ್ತ್ರಿಸನ್ಧ್ಯಂ

ವನ್ತೇ ಗುರೋಃ ಶ್ರೀಚರಣಾರವಿನ್ದಮ್ ||

ಗುರುವಿಗೆ ಸಂತೃಪ್ತಿಯಾದರೆ ದೇವೋತ್ತಮ ಪರಮ ಪುರುಷನಿಗೆ ಸಂತೃಪ್ತಿಯಾಗುತ್ತದೆ. ಗುರುವಿಗೆ ಸಂತೃಪ್ತಿಯಾಗದಿದ್ದರೆ ಕೃಷ್ಣಪ್ರಜ್ಞೆಯ ಮಟ್ಟಕ್ಕೆ ಏರುವುದು ಸಾಧ್ಯವೇ ಇಲ್ಲ. ಆದುದರಿಂದ ನಾನು ದಿನಕ್ಕೆ ಮೂರು ಬಾರಿ ಗುರುವಿನ ಧ್ಯಾನಮಾಡಿ ಅವನ ಕೃಪೆಗಾಗಿ ಪ್ರಾರ್ಥನೆ ಮಾಡಬೇಕು. ಮತ್ತು ನನ್ನ ಭಕ್ತಿಪೂರ್ವಕ ಪ್ರಣಾಮಗಳನ್ನು ಅವರಿಗೆ ಅರ್ಪಿಸಬೇಕು. ಆದರೆ ಇಡೀ ಪ್ರಕ್ರಿಯೆಯು ದೇಹಗ ಕಲ್ಪನೆಯನ್ನು ಮೀರಿದ ಪರಿಪೂರ್ಣ ಆತ್ಮಜ್ಞಾನವನ್ನು ಅವಲಂಬಿಸಿದೆ. ಈ ಜ್ಞಾನ ಊಹೆಯ ಸ್ವರೂಪದ್ದಾಗಿರಬಾರದು, ಅನುಷ್ಟಾನ ಸ್ವರೂಪದ್ದಾಗಿರಬೇಕು. ಕಾಮ್ಯಕರ್ಮದಲ್ಲಿ ಪ್ರಕಟವಾಗುವ ಇಂದ್ರಿಯ ತೃಪ್ತಿಗೆ ಅವಕಾಶವೇ ಇರಬಾರದು. ಸ್ಥಿರಚಿತ್ತವಿಲ್ಲದವನು ಹಲವು ಬಗೆಯ ಫಲಾಕಾಂಕ್ಷಿ ಕರ್ಮಗಳಿಂದ ಮಾರ್ಗಭ್ರಷ್ಟನಾಗುತ್ತಾನೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ