logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಇಂದ್ರಿಯಗಳ ತೃಪ್ತಿಗಾಗಿಯೇ ಜೀವಿಸುವ ಮನುಷ್ಯರ ಬದುಕು ವ್ಯರ್ಥ; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಇಂದ್ರಿಯಗಳ ತೃಪ್ತಿಗಾಗಿಯೇ ಜೀವಿಸುವ ಮನುಷ್ಯರ ಬದುಕು ವ್ಯರ್ಥ; ಗೀತೆಯ ಸಾರಾಂಶ ಹೀಗಿದೆ

HT Kannada Desk HT Kannada

Dec 12, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ ||

ಅಘಾಯುರಿನ್ದ್ರಿ ಯಾರಾಮೋ ಮೋಘಂ ಪಾರ್ಥ ಸಜೀವತಿ ||16||

ಅರ್ಜುನ, ವೇದಗಳು ಪ್ರವರ್ತಿಸಿದ ಈ ಯಜ್ಞಚಕ್ರವನ್ನು ಯಾರು ಮಾನವ ಜೀವನದಲ್ಲಿ ಅನುಸರಿಸುವುದಿಲ್ಲವೋ ಅವರದು ನಿಶ್ಚಯವಾಗಿ ಪಾಪವೇ ತುಂಬಿದ ಬದುಕು. ಇಂದ್ರಿಯಗಳ ತೃಪ್ತಿಗಾಗಿಯೇ ಬದುಕುವ ಇಂತಹ ಮನುಷ್ಯನ ಬದುಕು ವ್ಯರ್ಥ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

"ಕಷ್ಟಪಟ್ಟು ದುಡಿಯಿರಿ, ಇಂದ್ರಿಯ ಸುಖ ಪಡೆಯಿರಿ" ಎನ್ನುವ ಧನಪಿಶಾಚಿಯ ಚಿಂತನರೀತಿಯನ್ನು ಇಲ್ಲಿ ಭಗವಂತನು ಖಂಡಿಸುತ್ತಾನೆ. ಆದುದರಿಂದ ಈ ಐಹಿಕ ಜಗತ್ತನ್ನು ಸವಿಯಲು ಬಯಸುವವರಿಗೆ ಮೇಲೆ ಹೇಳಿದ ಯಜ್ಞಾಚರಣೆಯ ಚಕ್ರವು ತೀರ ಅಗತ್ಯ. ಇಂತಹ ನಿಯಮಗಳನ್ನು ಪಾಲಿಸದಿರುವವನು ಹೆಚ್ಚು ಶಿಕ್ಷೆಗೆ ಒಳಗಾಗುತ್ತ ಬಹು ಅಪಾಯದ ಬದುಕನ್ನು ನೆಡಸುತ್ತಾನೆ.

ನಿಸರ್ಗದ ನಿಯಮದಂತೆ, ಈ ಮನುಷ್ಯ ಜನ್ಮದ ನಿರ್ದಿಷ್ಟ ಉದ್ದೇಶವು ಆತ್ಮಸಾಕ್ಷಾತ್ಕಾರ. ಇದನ್ನು ಸಾಧಿಸಲು ಕ್ರಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗಗಳಲ್ಲಿ ಒಂದು ಮಾರ್ಗವನ್ನು ಅನುಸರಿಸಬಹುದು. ಪಾಪ-ಪುಣ್ಯಗಳನ್ನು ಮೀರಿದ ಆಧ್ಯಾತ್ಮಿಕವಾದಿಗೆ ನಿಯಮಿತ ಯಜ್ಞಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿಲ್ಲ. ಆದರೆ ಇಂದ್ರಿಯತೃಪ್ತಿಯಲ್ಲಿ ನಿರತರಾಗಿರುವವರು ಮೇಲೆ ಹೇಳಿದ ಯಜ್ಞಚಕ್ರದ ಆಚರಣೆಯಿಂದ ಪರಿಶುದ್ಧರಾಗಬೇಕು.

ಕಾರ್ಯಗಳಲ್ಲಿ ಬೇರೆಬೇರೆ ರೀತಿಗಳುಂಟು. ಕೃಷ್ಣಪ್ರಜ್ಞೆಯಲ್ಲಿ ನಿರತರಾಗದೆ ಇರುವವರು ಖಂಡಿತವಾಗಿಯೂ ಇಂದ್ರಿಯ ಪ್ರಜ್ಞೆಯಲ್ಲಿ ನಿರತರಾಗಿರುತ್ತಾರೆ. ಆದುದರಿಂದ ಅವರು ಪುಣ್ಯಕಾರ್ಯವನ್ನು ಮಾಡಬೇಕು. ಇಂದ್ರಿಯ ಪ್ರಜ್ಞೆ ಇರುವವರು ಇಂದ್ರಿಯತೃಪ್ತಿಯ ಪ್ರತಿಕ್ರಿಯೆಗೆ ಸಿಕ್ಕಿಕೊಳ್ಳದೆ ತಮ್ಮ ಬಯಕೆಗಳನ್ನು ತೃಪ್ತಿಗೊಳಿಸುವುದು ಸಾಧ್ಯವಾಗುವಂತೆ ಯಜ್ಞವ್ಯವಸ್ಥೆಯ ಯೋಜನೆಯಾಗಿದೆ. ಜಗತ್ತಿನ ಕಲ್ಯಾಣವು ನಮ್ಮ ಪ್ರಯತ್ನಗಳನ್ನು ಅವಲಂಬಿಸಿಲ್ಲ.

ದೇವತೆಗಳು ನೇರವಾಗಿ ಕಾರ್ಯಗತ ಮಾಡುವ ಭಗವಂತನ ಹಿನ್ನೆಲೆಯ ಜೋಡಣೆಯನ್ನು ಅವಲಂಬಿಸಿದೆ. ಆದುದರಿಂದಲೇ ಯಜ್ಞಗಳನ್ನು ವೇದಗಳಲ್ಲಿ ಹೇಳಿರುವ ದೇವತೆಗಳಿಗೇ ನೇರವಾಗಿ ನಿರ್ದೇಶಿಸಲಾಗಿದೆ. ಇದು ಪರೋಕ್ಷವಾಗಿ ಕೃಷ್ಣಪ್ರಜ್ಞೆಯ ಆಚರಣೆಯೇ. ಏಕೆಂದರೆ ಯಜ್ಞಗಳ ಆಚರಣೆಯನ್ನು ಯಾರು ಸಂಪೂರ್ಣವಾಗಿ ಕಲಿಯುತ್ತಾರೊ ಅವರು ಕೃಷ್ಣಪ್ರಜ್ಞೆಯುಳ್ಳವರಾಗುವುದು ನಿಶ್ಚಯ. ಆದರೆ ಯಜ್ಞಗಳನ್ನು ನಡೆಸಿದ ಮನುಷ್ಯನಿಗೆ ಕೃಷ್ಣಪ್ರಜ್ಞೆಯು ಬಾರದೆ ಹೋದರೆ ಅಂತಹ ತತ್ವಗಳನ್ನು ನೀತಿಸಂಹಿತೆಗಳೆಂದೇ ಪರಿಗಣಿಸಲಾಗುತ್ತದೆ. ಆದುದರಿಂದ ಯಾವ ಮನುಷ್ಯನೂ ತನ್ನ ಮುನ್ನಡೆಯನ್ನು ನೀತಿಸಂಹಿತೆಗಳ ಎಲ್ಲೆಗೆ ಸಮೀತಗೊಳಿಸಬಾರದು. ಅದನ್ನು ಮೀರಿ ಕೃಷ್ಣಪ್ರಜ್ಞೆಯನ್ನು ಸಾಧಿಸಬೇಕು.

ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ |

ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ ||17||

ಯಾವ ಮನುಷ್ಯನು ಆತ್ಮದಲ್ಲಿಯೇ ಸಂತೋಷವನ್ನು ಕಂಡುಕೊಳ್ಳುವಮೋ, ಯಾರ ಮನುಷ್ಯ ಜನ್ಮವು ಆತ್ಮಸಾಕ್ಷಾತ್ಕಾರದ ಬದುಕಾಗಿಯೋ, ಯಾರು ಆತ್ಮನಲ್ಲಿಯೇ ಸಂತುಷ್ಟನಾಗಿರುವನೋ ಅವನಿಗೆ ಯಾವ ಕರ್ತವ್ಯವೂ ಇರುವುದಿಲ್ಲ.

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಿದ್ದು ಕೃಷ್ಣಪ್ರಜ್ಞೆಯಲ್ಲಿ ತಾನು ಮಾಡುವ ಕಾರ್ಯಗಳಲ್ಲಿ ಸಂಪೂರ್ಣವಾಗಿ ಸಂತುಷ್ಟನಾದವು ಮಾಡಬೇಕಾದ ಯಾವ ಕರ್ತವ್ಯವೂ ಇರುವುದಿಲ್ಲ. ಅವನಿಗೆ ಕೃಷ್ಣಪ್ರಜ್ಞೆ ಇರುವುದರಿಂದ ಒಳಗಿನ ಕಲ್ಮಷವೆಲ್ಲ ಒಂದೇಕ್ಷಣದಲ್ಲಿ ತೊಡೆದುಹೋಗುತ್ತದೆ. ಇದು ಸಹಸ್ರ ಸಹಸ್ರ ಯಜ್ಞಗಳ ಆಚರಣೆಯಿಂದ ಉಂಟಾಗುವ ಪರಿಣಾಮ. ಹೀಗೆ ಪ್ರಜ್ಞೆಯು ಶುದ್ಧವಾಗುವುದರಿಂದ ಮನುಷ್ಯನು ಪರಮ ಪ್ರಭುವಿನೊಂದಿಗೆ ತನ್ನ ನಿತ್ಯ ಸಂಬಂಧವನ್ನು ಕುರಿತು ಸಂಪೂರ್ಣವಾಗಿ ಭರವಸೆಯನ್ನು ಹೊಂದುತ್ತಾನೆ.

ಭಗವಂತನ ಕೃಪೆಯಿಂದ ಅವನ ಕರ್ತವ್ಯವು ತಾನಾಗಿ ಗೋಚರವಾಗುತ್ತದೆ. ಆದುದರಿಂದ ಅವನಿಗೆ ವೇದಗಳ ಅಪ್ಪಣೆಗಳನ್ನು ಪರಿಪಾಲಿಸುವ ಕರ್ತವ್ಯ ಇರುವುದಿಲ್ಲ. ಹೀಗೆ ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಐಹಿಕ ಕರ್ಮಗಳಲ್ಲಿ ಆಸಕ್ತಿ ಇರುವುದಿಲ್ಲ. ಆತನು ಮದ್ಯ, ಸ್ತ್ರೀ ಮತ್ತು ಇಂತಹ ಮೋಹಗಳ ಐಹಿಕ ಆಕರ್ಷಣೆಗಳಲ್ಲಿ ಸಂತೋಷವನ್ನು ಪಡೆಯುವುದಿಲ್ಲ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ