logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಯಾವುದೇ ಕೆಲಸ ಮಾಡಬೇಕಾದರೂ ದೇಹ ಮತ್ತು ಆತ್ಮ ಒಟ್ಟಿಗಿರಬೇಕು; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಮನುಷ್ಯ ಯಾವುದೇ ಕೆಲಸ ಮಾಡಬೇಕಾದರೂ ದೇಹ ಮತ್ತು ಆತ್ಮ ಒಟ್ಟಿಗಿರಬೇಕು; ಗೀತೆಯ ಅರ್ಥ ತಿಳಿಯಿರಿ

HT Kannada Desk HT Kannada

Dec 05, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ |

ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ||8||

ನಿನ್ನ ನಿಯಮಿತ ಕರ್ಮವನ್ನು ಮಾಡು. ಏಕೆಂದರೆ ಹಾಗೆ ಮಾಡುವುದು ಕರ್ಮವನ್ನು ಮಾಡದಿರುವುದಕ್ಕಿಂತ ಉತ್ತಮ. ಕರ್ಮವನ್ನು ಮಾಡದೆ ದೇಹವನ್ನು ಉಳಿಸಿಕೊಳ್ಳುವುದೂ ಸಾಧ್ಯವಿಲ್ಲ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ತಾವು ಸತ್ಕುಲಪ್ರಸೂತರೆಂದು ಸುಳ್ಳಾಗಿ ತೋರಿಸಿಕೊಳ್ಳುವ ಬಹುಮಂದಿ ಹುಸಿ ಧ್ಯಾನಿಗಳಿದ್ದಾರೆ. ಆಧ್ಯಾತ್ಮಿಕ ಬದುಕಿನಲ್ಲಿ ಮುಂದುವರಿಯುವುದಕ್ಕಾಗಿ ತಾವು ಎಲ್ಲವನ್ನೂ ತ್ಯಾಗಮಾಡಿರುವುದಾಗಿ ಸುಳ್ಳು ಹೇಳುವ ವೃತ್ತಿನಿರತರೂ ಇದ್ದಾರೆ. ಅರ್ಜುನನೊಬ್ಬ ವಿಥ್ಯಾಚಾರಿಯಾಗಬೇಕೆಂದು ಶ್ರೀಕೃಷ್ಣನು ಬಯಸಲಿಲ್ಲ. ಕ್ಷತ್ರಿಯರಿಗೆ ವಿಧಿಸಿರುವ ನಿಯತ ಕರ್ಮಗಳನ್ನು ಅರ್ಜುನನು ಮಾಡಬೇಕೆಂದು ಭಗವಂತನು ಅಪೇಕ್ಷಿಸಿದ. ಅರ್ಜುನನೊಬ್ಬ ಗೃಹಸ್ಥ, ದಂಡನಾಯಕ. ಅವನು ಹಾಗೆಯೇ ಉಳಿದು ಗೃಹಸ್ಥನಾದ ಕ್ಷತ್ರಿಯನಿಗೆ ನಿಯಮಿಸಿರುವ ಕರ್ತವ್ಯಗಳನ್ನು ಮಾಡುವುದೇ ಉತ್ತಮ.

ಇಂತಹ ಕರ್ಮಗಳು ಕ್ರಮೇಣ ಪ್ರಾಪಂಚಿಕ ಮನುಷ್ಯನ ಹೃದಯವನ್ನು ಶುದ್ಧಿಮಾಡುತ್ತವೆ ಮತ್ತು ಅವನ ಐಹಿಕ ಕಲ್ಮಷಗಳನ್ನು ತೊಡೆದುಹಾಕುತ್ತವೆ. ಹೊಟ್ಟೆಪಾಡಿಗಾಗಿ ಮಾಡುವ ತ್ಯಾಗದ ತೋರಿಕೆಯನ್ನು ಭಗವಂತನಾಗಲಿ ಯಾವುದೇ ಧರ್ಮಗ್ರಂಥವಾಗಲಿ ಅನುಮೋದಿಸುವುದಿಲ್ಲ. ಯಾವುದಾದರೂ ಕೆಲಸಮಾಡಿ ಮನುಷ್ಯನು ದೇಹ ಮತ್ತು ಆತ್ಮಗಳನ್ನು ಒಟ್ಟಿಗಿಡಲೇ ಬೇಕು ಎನ್ನುವುದು ನಿಜ. ಐಹಿಕ ಪ್ರವೃತ್ತಿಗಳಿಂದ ಪರಿಶುದ್ಧನಾಗದೆ ಮನಸ್ವೀ ರೀತಿಯಲ್ಲಿ ಕೆಲಸವನ್ನು ಬಿಟ್ಟುಬಿಡಬಾರದು.

ಈ ಜಗತ್ತಿನಲ್ಲಿರುವ ಯಾರಿಗೇ ಆಗಲಿ ಐಹಿಕ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುವ, ಎಂದರೆ ಇಂದ್ರಿಯ ತೃಪ್ತಿ ಪಡೆಯುವ, ಕಲುಷಿತ ಪ್ರವೃತ್ತಿಯು ಇದ್ದೇ ಇರುತ್ತದೆ. ಇಂತಹ ಕಲುಷಿತ ಪ್ರವೃತ್ತಿಗಳನ್ನು ದೂರಮಾಡಬೇಕು. ನಿಯತಕರ್ತವ್ಯಗಳ ಮೂಲಕ ಹೀಗೆ ಮಾಡಬೇಕಲ್ಲದೆ, ಕೆಲಸವನ್ನು ತ್ಯಜಿಸಿ ಇತರರ ಖರ್ಚಿನಲ್ಲಿ ಹೊಟ್ಟೆ ಹೊರೆಯುತ್ತ ಆಧ್ಯಾತ್ಮಿಕವಾದಿ ಎನ್ನಿಸಿಕೊಳ್ಳಲು ಯಾರೂ ಪ್ರಯತ್ನಿಸಬಾರದು.

ಯಜ್ಞಾರ್ಥಾತ್ ಕರ್ಮಣೋನ್ಯತ್ರ ಲೋಕೋಯಂ ಕರ್ಮಬನ್ಧನಃ |

ತದರ್ಥಂ ಕರ್ಮ ಕೌನ್ತೇಯ ಮುಕ್ತಸನ್ಗಃ ಸಮಾಚರ ||9||

ವಿಷ್ಣುವಿಗಾಗಿ ಮಾಡಿದ ತ್ಯಾಗವೆಂದು ಕರ್ಮವನ್ನು ಮಾಡಬೇಕು. ಇಲ್ಲವಾದರೆ ಕರ್ಮವು ಇಹಬಂಧವನ್ನು ಸೃಷ್ಟಿ ಮಾಡುತ್ತದೆ. ಆದುದರಿಂದ, ಕೌಂತೇಯ, ಭಗವಂತನ ತೃಪ್ತಿಗಾಗಿ ನಿನ್ನ ನಿಯತ ಕರ್ತವ್ಯಗಳನ್ನುು ಮಾಡು. ಆ ರೀತಿಯಲ್ಲಿ ನೀವು ಬಂಧನದಿಂದ ಸದಾ ಮುಕ್ತನಾಗಿರುತ್ತೀಯೆ.

ದೇಹವನ್ನು ಉಳಿಸಿಕೊಳ್ಳುವುದಕ್ಕಾದರೂ ಮನುಷ್ಯನು ಕೆಲಸ ಮಾಡಲೇಬೇಕು. ಆದುದರಿಂದ, ಆ ಉದ್ದೇಶವನ್ನು ಸಾಧಿಸಲು ಸಾಧ್ಯವಾಗುವಂತೆ ನಿರ್ದಿಷ್ಟ ಸಮಾಜ, ಸ್ಥಾನ ಮತ್ತು ಗುಣಗಳಿಗೆ ತಕ್ಕಂತೆ ಕರ್ತವ್ಯಗಳನ್ನು ನಿಯತಗೊಳಿಸಿದೆ. ಯಜ್ಞ ಎಂದರೆ ಮಹಾವಿಷ್ಣು ಅಥವಾ ಧಾರ್ಮಿಕವಿಧಿಗನುಸಾರವಾಗಿ ಅರ್ಪಣೆ ಮಾಡುವುದು. ಎಲ್ಲ ಯಜ್ಞಗಳನ್ನು ನಡೆಸುವುದೂ ವಿಷ್ಣುವನ್ನು ಪ್ರಸನ್ನಗೊಳಿಸುವುದಕ್ಕಾಗಿ.

ವೇದಗಳು ಆದೇಶಿಸುತ್ತವೆ - ಯಜ್ಞೋ ವೈ ವಿಷ್ಣುಃ. ಬೇರೆ ಮಾತುಗಳಲ್ಲಿ ಹೇಳವುದಾದರೆ, ಒಬ್ಬ ಮನುಷ್ಯನು ಯಜ್ಞ ಮಾಡಿದರೂ ಒಂದೇ, ಶ್ರೀವಿಷ್ಣುವನ್ನು ನೇರವಾಗಿ ಸೇವಿಸಿದರೂ ಒಂದೇ. ಆದುದರಿಂದ, ಕೃಷ್ಣಪ್ರಜ್ಞೆ ಎಂದರೆ ಈ ಶ್ಲೋಕದಲ್ಲಿ ವಿಧಿಸಿರುವಂತೆ ಯಜ್ಞವನ್ನು ಮಾಡುವುದೇ. ವರ್ಣಾಶ್ರಮ ಸಂಸ್ಥೆಯ ಗುರಿಯೂ ವಿಷ್ಣುವಿನ ಸಂತೃಪ್ತಿಯೇ. ವರ್ಣಾಶ್ರಮಾಚಾರವತಾ ಪುರುಷೇಣ ಪರಃ ಪುಮಾನ್/ವಿಷ್ಣುರಾರಾಧ್ಯತೇ. (ವಿಷ್ಣುಪುರಾಣ 3.8.8).

ಆದುದರಿಂದ ವಿಷ್ಣುವಿನ ಸಂತೃಪ್ತಿಗಾಗಿ ಕೆಲಸಮಾಡಬೇಕು. ಐಹಿಕ ಜಗತ್ತಿನಲ್ಲಿ ಬೇರೆ ಯಾವ ಕೆಲಸಮಾಡಿದರೂ ಅದು ಬಂಧನಕ್ಕೆ ಕಾರಣವಾಗುತ್ತದೆ. ಏಕೆಂದರೆ ಒಳ್ಳೆಯ ಕೆಲಸ-ಕೆಟ್ಟ ಕೆಲಸ ಎರಡಕ್ಕೂ ಪ್ರತಿಕ್ರಿಯೆಗಳಿರುತ್ತವೆ. ಯಾವುದೇ ಪ್ರತಿಕ್ರಿಯೆಯಿಂದಲೂ ಕೆಲಸ ಮಾಡಿದವನು ಬಂಧನಕ್ಕೆ ಒಳಗಾಗುತ್ತಾನೆ. ಆದುದರಿಂದ ಕೃಷ್ಣನ (ಅಥವಾ ವಿಷ್ಣುವಿನ) ಸಂತೃಪ್ತಿಗಾಗಿ ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡಬೇಕು. ಇಂತಹ ಕರ್ಮಮಾಡುವಾಗ ಮನುಷ್ಯನ ಮುಕ್ತಿಯ ಸ್ಥಿತಿಯಲ್ಲಿರುತ್ತಾನೆ. ಇದು ಕರ್ಮಾಡುವ ಮಹಾಕಲೆ.

ಪ್ರಾರಂಭದಲ್ಲಿ ಈ ಪ್ರಕ್ರಿಯೆಗೆ ಪರಿಣತ ಮಾರ್ಗದರ್ಶನದ ಅಗತ್ಯವಿದೆ. ಆದುದರಿಂದ ಶ್ರೀಕೃಷ್ಣನ ಭಕ್ತರೊಬ್ಬರ ಮಾರ್ಗದರ್ಶನದಲ್ಲಿ ಅಥವಾ (ಯಾರೊಡನೆ ಕೆಲಸ ಮಾಡುವ ಭಾಗ್ಯ ಅರ್ಜುನನದಾಯಿತೋ ಅಂತಹ) ಶ್ರೀಕೃಷ್ಣನ ನೇರ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ಇಂದ್ರಿಯತೃಪ್ತಿಗಾಗಿ ಏನನ್ನೂ ಮಾಡಬಾರದು. ಎಲ್ಲವನ್ನೂ ಶ್ರೀಕೃಷ್ಣನ ತೃಪ್ತಿಗಾಗಿಯೇ ಮಾಡಬೇಕು. ಇದನ್ನು ಕಲಿತ ಮನುಷ್ಯನು ಕರ್ಮಫಲಿದಿಂದ ಮುಕ್ತನಾಗುತ್ತಾನೆ. ಇದು ಮನುಷ್ಯನನ್ನು ಕ್ರಮೇಣ ಭಗವಂತನ ದಿವ್ಯ ಪ್ರೀತಿಯು ಸೇವೆಗೆ ಎತ್ತುತ್ತದೆ. ಇಂತಹ ಭಕ್ತಿಸೇವೆಯೊಂದೇ ಮನುಷ್ಯನನ್ನು ಭಗವದ್ಧಾಮಕ್ಕೆ ಏರಿಕಸಬಲ್ಲದು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ