ಭಗವದ್ಗೀತೆ: ಸತ್ಯ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ವ್ಯಕ್ತಿಗೆ ದೇವರ ಕೃಪೆ ಜಾಸ್ತಿ; ಗೀತೆಯಲ್ಲಿನ ಸಾರಾಂಶ ಹೀಗಿದೆ
Dec 02, 2023 05:46 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ವ್ಯಕ್ತಿಗೆ ದೇವರು ನೆರವಾಗುತ್ತಾನೆ ಎಂಬುದರ ಅರ್ಥ ತಿಳಿಯಿರಿ.
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸನ್ಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ||3||
ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು. ಪಾಪರಹಿತನಾದ ಅರ್ಜುನನೆ, ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ಎರಡು ಬಗೆಯ ಮನುಷ್ಯರು ಪ್ರಯತ್ನಿಸುತ್ತಾರೆ ಎಂದು ಆಗಲೇ ಹೇಳಿದ್ದೇನೆ. ಕೆಲವರು ಅದನ್ನು ಅನುಭವಗಮ್ಯವಾದ, ತತ್ವಜ್ಞಾನದ ಊಹೆಯ ಮೂಲಕ ಸಾಧಿಸಲು ಯತ್ನಿಸುತ್ತಾರೆ. ಕೆಲವರು ಭಕ್ತಿಸೇವೆಯ ಮೂಲಕ ಸಾಧಿಸಲು ಯತ್ನಿಸುತ್ತಾರೆ.
ತಾಜಾ ಫೋಟೊಗಳು
ಎರಡನೆಯ ಅಧ್ಯಾಯದ 39ನೆಯ ಶ್ಲೋಕದಲ್ಲಿ ಭಗವಂತನು ಎರಡು ಮಾರ್ಗಗಳನ್ನು ವಿವರಿಸಿದನು. ಸಾಂಖ್ಯಯೋಗ ಮತ್ತು ಕರ್ಮಯೋಗ ಅಥವಾ ಬುದ್ಧಿಯೋಗ. ಈ ಶ್ಲೋಕದಲ್ಲಿ ಭಗವಂತನು ಇದನ್ನು ಇನ್ನೂ ವಿಸ್ತರವಾಗಿ ವಿವರಿಸುತ್ತಾನೆ. ಸಾಂಖ್ಯಯೋಗವು ಆತ್ಮ ಮತ್ತು ಜಡವಸ್ತು ಇವುಗಳ ಸ್ವರೂಪದ ವಿಶ್ಲೇಷಣಾತ್ಮಕ ಅಧ್ಯಯನ. ಪ್ರಯೋಗಗಳಿಂದ ಪಡೆದ ತಿಳಿವಳಿಕೆಯ ಮೂಲಕ ಮತ್ತು ತತ್ವಶಾಸ್ತ್ರದ ಮೂಲಕ ವಿಷಯಗಳ ಬಗ್ಗೆ ಊಹಿಸಲು ಮತ್ತು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಸಾಂಖ್ಯಯೋಗವು ವಸ್ತು.
ಎರಡನೆಯ ಅಧ್ಯಾಯದ 61ನೆಯ ಶ್ಲೋಕದಲ್ಲಿ ವಿವರಿಸಿರುವಂತೆ, ಇನ್ನೊಂದು ವರ್ಗದ ಜನರು ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡುತ್ತಾರೆ. 39ನೆಯ ಶ್ಲೋಕದಲ್ಲಿಯೂ ಭಗವಂತನು, ಬುದ್ಧಿಯೋಗ ಅಥವಾ ಕೃಷ್ಣಪ್ರಜ್ಞೆಯ ತತ್ವಗಳಿಗೆ ಅನುಗುಣವಾಗಿ ಕಾರ್ಯಮಾಡುವುದರಿಂದ ಕರ್ಮಬಂಧನದಿಂದ ಮುಕ್ತವಾಗಬಹುದು ಎಂದು ವಿವರಿಸಿದ್ದಾನೆ. ಈ ಪ್ರಕ್ರಿಯೆಯಲ್ಲಿ ದೋಷವಿಲ್ಲ ಎಂದೂ ಹೇಳಿದ್ದಾನೆ. 61ನೆಯ ಶ್ಲೋಕದಲ್ಲಿ ಇದೇ ತತ್ವವನ್ನು ಇನ್ನೂ ಸ್ಪಷ್ಟವಾಗಿ ವಿವರಿಸಿದೆ.
ಎಲ್ಲ ಇಂದ್ರಿಯಗಳನ್ನೂ ಬಹು ಸುಲಭವಾಗಿ ನಿಗ್ರಹಿಸಬಹುದು
ಬುದ್ಧಿಯೋಗವು ಪರಮೋನ್ನತವಾದದ್ದನ್ನು (ಇನ್ನೂ ನಿರ್ದಿಷ್ಟವಾಗಿ ಕೃಷ್ಣನನ್ನು) ಸಂಪೂರ್ಣವಾಗಿ ಅವಲಂಬಿಸಬೇಕು ಮತ್ತು ಈ ರೀತಿಯಲ್ಲಿ ಎಲ್ಲ ಇಂದ್ರಿಯಗಳನ್ನೂ ಬಹು ಸುಲಭವಾಗಿ ನಿಗ್ರಹಿಸಬಹುದು. ಆದುದರಿಂದ ಈ ಎರಡು ಯೋಗಗಳು ಧರ್ಮ ಮತ್ತು ತತ್ವಜ್ಞಾನಗಳಂತೆ ಒಂದನ್ನೊಂದು ಅವಲಂಬಿಸಿವೆ. ತತ್ವಜ್ಞಾನವಿಲ್ಲದ ಧರ್ಮವು ಬರಿಯ ಭಾವ ಅಷ್ಟೇ. ಅದು ಒಮ್ಮೆಮ್ಮೆ ಧರ್ಮಾಂಧತೆಯಾಗುತ್ತದೆ. ಧರ್ಮವಿಲ್ಲದ ತತ್ವಜ್ಞಾನವಿಲ್ಲದ ಧರ್ಮವು ಬರಿಯ ಭಾವ ಅಷ್ಟೇ. ಅದು ಒಮ್ಮೊಮ್ಮೆ ಧರ್ಮಾಂಧತೆಯಾಗುತ್ತದೆ. ಧರ್ಮವಿಲ್ಲದ ತತ್ವಜ್ಞಾನವು ಮಾನಸಿಕ ಊಹೆಯಷ್ಟೆ ಆಗುತ್ತದೆ.
ಪ್ರಾಮಾಣಿಕವಾಗಿ ಅರಸುವ ತತ್ವಜ್ಞಾನಿಗಳು ಕಡೆಗೆ ಕೃಷ್ಣಪ್ರಜ್ಞೆಗೇ ಬರುತ್ತಾರೆ
ಕಡೆಯ ಗುರಿ ಕೃಷ್ಣನೇ. ಏಕೆಂದರೆ ಸಂಪೂರ್ಣವಾದ ಸತ್ಯವನ್ನು ಪ್ರಾಮಾಣಿಕವಾಗಿ ಅರಸುವ ತತ್ವಜ್ಞಾನಿಗಳು ಕಡೆಗೆ ಕೃಷ್ಣಪ್ರಜ್ಞೆಗೇ ಬರುತ್ತಾರೆ. ಇದನ್ನೂ ಭಗವದ್ಗೀತೆಯಲ್ಲಿ ಹೇಳಿದೆ. ಪರಮಾತ್ಮನಿಗೆ ಸಂಬಂಧಿಸಿದ ಹಾಗೆ ಆತ್ಮನ ನಿಜವಾದ ಸ್ಥಾನವನ್ನು ಅರ್ಥಮಾಡಿಕೊಳ್ಳುವುದೇ ಸಂಪೂರ್ಣ ಪ್ರಕ್ರಿಯೆ. ಪರೋಕ್ಷ ಪ್ರಕ್ರಿಯೆ ಎಂದರೆ ತತ್ವಶಾಸ್ತ್ರದ ಊಹೆ. ಇದರಿಂದ ಮನುಷ್ಯನು ಕ್ರಮೇಣ ಕೃಷ್ಣಪ್ರಜ್ಞೆಯನ್ನು ಮುಟ್ಟಬಹುದು.
ಇನ್ನೊಂದು ಪ್ರಕ್ರಿಯೆಯು ಕೃಷ್ಣಪ್ರಜ್ಞೆಯಲ್ಲಿ ಪ್ರತಿಯೊಂದರೊಡನೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಇವೆರಡರಲ್ಲಿ ಕೃಷ್ಣಪ್ರಜ್ಞೆಯ ಮಾರ್ಗ ಉತ್ತಮ. ಏಕೆಂದರೆ, ತತ್ವಶಾಸ್ತ್ರದ ಪ್ರಕ್ರಿಯೆಯ ಮೂಲಕ ಇಂದ್ರಿಯಗಳನ್ನು ಪರಿಶುದ್ಧಗೊಳಿಸುವುದನ್ನು ಅದು ಅವಲಂಬಿಸಿಲ್ಲ. ಕೃಷ್ಣಪ್ರಜ್ಞೆಯೇ ಪರಿಶುದ್ಧಗೊಳಿಸುವ ಪ್ರಕ್ರಿಯೆ. ಭಕ್ತಿಸೇವೆಯ ನೇರವಿಧಾನದಿಂದಾಗಿ ಅದು ಏಕಕಾಲದಲ್ಲಿ ಸುಲಭವೂ ಭವ್ಯವೂ ಆಗಿದೆ.