ಭಗವದ್ಗೀತೆ: ಆಧ್ಯಾತ್ಮಿಕ ನೆಲೆಯಿಲ್ಲದ ವ್ಯಕ್ತಿ ತನ್ನ ಮನಸ್ಸಿನ ಕಲ್ಪನೆಗಳನ್ನೇ ಆಶ್ರಯಿಸಿಕೊಂಡಿರುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
Nov 15, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಆಧ್ಯಾತ್ಮಿಕ ನೆಲೆಯಿಲ್ಲದ ವ್ಯಕ್ತಿ ತನ್ನ ಮನಸ್ಸಿನ ಕಲ್ಪನೆಗಳನ್ನೇ ಆಶ್ರಯಿಸಿಕೊಂಡಿರುತ್ತಾನೆ ಎಂಬುದರ ಕುರಿತು ಗೀತೆಯಲ್ಲಿನ ವಿವರಣೆಯನ್ನು ತಿಳಿಯಿರಿ.
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಿಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ||55||
ಅರ್ಜುನನು ಹೇಳುತ್ತಾನೆ - ಕೃಷ್ಣನೇ, ಯಾರ ಪ್ರಜ್ಞೆಯು ದಿವ್ಯತ್ವದಲ್ಲಿ ಇದೆಯೋ ಅವನ ಲಕ್ಷಣಗಳೇನು? ಅವನು ಹೇಗೆ ಮಾತನಾಡುತ್ತಾನೆ? ಅವನ ಭಾಷೆ ಯಾವುದು? ಅವನು ಹೇಗೆ ಕುಳಿತುಕೊಳ್ಳುತ್ತಾನೆ? ಹೇಗೆ ನಡೆಯುತ್ತಾನೆ?
ತಾಜಾ ಫೋಟೊಗಳು
ಪ್ರತಿಯೊಬ್ಬನಿಗೂ ಅವನವನ ವಿಶಿಷ್ಟ ಸ್ಥಿತಿಯಿಂದ ಕೆಲವು ಲಕ್ಷಣಗಳಿರುತ್ತವೆ. ಇದೇ ರೀತಿ ಕೃಷ್ಣಪ್ರಜ್ಞೆ ಇರುವವನಿಗೆ ಮಾತಿನಲ್ಲಿ, ನಡೆಯಲ್ಲಿ, ವಿಚಾರರೀತಿಯಲ್ಲಿ, ಭಾವದಲ್ಲಿ ಅವನ ವಿಶಿಷ್ಟ ಸ್ವಭಾವವಿರುತ್ತದೆ. ಐಶ್ವರ್ಯವಂತನಾದವನು ಐಶ್ವರ್ಯವಂತನೆಂದು ತೋರಿಸುವ ಲಕ್ಷಣಗಳಿರುವ ಹಾಗೆ, ರೋಗಿಗೆ ಅವನು ರೋಗಿ ಎಂದು ತೋರಿಸುವ ಲಕ್ಷಣಗಳಿರುವ ಹಾಗೆ ಅಥವಾ ವಿದ್ವಾಂಸನಿಗೆ ಅವನದೇ ಲಕ್ಷಣಗಳಿರುವಂತೆ ಕೃಷ್ಣನ ದಿವ್ಯಪ್ರಜ್ಞೆಯಲ್ಲಿರುವಾತನಿಗೆ ವಿವಿಧ ವ್ಯವಹಾರಗಳಲ್ಲಿ ನಿರ್ದಿಷ್ಟ ಲಕ್ಷಣಗಳಿರುತ್ತವೆ.
ಆತನ ವಿಶಿಷ್ಟ ಲಕ್ಷಣಗಳನ್ನು ಭಗವದ್ಗೀತೆಯಿಂದ (Bhagavadgita) ತಿಳಿದುಕೊಳ್ಳಬಹುದು. ಬಹು ಮುಖ್ಯವಾದ ಸಂಗತಿಯೆಂದರೆ ಕೃಷ್ಣಪ್ರಜ್ಞೆಯಲ್ಲಿರುವಾತನು ಹೇಗೆ ಮಾತನಾಡುತ್ತಾನೆ ಎನ್ನುವುದು. ಏಕೆಂದರೆ ಯಾವುದೇ ಮನುಷ್ಯನ ಮುಖ್ಯಗುಣ ಮಾತು.
ಮೂರ್ಖನು ಮಾತನಾಡದಿದ್ದಷ್ಟು ಹೊತ್ತೂ ನಿಜವು ಹೊರಬೀಳುವುದಿಲ್ಲವೆಂದು ಹೇಳುತ್ತಾರೆ. ಸೊಗಸಾಗಿ ಉಡುಪು ಹಾಕಿಕೊಂಡಿರುವ ಮೂರ್ಖನು ಮಾತನಾಡದಿದ್ದರೆ ನಿಶ್ಚಯವಾಗಿಯೂ ಅವನ ವಿಷಯ ತಿಳಿಯುವುದಿಲ್ಲ. ಆದರೆ ಅವನು ಮಾತನಾಡುತ್ತಲೇ ನಿಜವು ಹೊರಬೀಳುತ್ತದೆ. ಕೃಷ್ಣಪ್ರಜ್ಞೆಯ ಮನುಷ್ಯನ ತಕ್ಷಣದ ಲಕ್ಷಣವೆಂದರೆ ಅವನು ಕೃಷ್ಣನನ್ನು ಕುರಿತು ಮತ್ತು ಅವನಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತ್ರ ಮಾತನಾಡುತ್ತಾನೆ. ಕೆಳಗೆ ಹೇಳಿರುವಂತೆ ಇತರ ಲಕ್ಷಣಗಳು ಅನಂತರ ಸಹಜವಾಗಿ ಬರುತ್ತವೆ.
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |
ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ||55||
ದೇವೋತ್ತಮ ಪರಮ ಪುರುಷನು ಹೇಳಿದನು - ಪಾರ್ಥ, ಮನಸ್ಸಿನ ಕಲ್ಪನೆಗಳಿಂದ ಇಂದ್ರಿಯ ಸುಖದ ವಿವಿಧ ಬಯಕೆಗಳು ಉಂಟಾಗುತ್ತವೆ. ಒಬ್ಬ ಮನುಷ್ಯನು ಇಂದ್ರಿಯಸುಖದ ಎಲ್ಲ ಬಗೆಯ ಆಸೆಗಳನ್ನು ತ್ಯಜಿಸಿ, ಅವನ ಮನಸ್ಸು ಪರಿಶುದ್ಧವಾಗಿ ಆತ್ಮದಲ್ಲೇ ಸಂತುಷ್ಟನಾದಾಗ ಆತನನ್ನು ಶುದ್ಧ ದಿವ್ಯ ಪ್ರಜ್ಞೆಯಲ್ಲಿ ಇರುವವನೆಂದು ಕರೆಯುವರು.
ಕೃಷ್ಣಪ್ರಜ್ಞೆಯಲ್ಲಿ ಅಥವಾ ಭಗವಂತನ ಭಕ್ತಿ ಸೇವೆಯಲ್ಲಿ ತನ್ಮಯನಾಗಿರುವ ಮನುಷ್ಯನಿಗೆ ಮಹರ್ಷಿಗಳ ಎಲ್ಲ ಸದ್ಗುಣಗಳೂ ಇರುತ್ತವೆ. ಆದರೆ ಹೀಗೆ ಆಧ್ಯಾತ್ಮಿಕ ನೆಲೆಯಿಲ್ಲದವನಿಗೆ ಮಹರ್ಷಿಗಳ ಎಲ್ಲ ಸದ್ಗುಣಗಳೂ ಇರುತ್ತವೆ. ಆದರೆ ಹೀಗೆ ಆಧ್ಯಾತ್ಮಿಕ ನೆಲೆಯಿಲ್ಲದವನಿಗೆ ಒಳ್ಳೆಯ ಅರ್ಹತೆಯಿರುವುದಿಲ್ಲ. ಏಕೆಂದರೆ ಆತನು ತನ್ನ ಮನಸ್ಸಿನ ಕಲ್ಪನೆಗಳನ್ನೇ ಆಶ್ರಯಿಸುತ್ತಾನೆ. ಹೀಗೆಂದು ಭಾಗವತವು ಹೇಳುತ್ತದೆ.
ಮನಸ್ಸಿನ ಕಲ್ಪನೆಗಳು ಸೃಷ್ಟಿ ಮಾಡುವ ಎಲ್ಲ ಬಗೆಯ ಇಂದ್ರಿಯಾಪೇಕ್ಷೆಗಳನ್ನು ಮನುಷ್ಯನು ತ್ಯಜಿಸಬೇಕೆಂದು ಇಲ್ಲಿ ಸರಿಯಾಗಿಯೇ ಹೇಳಿದೆ. ಇಂತಹ ಇಂದ್ರಿಯಾಪೇಕ್ಷೆಗಳನ್ನು ಕೃತಕವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುವಾಗ ಹೊರಗಿನ ಪ್ರಯತ್ನವೇ ಇಲ್ಲದೆ ಇಂದ್ರಿಯಾಪೇಕ್ಷೆಗಳು ತಾವಾಗಿಯೇ ಅಡಗುತ್ತವೆ. ಆದುದರಿಂದ ಮನುಷ್ಯನು ಯಾವ ಹಿಂಜರಿಕೆಯಿಲ್ಲದೆ ಕೃಷ್ಣಪ್ರಜ್ಞೆಯನ್ನು ಬೆಳಸಿಕೊಳ್ಳಬೇಕು.
ಏಕೆಂದರೆ ಈ ಭಕ್ತಿಸೇವೆಯಿಂದ ಆತನು ಕೂಡಲೇ ಅಲೌಕಿಕ ಪ್ರಜ್ಞೆಯ ವೇದಿಕೆಗೇರುತ್ತಾನೆ. ಪ್ರಗತಿ ಹೊಂದಿದ ಆತ್ಮನು ತಾನು ಪರಮ ಪ್ರಭುವಿನ ನಿರಂತ ಸೇವಕನೆನ್ನುವುದನ್ನು ಅರಿತುಕೊಂಡು ತನ್ನಲ್ಲಿ ಸದಾ ಸಂತೃಪ್ತನಾಗುತ್ತಾನೆ. ಅಂತಹ ದಿವ್ಯಸ್ಥಿತಿಯಲ್ಲಿರುವವನಿಗೆ ಕ್ಷುದ್ರ ಪ್ರಾಂಪಚಿಕತೆಯಿಂದುಂಟಾಗುವ ಇಂದ್ರಿಯ ಬಯಕೆಗಳಿರುವುದಿಲ್ಲ. ಬದಲಾಗಿ ಪ್ರಭುವಿನ ನಿತ್ಯಸೇವೆ ಮಾಡುವ ತನ್ನ ಸಹಜ ಸ್ಥಿತಿಯಲ್ಲಿ ಆತನು ಸದಾ ಸುಖಿಯಾಗಿರುತ್ತಾನೆ.