logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣ ಕಾಣಿಸಿಕೊಂಡಿದ್ದ 6 ಅವತಾರಗಳಿವು; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಶ್ರೀಕೃಷ್ಣ ಕಾಣಿಸಿಕೊಂಡಿದ್ದ 6 ಅವತಾರಗಳಿವು; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Jan 02, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರೀಕೃಷ್ಣ ಕಾಣಿಸಿಕೊಂಡಿದ್ದ 6 ಅವತಾರಗಳ ಬಗ್ಗೆ ತಿಳಿಯಿರಿ. 

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |

ಧರ್ಮಸಂಸ್ಥಾಪನಾರ್ಥಾಯ ಸಮ್ಬವಾಮಿ ಯುಗೇ ಯುಗೇ ||8||

ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಗವದ್ಗೀತೆಯ ಪ್ರಕಾರ ಸಾಧು ಎಂದರೆ ಕೃಷ್ಣ ಪ್ರಜ್ಞೆಯಲ್ಲಿರುವ ಮನುಷ್ಯನು. ಒಬ್ಬ ವ್ಯಕ್ತಿಯು ಅಧರ್ಮಿ ಎಂದು ಕಾಣಬಹುದು, ಆದರೆ ಅವನಿಗೆ ಕೃಷ್ಣ ಪ್ರಜ್ಞೆಯ ಆರ್ಹತೆಗಳು ಸಂಪೂರ್ಣವಾಗಿ ಇದ್ದರೆ ಅವನು ಸಾಧು ಎಂದೇ ಅರ್ಥಮಾಡಿಕೊಳ್ಳಬೇಕು. ದುಷ್ಕೃತಾಮ್ ಎನ್ನುವ ಪದವು ಕೃಷ್ಣ ಪ್ರಜ್ಞೆಗೆ ಲಕ್ಷ್ಯ ಕೊಡದವರಿಗೆ ಅನ್ವಯಿಸುತ್ತದೆ. ಇಂತಹ ದುಷ್ಟರು ಅಥವಾ ದುಷ್ಕೃತಾಮ್ ಆದವರನ್ನು ಅವರು ಐಹಿಕ ವಿದ್ಯೆಯಿಂದ ಭೂಷಿತರಾಗಿದ್ದರೂ ಮೂರ್ಖರು ಮತ್ತು ಆಧಮ ಮನುಷ್ಯರು ಎಂದು ವರ್ಣಿಸಿದೆ.

ನೂರಕ್ಕೆ ನೂರರಷ್ಟು ಕೃಷ್ಣಪ್ರಜ್ಞೆಯಲ್ಲಿ ತೊಡಗಿರುವವರನ್ನು ಅವರು ವಿದ್ವಾಂಸರಲ್ಲದಿದ್ದರೂ, ಸುಸಂಸ್ಕೃತರಲ್ಲದಿದ್ದರೂ, ಸಾಧು ಎಂದು ಪರಿಗಣಿಸಲಾಗುವುದು. ನಾಸ್ತಿಕರ ವಿಷಯ ಹೇಳುವುದಾದರೆ ಭಗವಂತನು ರಾಕ್ಷಸರಾದ ರಾವಣ ಮತ್ತು ಕಂಸರನ್ನು ನಾಶಮಾಡಿದಂತೆ ನಾಸ್ತಿಕರನ್ನು ನಾಶಮಾಡಲು ತನ್ನ ನಿಜಸ್ವರೂಪದಲ್ಲಿ ಅವತರಿಸುವ ಅಗತ್ಯವಿಲ್ಲ. ರಾಕ್ಷಸರನ್ನು ನಾಶ ಮಾಡಲು ಭಗವಂತನಿಗೆ ಅನೇಕ ಬಂಟರಿದ್ದಾರೆ. ಆದರೆ ಭಗವಂತನ ಪರಿಶುದ್ಧ ಭಕ್ತರನ್ನು ರಾಕ್ಷಸರು ಸದಾ ಹಿಂಸಿಸುತ್ತಿರುತ್ತಾರೆ. ಮುಖ್ಯವಾಗಿ ಆ ಭಕ್ತರನ್ನು ತೃಪ್ತಿಗೊಳಿಸುವುದಕ್ಕೋಸ್ಕರ ಭಗವಂತನು ಇಳಿದು ಬರುತ್ತಾನೆ. ಭಕ್ತನು ತನ್ನ ನೆಂಟನೇ ಆದರೂ ರಾಕ್ಷಸನು ಅವನನ್ನು ಹಿಂಸಿಸುತ್ತಾನೆ. ಪ್ರಹ್ಲಾದ ಮಹಾರಾಜನು ತನ್ನ ಮಗನೇ ಅವರೂ ಹಿರಣ್ಯಕಶಿಪು ಅವನನ್ನು ಹಿಂಸಿಸುತ್ತಾನೆ. ಪ್ರಹ್ಲಾದ ಮಹಾರಾಜನು ತನ್ನ ಮಗನೇ ಆದರೂ ಹಿರಣ್ಯಕಶಿಪು ಅವನನ್ನು ಹಿಂಸಿಸಿದ. ಕೃಷ್ಣನ ತಾಯಿಯಾದ ದೇವಕಿಯು ಕಂಸನ ತಂಗಿಯಾದರೂ, ಕೃಷ್ಣನು

ಅವರ ಮಗ ಎನ್ನುವ ಒಂದೇ ಕಾರಣಕ್ಕಾಗಿ ಆಕೆ ಮತ್ತು ಆಕೆಯ ಗಂಡ ವಸುದೇವನು ಹಿಂಸೆಗೆ ಒಳಗಾಗಬೇಕಾಯಿತು. ಆದ್ದರಿಂದ ಶ್ರೀಕೃಷ್ಣನು ಕಂಸನನ್ನು ಕೊಲ್ಲುವುದಕ್ಕಿಂತ ಹೆಚ್ಚಾಗಿ ದೇವಕಿಯನ್ನು ರಕ್ಷಿಸುವುದಕ್ಕಾಗಿ ಅವತಾರವೆತ್ತಿದ. ಆದರೆ ಎರಡೂ ಏಕಕಾಲದಲ್ಲಿ ಸಾಧಿತವಾದವು. ಆದುದರಿಂದ ಭಕ್ತನನ್ನು ಉದ್ಧರಿಸಲು ಮತ್ತು ದುಷ್ಟ ರಾಕ್ಷಸರನ್ನು ನಿಗ್ರಹಿಸಲು ಭಗವಂತನು ವಿವಿಧ ಅವತಾರಗಳನ್ನೆತ್ತುತ್ತಾನೆ ಎಂದು ಇಲ್ಲಿ ಹೇಳಿದೆ. ಕೃಷ್ಣ ದಾಸ ಕವಿರಾಜನ ಚೈತನ್ಯ ಚರಿತಾಮೃತ (ಮಧ್ಯ - 20.263-264) ದಲ್ಲಿ ಕೆಳಗಿನ ಶ್ಲೋಕವು ಆವತಾರದ ಈ ತತ್ವಗಳನ್ನು ಹೀಗೆ ಸಂಗ್ರಹಿಸಿ ಹೇಳುತ್ತದೆ.

ಸೃಷ್ಟಿ ಹೇತು ಯೇಇಮೂರ್ತಿ ಪ್ರಪಞ್ಚೇ ಅವತರೇ

ಮಾಯಾತೀತ ಪರವ್ಯೋಮೇ ಸಬಾರ ಅವಸ್ಥಾನ

ವಿಶ್ವೇ ಅವತರಿಧರೇ ಅವತಾರ ನಾಮ

'ಭಗವದ್ ರಾಜ್ಯದಿಂದ ಲೌಕಿಕ ಅಭಿವ್ಯಕ್ತಿಗಾಗಿ ಇಳಿದುಬರುವುದೇ ಭಗವದವತಾರ. ಹೀಗೆ ಇಳದು ಬರುವ ಪರಮ ಪುರುಷನ ನಿರ್ದಿಷ್ಟ ರೂಪವನ್ನು ಅವತಾರ ಎಂದು ಕರೆಯಲಾಗುತ್ತದೆ. ಇಂತಹ ಸ್ವರೂಪಗಳು ಭಗವಂತನ ರಾಜ್ಯವಾದ ಆಧ್ಯಾತ್ಮಿಕ ಲೋಕದಲ್ಲಿ ನೆಲೆಸಿರುತ್ತವೆ. ಅವು ಭೌತಿಕ ಜಗತ್ತಿಗೆ ಬಂದಾಗ ಅವಕಾರ ಎನ್ನುವ ಹೆಸರನ್ನು ಪಡೆಯುತ್ತವೆ."

ಅವತಾರಗಳಲ್ಲಿ ಹಲವು ರೀತಿಗಳು. ಉದಾಹರಣೆಗೆ ಪುರುಷಾವತಾರಗಳು, ಗುಣಾವತಾರಗಳು, ಲೀಲಾವತಾರಗಳು, ಶಕ್ತಿ ಆವೇಶ ಅವತಾರಗಳು, ಮನ್ವಂತರ ಅವತಾರಗಳು ಮತ್ತು ಯುಗಾವತಾರಗಳು. ಇವೆಲ್ಲ ವಿಶ್ವದಲ್ಲಿ ಎಲ್ಲೆಡೆಯೂ ನಿಯತಕಾಲಕ್ಕೆ ಕಾಣಿಸಿಕೊಳ್ಳುತ್ತವೆ. ಆದರೆ ಶ್ರೀಕೃಷ್ಣನು ಆದಿಪ್ರಭು, ಎಲ್ಲ ಅವತಾರಗಳ ಆದಿಮೂಲ. ಪರಿಶುದ್ಧ ಭಕ್ತರಿಗೆ ಕೃಷ್ಣನನ್ನು ಅವನ ವೃಂದಾವನದ ಮೂಲಲೀಲೆಗಳಲ್ಲಿ ಕಾಣಬೇಕೆಂದು ಬಹಳ ಕಾತರ; ಅವರ ಆತಂಕವನ್ನು ತಣಿಸುವ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಪ್ರಭು ಶ್ರೀಕೃಷ್ಣನು ಇಳಿದು ಬರುತ್ತಾನೆ. ಆದುದರಿಂದ ಕೃಷ್ಣಾವತಾರದ ಮುಖ್ಯ ಉದ್ದೇಶ ಅವನ ಪರಿಶುದ್ಧಭಕ್ತರನ್ನು ತೃಪ್ತಿಗೊಳಿಸುವುದು.

ಪ್ರತಿಯೊಂದು ಯುಗದಲ್ಲಿಯೂ ತಾನು ಅವತಾರವೆತ್ತುವುದಾಗಿ ಭಗವಂತನು ಹೇಳುತ್ತಾನೆ. ಆತನು ಕಲಿಯುಗದಲ್ಲಿಯೂ ಅವತಾರವೆತ್ತುತ್ತಾನೆ ಎನ್ನುವುದನ್ನು ಇದು ಸೂಚಿಸುತ್ತದೆ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ, ಕಲಿಯುಗದ ಅವತಾರ ಶ್ರೀ ಚೈತನ್ಯ ಮಹಾಪ್ರಭು, ಅವರು ಸಂಕೀರ್ತನ ಅಂದೋಳನದಿಂದ ಕೃಷ್ಣಪ್ರಜ್ಞೆಯನ್ನು ಭಾರತದಲ್ಲೆಲ್ಲ ಹರಡಿದರು. ಈ ಸಂಕೀರ್ತನ ಸಂಸ್ಕೃತಿಯು ಊರಿನಿಂದ ಊರಿಗೆ ಹಳ್ಳಿಯಿಂದ ಹಳ್ಳಿಗೆ ಪ್ರಪಂಚದಲ್ಲೆಲ್ಲ ಪ್ರಸಾರವಾಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ದೇವೋತ್ತಮ ಪರಮ ಪುರುಷನಾದ ಕೃಷ್ಣನ ಅವತಾರವಾದ ಚೈತನ್ಯ ಮಹಾಪ್ರಭುಗಳನ್ನು ಉಪನಿಷತ್ತುಗಳು, ಮಹಾಭಾರತ ಮತ್ತು ಭಾಗವತದಂತಹ ಅಪೌರುಷೇಯ ಧರ್ಮಗ್ರಂಥಗಳ ರಹಸ್ಯಭಾಗಗಳಲ್ಲಿ ನೇರವಾಗಿ ಅಲ್ಲದಿದ್ದರೂ ಗೋಪ್ಯವಾಗಿ ವರ್ಣಿಸಲಾಗಿದೆ. ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಅಂದೋಳನವು ಶ್ರೀಕೃಷ್ಣನ ಭಕ್ತರನ್ನು ಬಹಳವಾಗಿ ಆಕರ್ಷಿಸುತ್ತದೆ. ಭಗವಂತನ ಈ ಅವತಾರವು ದುಷ್ಕರ್ಮಿಗಳನ್ನು ಕೊಲ್ಲುವುದಿಲ್ಲ. ತನ್ನ ಅವ್ಯಾಜ ಕರುಣೆಯಿಂದ ಉದ್ಧರಿಸುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ