logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತ ಪರಿಶುದ್ಧ ಭಕ್ತನಿಗೆ ತೋರುವ ಕರುಣೆಗೆ ಮಿತಿಯಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತ ಪರಿಶುದ್ಧ ಭಕ್ತನಿಗೆ ತೋರುವ ಕರುಣೆಗೆ ಮಿತಿಯಿಲ್ಲ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Mar 27, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತ ಪರಿಶುದ್ಧ ಭಕ್ತನಿಗೆ ತೋರುವ ಕರುಣೆಗೆ ಮಿತಿಯಿಲ್ಲ. ಭಗವದ್ಗೀತೆಯ 7ನೇ ಅಧ್ಯಾಯದ ಶ್ಲೋಕ 23 ರಲ್ಲಿ ಹೇಳಲಾಗಿರುವ ಈ ಸಾರಾಂಶವನ್ನು ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 23

ಅನ್ತವತ್ತು ಫಲಂ ತೇಷಾಂ ತದ್ ಭವತ್ಯಲ್ಪಮೇಧಸಾಮ್ |

ದೇವಾನ್ ದೇವಯಜೋ ಯಾಂತಿ ಮದ್ಭಕ್ತಾ ಯಾನ್ತಿ ಮಾಮಪಿ ||23||

ಅನುವಾದ: ಅಲ್ಪಬುದ್ಧಿಯವರು ದೇವತೆಗಳನ್ನು ಪೂಜಿಸುತ್ತಾರೆ. ಅವರು ಪಡೆಯುವ ಫಲವು ಮಿತವಾದದ್ದು ಮತ್ತು ಅಲ್ಪಕಾಲದ್ದು. ದೇವತೆಗಳನ್ನು ಪೂಜಿಸುವವರು ದೇವತೆಗಳ ಲೋಕಕ್ಕೆ ಹೋಗುತ್ತಾರೆ. ಆದರೆ ನನ್ನ ಭಕ್ತರು ಕಡೆಗೆ ನನ್ನ ಪರಮ ಲೋಕವನ್ನು ಮುಟ್ಟುವರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಭಗವದ್ಗೀತೆಯ ಕೆಲವು ವ್ಯಾಖ್ಯಾನಕಾರರು ದೇವತೆಯೊಬ್ಬನನ್ನು ಪೂಜಿಸುವವರು ಪರಮ ಪ್ರಭುವನ್ನು ಮುಟ್ಟಬಹುದು ಎಂದು ಹೇಳುತ್ತಾರೆ. ಆದರೆ ದೇವತೆಗಳನ್ನು ಪೂಜಿಸುವವರು ವಿವಿಧ ದೇವತೆಗಳು ನೆಲೆಸಿರುವ ಬೇರೆ ಬೇರೆ ಗ್ರಹಗಳಿಗೆ ಹೋಗುವರೆಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಉದಾಹರಣೆಗೆ ಸೂರ್ಯ ದೇವತೆಯನ್ನು ಪೂಜೆಮಾಡುವವನು ಚಂದ್ರನನ್ನು ಪಡೆಯುತ್ತಾನೆ. ಹೀಗೆಯೇ ಯಾರಾದರೂ ಇಂದ್ರನಂತಹ ದೇವತೆಯನ್ನು ಪೂಜೆಮಾಡಲು ಬಯಸಿದರೆ ಆತನು ಆ ನಿರ್ದಿಷ್ಟ ದೇವತೆಯ ಲೋಕಕ್ಕೆ ಹೋಗುವನು. ಯಾವ ದೇವತೆಯನ್ನು ಪೂಜಿಸಿದರೂ ಪ್ರತಿಯೊಬ್ಬನೂ ದೇವೋತ್ತಮ ಪರಮ ಪುರುಷನನ್ನು ಮುಟ್ಟುವನೆಂಬುದು ಸರಿಯಲ್ಲ. ಅದನ್ನು ಇಲ್ಲಿ ನಿರಾಕರಿಸಿದೆ. ದೇವೆತಗಳನ್ನು ಪೂಜಿಸುವವನರು ಐಹಿಕ ಜಗತ್ತಿನಲ್ಲಿ ಬೇರೆ ಲೋಕಗಳಿಗೆ ಹೋಗುತ್ತಾರೆ. ಆದರೆ ಪರಮ ಪ್ರಭುವಿನ ಭಕ್ತನು ದೇವೋತ್ತಮ ಪುರುಷನ ಪರಮ ಲೋಕಕ್ಕೆ ನೇರವಾಗಿ ಹೋಗುತ್ತಾನೆ.

ದೇವತೆಗಳು ಪರಮ ಪ್ರಭುವಿನ ದೇಹದ ಬೇರೆ ಬೇರೆ ಭಾಗಗಳಾಗಿದ್ದರೆ ಅವನ್ನರು ಪೂಜಿಸಿದರೂ ಅದೇ ಗುರಿಯನ್ನು ಸಾಧಿಸಲು ಸಾಧ್ಯವಾಗಬೇಕು ಎಂದು ವಾದ ಹೂಡಬಹುದು. ಆದರೆ ದೇವತೆಗಳನ್ನು ಪೂಜಿಸುವವರು ಅಷ್ಟು ಬುದ್ಧಿವಂತರಲ್ಲ. ಏಕೆಂದರೆ ದೇಹದ ಯಾವ ಭಾಗಕ್ಕೆ ಆಹಾರವನ್ನು ಕೊಡಬೇಕು ಎನ್ನುವುದು ಅವರಿಗೆ ತಿಳಿದಿಲ್ಲ. ಅವರಲ್ಲಿ ಕೆಲವರು ಎಷ್ಟು ದಡ್ಡರೆಂದರೆ ಅವರು ಅನೇಕ ಭಾಗಗಳಿವೆ ಮತ್ತು ಆಹಾರವನ್ನು ಒದಗಿಸಲು ಅನೇಕ ರೀತಿಗಳಿವೆ ಎಂದು ವಾದಿಸುತ್ತಾರೆ. ಇದು ಅಷ್ಟೇನೂ ಸರಿಯಾದುದಲ್ಲ. ಕಿವಿಗಳ ಮೂಲಕ ಅಥವಾ ಕಣ್ಣುಗಳ ಮೂಲಕ ದೇಹಕ್ಕೆ ಆಹಾರವನ್ನು ಕೊಡಲು ಯಾರಿಗಾದರೂ ಸಾಧ್ಯವೇ? ದೇವತೆಗಳು ಪರಮ ಪ್ರಭುವಿನ ವಿಶ್ವದೇಹದ ವಿವಿಧ ಭಾಗಗಳು ಎಂದು ಅವರಿಗೆ ತಿಳಿದಿಲ್ಲ. ಅಂತಹವರು ತಮ್ಮ ಅಜ್ಞಾನದಿಂದ ಪ್ರತಿಯೊಬ್ಬ ದೇವತೆಯೂ ಒಬ್ಬ ದೇವರು ಮತ್ತು ಪರಮ ಪ್ರಭುವಿಗೆ ಪ್ರತಿಸ್ಪರ್ಧಿ ಎಂದು ನಂಬುತ್ತಾರೆ.

ಯಾವುದು ಭಕ್ತನು ತಲುಪಬೇಕಾದ ಗುರಿಯಲ್ಲ?

ದೇವತೆಗಳಷ್ಟೇ ಪರಮ ಪ್ರಭುವಿನ ಭಾಗಗಳಲ್ಲ, ಸಾಮಾನ್ಯ ಜೀವಿಗಳೂ ಹೀಗೆ ಭಾಗಗಳೇ ಹೌದು. ಶ್ರೀಮದ್ಭಾಗವತದಲ್ಲಿ, ಬ್ರಾಹ್ಮಣರು ಪರಮ ಪ್ರಭುವಿನ ತಲೆ, ಕ್ಷತ್ರಿಯರು ಅವನ ತೋಳುಗಳು, ವೈಶ್ಯರು ಅವನ ನಡು, ಶೂದ್ರರು ಅವನ ಕಾಲುಗಳು ಮತ್ತು ಎಲ್ಲರೂ ಬೇರೆ ಬೇರೆ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ಹೇಳಿದೆ. ಸನ್ನಿವೇಶ ಏನೇ ಇರಲಿ. ದೇವತೆಗಳೂ ತಾನೂ ಪರಮ ಪ್ರಭುವಿನ ವಿಭಿನ್ನಾಂಶಗಳು ಎಂದು ಮನುಷ್ಯನು ತಿಳಿದಿದ್ರೆ ಅವನ ಜ್ಞಾನವು ಪರಿಪೂರ್ಣ. ಆದರೆ ಇದು ಅವನಿಗೆ ಅರ್ಥವಾಗದಿದ್ದರೆ, ಅವನು ದೇವತೆಗಳು ವಾಸಿಸುವ ಬೇರೆ ಲೋಕಗಳಿಗೆ ಹೋಗುತ್ತಾನೆ. ಭಕ್ತನು ತಲಪುವ ಗುರಿಯು ಇದಲ್ಲ.

ದೇವತೆಗಳ ವರಗಳಿಂದ ಪಡೆದ ಫಲಗಳು ನಾಶವಾಗುವಂತಹವು. ಏಕೆಂದರೆ ಐಹಿಕ ಜಗತ್ತಿನಲ್ಲಿ ಲೋಕಗಳು, ದೇವತೆಗಳು ಮತ್ತು ಅವರನ್ನು ಪೂಜಿಸುವವರು ಎಲ್ಲಕ್ಕೂ ನಾಶವುಂಟು. ಆದುದರಿಂದ ಈ ಶ್ಲೋಕದಲ್ಲಿ ದೇವತೆಗಳನ್ನು ಪೂಜಿಸುವ ಪಡೆಯುವ ಫಲಗಳೆಲ್ಲ ನಾಶವಾಗುತ್ತವೆ. ಆದುದರಿಂದ ಇಂತಹ ಪೂಜೆಯನ್ನು ಕಡಮೆ ಬುದ್ಧಿಯ ಜೀವಿಗಳು ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದೆ. ಕೃಷ್ಣಪ್ರಜ್ಞೆಯಲ್ಲಿ ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾದ ಪರಿಶುದ್ಧ ಭಕ್ತನು ನಿತ್ಯಜ್ಞಾನಾನಂದವನ್ನು ಸಾಧಿಸುವುದರಿಂದ ಅವನ ಸಾಧನೆಗಳು ಮತ್ತು ದೇವತೆಗಳ ಸಾಮಾನ್ಯ ಆರಾಧಕನ ಸಾಧನೆಗಳು ಬೇರೆ ಬೇರೆಯಾಗಿರುತ್ತವೆ. ಪರಮ ಪ್ರಭು ಅಮಿತನಾದವನು. ಅವನ ಕೃಪೆಯೂ ಅಮಿತ, ಅವನ ಕರುಣೆಯೂ ಅಮಿತ. ಆದುದರಿಂದ ಪರಮ ಪ್ರಭು ತನ್ನ ಪರಿಶುದ್ಧ ಭಕ್ತನಿಗೆ ತೋರುವ ಕರುಣೆಗೆ ಮಿತಿಯಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ