Bhagavad Gita: ಒಂದು ಸ್ಥಳದಲ್ಲಿ ಕುಳಿತು ಯಾರೂ ಇಡೀ ವಿಶ್ವವನ್ನು ಕಾಣಲಾರರು; ಗೀತೆಯ ಅರ್ಥ ತಿಳಿಯಿರಿ
Jun 23, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಒಂದು ಸ್ಥಳದಲ್ಲಿ ಕುಳಿತು ಯಾರೂ ಇಡೀ ವಿಶ್ವವನ್ನು ಕಾಣಲಾರರು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 6
ಪಶ್ಯಾದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ |
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ ||6||
ಅನುವಾದ: ಭರತ ವಂಶದವರಲ್ಲಿ ಶ್ರೇಷ್ಠನೆ, ಆದಿತ್ಯರು, ವಸುಗಳು, ರುದ್ರರು, ಅಶ್ವನಿ ಕುಮಾರರು ಮತ್ತು ಇತರ ಎಲ್ಲ ದೇವತೆಗಳ ವಿವಿಧ ಅಭಿವ್ಯಕ್ತಿಗಳನ್ನು ನೋಡು. ಈವರೆಗೆ ಯಾರೂ ನೋಡದಿರುವ ಮತ್ತು ಕೇಳದಿರುವ ಆಶ್ಚರ್ಯಗಳನ್ನು ನೋಡು.
ತಾಜಾ ಫೋಟೊಗಳು
ಭಾವಾರ್ಥ: ಅರ್ಜುನನು ಕೃಷ್ಣನ ಆತ್ಮೀಯ ಸ್ನೇಹಿತನಾಗಿ, ವಿದ್ವಾಂಸರಲ್ಲಿ ಬಹು ಮುಂದುವರಿದನಾದರೂ ಅವನಿಗೆ ಕೃಷ್ಣನ ವಿಷಯವಾಗಿ ಎಲ್ಲವನ್ನೂ ತಿಳಿಯಲು ಸಾಧ್ಯವಾಗಿರಲಿಲ್ಲ. ಮನುಷ್ಯರು ಈ ಎಲ್ಲ ರೂಪಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಕೇಳಿಲ್ಲ ಮತ್ತು ಕಂಡಿಲ್ಲ ಎಂದು ಇಲ್ಲಿ ಹೇಳಿದೆ. ಈಗ ಕೃಷ್ಣನು ಈ ಆಶ್ಚರ್ಯಕರ ರೂಪಗಳನ್ನು ತೋರಿಸುತ್ತಾನೆ (Bhagavad Gita Updesh in Kannada).
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 7
ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್|
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ||7||
ಅನುವಾದ: ಅರ್ಜುನ, ನೀನು ಏನೇನನ್ನು ನೋಡಲು ಬಯಸುತ್ತೀಯೋ ಅದೆಲ್ಲವನ್ನೂ ಒಮ್ಮೆಗೇ ಈ ನನ್ನ ದೇಹದಲ್ಲಿ ನೋಡು. ನೀನು ಈಗ ಏನೇನನ್ನು ನೋಡಲು ಬಯಸುತ್ತೀಯೋ ಮತ್ತು ಮುಂದೆ ಏನೇನನ್ನು ನೋಡಲು ಬಯಸಬಹುದೋ ಅದೆಲ್ಲವನ್ನೂ ಈ ವಿಶ್ವರೂಪವು ನಿನಗೆ ತೋರಿಸುವುದು. ಚರಾಚರವಾದ್ದೆಲ್ಲವೂ ಸಂಪೂರ್ಣವಾಗಿ ಒಂದು ಸ್ಥಳದಲ್ಲಿ ಇಲ್ಲಿವೆ.
ಭಾವಾರ್ಥ: ಒಂದು ಸ್ಥಳದಲ್ಲಿ ಕುಳಿತು ಯಾರೂ ಇಡೀ ವಿಶ್ವವನ್ನು ಕಾಣಲಾರರು. ಅತ್ಯಂತ ಮುಂದುವರಿದ ವಿಜ್ಞಾನಿಯೂ ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವುದನ್ನು ಕಾಣಲಾರ. ಆದರೆ ಅರ್ಜುನನಂತಹ ಭಕ್ತನು ವಿಶ್ವದ ಯಾವುದೇ ಭಾಗದಲ್ಲಿರುವ ಏನನ್ನಾದರೂ ಕಾಣಬಲ್ಲ. ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳಲ್ಲಿ ಅವನು ಕಾಣಲು ಬಯಸುವ ಏನನ್ನೇ ಆದರೂ ಕಾಣುವ ಶಕ್ತಿಯನ್ನು ಕೃಷ್ಣನು ಅವನಿಗೆ ಕೊಡುತ್ತಾನೆ. ಹೀಗೆ ಕೃಷ್ಣನ ದಯೆಯಿಂದ ಅರ್ಜುನನು ಎಲ್ಲವನ್ನೂ ನೋಡಬಲ್ಲವನಾಗುತ್ತಾನೆ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 9
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ |
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ||9||
ಅನುವಾದ: ಸಂಜಯನು ಹೇಳಿದನು - ರಾಜನೆ, ಮಹಾ ಯೋಗೀಶ್ವರನು, ದೇವೋತ್ತಮ ಪುರುಷನು, ಹೀಗೆ ಹೇಳಿ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)