logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರದ್ಧೆಯಿಲ್ಲದ ಮನುಷ್ಯನ ಭಕ್ತಿಮಾರ್ಗ ಕಠಿಣವಾಗಿರುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಶ್ರದ್ಧೆಯಿಲ್ಲದ ಮನುಷ್ಯನ ಭಕ್ತಿಮಾರ್ಗ ಕಠಿಣವಾಗಿರುತ್ತೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 22, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಶ್ರದ್ಧೆಯಿಲ್ಲದ ಮನುಷ್ಯನ ಭಕ್ತಿಮಾರ್ಗ ಕಠಿಣವಾಗಿರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 3ನೇ ಶ್ಲೋಕದಲ್ಲಿ ಓದಿ. 
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 3

ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರನ್ತಪ |

ಅಪ್ರಾಪ್ಯ ಮಾಂ ನಿವರ್ತನ್ತೇ ಮೃತ್ಯಸಂಸಾರವರ್ತ್ಮನಿ ||3||

ಅನುವಾದ: ಶತ್ರುಸಂಹಾರಕನಾದ ಅರ್ಜುನನೇ, ಈ ಭಕ್ತಿಸೇವೆಯಲ್ಲಿ ಶ್ರದ್ಧಾವಂತರಲ್ಲದವರು ನನ್ನನ್ನು ಪಡೆಯಲಾರರು. ಆದುದರಿಂದ ಅವರು ಈ ಐಹಿಕ ಜಗತ್ತಿನಲ್ಲಿ ಜನನ-ಮರಣಗಳ ಮಾರ್ಗಕ್ಕೆ ಹಿಂದಿರುಗುವರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಶ್ರದ್ಧೆ ಇಲ್ಲದವರು ಈ ಭಕ್ತಿಸೇವೆಯ ಪ್ರಕ್ರಿಯೆಯನ್ನು ಸಾಧಿಸಲಾರರು. ಇದೇ ಶ್ಲೋಕದ ಸಾರಾಂಶ. ಭಕ್ತರ ಸಹವಾಸದಿಂದ ಶ್ರದ್ಧೆಯು ಹುಟ್ಟುತ್ತದೆ. ಮಹಾತ್ಮರಿಂದ ವೈದಿಕ ಸಾಹಿತ್ಯದ ಎಲ್ಲ ಸಾಕ್ಷ್ಯವನ್ನು ಕೇಳಿಯೂ ದುರದೃಷ್ಟವಂತರಿಗೆ ದೇವರಲ್ಲಿ ಶ್ರದ್ಧೆಯು ಬರುವುದಿಲ್ಲ. ಅವರ ಅರೆಮನಸ್ಸಿನವರು ಮತ್ತು ಪ್ರಭುವಿನ ಭಕ್ತಿಸೇವೆಯಲ್ಲಿ ಸ್ಥಿರವಾಗಿರಲಾರರು. ಹೀಗೆ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯು ಶ್ರದ್ಧೆಯು ಒಂದು ಬಹು ಮುಖ್ಯ ಅಂಶ. ಪರಮ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯಲು ಶ್ರದ್ಧೆಯು ಒಂದು ಬಹು ಮುಖ್ಯ ಅಂಶ. ಪರಮ ಪ್ರಭುವಾದ ಕೃಷ್ಣನನ್ನು ಸೇವಿಸಿದರೆ ಸಾಕು, ಮನುಷ್ಯನು ಎಲ್ಲ ಪರಿಪೂರ್ಣತೆಯನ್ನು ಸಾಧಿಸಬಹುದು ಎಂಬ ಪೂರ್ಣ ದೃಢನಂಬಿಕೆಯೇ ಶ್ರದ್ಧೆ ಎಂದು ಚೈತನ್ಯ ಪರಿತಾಮೃತದಲ್ಲಿ ಹೇಳಿದೆ. ಅದೇ ನಿಜವಾದ ಶ್ರದ್ಧೆ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ (4.31.14) -

ಯಥಾ ತರೋರ್ ಮೂಲನಿಷೇಚನೇನ

ತೃಪ್ಯನ್ತಿ ತತ್ಸ್ಕನ್ಧಭುಜೋಪಶಾಖಾಃ |

ಪ್ರಾಣೋಪಹಾರಾಚ್ಚ ಯಥೇನ್ದ್ರಿಯಾಣಾಂ

ತಥೈವ ಸರ್ವಾರ್ಹಣಮ್ ಅತ್ಯುತೇಜ್ಯಾ ||

ಮರದ ಬೇರಿಗೆ ನೀರನ್ನು ಹಾಕಿ ಮನುಷ್ಯನು ಅದರ ಕೊಂಬೆಗಳನ್ನು, ಸಣ್ಣ ಶಾಖೆಗಳನ್ನು ಮತ್ತು ಎಲೆಗಳನ್ನು ತೃಪ್ತಿಪಡಿಸುತ್ತಾನೆ. ಹೊಟ್ಟೆಗೆ ಆಹಾರವನ್ನು ಕೊಟ್ಟು ಮನುಷ್ಯನು ದೇಹದ ಎಲ್ಲ ಇಂದ್ರಿಯಗಳನ್ನು ತೃಪ್ತಿಪಡಿಸುತ್ತಾನೆ. ಇದೇ ರೀತಿಯಲ್ಲಿ ಪರಮ ಪ್ರಭುವಿನ ದಿವ್ಯಸೇವೆಯಲ್ಲಿ ತೊಡಗಿದ ಮನುಷ್ಯನು ಎಲ್ಲ ದೇವತೆಗಳನ್ನು ಹಾಗೂ ಇತರ ಎಲ್ಲ ಜೀವಿಗಳನ್ನು ತೃಪ್ತಿಪಡಿಸುತ್ತಾನೆ. ಆದುದರಿಂದ ಭಗವದ್ಗೀತೆಯನ್ನು ಓದಿದವನು ವಿಳಂಬವಿಲ್ಲದೆ ಭಗವದ್ಗೀತೆಯ ನಿರ್ಣಯಕ್ಕೇ ಬರಬೇಕು. ಮನುಷ್ಯನು ಬೇರಾವುದರಲ್ಲಿಯೂ ತೊಡಗದೆ ದೇವೋತ್ತಮ ಪುರುಷನಾದ ಪರಮ ಪ್ರಭು ಕೃಷ್ಣನ ಸೇವೆಯನ್ನು ಕೈಗೊಳ್ಳಬೇಕು. ಈ ಜೀವನ ಸಿದ್ಧಾಂತವನ್ನು ಮನಗಂಡರೆ ಅದೇ ಶ್ರದ್ಧೆ.

ಈ ಶ್ರದ್ಧೆಯ ಬೆಳವಣಿಗೆಯೇ ಕೃಷ್ಣಪ್ರಜ್ಞೆಯ ಪ್ರಕ್ರಿಯೆ. ಕೃಷ್ಣಪ್ರಜ್ಞೆ ಇರುವವರಲ್ಲಿ ಮೂರು ವರ್ಗಗಳು. ಶ್ರದ್ಧೆಯಿಲ್ಲದವರು ಮೂರನೆಯ ವರ್ಗದವರು. ಅವರು ಔಪಚಾರಿಕವಾಗಿ ಭಕ್ತಿಸೇವೆಯಲ್ಲಿ ತೊಡಗಿದ್ದರೂ ಅತ್ಯುನ್ನತ ಪರಿಪೂರ್ಣ ಹಂತವನ್ನು ಮುಟ್ಟಲಾರರು. ಪ್ರಾಯಶಃ ಸ್ವಲ್ಪ ಕಾಲವಾದ ಮೇಲೆ ಅವರು ಜಾರಿಹೋಗುತ್ತಾರೆ. ಅವರು ಕೆಲಸದಲ್ಲಿ ತೊಡಗಿರಬಹುದು. ಆದರೆ ಅವರಿಗೆ ಪೂರ್ಣವಾಗಿ ದೃಢನಂಬಿಕೆಯಾಗಲೀ ಶ್ರದ್ಧೆಯಾಗಲೀ ಇಲ್ಲ. ಆದುದರಿಂದ ಅವರಿಗೆ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯುವುದು ಕಷ್ಟ. ನಮ್ಮ ಧಾರ್ಮಿಕ ಪ್ರಸಾರ ಕಾರ್ಯಗಳಲ್ಲಿ ನಮಗೆ ಇದರ ವಾಸ್ತವ ಅನುಭವವಿದೆ.

ಕೆಲವರು ಬಂದು ಕೃಷ್ಣಪ್ರಜ್ಞೆಯಲ್ಲಿ ನಿರತರಾಗುತ್ತಾರೆ. ಅವರ ನಿಜವಾದ ಉದ್ದೇಶವನ್ನು ಬಚ್ಚಿಟ್ಟಿರುತ್ತಾರೆ. ಆರ್ಥಿಕವಾಗಿ ಅವರ ಸ್ಥಿತಿ ಸ್ವಲ್ಪ ಉತ್ತಮಗೊಳ್ಳುತ್ತಲೇ ಈ ಪ್ರಕ್ರಿಯೆಯನ್ನು ಬಿಟ್ಟು ತಮ್ಮ ಹಿಂದಿನ ರೀತಿಗಳನ್ನು ಪ್ರಾರಂಭಿಸುತ್ತಾರೆ. ಶ್ರದ್ಧೆಯಿಂದ ಮಾತ್ರ ಕೃಷ್ಣಪ್ರಜ್ಞೆಯಲ್ಲಿ ಮುನ್ನಡೆಯಲು ಸಾಧ್ಯ. ಶ್ರದ್ಧೆಯ ಮಾತು ಹೇಳುವುದಾದರೆ, ಭಕ್ತಿಸಾಹಿತ್ಯವನ್ನು ಚೆನ್ನಾಗಿ ಅರಿತು ದೃಢಭಕ್ತಿಯ ಘಟ್ಟಕ್ಕೆ ಬಂದವನನ್ನು ಕೃಷ್ಟಪ್ರಜ್ಞೆಯಲ್ಲಿ ಪ್ರಥಮ ತರಗತಿಯ ಮನುಷ್ಯ ಎಂದು ಕರೆಯಲಾಗುತ್ತದೆ. ಭಕ್ತಿಯ ಪವಿತ್ರಗ್ರಂಥಗಳ ತಿಳವಳಿಕೆಯಲ್ಲಿ ಹೆಚ್ಚು ಮುಂದುವರಿಯದೆ ಇದ್ದರೂ ಕೃಷ್ಣಪ್ರಜ್ಞೆಯೇ ಅತಿಶ್ರೇಷ್ಠ ಮಾರ್ಗ ಎಂದು ಸಹಜವಾಗಿಯೇ ದೃಢನಂಬಿಕೆ ಇದ್ದು ನಿಷ್ಠೆಯಿಂದ ಇದನ್ನು ಆರಿಸಿಕೊಂಡವರು ಎರಡನೆಯ ವರ್ಗದವರು. ಇವರು ಮೂರನೆಯ ವರ್ಗದವರಿಗಿಂತ ಉತ್ತಮ. ಮೂರನೆಯ ವರ್ದವರಿಗೆ ಧರ್ಮಗ್ರಂಥಗಳ ಪರಿಪೂರ್ಣ ಜ್ಞಾನವೂ ಇಲ್ಲ ನಿಷ್ಠೆಯೂ ಇಲ್ಲ, ಆದರೆ ಸಹವಾಸದಿಂದ ಮತ್ತು ಸ್ವಭಾವದ ಸರಳತೆಯಿಂದ ಇತರರನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಮೂರನೆಯ ತರಗತಿಯವನು ಕೆಳಕ್ಕೆ ಬೀಳಬಹುದು. ಎರಡನೆಯ ವರ್ಗದವನು ಬೀಳವುವುದಿಲ್ಲ.

ಪ್ರಥಮ ತರಗತಿಯವನು ಬೀಳುವ ಸಾಧ್ಯತೆಯೇ ಇಲ್ಲ. ಮೊದಲನೆಯ ತರಗತಿಯವನು ನಿಶ್ಚಯವಾಗಿಯೂ ಪ್ರಗತಿ ಹೊಂದಿ ಕಡೆಯಲ್ಲಿ ಫಲಿತಾಂಶವನ್ನು ಸಾಧಿಸುತ್ತಾನೆ. ಕೃಷ್ಣಪ್ರಜ್ಞೆಯಲ್ಲಿ ಮೂರನೆಯ ವರ್ಗದವನನ್ನು ಕುರಿತು ಹೇಳವುದಾದರೆ, ಕೃಷ್ಣನ ಭಕ್ತಿಸೇವೆಯು ಬಹಳ ಒಳ್ಳೆಯದು ಎಂಬ ದೃಢನಂಬಿಕೆಯಲ್ಲಿ ಶ್ರದ್ಧೆ ಇದ್ದರೂ ಅವನು ಶ್ರೀಮದ್ಭಾಗವತ ಮತ್ತು ಭಗವದ್ಗೀತೆಯಂತಹ ಪವಿತ್ರಗ್ರಂಥಗಳ ಮೂಲಕ ಕೃಷ್ಣನ ಬಗ್ಗೆ ಸಾಕಷ್ಟು ತಿಳಿವಳಿಕೆಯನ್ನು ಪಡೆದಿರುವುದಿಲ್ಲ. ಕೆಲವೊಮ್ಮೆ ಈ ಮೂರನೆಯ ವರ್ಗದ ಜನರಿಗೆ ಕರ್ಮಯೋಗ ಮತ್ತು ಜ್ಞಾನಯೋಗಗಳತ್ತ ಒಲವು ಇರುತ್ತದೆ. ಒಮ್ಮೆಮ್ಮೆ ಅವರು ಮಾನಸಿಕ ಅಶಾಂತಿಗೆ ಒಳಗಾಗುತ್ತಾರೆ. ಆದರೆ ಕರ್ಮಯೋಗ ಅಥವಾ ಜ್ಞಾನಯೋಗದ ಕಲ್ಮಷದ ಸೋಂಕು ನಿವಾರಣೆಯಾಗುತ್ತಲೇ ಅವರು ಕೃಷ್ಣಪ್ರಜ್ಞೆಯಲ್ಲಿ ಎರಡನೆಯ ವರ್ಗದ ಅಥವಾ ಮೊದಲನೆಯ ವರ್ಗದ ಭಕ್ತರಾಗುತ್ತಾರೆ.

ಕೃಷ್ಣನಲ್ಲಿ ಶ್ರದ್ಧೆಯನ್ನೂ ಮೂರು ವರ್ಗಗಳಾಗಿ ವಿಂಗಡಿಸಿದೆ. ಇದನ್ನು ಶ್ರೀಮದ್ಭಾಗವತದಲ್ಲಿ ವರ್ಣಿಸಿದೆ. ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ ಮೊದಲನೆಯ, ಎರಡನೆಯ ಮತ್ತು ಮೂರನೆಯ ವರ್ಗಗಳ ಆಸಕ್ತಿಯನ್ನು ವಿವರಿಸಿದೆ. ಕೃಷ್ಣನ ವಿಷಯವನ್ನೂ, ಭಕ್ತಿಮಾರ್ಗದ ಶ್ರೇಷ್ಠತೆಯನ್ನೂ ಕೇಳಿಯೂ ಶ್ರದ್ಧಯಿಲ್ಲದವರು ಮತ್ತು ಇದೆಲ್ಲ ಬರಿಯ ಹೊಗಳಿಕೆ ಎಂದು ಭಾವಿಸುವವರು ಇರುತ್ತಾರೆ. ಅಂತಹವರು ಭಕ್ತಿಮಾರ್ಗದಲ್ಲಿ ನಡೆದರೂ ಅವರಿಗೆ ಅದು ಕಠಿಣವಾಗುತ್ತದೆ. ಅವರಿಗೆ ಪರಿಪೂರ್ಣತೆಯನ್ನು ಸಾಧಿಸುವ ಭರವಸೆ ಅತ್ಯಲ್ಪವಾದುದಾಗಿದೆ. ಹೀಗೆ ಭಕ್ತಿಸೇವೆಯನ್ನು ಸಲ್ಲಿಸಲು ಶ್ರದ್ಧೆಯು ಅತಿ ಮುಖ್ಯ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ