logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕೃಷ್ಣನು ಅರ್ಜುನನ ಈ ಮನೋಧರ್ಮವನ್ನು ಖಂಡಿಸಲು ಇದೇ ಕಾರಣ; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಕೃಷ್ಣನು ಅರ್ಜುನನ ಈ ಮನೋಧರ್ಮವನ್ನು ಖಂಡಿಸಲು ಇದೇ ಕಾರಣ; ಗೀತೆಯಲ್ಲಿನ ಅರ್ಥ ಹೀಗಿದೆ

HT Kannada Desk HT Kannada

Nov 03, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕೃಷ್ಣನು ಅರ್ಜುನನ ಮನೋಧರ್ಮವನ್ನು ಖಂಡಿಸಲು ಕಾರಣವೇನು ಎಂಬುದನ್ನು ತಿಳಿಯಿರಿ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ದೇಹೀ ನಿತ್ಯಮವಧ್ಯೋಯಂ ದೇಹೇ ಸರ್ವಸ್ಯ ಭಾರತ |

ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||30||

ಭರತವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀವು ಯಾವ ಜೀವಿಗಾಗಿಯೂ ದುಃಖಿಸುವ ಕಾರಣವಿಲ್ಲ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅವಿಕಾರಿಯಾದ ಆತ್ಮವನ್ನು ಕುರಿತ ಬೋಧನೆಯ ಅಧ್ಯಾಯವನ್ನು ಭಗವಂತನು ಈಗ ಮುಕ್ತಾಯಗೊಳಿಸುತ್ತಾನೆ. ನಿತ್ಯವಾದ ಆತ್ಮವನ್ನು ಹಲವು ವಿಧಗಳಲ್ಲಿ ವರ್ಣಿಸಿ ಶ್ರೀಕೃಷ್ಣನು ಆತ್ಮಕ್ಕೆ ಸಾವಿಲ್ಲ ಮತ್ತು ದೇಹವು ಅಶಾಶ್ವತ ಎನ್ನುವುದನ್ನು ತೋರಿಸಿಕೊಡುತ್ತಾನೆ. ಆದುದರಿಂದ ಕ್ಷತ್ರಿಯನಾದ ಅರ್ಜುನನು ತನ್ನ ತಾತ ಮತ್ತು ಗುರುಗಳು - ಭೀಷ್ಮ ಮತ್ತು ದ್ರೋಣರು - ಸಾಯುತ್ತಾರೆ ಎಂಬ ಭಯದಿಂದ ಕರ್ತವ್ಯಚ್ಯುತನಾಗಬಾರದು.

ಶ್ರೀಕೃಷ್ಣನ ಅಧಿಕಾರವಾಣಿಯಿಂದ ನಾವು ಕಲಿಯಬೇಕಾದದ್ದು ಆತ್ಮವೇ ಇಲ್ಲ ಎನ್ನುವುದಲ್ಲ; ಐಹಿಕ ಬೆಳವಣಿಗೆಯ ಒಂದು ನಿರ್ದಿಷ್ಟ ಘಟ್ಟದಲ್ಲಿ ರಾಸಾಯನಿಕ ವಸ್ತುಗಳ ಪರಸ್ಪರ ಕ್ರಿಯೆಯಿಂದ ಜೀವನದ ಲಕ್ಷಣಗಳು ಸೃಷ್ಟಿಯಾಗುತ್ತವೆ ಎಂದೂ ಅಲ್ಲ; ಆದರೆ ಐಹಿಕ ದೇಹದಿಂದ ಭಿನ್ನವಾದ ಆತ್ಮವಿದೆ ಎಂದು ನಂಬಬೇಕು. ಆತ್ಮವು ನಿತ್ಯವಾದದು ಎಂದ ಮಾತ್ರಕ್ಕೆ ಹಿಂಸೆಗೆ ಉತ್ಸಾಹವನ್ನು ಅದು ಕುಗ್ಗಿಸುವುದಿಲ್ಲ. ಆದರೆ ಆ ಅಗತ್ಯವನ್ನು ಭಗವಂತನ ಸಮ್ಮತಿಗೆ ಅನುಗುಣವಾಗಿ ನಿರ್ಧರಿಸಬೇಕಲ್ಲದೆ ಮನಸ್ಸು ಬಂದಂತಲ್ಲ.

ಯಾದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ |

ಸುಖಿನಃ ಕ್ಷತ್ರಿಯಾಃ ಪಾರ್ಥ ಲಭನ್ತೇ ಯುದ್ಧವೀದೃಶಮ್ ||32||

ಹೇ ಪಾರ್ಥ, ಇಂತಹ ಯುದ್ಧ ಮಾಡುವ ಅವಕಾಶಗಳು ತಾವಾಗಿ ಬಂದು ಸ್ವರ್ಗಲೋಕದ ಬಾಗಿಲುಗಳನ್ನು ಯಾವ ಕ್ಷತ್ರಿಯರಿಗಾಗಿ ತೆರೆಯುತ್ತದೆಯೋ ಅಂತಹ ಕ್ಷತ್ರಿಯರು ಸುಖಿಗಳು.

ಅರ್ಜುನನು, ಈ ಹೋರಾಟದಲ್ಲಿ ನನಗೆ ಯಾವ ಒಳಿತೂ ಕಾಣುವುದಿಲ್ಲ. ಇದು ನರಕದಲ್ಲಿ ನಿತ್ಯವಾಸವನ್ನು ಉಂಟುಮಾಡುತ್ತದೆ ಎಂದು ಹೇಳಿದ. ಜಗತ್ತಿನ ಪರಮಗುರುವಾಗಿ ಕೃಷ್ಣನು ಅರ್ಜುನನ ಈ ಮನೋಧರ್ಮವನ್ನು ಖಂಡಿಸುತ್ತಾನೆ. ಅರ್ಜುನನ ಇಂತಹ ಮಾತುಗಳು ಅಜ್ಞಾನದಿಂದ ಮಾತ್ರ ಬಂದವು. ಸ್ವರ್ಧಮಪಾಲನೆಯಲ್ಲಿ ಅವನು ಅಹಿಂಸೆಯಿಂದ ನಡೆದುಕೊಳ್ಳಲು ಬಯಸಿದ. ಕ್ಷತ್ರಿಯನು ಯುದ್ಧಭೂಮಿಯಲ್ಲಿದ್ದು ಅಹಿಂಸೆಯಿಂದ ನಡೆದುಕೊಳ್ಳುವುದೆಂದರೆ ಅದು ಮೂರ್ಖರ ಸಿದ್ಧಾಂತ. ಮಹರ್ಷಿಯೂ ವ್ಯಾಸದೇವರ ತಂದೆಯೂ ಆದ ಪರಾಶರರು ರಚಿಸಿದ ಪರಾಶರಸ್ಮೃತಿ ಯಲ್ಲಿ ಹೀಗೆ ಹೇಳಿದೆ -

ಕ್ಷತ್ರಿಯೋ ಹಿ ಪ್ರಜಾ ರಕ್ಷನ್ ಶಸ್ತ್ರಪಾಣಿಃ ಪ್ರದಣ್ಣಯನ್ |

ನಿರ್ಜಿತ್ಯಪರಸೈನ್ಯಾದಿ ಕ್ಷಿತಿಂ ಧರ್ಮೇಣ ಪಾಲಯೇತ್ ||

ಪ್ರಜೆಗಳನ್ನು ಎಲ್ಲ ಬಗೆಯ ಕಷ್ಟಗಳಿಂದ ರಕ್ಷಿಸುವುದೇ ಕ್ಷತ್ರಿಯ ಧರ್ಮ. ಆದುದರಿಂದ ಅವನು ಶಾಸನ ಮತ್ತು ವ್ಯವಸ್ಥೆಗಳಿಗೆ ಸಂಬಂಧಿಸಿದ ಪ್ರಸಂಗಗಳಲ್ಲಿ ಸೂಕ್ತವಾಗಿ ಹಿಂಸೆಯನ್ನು ಬಳಸಬೇಕು. ಶತ್ರುರಾಜರ ಸೈನ್ಯಗಳನ್ನು ಆತನು ಗೆಲ್ಲಬೇಕು. ಹೀಗೆ ಧಾರ್ಮಿಕ ತತ್ವಗಳಿಗೆ ಅನುಗುಣವಾಗಿ ಪ್ರಪಂಚವನ್ನು ಆಳಬೇಕು.

ಎಲ್ಲ ದೃಷ್ಟಿಕೋನಗಳಿಂದಲೂ ಅರ್ಜುನನು ಯುದ್ಧಮಾಡದೆ ಇರುವುದಕ್ಕೆ ಕಾರಣವೇ ಇಲ್ಲ. ಅವನು ಶತ್ರುವನ್ನು ಸೋಲಿಸಿದರೆ ರಾಜ್ಯವನ್ನು ಅನುಭಿಸಬಹುದು. ಯುದ್ಧದಲ್ಲಿ ಸತ್ತರೆ ಅವನು ಸ್ವರ್ಗಲೋಕಕ್ಕೆ ಏರುತ್ತಾನೆ. ಅದರ ಬಾಗಿಲುಗಳು ಅವನಿಗಾಗಿ ತೆರೆದುಕೊಂಡಿವೆ. ಏನೇ ಆದರೂ ಯುದ್ಧ ಮಾಡುವುದರಿಂದ ಅವನಿಗೆ ಲಾಭವೇ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ