logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತನು ಕೃಷ್ಣನನ್ನು ಬಿಟ್ಟು ಬೇರೆ ಯಾವ ರೂಪದಲ್ಲೂ ಆತನನ್ನ ಕಾಣಲು ಇಷ್ಟ ಪಡುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಕ್ತನು ಕೃಷ್ಣನನ್ನು ಬಿಟ್ಟು ಬೇರೆ ಯಾವ ರೂಪದಲ್ಲೂ ಆತನನ್ನ ಕಾಣಲು ಇಷ್ಟ ಪಡುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Jun 22, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಕ್ತನು ಕೃಷ್ಣನನ್ನು ಬಿಟ್ಟು ಬೇರೆ ಯಾವ ರೂಪದಲ್ಲೂ ಆತನನ್ನ ಕಾಣಲು ಇಷ್ಟ ಪಡುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ ಶ್ಲೋಕ 8 ರಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 8

ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ |

ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ||8||

ಅನುವಾದ: ಆದರೆ ನೀನು ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ಕಾಣಲಾರೆ. ಆದುದರಿಂದ ನಿನಗೆ ದಿವ್ಯವಾದ ಕಣ್ಣುಗಳನ್ನು ಕೊಡುತ್ತೇನೆ. ನನ್ನ ಐಶ್ವರ್ಯಯೋಗವನ್ನು ನೋಡು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಶುದ್ಧಭಕ್ತನು ಎರಡು ಕೈಗಳಿರುವ ಕೃಷ್ಣನನ್ನು ಬಿಟ್ಟು ಬೇರೆ ಯಾವ ರೂಪದಲ್ಲೂ ಅವನನ್ನು ಕಾಣಲು ಇಷ್ಟ ಪಡುವುದಿಲ್ಲ. ಭಕ್ತನು ತನ್ನ ಮನಸ್ಸಿನಿಂದ ಅವನ ವಿಶ್ವರೂಪವನ್ನು ಕಾಣಲಾರ, ಅವನ ಕೃಪೆಯಿಂದ ಮತ್ತು ದಿವ್ಯವಾದ ಕಣ್ಣುಗಳಿಂದ ಮಾತ್ರ ಕಾಣಬಲ್ಲ. ಕೃಷ್ಣನ ವಿಶ್ವರೂವನ್ನು ನೋಡಲು ಅರ್ಜುನನು ಬದಲಾಯಿಸಬೇಕಾದದ್ದು ಅವನ ಮನಸ್ಸನ್ನಲ್ಲ. ಅವನ ಕಣ್ಣುಗಳನ್ನು. ಕೃಷ್ಣನ ವಿಶ್ವರೂಪವು ಅಷ್ಟೇನೂ ಮುಖ್ಯವಾದದ್ದಲ್ಲ. ಇದು ಮುಂದಿನ ಶ್ಲೋಕಗಳಲ್ಲಿ ಸ್ಪಷ್ಟವಾಗುತ್ತದೆ. ಆದರೆ ಅರ್ಜುನನು ಅದನ್ನು ನೋಡಲು ಬಯಸಿದುದರಿಂದ, ವಿಶ್ವರೂಪವನ್ನು ನೋಡಲು ಅಗತ್ಯವಾದ ವಿಶಿಷ್ಟ ದೃಷ್ಟಿಯನ್ನು ಪ್ರಭುವು ಅವನಿಗೆ ಕೊಡುತ್ತಾನೆ (Bhagavad Gita Updesh in Kannada).

ಕೃಷ್ಣನೊಡನೆ ಅಧ್ಯಾತ್ಮಿಕ ಸಂಬಂಧದಲ್ಲಿ ಸರಿಯಾದ ರೀತಿಯಲ್ಲಿ ನೆಲೆಗೊಂಡವರು ಆಕರ್ಷಿತರಾಗುವುದು ಪ್ರೇಮಮಯ ಲಕ್ಷಣಗಳಿಂದ, ವೈವಹೀನವಾದ ಸಿರಿಗಳ ಪ್ರದರ್ಶನದಿಂದಲ್ಲ. ಕೃಷ್ಣನೊಡನೆ ಆಟವಾಡಿದವರು, ಕೃಷ್ಣನ ಸ್ನೇಹಿತರು ಮತ್ತು ಕೃಷ್ಣನ ತಂದೆ ತಾಯಿಯರು, ಕೃಷ್ಣನು ತನ್ನ ಸಿರಿಗಳನ್ನು ತೋರಿಸಬೇಕೆಂದು ಎಂದೂ ಬಯಸಲಿಲ್ಲ. ಅವರು ಪರಿಶುದ್ಧ ಪ್ರೇಮದಲ್ಲಿ ಎಷ್ಟು ತನ್ಮಯರಾಗಿದ್ದಾರೆಂದರೆ ಅವರಿಗೆ ಕೃಷ್ಣನು ದೇವೋತ್ತಮ ಪರಮ ಪುರುಷ ಎನ್ನುವುದೂ ತಿಳಿಯದು.

ತಮ್ಮ ಪ್ರೇಮ ವಿನಿಮಯದಲ್ಲಿ ಕೃಷ್ಣನು ಪರಮ ಪ್ರಭು ಎನ್ನುವುದನ್ನು ಅವರು ಮರೆಯುತ್ತಾರೆ. ಕೃಷ್ಣನೊಡನೆ ಆಡುವ ಬಾಲಕರು ಬಹು ಪುಣ್ಯ ಜೀವಿಗಳು ಮತ್ತು ಅನೇಕಾನೇಕ ಜನ್ಮಗಳ ಅನಂತರ ಅವರಿಗೆ ಕೃಷ್ಣನೊಡನೆ ಹಾಗೆ ಕ್ರೀಡಿಸಲು ಸಾಧ್ಯವಾಗಿದೆ ಎಂದು ಶ್ರೀಮದ್ಭಾಗವತದಲ್ಲಿ ಹೇಳಿದೆ. ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಈ ಹುಡುಗರಿಗೆ ತಿಳಿಯದು. ಆತನನ್ನು ತಮ್ಮ ಸ್ನೇಹಿತ ಎಂದೇ ತಿಳಿಯುತ್ತಾರೆ. ಆದುದರಿಂದ ಶುಕಮುನಿಗಳು ಈ ಶ್ಲೋಕವನ್ನು ಹೇಳಿದ್ದಾರೆ-

ಇತ್ಥಂ ಸತಾಂ ಬ್ರಹ್ಮ ಸುಖಾನುಭೂತ್ಯಾ

ದಾಸ್ಯಂ ಗತಾನಾಂ ಪರದೈವತೇನ |

ಮಾಯಾಶ್ರಿತಾನಾಂ ನರದಾರಕೇಣ

ಸಾಕಂ ವಿಜಹ್ರುಃ ಕೃತಪುಣ್ಯಪುಂಜಾಃ ||

ಇವನು ಪರಮ ಪುರುಷ, ಮಹರ್ಷಿಗಳು ಇವನನ್ನು ನಿರಾಕಾರ ಬ್ರಹ್ಮನೆಂದು ಭಾವಿಸುತ್ತಾರೆ. ಭಕ್ತರು ಇವನನ್ನು ದೇವೋತ್ತಮ ಪರಮ ಪುರುಷ ಎಂದು ಭಾವಿಸುತ್ತಾರೆ. ಸಾಮಾನ್ಯ ಜನರು ಇವನನ್ನು ಭೌತಿಕ ಪ್ರಕೃತಿಯ ಸೃಷ್ಟಿ ಎಂದು ಭಾವಿಸುತ್ತಾರೆ. ತಮ್ಮ ಹಿಂದಿನ ಜನ್ಮಗಳಲ್ಲಿ ಅನೇಕಾನೇಕ ಪುಣ್ಯಕಾರ್ಯಗಳನ್ನು ಮಾಡಿರುವ ಈ ಬಾಲಕರು ಆ ದೇವೋತ್ತಮ ಪರಮ ಪುರುಷನೊಂದಿಗೆ ಆಟವಾಡುತ್ತಿದ್ದಾರೆ.

ವಾಸ್ತವಾಂಶವೆಂದರೆ ಭಕ್ತನಿಗೆ ವಿಶ್ವರೂಪವನ್ನು ನೋಡುವ ಆಸಕ್ತಿಯಿಲ್ಲ. ಆದರೆ ಕೃಷ್ಣನು ಕೇವಲ ವಿಚಾರ ಸರಣಿಯಲ್ಲಿ ಅಥವಾ ತಾತ್ವಿಕವಾಗಿ ತಾನು ಪರಮನೆಂದು ಹೇಳಿಕೊಳ್ಳಲಿಲ್ಲ. ವಾಸ್ತವವಾಗಿಯೇ ಆ ರೀತಿ ಅರ್ಜುನನಿಗೆ ಕಾಣಿಸಿಕೊಂಡ. ಇದನ್ನು ಭವಿಷ್ಯದ ಜನರು ಅರ್ಥಮಾಡಿಕೊಳ್ಳಬೇಕು. ಆ ಮೂಲಕ ಕೃಷ್ಣನ ಹೇಳಿಕೆಗಳಿಗೆ ಸಮರ್ಥನೆ ಬರಬೇಕು ಎಂದು ಅರ್ಜುನನು ಬಯಸಿದನು. ಅರ್ಜುನನು ಇದನ್ನು ದೃಢಪಡಿಸಿಕೊಳ್ಳಬೇಕು. ಏಕೆಂದರೆ ಅರ್ಜುನನು ಪರಂಪರಾ ಪದ್ಧತಿಯ ಪ್ರಾರಂಭ.

ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳಬೇಕೆಂದು ನಿಜವಾಗಿ ಆಸಕ್ತಿ ಇದ್ದು ಅರ್ಜುನನ ಹೆಜ್ಜೆಗಳಲ್ಲಿಯೇ ಹೆಜ್ಜೆಯಿಟ್ಟು ಅನುಸರಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಕೃಷ್ಣನು ವಾದದಲ್ಲಿ ಮಾತ್ರವೇ ತನ್ನನ್ನು ಪರಮನೆಂದು ಹೇಳಿಕೊಳ್ಳಲಿಲ್ಲ. ನಿಜವಾಗಿ ತನ್ನನ್ನು ಪರಮನೆಂದು ತೋರಿಸಿಕೊಂಡನು. ನಾವು ಆಗಲೇ ವಿವರಿಸಿರುವಂತೆ ಅರ್ಜುನನಿಗೆ ವಿಶ್ವರೂಪವನ್ನು ನೋಡಬೇಕೆಂದು ಅಷ್ಟೋನೂ ಅಪೇಕ್ಷೆ ಇರಲಿಲ್ಲ. ಇದು ಕೃಷ್ಣನಿಗೆ ತಿಳಿದಿತ್ತು. ಇದಕ್ಕಾಗಿ ಪ್ರಭುವು ತನ್ನ ವಿಶ್ವರೂಪವನ್ನು ನೋಡಲು ಅಗತ್ಯವಾದ ಶಕ್ತಿಯನ್ನು ಅರ್ಜುನನಿಗೆ ನೀಡಿದನು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ