logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನ ಅಧ್ಯಾತ್ಮಿಕ ಜ್ಞಾನಕ್ಕೆ ಆತ್ಮ ಮತ್ತು ದೇಹಗಳ ವ್ಯತ್ಯಾಸದ ಅರಿವು ಅಗತ್ಯ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯನ ಅಧ್ಯಾತ್ಮಿಕ ಜ್ಞಾನಕ್ಕೆ ಆತ್ಮ ಮತ್ತು ದೇಹಗಳ ವ್ಯತ್ಯಾಸದ ಅರಿವು ಅಗತ್ಯ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 18, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • ಮನುಷ್ಯನ ಅಧ್ಯಾತ್ಮಿಕ ಜ್ಞಾನಕ್ಕೆ ಆತ್ಮ, ದೇಹಗಳ ವ್ಯತ್ಯಾಸದ ಅರಿವು ಅಗತ್ಯ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಎರಡನೇ ಶ್ಲೋಕದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 2

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

ಜ್ಞಾನಂ ವಿಜ್ಞಾನಸಹಿತಂ ಯಜ್ಞ್‌ಜ್ಞಾತ್ವಾ ಮೋಕ್ಷ್ಯಸೇಶುಭಾತ್||2||

ಅನುವಾದ: ಇದು ರಾಜ್ಯವಿದ್ಯೆ. ಎಲ್ಲ ರಹಸ್ಯಗಳಲ್ಲಿ ಅತ್ಯಂತ ರಹಸ್ಯವಾದದ್ದು. ಇದು ಅತ್ಯಂತ ಪರಿಶುದ್ಧ ಜ್ಞಾನ. ಸಾಕ್ಷಾತ್ಕಾರದಿಂದ ಆತ್ಮದ ನೇರ ತಿಳಿವಳಿಕೆಯನ್ನು ಕೊಡುವುದರಿಂದ ಇದು ಧರ್ಮದ ಪರಿಪೂರ್ಣತೆ. ಇದು ಶಾಶ್ವತವಾದದ್ದು ಮತ್ತು ಸಂತೋಷದಿಂದ ಅನುಷ್ಠಾನ ಮಾಡವಂತಹದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಭಗವದ್ಗೀತೆಯ ಈ ಅಧ್ಯಾಯವನ್ನು ರಾಜವಿದ್ಯೆ ಎಂದು ಕರೆದಿದೆ. ಏಕೆಂದರೆ ಇದು ಹಿಂದೆ ಹೇಳಿದ ಎಲ್ಲ ಸಿದ್ಧಾಂತಗಳ ಮತ್ತು ತತ್ವ ಚಿಂತನೆಗಳ ಸಾರ. ಭಾರತ ಮುಖ್ಯ ತತ್ವಜ್ಞಾನಿಗಳಲ್ಲಿ ಗೌತಮ, ಕಾಣದ, ಕಪಿಲ, ಯಾಜ್ಞವಲ್ಕ್ಯ, ಶಾಂಡಿಲ್ಯ ಮತ್ತು ವೈಶ್ವಾನರರು ಇದ್ದಾರೆ. ಕಡೆಯಲ್ಲಿ ವೇದಾಂತ ಸೂತ್ರವನ್ನು ರಚಿಸಿದ ವ್ಯಾಸದೇವರಿದ್ದಾರೆ. ಆದದರಿಂದ ತತ್ವಜ್ಞಾನ ಅಥವಾ ಅಧ್ಯಾತ್ಮಿಕ ಜ್ಞಾನದಲ್ಲಿ ಜ್ಞಾನಕ್ಕೇನೂ ಕೊರತೆ ಇಲ್ಲ. ಈ ಒಂಬ್ಬತ್ತನೆಯ ಅಧ್ಯಾಯವು ಇಂತಹ ಎಲ್ಲ ವಿದ್ಯೆಯ ರಾಜ. ವೇದಗಳ ಮತ್ತು ವಿವಿಧ ಬಗೆಗಳ ತತ್ವಜ್ಞಾನದ ಅಧ್ಯಯನದಿಂದ ಪಡೆಯಬಹುದಾದ ಎಲ್ಲ ಜ್ಞಾನದ ತಿರುಳು ಎಂದು ಪ್ರಭುವು ಹೇಳುತ್ತಾನೆ. ಅದು ಅತ್ಯಂತ ರಹಸ್ಯವಾದದ್ದು. ಏಕೆಂದರೆ ರಹಸ್ಯವಾದ ಅಥವಾ ಅಧ್ಯಾತ್ಮಿಕ ಜ್ಞಾನಕ್ಕೆ ಆತ್ಮ ಮತ್ತು ದೇಹಗಳ ವ್ಯತ್ಯಾಸದ ಅರಿವು ಅಗತ್ಯ. ಶ್ರೇಷ್ಠವಾದ ರಹಸ್ಯವಿದ್ಯೆಯು ಭಕ್ತಿಸೇವೆಯಲ್ಲಿ ಶಿಖರವನ್ನು ತಲಪುತ್ತದೆ.

ಸಾಮಾನ್ಯವಾಗಿ ಜನರಿಗೆ ಈ ರಹಸ್ಯಜ್ಞಾನದಲ್ಲಿ ವಿದ್ಯಾಭ್ಯಾಸವು ದೊರೆಯುವುದಿಲ್ಲ. ಅವರಿಗೆ ಬಹಿರ್ವಿದ್ಯೆಯಲ್ಲಿ ಶಿಕ್ಷಣ ದೊರೆಯುತ್ತದೆ. ಸಾಮಾನ್ಯ ಶಿಕ್ಷಣದ ಮಟ್ಟಿಗೆ ಜನರು ರಾಜನೀತಿ ಶಾಸ್ತ್ರ, ಸಮಾಜ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಖಗೋಳಶಾಸ್ತ್ರ, ಶಿಲ್ಪಶಾಸ್ತ್ರ - ಹೀಗೆ ಹಲವಾರು ವಿಭಾಗಗಳಲ್ಲಿ ಶ್ರಮಿಸುತ್ತಾರೆ. ಪ್ರಪಂಚಾದ್ಯಂತ ಜ್ಞಾನದ ಹಲವು ಶಾಖೆಗಳಿವೆ ಮತ್ತು ಅನೇಕ ದೊಡ್ಡ ವಿಶ್ವವಿದ್ಯಾಲಯಗಳಿವೆ. ಆದರೆ ದುರದೃಷ್ಟದಿಂದ, ಚೇತನಾತ್ಮದ ಶಾಸ್ತ್ರವನ್ನು ಹೇಳಿಕೊಡುವ ಗಣನೀಯ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆ ಒಂದೂ ಇಲ್ಲ. ಆತ್ಮವೇ ದೇಹದ ಅತ್ಯಂತ ಮುಖ್ಯ ಭಾಗ. ಆತ್ಮವಿಲ್ಲದಿದ್ದರೆ ದೇಹವು ನಿಷ್ಟ್ರಯೋಜಕ. ಆದರೂ ಜನರು ಬದುಕಿನಲ್ಲಿ ದೇಹದ ಅಗತ್ಯಗಳಿಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ಬಹುಮುಖ್ಯವಾದ ಆತ್ಮದ ಕಡೆಗೆ ಅವರಿಗೆ ಗಮನವೇ ಇಲ್ಲ.

ಜ್ಞಾನದ ರಹಸ್ಯಭಾಗ ಯಾವುದು?

ಭಗವದ್ಗೀತೆಯು, ಮುಖ್ಯವಾಗಿ ಎರಡನೆಯ ಅಧ್ಯಾಯದಿಂದ, ಆತ್ಮದ ಮಹತ್ವವನ್ನು ಒತ್ತಿಹೇಳಿದೆ. ಪ್ರಾರಂಭದಲ್ಲಿಯೇ ಪ್ರಭುವು ದೇಹವು ನಾಶವಾಗುತ್ತದೆ, ಆತ್ಮಕ್ಕೆ ನಾಶವಿಲ್ಲ (ಅನ್ತವನ್ತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ) ಎಂದು ಹೇಳುತ್ತಾನೆ. ಚೇತನಾತ್ಮವು ಈ ದೇಹದಿಂದ ಭಿನ್ನ, ಸ್ವಾಭಾವದಿಂದ ನಿರ್ವಿಕಲ್ಪ, ನಾಶವಿಲ್ಲದ್ದು ಮತ್ತು ಶಾಶ್ವತವಾದದ್ದು ಎಂಬ ತಿಳಿವಳಿಕೆಯೇ ಜ್ಞಾನದ ರಹಸ್ಯಭಾಗ. ಆದರೆ ಇದು ಆತ್ಮವನ್ನು ಕುರಿತು ಇತ್ಯಾತ್ಮಕ ಜ್ಞಾನವೇನನ್ನೂ ಕೊಡುವುದಿಲ್ಲ.

ಆತ್ಮವು ದೇಹದಿಂದ ಬೇರೆ. ದೇಹವು ಮುಗಿದನಂತರ ಅಥವಾ ಮನುಷ್ಯನು ದೇಹದಿಂದ ಬಿಡುಗಡೆ ಹೊಂದಿದ ಮೇಲೆ ಆತ್ಮವು ಶ್ಯೂನ್ಯದಲ್ಲಿ ಉಳಿಯುತ್ತದೆ ಇಲ್ಲವೇ ನಿರಾಕಾರವಾಗುತ್ತದೆ ಎಂದು ಕೆಲವೊಮ್ಮೆ ಜನರು ಭಾವಿಸುತ್ತಾರೆ. ಆದರೆ ಇದು ವಾಸ್ತವವಲ್ಲ. ದೇಹದೊಳಗಿದ್ದಾಗ ಅಷ್ಟೊಂದು ಚಟುವಟಿಕೆಯಿಂದ ಇರುವ ಆತ್ಮವು ದೇಹದಿಂದ ಬಿಡುಗಡೆ ಹೊಂದಿದ ಮೇಲೆ ನಿಷ್ಕ್ರಿಯವಾಗುವುದು ಹೇಗೆ? ಅದು ಯಾವಾಗಲೂ ಚಟುವಟಿಕೆಯಿಂದ ಕೂಡಿದ್ದು. ಅದು ಶಾಶ್ವತವಾದರೆ, ಅದರ ಚಟುವಟಿಕೆಗಳೂ ಶಾಶ್ವತ. ಅಧ್ಯಾತ್ಮಿಕ ರಾಜ್ಯದಲ್ಲಿ ಅದರ ಚಟುವಟಿಕೆಗಳು ಅಧ್ಯಾತ್ಮಿಕ ಜ್ಞಾನದ ಅತ್ಯಂತ ರಹಸ್ಯ ಭಾಗ. ಆದುದರಿಂದ ಚೇತನಾತ್ಮದ ಈ ಚಟುವಟಿಕೆಗಳು ಎಲ್ಲ ವಿದ್ಯೆಯ ರಾಜ, ಎಲ್ಲ ಜ್ಞಾನದ ಅತ್ಯಂತ ರಹಸ್ಯ ಭಾಗ ಎಂದು ಇಲ್ಲಿ ಸೂಚಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ