logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ನಂಬಿಕೆಯನ್ನಿಟ್ಟು ದಿವ್ಯದರ್ಶನದಿಂದ ಭಗವಂತನನ್ನ ಕಾಣಬಹುದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯ ನಂಬಿಕೆಯನ್ನಿಟ್ಟು ದಿವ್ಯದರ್ಶನದಿಂದ ಭಗವಂತನನ್ನ ಕಾಣಬಹುದು; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Jul 18, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಮನುಷ್ಯ ನಂಬಿಕೆಯನ್ನಿಟ್ಟು ದಿವ್ಯದರ್ಶನದಿಂದ ಭಗವಂತನನ್ನ ಕಾಣಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ  54ನೇ ಮುಂದುವರಿದ ಭಾಗದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯಸ್ಯ ದೇವೇ ಪರಾ ಭಕ್ತಿರ್ ಯಥಾ ದೇವೇ ತಥಾ ಗುರೌ |

ತಸ್ಯೈತೇ ಕಥಿತಾ ಹ್ಯರ್ಥಾಃ ಪ್ರಕಾಶನ್ತೇ ಮಹಾತ್ಮನಃ ||

ಭಗವದ್ಗೀತೆಯ 11ನೇ ಅಧ್ಯಾಯ ವಿಶ್ವರೂಪದ 54ನೇ ಶ್ಲೋಕದ ಮುಂದಿರದ ಭಾಗದಲ್ಲಿ ಪರಮ ಪ್ರಭುವಿನಲ್ಲಿ ನಿಶ್ಚಲವಾದ ಭಕ್ತಿ ಇದ್ದು ತನ್ನ ಗುರುವಿನಲ್ಲಿಯೂ ಅಂತಹುದೇ ನಿಶ್ಚಲ ನಂಬಿಕೆಯನ್ನಿಟ್ಟ ಮನುಷ್ಯನು ದೇವೋತ್ತಮ ಪರಮ ಪುರುಷನನ್ನು ದಿವ್ಯದರ್ಶನದಿಂದ ಕಾಣಬಲ್ಲ. ಊಹಾತ್ಮಕ ಚಿಂತನೆಯಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿಜವಾದ ಗುರುವಿನ ಮಾರ್ಗದರ್ಶನದಲ್ಲಿ ವೈಯಕ್ತಿಕ ಶಿಕ್ಷಣವನ್ನು ಪಡೆಯದವನು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದನ್ನು ಪ್ರಾರಂಭ ಸಹ ಮಾಡಲಾರ. ತು ಎಂಬ ಪದವನ್ನು ಇಲ್ಲಿ ವಿಶೇಷ ಕಾಣರಕ್ಕೆ ಬಳಸಿದೆ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಬೇರೆ ಯಾವುದೇ ಪ್ರಕ್ರಿಯೆಯನ್ನು ಬಳಸಲು ಸಾಧ್ಯವಿಲ್ಲ. ಯಾವುದೇ ಸಲಹೆ ನೀಡಲು ಸಾಧ್ಯವಿಲ್ಲ ಅಥವಾ ಯಶಸ್ವಿಯಾಗುವುದೂ ಸಾಧ್ಯವಿಲ್ಲ ಎನ್ನುವುದನ್ನು ಸೂಚಿಸುವುದು ಇದರ ಉದ್ದೇಶ (Bhagavad Gita Updesh in Kannada).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಎರಡು ಕೈಗಳ ರೂಪ ಮತ್ತು ಚತುರ್ಭುಜ ರೂಪ - ಈ ಎರಡು ರೂಪ ಕೃಷ್ಣನ ವೈಯಕ್ತಿಕ ರೂಪಗಳು. ಅರ್ಜುನನಿಗೆ ತೋರಿದ ಅಲ್ಪಕಾಲದ ವಿಶ್ವರೂಪದಿಂದ ಭಿನ್ನವಾದವು. ನಾರಾಯಣನ ಚತುರ್ಭುಜ ರೂಪವು ಕೃಷ್ಣನ ಎರಡು ಕೈಗಳ ರೂಪವೂ ನಿತ್ಯವಾದವು ಮತ್ತು ದಿವ್ಯವಾದವು. ಆದರೆ ಅರ್ಜುನನಿಗೆ ತೋರಿದ ವಿಶ್ವರೂಪವು ತಾತ್ಕಾಲಿಕವಾದದ್ದು. ಸುದುರ್ದರ್ಶಮ್ ಎನ್ನುವ ಪದಕ್ಕೆ ನೋಡಲು ಕಷ್ಟವಾದದ್ದು ಎಂದು ಅರ್ಥ. ವಿಶ್ವರೂಪವನ್ನು ಯಾರೂ ಕಂಡಿರಲಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಭಕ್ತರ ನಡುವೆ ವಿಶ್ವರೂಪವನ್ನು ತೋರಲು ಅಗತ್ಯ ಇರಲಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತದೆ. ಈ ರೂಪವನ್ನು ಅರ್ಜುನನ ಪ್ರಾರ್ಥನೆಯಂತೆ ಕೃಷ್ಣನು ತೋರಿಸಿದನು. ಭವಿಷ್ಯದಲ್ಲಿ ಯಾರಾದರೂ ತಾನು ದೇವರ ಅವತಾರವೆಂದು ಹೇಳಿಕೊಂಡರೆ ಆತನು ವಿಶ್ವರೂಪವನ್ನು ತೋರಿಸುವಂತೆ ಜನರು ಕೇಳಬಹುದು. ಇದೇ ಕೃಷ್ಣನ ಉದ್ದೇಶ.

ಹಿಂದಿನ ಶ್ಲೋಕದಲ್ಲಿ ನ ಎನ್ನುವ ಪದವನ್ನು ಮತ್ತೆ ಮತ್ತೆ ಬಳಿಸಿದೆ. ವಿದ್ಯಾಸಂಸ್ಥೆಯಲ್ಲಿ ಕಲಿತ ವೇದ ಸಾಹಿತ್ಯದ ಪಾಂಡಿತ್ಯದಿಂದ ಮನುಷ್ಯನು ಬಹು ಹೆಮ್ಮೆ ಪಡಬಾರದು ಎನ್ನುವುದನ್ನು ಇದು ತೋರಿಸುತ್ತದೆ. ಮನುಷ್ಯನು ಕೃಷ್ಣನ ಭಕ್ತಿಸೇವೆಯಲ್ಲಿ ತೊಡಗಬೇಕು. ಆಗ ಮಾತ್ರ ಆತನು ಭಗವದ್ಗೀತೆಯ ವ್ಯಾಖ್ಯಾನವನ್ನು ಬರೆಯಲು ಪ್ರಯತ್ನಿಸಬಹುದು.

ಕೃಷ್ಣನು ವಿಶ್ವರೂಪದಿಂದ ನಾಲ್ಕು ಕೈಗಳ ನಾರಾಯಣ ರೂಪಕ್ಕೆ, ಅನಂತರ ಎರಡು ಕೈಗಳ ತನ್ನ ಸಹಜವಾದ ರೂಪಕ್ಕ ಬದಲಾವಣೆ ಮಾಡಿಕೊಳ್ಳುತ್ತಾನೆ. ವೇದ ಸಾಹಿತ್ಯದಲ್ಲಿ ಪ್ರಾಸ್ತಾಪಿಸಿರುವ ಚತುರ್ಭುಜ ರೂಪವೂ ಇತರ ಎಲ್ಲ ರೂಪಗಳೂ ಎರಡು ಕೈಗಳ ಮೂಲದ ಕೃಷ್ಣನ ರೂಪದಿಂದ ಮೂಡಿ ಬಂದವು ಎನ್ನುವುದನ್ನು ಇದು ತೋರಿಸುತ್ತದೆ. ಮೂಡಿಬರುವ ಎಲ್ಲದರ ಮೂಲವು ಅವನೇ. ನಿರಾಕಾರ ಪರಿಕಲ್ಪನೆಯ ವಿಷಯವಿರಲಿ, ಕೃಷ್ಣನು ಈ ರೂಪಗಳಿಂದ ಸಹ ಭಿನ್ನವಾದವನು. ಕೃಷ್ಣನ ಚತುರ್ಭುಜ ರೂಪಗಳನ್ನು ಕುರಿತು ಹೇಳುವಾಗ ಕೃಷ್ಣನ ಚತುರ್ಭುಜದ ಅತ್ಯಂತ ಸದೃಶ ರೂಪವು ಪರಮ ಪ್ರಭುವಿನ ವಿಸ್ತರಣೆ ಎಂದು ಹೇಳಲಾಗಿದೆ. (ವಿಶ್ವಸಾಗರದಲ್ಲಿ ಯಾರೂ ಪವಡಿಸಿರುವರೋ ಮತ್ತು ಯಾರ ಉಸಿರಾಟದಿಂದ ಅಸಂಖ್ಯಾತ ವಿಶ್ವಗಳು ಹೊರಕ್ಕೆ ಬರುತ್ತಿವೆಯೋ ಮತ್ತು ಒಳಕ್ಕೆ ಹೋಗುತ್ತಿವೆಯೋ ಅಂತಹ ರೂಪಕ್ಕೆ ಮಹಾ ವಿಷ್ಣು ಎಂದು ಹೆಸರು).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ