ಭಗವದ್ಗೀತೆ: ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು; ಕಟು ಸತ್ಯಕ್ಕೆ ಚಿಂತಿಸಿ ಪ್ರಯೋಜನವಿಲ್ಲ; ಗೀತೆಯಲ್ಲಿನ ಅರ್ಥ ಹೀಗಿದೆ
Oct 30, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು. ಕಟು ಸತ್ಯಕ್ಕೆ ದುಃಖಿಸಿ ಪ್ರಯೋಜನವಿಲ್ಲ ಎಂಬ ಗೀತೆಯಲ್ಲಿ ಅರ್ಥ ತಿಳಿಯಿರಿ.
ಅಥ ಚೈನಂ ನಿತ್ಯಾಜಾತಂ ನಿತ್ಯಂ ವಾ ಮನ್ಯಸೇ ಮೃತಮ್ |
ತಥಾಪಿ ತ್ವಂ ಮಹಾಬಾಹೋ ನೈನ್ಯಂ ಶೋಚಿತುಮರ್ಹಸಿ ||26||
ಆತ್ಮವು (ಅಥವಾ ಜೀವದ ಲಕ್ಷಣಗಳು) ಯಾವಾಗಲೂ ಹುಟ್ಟುತ್ತಿರುವುದೆಂದು ಯಾವಾಗಲೂ ಸಾಯುತ್ತಿರುವುದೆಂದು ನೀನು ಭಾವಿಸಿದರೂ, ಮಹಾಬಾಹುವೇ ನೀನು ಶೋಕಿಸಲು ಕಾರಣವಿಲ್ಲ.
ತಾಜಾ ಫೋಟೊಗಳು
ಬೌದ್ಧರಿಗೆ ಬಹು ಸಮೀಪವಾದ ತತ್ವಶಾಸ್ತ್ರಜ್ಞರ ವರ್ಗವೊಂದು ಸದಾ ಇರುತ್ತದೆ. ಇವರು ದೇಹವನ್ನು ಬಿಟ್ಟು ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವಿದೆ ಎಂದು ನಂಬುವುದಿಲ್ಲ. ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದಾಗ ಇಂತಹ ತತ್ವಶಾಸ್ತ್ರಜ್ಞರು ಇದ್ದಂತೆ ತೋರುತ್ತದೆ. ಇವರನ್ನು ಲೋಕಾಯತಿಕರು ಮತ್ತು ವೈಭಾಷಿಕರು ಎಂದು ಕರೆಯುತ್ತಿದ್ದರು. ಜಡವಸ್ತುವಿನ ಸಂಯೋಜನೆಯು ಒಂದು ಪಕ್ವ ಸ್ಥಿತಿಯನ್ನು ಮುಟ್ಟಿದಾಗ ಜೀವದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಇವರು ವಾದಿಸುತ್ತಾರೆ.
ಇಂದಿನ ಲೌಕಿಕ ವಿಜ್ಞಾನಿಯೂ ಪ್ರಾಪಂಚಿಕ ಮನೋಧರ್ಮದ ತತ್ವಶಾಸ್ತ್ರಜ್ಞರು ಹೀಗೆಯೇ ಚಿಂತೆ ಮಾಡುತ್ತಾರೆ. ಅವರ ಅಭಿಪ್ರಾಯದಲ್ಲಿ ದೇಹವು ಹಲವು ಬೌತಿಕ ಅಂಶಗಳ ಸಂಯೋಜನೆ ಒಂದು ಘಟ್ಟದಲ್ಲಿ ಭೌತಿಕ ಮತ್ತು ರಾಸಾಯನಿಕ ಅಂಶಗಳ ಪರಸ್ಪರ ಕ್ರಿಯೆಯಿಂದಾಗಿ ಜೀವದ ಲಕ್ಷಣಗಳು ಬೆಳೆಯುತ್ತವೆ. ಮಾನವ ವಿಜ್ಞಾನಕ್ಕೆ (Anthropology) ಈ ಸಿದ್ಧಾಂತವೇ ಆಧಾರ. ಇಂದಿನ ದಿನಗಳಲ್ಲಿ ಅಮೆರಿಕದಲ್ಲಿ ಜನಪ್ರಿಯವಾಗುತ್ತಿರುವ ಹಲವು ಹುಸಿಧರ್ಮಗಳು ಈ ಸಿದ್ಧಾಂತಕ್ಕೂ, ಸರ್ವಶೂನ್ಯವಾದ, ಭಕ್ತಿಶೂನ್ಯವಾದ ಬೌದ್ಧಪಂಥಗಳಿಗೂ ಅಂಟಿಕೊಂಡಿದೆ.
ವೈಭಾಷಿಕ ಸಿದ್ಧಾಂತದಲ್ಲಿ ಹೇಳುವಂತೆ ಅರ್ಜುನನಿಗೆ ಆತ್ಮನ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದಿದ್ದರೂ ಅವನ ದುಃಖಕ್ಕೆ ಕಾರಣವೇ ಇಲ್ಲ. ಒಂದು ಪ್ರಮಾಣದ ರಾಸಾಯನಿಕಗಳು ನಷ್ಟವಾದುವೆಂದು ಅಳುತ್ತ ಯಾರೂ ತನ್ನ ನಿಯತ ಕರ್ತವ್ಯದ ಪಾಲನೆಯನ್ನು ನಿಲ್ಲಿಸಿಬಿಡುವುದಿಲ್ಲ. ಇದಕ್ಕೆ ಪ್ರತಿಯಾಗಿ ಆಧುನಿಕ ವಿಜ್ಞಾನದಲ್ಲಿ ಮತ್ತು ವೈಜ್ಞಾನಿಕ ಸಮರದಲ್ಲಿ ಶತ್ರುಗಳನ್ನು ಸೋಲಿಸುವುದಕ್ಕಾಗಿಯೇ ಹಲವು ಟನ್‌ಗಳ ರಾಸಾಯನಿಕಗಳನ್ನು ವ್ಯರ್ಥಮಾಡಲಾಗುತ್ತದೆ.
ವೈಭಾಷಿಕ ಸಿದ್ಧಾಂತದ ಪ್ರಕಾರ ದೇಹವು ಕ್ಷೀಣಗೊಂಡಾಗ ಆತ್ಮ ಎನ್ನುವುದು ಮರೆಯಾಗುತ್ತದೆ. ಆದ್ದರಿಂದ ಜೀವಾತ್ಮನಿದ್ದಾನೆ ಎಂದು ವೇದಗಳ ನಿರ್ಣಯವನ್ನು ಒಪ್ಪಿಕೊಳ್ಳಲಿ ಅಥವಾ ಆತ್ಮನ ಅಸ್ತಿತ್ವದಲ್ಲಿ ನಂಬಿಕೆಯಲ್ಲದಿರಲಿ ಅರ್ಜುನರು ಶೋಕಿಸಲು ಕಾರಣವೇ ಇರಲಿಲ್ಲ. ಈ ಸಿದ್ಧಾಂತದ ಪ್ರಕಾರ ಜಡವಸ್ತುನಿಂದ ಪ್ರತಿಕ್ಷಣವೂ ಎಷ್ಟೋ ಸಂಖ್ಯೆಯ ಜೀವಿಗಳು ಸೃಷ್ಟಿಯಾಗುತ್ತಿವೆ; ಪ್ರತಿ ಕ್ಷಣವೂ ಅವುಗಳಲ್ಲಿ ಬಹುಸಂಖ್ಯೆಯವು ನಾಶವಾಗುತ್ತಿವೆ. ಆದುದರಿಂದ ಇಂತಹ ಘಟನೆಗಳಿಗಾಗಿ ದುಃಖಿಸಲು ಕಾರಣವೇ ಇಲ್ಲ.
ಆತ್ಮನಿಗೆ ಮತ್ತೆ ಜನ್ಮವಿಲ್ಲದಿದ್ದರೆ ಅರ್ಜುನನು ತನ್ನ ತಾತನ್ನೂ ಗುರುವನ್ನೂ ಕೊಲ್ಲುವ ಪಾಪ ಕರ್ಮದ ಫಲವನ್ನು ಅನುಭವಿಸಬೇಕಾಗುತ್ತದೆ. ಎಂದು ಹೆದರಲು ಕಾರಣವೇ ಇರಲಿಲ್ಲ. ಈ ಹೊತ್ತಿನಲ್ಲಿ ಕೃಷ್ಣನು ಅರ್ಜುನನ್ನು ಮಹಾಬಾಹು ಎಂದು ವ್ಯಂಗ್ಯವಾಗಿ ಕರೆಯುತ್ತಾನೆ, ಏಕೆಂದರೆ ಶ್ರೀಕೃಷ್ಣನು ವೇದಗಳ ಜ್ಞಾನವನ್ನು ತೊರೆದ ವೈಭಾಷಿಕರ ಸಿದ್ಧಾಂತವನ್ನು ಒಪ್ಪಲಿಲ್ಲ. ಕ್ಷತ್ರಿಯನಾಗಿ ಅರ್ಜುನನು ವೇದ ಸಂಸ್ಕೃತಿಗೆ ಸೇರಿದವನು. ಅದರ ತತ್ವಗಳನ್ನು ಅನುಸರಿಸುವುದೇ ಅವನಿಗೆ ಯೋಗ್ಯವಾದದ್ದು.
ಜಾತಸ್ಯ ಹಿ ಧ್ರರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ
ತಸ್ಮಾದಪರಿಹಾರ್ಯೇರ್ಥ್ಯೇ ನ ತ್ವಂ ಶೋಚಿತುಮರ್ಹಸಿ ||27||
ಹುಟ್ಟಿದವನು ಸಾಯಲೇಬೇಕು. ಸತ್ತವನು ಖಂಡಿತವಾಗಿಯೂ ಮತ್ತೆ ಹುಟ್ಟುತ್ತಾನೆ. ಆದ್ದರಿಂದ ಅನಿವಾರ್ಯವಾದ ನಿನ್ನ ಕರ್ತವ್ಯಪಾಲನೆಯಲ್ಲಿ ನೀನು ದುಃಖಿಸಬಾರದು.
ತನ್ನ ಬದುಕಿನ ಕರ್ಮಗಳಿಗೆ ಅನುಗುಣವಾಗಿ ಯಾರೇ ಆಗಲಿ ಹುಟ್ಟಲೇಬೇಕು. ಕರ್ಮಗಳ ಒಂದು ಅವಧಿಯನ್ನು ಮುಗಿಸಿದ ಮೇಲೆ ಅವನು ಮತ್ತೆ ಹುಟ್ಟುವುದಕ್ಕಾಗಿ ಸಾಯಲೇಬೇಕು. ಹೀಗೆ ಮನುಷ್ಯನು ಮುಕ್ತಿಯಿಲ್ಲದೆ ಹುಟ್ಟು ಸಾವುಗಳ ಒಂದು ಚಕ್ರದ ಅನಂತರ ಮತ್ತೊಂದು ಚಕ್ರದಲ್ಲಿ ಸಾಗುತ್ತಾನೆ. ಆದರೆ ಹುಟ್ಟು-ಸಾವುಗಳ ಈ ಚಕ್ರವು ಅನಗತ್ಯ ಕೊಲೆ, ಕಗ್ಗೊಲೆ ಮತ್ತು ಯುದ್ಧಗಳನ್ನು ಸಮರ್ಥಿಸುವುದಿಲ್ಲ. ಆದರೆ ಮಾನವ ಸಮಾಜದಲ್ಲಿ ನಿಯಮ ಮತ್ತು ವ್ಯವಸ್ಥೆಯನ್ನು ರಕ್ಷಿಸಲು ಹಿಂಸೆ ಮತ್ತು ಯುದ್ಧ ಅನಿವಾರ್ಯ ಅಂಶಗಳಾಗುತ್ತವೆ
ಕುರುಕ್ಷೇತ್ರ ಸಮರವು ಪರಮ ಪ್ರಭುವಿನ ಸಂಕಲ್ಪ; ಆದ್ದರಿಂದ ಅದು ಅನಿವಾರ್ಯ. ಧರ್ಮಕ್ಕಾಗಿ ಹೋರಾಡುವುದು ಕ್ಷತ್ರಿಯನ ಕರ್ತವ್ಯ. ಅವರು ತನ್ನ ನ್ಯಾಯವಾದ ಕರ್ತವ್ಯವನ್ನಷ್ಟೇ ಮಾಡುತ್ತಿರುವಾಗ ತನ್ನ ಬಂಧುಗಳ ಸಾವಿಗಾಗಿ ಹೆದರಬೇಕೇಕೆ? ದುಃಖಿಸಬೇಕೇಕೆ? ಪಾಪಕರ್ಮಗಳಿಂದರೆ ಅವನಿಗೆ ತುಂಬು ಭಯ, ಧರ್ಮವನ್ನು ಮುರಿದು ಅದರಿಂದ ಪಾಪಕಾರ್ಯಗಳ ಫಲಕ್ಕೆ ಅವನು ಒಳಗಾಗುವುದು ಯೋಗ್ಯವಲ್ಲ, ತನ್ನ ನ್ಯಾಯವಾದ ಕರ್ತವ್ಯವನ್ನು ಮಾಡಲು ತಪ್ಪಿಸಿಕೊಂಡರೆ ಅವನು ತನ್ನ ಬಂಧುಗಳ ಸಾವನ್ನು ತಡೆಯಲು ಸಮಸ್ಯೆ ಸಾಗುವುದಿಲ್ಲ, ತಪ್ಪು ಕಾರ್ಯದ ಪಥವನ್ನು ಆರಿಲಸಿಕೊಂಡಿದ್ದರಿಂದ ಅವನೇ ನೀತಿಭ್ರಷ್ಟನಾಗುತ್ತಾನೆ.