ಭಗವದ್ಗೀತೆ: ಪರಿಪೂರ್ಣ ಜ್ಞಾನದಲ್ಲಿ ಸ್ಥಿರವಾಗಿರುವವರು ಏನು ಮಾಡುತ್ತಾರೆ?; ಗೀತೆಯಲ್ಲಿನ ಅರ್ಥ ಹೀಗಿದೆ
Nov 17, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಪರಿಪೂರ್ಣ ಜ್ಞಾನದಲ್ಲಿ ಸ್ಥಿರವಾಗಿರುವವರ ಬಗ್ಗೆ ಗೀತೆಯಲ್ಲಿ ತಿಳಿಯಿರಿ.
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ |
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ||56||
ತಾಜಾ ಫೋಟೊಗಳು
ತ್ರಿವಿಧವಾದ ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಗ್ನನಾದವನು, ಸುಖದಿಂದ ಉಬ್ಬದವನು, ರಾಗ, ಭಯ, ಕ್ರೋಧಗಳಿಲ್ಲದವನು ಸ್ಥಿರಮನಸ್ಸಿನ ಖುಷಿ ಎನಿಸಿಕೊಳ್ಳುತ್ತಾನೆ.
ಒಂದು ವಾಸ್ತವ ನಿರ್ಣಯಕ್ಕೆ ಬಾರದೆ, ಮನಸ್ಸನ್ನು ವಿಧವಿಧವಾಗಿ ಕದಡಿ ಊಹೆಗಳಲ್ಲಿ ತೊಡಗಿಸಬಲ್ಲವನನ್ನು ಮುನಿ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಮುನಿಗೂ ತನ್ನದೇ ಆದ ದೃಷ್ಟಿಕೋವಿದೆ. ಇತರ ಮುನಿಗಳ ಅಭಿಪ್ರಾಯಗಳಿಗಿಂತ ಬೇರೆಯಾದ ಅಭಿಪ್ರಾಯವಿಲ್ಲದವನನ್ನು ಮುನಿಯೆಂದು ಕರೆಯುವುದೇ ಸಾಧ್ಯವಿಲ್ಲ ಎನ್ನುತ್ತಾರೆ. ನ ಚಾಸಾವೃಷಿರ್ಯಸ್ಯ ಮತಂ ನ ಭಿನ್ನಮ್ (ಮಹಾಭಾರತ, ವನಪ್ರವ 313.117) ಆದರೆ ಇಲ್ಲಿ ಭಗವಂತನು ಹೇಳುವ, ಸ್ಥಿತಧೀರ್ ಮುನಿಯು ಯಾವಾಗಲೂ ಕೃಷ್ಣಪ್ರಜ್ಞೆಯಲ್ಲಿರುವವನು. ಏಕೆಂದರೆ ಆತನು ಎಲ್ಲ ಸೃಷ್ಟ್ಯಾತ್ಮಕ ಊಹೆಗಳನ್ನು ಮುಗಿಸಿಬಿಟ್ಟಿದ್ದಾನೆ.
ಆತನನ್ನು ಪ್ರಶಾನ್ತ ನಿಃಶೇಷ ಮನೋರಥಾನ್ತರ (ಸ್ತೋತ್ರರತ್ನ 43) ಎಂದು ಕರೆಯುತ್ತಾರೆ. ಹೀಗೆಂದರೆ ಮನಸ್ಸಿನ ಊಹೆಗಳ ಹಂತವನ್ನು ದಾಟಿ ಪ್ರಭು ಶ್ರೀಕೃಷ್ಣ ಅಥವಾ ವಾಸುದೇವನೇ ಸರ್ವಸ್ವ (ವಾಸುದೇವಃ ಸರ್ವಮ್ ಇತಿ ಸ ಮಹಾತ್ಮಾ ಸು ದುರ್ಲಭಃ) ಎನ್ನುವ ನಿರ್ಣಯಕ್ಕೆ ಬಂದವನು. ಅವನನ್ನು ಸ್ಥಿತಧೀರ್ ಮುನಿ ಅಥವಾ ಸ್ಥಿತಮನಸ್ಸಿನ ಮುನಿ ಎಂದು ಕರೆಯುತ್ತಾರೆ. ಹೀಗೆ ಪೂರ್ಣ ಕೃಷ್ಣಪ್ರಜ್ಞೆಯುವಳ್ಳವನಿಗೆ ತ್ರಿವಿಧ ದುಃಖಗಳ ಆಕ್ರಮಣದಿಂದ ಮನಸ್ಸು ಕಲಕುವುದಿಲ್ಲ. ಏಕೆಂದರೆ ಅವನು ಎಲ್ಲ ದುಃಖಗಳನ್ನು ದೈವಕೃಪೆಯೆಂದು ಸ್ವೀಕರಿಸುತ್ತಾನೆ.
ತನ್ನ ಹಿಂದಿನ ಅಪರಾಧಗಳಿಂದಾಗಿ ತಾನು ಇನ್ನೂ ಹೆಚ್ಚಿನ ದುಃಖಕ್ಕೆ ಮಾತ್ರ ಅರ್ಹ ಎಂದು ಭಾವಿಸುತ್ತಾನೆ ಮತ್ತು ಭಗವಂತನ ಕೃಪೆಯಿಂದ ತನ್ನ ದುಃಖಗಳು ಕನಿಷ್ಠ ಪ್ರಮಾಮಣಕ್ಕಿಳಿದಿವೆ ಎಂದು ಕಾಣುತ್ತಾನೆ. ಹೀಗೆಯೇ ತಗೆ ಸುಖವು ಬಂದಾಗ ತಾವು ಸುಖಕ್ಕೆ ಅರ್ಹನಲ್ಲ ಎಂದು ಭಾವಿಸಿ ಭಗವಂತನೇ ಅದಕ್ಕೆ ಕಾರಣ ಎಂದು ಕೃತಜ್ಞನಾಗುತ್ತಾನೆ. ಭಗವಂತನ ಕೃಪೆಯಿಂದ ಮಾತ್ರವೇ ತಾವು ಇಷ್ಟು ನೆಮ್ಮದಿಯ ಸ್ಥಿತಿಯಲ್ಲಿದ್ದು ಭಗವಂತನಿಗೆ ಇನ್ನೂ ಉತ್ತಮವಾದ ಸೇವೆಯನ್ನು ಸಲ್ಲಿಸುವುದು ಸಾಧ್ಯವಾಗಿದೆ ಎಂದು ಅರಿತುಕೊಳ್ಳುತ್ತಾನೆ.
ಭಗವಂತನ ಸೇವೆಗಾಗಿ ಆತನು ಸದಾ ದಿಟ್ಟನೂ ಕ್ರಿಯಾಶೀಲನೂ ಆಗಿರುತ್ತಾನೆ ಮತ್ತು ಮೋಹದಿಂದಾಗಲೀ ದ್ವೇಷದಿಂದಲಾಗಲೀ ಪ್ರಭಾವಿತನಾಗುವುದಿಲ್ಲ. ಮೋಹವೆಂದರೆ ತನ್ನ ಇಂದ್ರಿಯತೃಪ್ತಿಗಾಗಿ ವಸ್ತುಗಳನ್ನು ಸ್ವೀಕರಿಸುವುದು. ಇಂತಹ ಇಂದ್ರಿಯ ಮೋಹವಿಲ್ಲದಿರುವುದು ನಿರ್ಲಿಪ್ತತೆಯೂ ಇಲ್ಲ. ಏಕೆಂದರೆ ಅವನ ಬದುಕು ಭಗವಂತನ ಸೇವೆಗೆ ಸಮರ್ಪಿತವಾಗಿದೆ. ಇದರಿಂದ ಅವನ ಪ್ರಯತ್ನಗಳನ್ನು ಯಶಸ್ವಿಯಾಗದಿದ್ದರೆ ಅವನಿಗೆ ಕೋಪವಿಲ್ಲ. ಗೆಲುವಾಗಲೀ ಸೋಲಾಗಲೀ ಕೃಷ್ಣಪ್ರಜ್ಞೆಯುವಳ್ಳ ಮನುಷ್ಯನು ದೃಢಸಂಕಲ್ಪವುಳ್ಳವನಾಗಿರುತ್ತಾನೆ.
ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಮ್ |
ನಾಭಿನನ್ದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠತಾ ||57||
ಐಹಿಕ ಜಗತ್ತಿನಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಯಾರ ಮನಸ್ಸನ್ನು ತಾಗುವುದಿಲ್ಲವೋ, ಯಾರು ಅದನ್ನು ಹೊಗಳುವುದೂ ಇಲ್ಲವೋ, ತೆಗಳುವುದೂ ಇಲ್ಲವೋ, ಅಂತಹವರು ಪರಿಪೂರ್ಣ ಜ್ಞಾನದಲ್ಲಿ ಸ್ಥಿರರಾಗಿರುತ್ತಾರೆ.
ಐಹಿಕ ಜಗತ್ತಿನಲ್ಲಿ ಯಾವಾಗಲೂ ಏರುಪೇರಾಗುತ್ತಲೇ ಇರುತ್ತದೆ. ಇದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು. ಇಂತಹ ಪ್ರಾಪಂಚಿಕ ಏರುಪೇರುಗಳಿಂದ ಯಾರು ಉದ್ವಿಗ್ನರಾಗುವುದಿಲ್ಲವೋ, ಯಾರ ಮನಸ್ಸುನ್ನು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ತಾಗುವುದಿಲ್ಲವೋ ಅವರು ಕೃಷ್ಣಪ್ರಜ್ಞೆಯಲ್ಲಿ ನಿಷ್ಠಾವಂತರಾಗಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು.
ಈ ಪ್ರಪಂಚವೇ ದ್ವಂದ್ವಮಯವಾದದ್ದು, ಆದುದರಿಂದ ಮನುಷ್ಯನು ಈ ಐಹಿಕ ಪ್ರಪಂಚದಲ್ಲಿ ಇರುವವರೆಗೆ ಒಳ್ಳೆಯದರ ಮತ್ತು ಕೆಟ್ಟದರ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಕೃಷ್ಣ ಪ್ರಜ್ಞೆಯಲ್ಲಿ ನಿಷ್ಠನಾಗಿರುವವನಿಗೆ ಸಕಲ ಮಂಗಳಪೂರ್ಣನಾದ ಶ್ರೀಕೃಷ್ಣನೊಡನೆ ಮಾತ್ರ ಸಂಬಂಧ. ಆದುದರಿಂದ ಶುಭಾಶಯಗಳಿಂದ ಬಾಧಿತನಾಗುವುದಿಲ್ಲ. ಇಂತಹ ಕೃಷ್ಣ ಪ್ರಜ್ಞೆಯು ಮನುಷ್ಯನನ್ನು ಪರಿಪೂರ್ಣವಾದ ಅಲೌಕಿಕ ಸ್ಥಿತಿಯಲ್ಲಿ ಇರಿಸುತ್ತದೆ. ಈ ಸ್ಥಿತಿಯನ್ನು ಸಮಾಧಿ ಎಂದು ಕರೆಯುತ್ತಾರೆ.