logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಸಮಸ್ತವೂ ಆಗಿರುವ ಭಗವಂತನಿಗೆ ಮನುಷ್ಯ ಶರಣಾದರೆ ಉತ್ತಮ ಫಲಗಳನ್ನ ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಸಮಸ್ತವೂ ಆಗಿರುವ ಭಗವಂತನಿಗೆ ಮನುಷ್ಯ ಶರಣಾದರೆ ಉತ್ತಮ ಫಲಗಳನ್ನ ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Mar 24, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಸಮಸ್ತವೂ ಆಗಿರುವ ಭಗವಂತನಿಗೆ ಮನುಷ್ಯ ಶರಣಾದರೆ ಉತ್ತಮ ಫಲಗಳನ್ನ ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯ 17ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 19

ಬಹೂನಾಂ ಜನ್ಮನಾಮಸ್ತೇ ಜ್ಞಾನವಾನ್ಮಾಂ ಪ್ರಪದ್ಯತೇ |

ವಾಸುದೇವಃ ಸರ್ವಮಿತಿ ಸ ಮಹಾತ್ಮ ಸುದುರ್ಲಭಃ ||19||

ಅನುವಾದ: ಅನೇಕ ಬಾರಿ ಹುಟ್ಟಿ ಸತ್ತನಂತರ ವಾಸ್ತವವಾಗಿ ಜ್ಞಾನದಲ್ಲಿರುವವನಿಗೆ ನಾನು ಎಲ್ಲ ಕಾರಣಗಳ ಕಾರಣ ಮತ್ತು ಅಸ್ತಿತ್ವದಲ್ಲಿರುವ ಎಲ್ಲದರ ಕಾರಣ ಎನ್ನುವುದು ತಿಳಿಯುತ್ತದೆ. ಆದುದರಿಂದ ಅವನು ನನಗೆ ಶರಣಾಗುತ್ತಾನೆ. ಅಂತಹ ಮಹಾತ್ಮನು ದುರ್ಲಭ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ದೇವೋತ್ತಮ ಪರಮ ಪುರುಷನು ಆಧ್ಯಾತ್ಮಿಕ (Bhagavad Gita Updesh in Kannada) ಸಾಕ್ಷಾತ್ಕಾರದ ಕಟ್ಟಕಡೆಯ ಗುರಿ. ಬಹು ಜನ್ಮಗಳ ಅನಂತರ ಭಕ್ತಿಸೇವೆಯನ್ನಾಗಲಿ ಅಧ್ಯಾತ್ಮಿಕ ವಿಧಿಗಳನ್ನಾಗಲಿ ಮಾಡುವಾಗ ಜೀವಿಯು ದಿವ್ಯ ಪರಿಶುದ್ಧ ಜ್ಞಾನದಲ್ಲಿ ಈ ಅರಿವನ್ನು ಪಡೆಯಬಹುದು. ಅಧ್ಯಾತ್ಮಿಕ ಸಾಕ್ಷಾತ್ಕಾರದ ಪ್ರಾರಂಭದಲ್ಲಿ ಸಾಧಕನು ಪ್ರಾಪಂಚಿಕತೆಯ ಮೋಹವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ನಿರಾಕಾರತ್ವದ ಕಡೆಗೆ ಸ್ವಲ್ಪ ಒಲವಿರುತ್ತದೆ. ಆದರೆ ಇನ್ನೂ ಪ್ರಗತಿಯನ್ನು ಸಾಧಿಸಿದಾಗ ಆತನಿಗೆ ಅಧ್ಯಾತ್ಮಿಕ ಬದುಕಿನಲ್ಲಿ ಚಟುವಟಿಕೆಗಳುಂಟು ಮತ್ತು ಈ ಚಟುವಟಿಕೆಗಳೇ ಭಕ್ತಿಸೇವೆ ಎಂದು ಅರ್ಥವಾಗುತ್ತವೆ. ಇದನ್ನು ಅರ್ಥಮಾಡಿಕೊಂಡು ಆತನು ದೇವೋತ್ತಮ ಪರಮ ಪುರುಷನಿಂದ ಆಕರ್ಷಿತನಾಗುತ್ತಾನೆ ಮತ್ತು ಆತನಿಗೆ ಶರಣಾಗುತ್ತಾನೆ.

ಇಂತಹ ಸಮಯದಲ್ಲಿ ಮನುಷ್ಯನಿಗೆ ಪ್ರಭು ಶ್ರೀಕೃಷ್ಣನ ದಯೆಯೇ ಸರ್ವಸ್ವ, ಅವನೇ ಎಲ್ಲ ಕಾರಣಗಳ ಕಾರಣನು ಮತ್ತು ಈ ಐಹಿಕ ಅಭಿವ್ಯಕ್ತಿಯು ಆತನಿಂದ ಸ್ವತಂತ್ರ್ಯವಲ್ಲ ಎನ್ನುವ ಅರಿವಾಗುತ್ತದೆ. ಐಹಿಕ ಜಗತ್ತು ಅಧ್ಯಾತ್ಮಿಕ ವೈವಿಧ್ಯದ ವಕ್ರಪ್ರತಿಬಿಂಬ ಎಂದೂ, ಪ್ರತಿಯೊಂದಕ್ಕೂ ಪರಮ ಪ್ರಭು ಕೃಷ್ಣನೊಂದಿಗೆ ಸಂಬಂಧವಿದೆ ಎಂದೂ ಅವನಿಗೆ ಅರ್ಥವಾಗುತ್ತದೆ. ಹೀಗೆ ಆತನು ಪ್ರತಿಯೊಂದನ್ನೂ ವಾಸುದೇವ ಅಥವಾ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆಯೇ ಯೋಚಿಸುತ್ತಾನೆ. ವಾಸುದೇವನನ್ನು ಕುರಿತ ಇಂತಹ ವಿಶ್ವದೃಷ್ಟಿಯಿಂದ ವ್ಯಕ್ತಿಯು ಪರಮ ಪ್ರಭು ಶ್ರೀಕೃಷ್ಣನನ್ನೇ ಅತ್ಯುನ್ನತ ಗುರಿಯೆಂದು ತಿಳಿದು ಅವನಿಗೆ ಕೂಡಲೇ ಶರಣಾಗುತ್ತಾನೆ. ಹೀಗೆ ಶರಣಾಗತವಾದ ಮಹಾ ಆತ್ಮಗಳು ಅಪೂರ್ವ. ಈ ಶ್ಲೋಕವನ್ನು ಶ್ವೇತಾಶ್ವತರ ಉಪನಿಷತ್ತಿನ ಮೂರನೆಯ ಅಧ್ಯಾಯದಲ್ಲಿ (14 ಮತ್ತು 15ನೇ ಶ್ಲೋಕಗಳು) ಬಹು ಸೊಗಸಾಗಿ ವಿವರಿಸಿದೆ -

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ |

ಸ ಭೂಮಿಂ ವಿಶ್ವತೋ ವೃತ್ವಾತ್ಯಾತಿಷ್ಠದ್ಧಶಾನ್ಗುಲಮ್ ||

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚಭವ್ಯಮ್ |

ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ||

ಛಾಂದೋಗ್ಯ ಉಪನಿಷತ್ತಿನಲ್ಲಿ (5.1.15), ನ ವೈ ವಾಚೋ ನ ಚಕ್ಷೂಂಷಿ ನ ಶ್ರೋತ್ರಾಣಿ ನ ಮನಾಂಸೀತ ಆಚಕ್ಷತೇ ಪ್ರಾಣ ಇತಿ ಏವಾಚಕ್ಷತೇ ಪ್ರಾಣೋ ಹಿ ಏವೈತಾನಿ ಸರ್ವಾಣಿ ಭವನ್ತಿ ಎಂದು ಹೇಳಿದೆ. ಜೀವಂತ ಪ್ರಾಣಿಯ ದೇಹದಲ್ಲಿ ಮಾತನಾಡುವ ಶಕ್ತಿ, ನೋಡುವ ಶಕ್ತಿ, ಕೇಳುವ ಶಕ್ತಿ, ಯೋಚನೆ ಮಾಡುವ ಶಕ್ತಿ ಇವುಗಳಲ್ಲಿ ಯಾವುದೂ ಮುಖ್ಯ ಅಂಶವಲ್ಲ. ಎಲ್ಲ ಚಟುವಟಿಕೆಗಳ ಕೇಂದ್ರವೂ ಜೀವವೇ. ಇದೇ ರೀತಿಯಲ್ಲಿ ವಾಸುದೇವನು, ಅಥವಾ ದೇವೋತ್ತಮ ಪುರುಷನಾದ ಶ್ರೀಕೃಷ್ಣನು, ಎಲ್ಲದರಲ್ಲಿಯೂ ಮುಖ್ಯ ಅಸ್ತಿತ್ವಾಂಶ. ದೇಹದಲ್ಲಿ ಮಾತನಾಡುವ, ನೋಡುವ, ಕೇಳುವ, ಯೋಚನೆ ಮಾಡುವ ಶಕ್ತಿಗಳಂಟು. ಆದರೆ ಪರಮ ಪ್ರಭವಿನೊಂದಿಗೆ ಇವಕ್ಕೆ ಸಂಬಂಧವನ್ನು ಕಲ್ಪಿಸದಿದ್ದರೆ ಇವು ಮುಖ್ಯವಾಗುವುದಿಲ್ಲ. ವಾಸುದೇವನು ಸರ್ವಾಂತರ್ಯಾಮಿಯೂ ಸಮಸ್ತವೂ ಆಗಿರುವುದರಿಂದ ಭಕ್ತನು ಪರಿಪೂರ್ಣ ಜ್ಞಾನದಲ್ಲಿ ಶರಣಾಗತನಾಗುತ್ತಾನೆ (ಗೀತಾ 7.17 ಮತ್ತು 11.40 ಶ್ಲೋಕಗಳನ್ನು ಹೋಲಿಸಿ ನೋಡಿ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ