logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯನ ಅತ್ಯಂತ ಶ್ರೇಷ್ಠ ಮತ್ತು ಪರಿಪೂರ್ಣ ಕೆಲಸ ಯಾವುದು? ಗೀತೆಯಲ್ಲಿನ ಸಾರಾಂಶ ಹೀಗಿದೆ

ಭಗವದ್ಗೀತೆ: ಮನುಷ್ಯನ ಅತ್ಯಂತ ಶ್ರೇಷ್ಠ ಮತ್ತು ಪರಿಪೂರ್ಣ ಕೆಲಸ ಯಾವುದು? ಗೀತೆಯಲ್ಲಿನ ಸಾರಾಂಶ ಹೀಗಿದೆ

HT Kannada Desk HT Kannada

Dec 13, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯನ ಅತ್ಯಂತ ಶ್ರೇಷ್ಠ ಮತ್ತು ಪರಿಪೂರ್ಣ ಕೆಲಸ ಯಾವುದು ಎಂಬುದನ್ನು ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ |

ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ||19||

ಆದುದರಿಂದ ಕರ್ಮಫಲದಲ್ಲಿ ಆಸಕ್ತಿ ಇಲ್ಲದೆ, ಕರ್ತವ್ಯವೆಂದು ಕರ್ಮವನ್ನು ಮಾಡಬೇಕು. ಅನಾಸಕ್ತ ಕರ್ಮದಿಂದ ಮನುಷ್ಯನು ಪರಮ ಪ್ರಭವನ್ನು ಹೊಂದಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಕ್ತರಿಗೆ ದೇವೋತ್ತಮ ಪುರುಷನು ಪರಾತ್ಪರ. ಮಾಯಾವಾದಿಗಳಿಗೆ ಮುಕ್ತಿ. ಆದುದರಿಂದ ಯೋಗ್ಯ ಮಾರ್ಗದರ್ಶನ ಪಡೆದು ಕೃಷ್ಣನಿಗಾಗಿ ಅಥವಾ ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡುತ್ತಾ ಕರ್ಮಫಲದ ಬಗ್ಗೆ ನಿರ್ಲಿಪ್ತನಾಗಿರುವವನು ನಿಶ್ಚಯವಾಗಿಯೂ ಬದುಕಿನ ಪರಮ ಗುರಿಯತ್ತ ಮುನ್ನಡೆಯುತ್ತಿದ್ದಾನೆ. ಅರ್ಜುನನು ಯುದ್ಧಮಾಡಬೇಕೆಂದು ಕೃಷ್ಣನು ಅಪೇಕ್ಷಿಸಿದುದರಿಂದ ಕೃಷ್ಣನಿಗಾಗಿ ಕುರುಕ್ಷೇತ್ರದಲ್ಲಿ ಯುದ್ಧಮಾಡಬೇಕೆಂದು ಅವನಿಗೆ ಹೇಳಲಾಗುತ್ತಿದೆ.

ಒಳ್ಳೆಯ ಮನುಷ್ಯನಾಗಿರುವುದು ಅಥವಾ ಅಹಿಂಸಾನಿಷ್ಠನಾಗಿರುವುದು ವೈಯಕ್ತಿಕ ಆಸಕ್ತಿ. ಆದರೆ ಪರಾತ್ಪರದ ಪರವಾಗಿ ಕಾರ್ಯತತ್ಪರನಾಗುವುದು ನಿಷ್ಕಾಮಕರ್ಮ. ಇದು ಅತ್ಯಂತ ಶ್ರೇಷ್ಠ ರೀತಿಯ ಪರಿಪೂರ್ಣ ಕರ್ಮ. ಇದನ್ನೇ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಪ್ರತಿಪಾದಿಸುವುದು.

ನಿಯಮಿತ ಯಜ್ಞಗಳಂತೆ, ವೈದಿಕ ಆಚರಣೆಗಳ ಉದ್ದೇಶವೂ ಇಂದ್ರಿಯತೃಪ್ತಿಗಾಗಿ ಮಾಡಿದ ಪಾಪಕರ್ಮಗಳಿಂದ ಪರಿಶುದ್ಧರಾಗುವುದು. ಆದರೆ ಕೃಷ್ಣಪ್ರಜ್ಞೆಯಿಂದ ಮಾಡಿದ ಕೆಲಸವು ಒಳ್ಳೆಯ ಕರ್ಮ ಅಥವಾ ಕೆಟ್ಟಕರ್ಮಗಳ ಫಲವನ್ನು ಮೀರಿದ್ದು, ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಫಲಾಸಕ್ತಿ ಇಲ್ಲ. ಅವನು ಕೃಷ್ಣನಿಗಾಗಿಯೇ ಕಾರ್ಯನಿರತನಾಗುತ್ತಾನೆ. ಅವರು ಎಲ್ಲ ಬಗೆಯ ಕಾರ್ಯಗಳಲ್ಲಿ ತೊಡಗುತ್ತಾನೆ. ಆದರೆ ಸಂಪೂರ್ಣವಾಗಿ ನಿರ್ಲಿಪ್ತನಾಗಿರುತ್ತಾನೆ.

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ |

ಲೋಕಸನ್ಗ್ರಹಮೇವಾಪಿ ಸಮ್ಪಶ್ಯನ್ ಕರ್ತುಮರ್ಹಸಿ ||20||

ಜನಕನಂತಹ ರಾಜರು ನಿಯಮಿತ ಕರ್ಮಗಳನ್ನು ಮಾಡುವುದರಿಂದಲೇ ಪರಿಪೂರ್ಣತೆಯನ್ನು ಪಡೆದರು. ಆದುದರಿಂದ ಜನಸಾಮಾನ್ಯರಿಗೆ ಶಿಕ್ಷಣ ನೀಡುವುದಕ್ಕಾಗಿ ನೀನು ನಿನ್ನ ಕೆಲಸವನ್ನು ಮಾಡಬೇಕು.

ಜನಕನಂತಹ ರಾಜರು ಆತ್ಮಸಾಕ್ಷಾತ್ಕಾರ ಪಡೆದವರು. ಆದುದರಿಂದ ವೇದಗಳಲ್ಲಿ ಹೇಳಿದ ಕರ್ತವ್ಯಗಳನ್ನು ಅವರು ಮಾಡಬೇಕಾಗಿರಲಿಲ್ಲ. ಆದರೂ ಜನಸಾಮಾನ್ಯರಿಗೆ ಮೇಲ್ಪಂಕ್ತಿಯಾಗಲು ಅವರು ಎಲ್ಲ ನಿಯಮಿತ ಕರ್ತವ್ಯಗಳನ್ನು ಮಾಡಿದರು. ಜನಕನು ಸೀತೆಯ ತಂದೆ ಮತ್ತು ಶ್ರೀರಾಮನ ಮಾವ. ಭಗವಂತನ ಮಹಾಭಕ್ತನಾದುದರಿಂದ ಆತನು ಆಧ್ಯಾತ್ಮಿಕ ನೆಲೆಯಲ್ಲಿದ್ದನು. ಆದರೆ (ಭಾರತದ ಬಿಹಾರ್ ರಾಜ್ಯದ ಒಂದು ಭಾಗವಾದ) ವಿಥಿಲೆಯ ರಾಜನಾಗಿದ್ದುದರಿಂದ ಆತನು ನಿಯಮಿತ ಕರ್ತವ್ಯಗಳನ್ನು ಮಾಡುವುದು ಹೇಗೆ ಎನ್ನುವುದನ್ನು ತನ್ನ ಪ್ರಜೆಗಳಿಗೆ ಹೇಳಿಕೊಡಬೇಕಾಗಿತ್ತು.

ಶ್ರೀಕೃಷ್ಣನೂ ಭಗವಂತನ ನಿತ್ಯ ಸ್ನೇಹಿತನಾದ ಅರ್ಜನನೂ ಕುರುಕ್ಷೇತ್ರದಲ್ಲಿ ಯುದ್ಧ ಮಾಡಬೇಕಾದ ಅಗತ್ಯವಿರಲಿಲ್ಲ. ಆದರೆ ಒಳ್ಳೆಯ ವಾದಗಳು ನಿಷ್ಪಲವಾದಾಗ ಹಿಂಸೆಯು ಅಗತ್ಯ ಅನ್ನುವುದನ್ನು ಜನಸಾಮಾನ್ಯರಿಗೆ ಹೇಳಿಕೊಡಲು ಅವರು ಯುದ್ಧಮಾಡಿದರು. ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಯುದ್ಧವನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಯಿತು. ದೇವೋತ್ತಮ ಪರಮ ಪುರುಷನೂ ಸಹ ಪ್ರಯತ್ನಿಸಿದ. ಆದರೆ ಇನ್ನೊಂದು ಪಕ್ಷವು ಯುದ್ಧಮಾಡಲು ದೃಢನಿಶ್ಚಯವನ್ನು ಮಾಡಿತ್ತು.

ಹೀಗೆ ನ್ಯಾಯವಾದ ಗುರಿಗಾಗಿ ಹೋರಾಡುವುದು ಅಗತ್ಯವಾಗುತ್ತದೆ. ಕೃಷ್ಣಪ್ರಜ್ಞೆಯಲ್ಲಿ ನೆಲೆಯಾಗಿರುವವನಿಗೆ ಜಗತ್ತಿನಲ್ಲಿ ಯಾವ ಆಸಕ್ತಿಯೂ ಇಲ್ಲದಿರಬಹುದು. ಆದರೂ ಆತನು ಹೇಗೆ ಬದುಕಬೇಕು ಮತ್ತು ಹೇಗೆ ಕೆಲಸ ಮಾಡಬೇಕು ಎಂದು ಜನರಿಗೆ ತೋರಿಸಿಕೊಡಲು ಕೆಲಸ ಮಾಡುತ್ತಾನೆ. ಕೃಷ್ಣಪ್ರಜ್ಞೆಯಲ್ಲಿ ಅನುಭವಿಗಳಾದವರು ಇತರರು ತಮ್ಮನ್ನು ಅನನುಸರಿಸುವಂತೆ ಕ್ರಿಯಾ ನಿರತರಾಗಬಲ್ಲರು. ಇದನ್ನು ಮುಂದಿನ ಶ್ಲೋಕದಲ್ಲಿ ವಿವರಿಸಿದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ