logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ನಿಜವಾದ ಗುರುವಿನ ಸೇವೆ, ವಿಧೇಯರಾದಾಗ ಯಶಸ್ಸು ನಿಮ್ಮದಾಗುತ್ತೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ನಿಜವಾದ ಗುರುವಿನ ಸೇವೆ, ವಿಧೇಯರಾದಾಗ ಯಶಸ್ಸು ನಿಮ್ಮದಾಗುತ್ತೆ; ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

Jan 24, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ನಿಜವಾದ ಗುರುವಿನ ಸೇವೆ, ವಿಧೇಯರಾದಾಗ ಯಶಸ್ಸು ನಿಮ್ಮದಾಗುತ್ತೆ ಎಂಬುದರ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತಸ್ಮಾದಜ್ಞಾನಸಮ್ಭೂತಂ ಹೃತ್ಸ್ಧಂ ಜ್ಞಾನಾಸಿನಾತ್ಮನಃ |

ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ ||42||

ಆದ್ಧರಿಂದ ಅಜ್ಞಾನದಿಂದ ನಿನ್ನ ಹೃದಯದಲ್ಲಿ ಉದ್ಭವವಾಗಿರುವ ಸಂದೇಹಗಳನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸು. ಅರ್ಜುನ, ಯೋಗದಿಂದ ಸನ್ನದ್ಧವಾಗಿ ಯುದ್ಧಕ್ಕೆ ಏಳು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಈ ಅಧ್ಯಾಯದಲ್ಲಿ ಉಪದೇಶಿಸಿರುವ ಯೋಗಪದ್ಧತಿಯನ್ನು ಸನಾತನ ಯೋಗ ಅಥವಾ ಜೀವಿಯು ಮಾಡುವ ನಿರಂತರ ಕಾರ್ಯಗಳು ಎಂದು ಕರೆಯುತ್ತಾರೆ. ಈ ಯೋಗದಲ್ಲಿ, ಯಜ್ಞಕಾರ್ಯದ ಎರಡು ಭಾಗಗಳಿವೆ - ಮೊದಲನೆಯದು ಮನುಷ್ಯನ ಪ್ರಾಪಂಚಿಕ ಸಂಪತ್ತಿನ ಯಜ್ಞ. ಇನ್ನೊಂದಕ್ಕೆ ಆತ್ಮಜ್ಞಾನವೆಂದು ಹೆಸರು. ಆತ್ಮಜ್ಞಾನಕ್ಕಾಗಿ ಮಾಡುವ ಯಜ್ಞವು ಸಂಪೂರ್ಣವಾಗಿ ಆಧ್ಯಾತ್ಮಿಕ ಕ್ರಿಯೆ. ಮನುಷ್ಯನ ಸಂಪತ್ತಿನ ಯಜ್ಞವನ್ನು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಹೊಂದಿಸದಿದ್ದರೆ ಅಂತಹ ಯಜ್ಞವು ಪ್ರಾಪಂಚಿಕವೇ ಆಗುತ್ತದೆ. ಆದರೆ ಒಂದು ಆಧ್ಯಾತ್ಮಿಕ ಗುರಿಯಿಂದ ಅಥವಾ ಭಕ್ತಿಪೂರ್ವಕ ಸೇವೆಯಾಗಿ ತನ್ನ ಪ್ರಾಪಂಚಿಕ ಸ್ವತ್ತನ್ನು ಯಜ್ಞಮಾಡುವವನು ಪರಿಪೂರ್ಣ ಯಜ್ಞವನ್ನು ಮಾಡುತ್ತಾನೆ.

ಆಧ್ಯಾತ್ಮಿಕ ಕಾರ್ಯಗಳ ವಿಷಯ ಹೇಳವುದಾದರೆ ಇವು ಎರಡು ಬಗೆಯವು - ಮೊದಲನೆಯದು ತನ್ನ ಆತ್ಮವನ್ನು ಅಥವಾ ಸಹಜಸ್ವರೂಪವನ್ನು ಅರ್ಥಮಾಡಿಕೊಳ್ಳುವುದು. ಎರಡನೆಯದು ದೇವೋತ್ತಮ ಪರಮ ಪುರುಷನನ್ನು ಕುರಿತ ಸತ್ಯವನ್ನು ಅರ್ಥಮಾಡಿಕೊಳ್ಳಲುವುದು. ಭಗವದ್ಗೀತೆಯು ವಾಸ್ತವವಾಗಿ ಇರುವಂತೆ ಅದರ ಮಾರ್ಗವನ್ನು ಅನುಸರಿಸುವವನು ಆಧ್ಯಾತ್ಮಿಕ ಜ್ಞಾನದ ಈ ಎರಡು ಭಾಗಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಭಗವಂತನ ವಿಭಿನ್ನಾಂಶವಾಗಿ ಆತ್ಮದ ಪರಿಪೂರ್ಣಜ್ಞಾನವನ್ನು ಪಡೆಯುವುದು ಅವನಿಗೆ ಕಷ್ಟವಾಗುವುದಿಲ್ಲ. ಇಂತಹ ಅರಿವು ತುಂಬ ಉಪಯುಕ್ತವಾದದ್ದು. ಏಕೆಂದರೆ ಆತನು ಭಗವಂತನ ಆಧ್ಯಾತ್ಮಿಕ ಕಾರ್ಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ.

ಈ ಅಧ್ಯಾಯದ ಪ್ರಾರಂಭದಲ್ಲಿ ಭಗವಂತನೇ ತನ್ನ ಆಧ್ಯಾತ್ಮಿಕ ಕಾರ್ಯಗಳನ್ನು ಚರ್ಚಿಸಿದ್ದಾನೆ. ಗೀತೆಯ ಉಪದೇಶವನ್ನು ಅರ್ಥಮಾಡಿಕೊಳ್ಳದವನು ಶ್ರದ್ಧಾಹೀನನು. ಭಗವಂತನು ಅವನಿಗೆ ನೀಡಿದ ಅಲ್ಪ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ ಎಂದು ಭಾವಿಸಬೇಕು. ಇಂತಹ ಉಪದೇಶವು ಲಭ್ಯವಿದ್ದರೂ, ಭಗವಂತನ ನಿಜಸ್ವರೂಪವು ನಿತ್ಯಜ್ಞಾನಾನಂದಕರವಾದ ದೇವೋತ್ತಮ ಪರಮ ಪುರುಷನೆಂದು ಅರ್ಥಮಾಡಿಕೊಳ್ಳದಿದ್ದರುವವನು ಮೂರ್ಖರಲ್ಲಿ ಮೂರ್ಖನು. ಕೃಷ್ಣಪ್ರಜ್ಞೆಯ ತತ್ವಗಳನ್ನು ಕ್ರಮಕ್ರಮವಾಗಿ ಸ್ವೀಕರಿಸಿ ಅಜ್ಞಾನವನ್ನು ಕಳೆದುಕೊಳ್ಳಬಹುದು.

ದೇವತೆಗಳಿಗೆ ಮಾಡುವ ವಿವಿO ಯಜ್ಞಗಳು, ಬ್ರಹ್ಮನ್‌ಗೆ ಮಾಡುವ ಯಜ್ಞ, ಬ್ರಹ್ಮಚರ್ಯ ಯಜ್ಞ, ಕೌಟುಂಬಿಕ ಜೀವನದಲ್ಲಿ, ಇಂದ್ರಿಯನಿಗ್ರಹದಲ್ಲಿ, ಹಠಯೋಗದ ಆಚರಣೆಯಲ್ಲಿ, ತಪಸ್ಸಿನಲ್ಲಿ, ಐಹಿಕ ಸಂಪತ್ತನ್ನು ತ್ಯಜಿಸುವುದರಲ್ಲಿ, ವೇದಾಧ್ಯಯನದಲ್ಲಿ ಮತ್ತು ವರ್ಣಾಶ್ರಮಧರ್ಮದಲ್ಲಿ ನಿರತನಾಗುವುದರಲ್ಲಿ ಇವೆಲ್ಲವುಗಳಲ್ಲಿ ಮಾಡುವ ಯಜ್ಞ, ಇಂತಹ ವಿವಿಧ ರೀತಿಗಳ ಯಜ್ಞಗಳು ಕೃಷ್ಣಪ್ರಜ್ಞೆಯನ್ನು ಎಚ್ಚರಿಸುತ್ತವೆ. ಇವೆಲ್ಲಕ್ಕೂ ಯಜ್ಞವೆಂದು ಹೆಸರು ಮತ್ತು ಇವೆಲ್ಲಕ್ಕೂ ನಿಯಂತ್ರಿತ ಕರ್ಮವೇ ಆಧಾರ. ಆದರೆ ಈ ಎಲ್ಲ ಕಾರ್ಯಗಳಲ್ಲಿ ಆತ್ಮಸಾಕ್ಷಾತ್ಕಾರವೇ ಮುಖ್ಯವಾದ ಅಂಶ. ಆ ಗುರಿಯನ್ನು ಅರಸುವವನೇ ಭಗವದ್ಗೀತೆಯ ನಿಜವಾದ ವಿದ್ಯಾರ್ಥಿ. ಆದರೆ ಕೃಷ್ಣನ ಅಧಿಕಾರದಲ್ಲಿ ಸಂಶಯ ಪಡುವವನು ಪತನ ಹೊಂದುತ್ತಾನೆ. ಆದುದದರಿಂದ ಭಗವದ್ದೀತೆಯನ್ನಾಗಲೀ ಬೇರೆ ಯಾವುದೇ ಧರ್ಮಗ್ರಂಥವನ್ನಾಗಲೀ ನಿಜವಾದ ಗುರುವಿನಿಂದ ಸೇವೆ ಮತ್ತು ಶರಣಾಗತಿಯ ಮನೋಧರ್ಮದಲ್ಲಿ ಕಲಿತುಕೊಳ್ಳಬೇಕೆಂದು ಸೂಚಿಸಲಾಗಿದೆ.

ನಿಜವಾದ ಗುರುವು ಅನಾದಿಕಾಲದಿಂದ ಬಂದ ಗುರುಶಿಷ್ಯಪರಂಪರೆಗೆ ಸೇರುತ್ತಾನೆ. ಲಕ್ಷಾಂತರ ವರ್ಷಗಳ ಹಿಂದೆ ಸೂರ್ಯದೇವನಿಗೆ ಉಪದೇಶಿತವಾಗಿ ಅವನಿಂದ ಭೂಲೋಕಕ್ಕೆ ಬಂದಿರುವ ಭಗವದ್ಗೀತೆಯ ಉಪದೇಶದಿಂದ ನಿಜವಾದ ಗುರುವು ತಪ್ಪಿಹೋಗುವುದಿಲ್ಲ. ಆದುದರಿಂದ ಗೀತೆಯಲ್ಲೇ ಅಭಿವ್ಯಕ್ತವಾಗಿರುವಂತೆ ಭಗವದ್ಗೀತೆಯ ಮಾರ್ಗವನ್ನು ಅನುಸರಿಸಬೇಕು. ಸ್ವಾರ್ಥ ಆಕಾಂಕ್ಷೆಗಳಿಂದಾಗಿ ಇತರರನ್ನು ಸರಿಯಾದ ದಾರಿಯಿಂದ ತಪ್ಪಿಸುವವರ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ನಿಶ್ಚಯವಾಗಿಯೂ ಭಗವಂತನೇ ಪರಮ ಪುರುಷ. ಅವನ ಕಾರ್ಯಗಳು ಆಧ್ಯಾತ್ಮಿಕವಾದವು. ಇದನ್ನು ಅರ್ಥಮಾಡಿಕೊಂಡ ಮನುಷ್ಯನು ಭಗವದ್ಗೀತೆಯ ಅಧ್ಯಯನದ ಪ್ರಾರಂಭದಿಂದಲೂ ಮುಕ್ತನಾದವನು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ