logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ಪ್ರಕೃತಿಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯ ಪ್ರಕೃತಿಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Mar 21, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಮನುಷ್ಯ ಪ್ರಕೃತಿಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ ಯಾಕೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 14ನೇ ಶ್ಲೋಕದಲ್ಲಿ ಬರೆಯಲಾಗಿದೆ. 
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 14

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ |

ಮಾಮೇವ ಯೇ ಪ್ರಪದ್ಯನ್ತೇ ಮಾಯಾಮೇತಾಂ ತರನ್ತಿ ತೇ||14||

ಅನುವಾದ: ಐಹಿಕ ಪ್ರಕೃತಿಯ ತ್ರಿಗುಣಗಳಿಂದ ಆದ ಈ ನನ್ನ ದೈವೀಶಕ್ತಿಯನ್ನು ಮೀರುವುದು ಬಹಳ ಕಷ್ಟ. ಆದರೆ ನನಗೆ ಶರಣಾಗತರಾದವರು ಸುಲಭವಾಗಿ ಅದನ್ನು ದಾಟಿ ಹೋಗಬಲ್ಲರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ದೇವೋತ್ತಮ ಪರಮ ಪುರುಷನಿಗೆ ಅಸಂಖ್ಯಾತ ಶಕ್ತಿಗಳಿವೆ. (Bhagavad Gita Updesh in Kannada) ಈ ಶಕ್ತಿಗಳೆಲ್ಲವೂ ದೈವಿಕವಾದವು. ಜೀವಿಗಳು ಭಗವಂತನ ಭಾಗವಾದುದರಿಂದ ಅವು ದೈವಿಕವೇ. ಆದರೂ ಐಹಿಕ ಶಕ್ತಿಯ ಸಂಪರ್ಕದಿಂದ ಅವುಗಳ ಮೂಲ ಶ್ರೇಷ್ಠಶಕ್ತಿಯು ಮುಚ್ಚಿಹೋಗುತ್ತದೆ. ಐಹಿಕ ಶಕ್ತಿಯು ಹೀಗೆ ತನ್ನನ್ನು ಮುಸುಕಿರುವುದರಿಂದ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಜೀವಿಗೆ ಸಾಧ್ಯವೇ ಆಗುವುದಿಲ್ಲ. ಆಗಲೇ ಹೇಳಿದಂತೆ ಐಹಿಕ ಮತ್ತು ಆಧ್ಯಾತ್ಮಿಕ ಪ್ರಕೃತಿಗಳೆರಡೂ ದೇವೋತ್ತಮ ಪರಮ ಪುರುಷನಿಂದ ಹೊರಸೂಸುವುದರಿಂದ ಅವು ನಿತ್ಯವಾದವು. ಜೀವಿಗಳು ಭಗವಂತನ ಮೇಲ್ತರಗತಿಯ ಪ್ರಕೃತಿಗೆ ಸೇರಿವೆ. ಆದರೆ ಕೆಳತರಗತಿಯ ಪ್ರಕೃತಿಯಾದ ಜಡವಸ್ತುವಿನ ಕಲ್ಮಷದಿಂದಾಗಿ ಜೀವಿಗಳ ಭ್ರಮೆಯೂ ನಿತ್ಯವಾದದ್ದು. ಆದುದರಿಂದ ಬದ್ಧ ಆತ್ಮವನ್ನು ನಿತ್ಯ ಬದ್ಧ ಎಂದು ಕರೆಯುತ್ತಾರೆ.

ಐಹಿಕ ಚರಿತ್ರೆಯಲ್ಲಿ ತಾನು ಬದ್ಧಸ್ಥಿತಿಗೆ ಒಂದ ಒಂದು ನಿಶ್ಚಿತ ದಿವನ್ನು ಯಾರೂ ಗುರುತಿಸಲು ಸಾಧ್ಯವಿಲ್ಲ. ಐಹಿಕ ಪ್ರಕೃತಿಯು ಕೆಳತರಗತಿಯ ಶಕ್ತಿಯಾದರೂ ಐಹಿಕ ಶಕ್ತಿಯನ್ನು ಕಟ್ಟಕಡೆಗೆ ಪರಮ ಸಂಕಲ್ಪವೇ ನಿಯಂತ್ರಿಸುತ್ತದೆ. ಇದನ್ನು ಜೀವಿಯು ಸೋಲಿಸಲಾರನು. ಆದುದರಿಂದ ಐಹಿಕ ಪ್ರಕೃತಿಯ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಮನುಷ್ಯನಿಗೆ ಬಹಳ ಕಷ್ಟ. ಕೆಳತರಗತಿಯ ಐಹಿಕ ಪ್ರಕೃತಿಯನ್ನು ಇಲ್ಲಿ ದೈವಿಕ ಪ್ರಕೃತಿ ಎಂದು ವಿವರಿಸಿದೆ. ಅದರ ದೈವಿಕ ಸಂಬಂಧ ಮತ್ತು ದೈವಿಕ ಸಂಕಲ್ಪವು ಅದರ ಚಲನೆಯನ್ನು ನಿಯಂತ್ರಿಸುತ್ತದೆ ಎನ್ನುವುದು ಇದಕ್ಕೆ ಕಾರಣ.

ದೈವೀಸಂಕಲ್ಪವು ನಿರ್ದೇಶಿಸುವುದರಿಂದ ಐಹಿಕ ಪ್ರಕೃತಿಯು ಕೆಲತರಗತಿಯದಾರೂ ಸೃಷ್ಟಿರೂಪದ ಅಭಿವ್ಯಕ್ತಿಯಲ್ಲಿ, ನಿರ್ಮಾಣ ಮತ್ತು ನಾಶದಲ್ಲಿ ಬಹು ಬೆರಗಾಗುವಂತೆ ಕೆಲಸಮಾಡುತ್ತದೆ. ಇದನ್ನು ವೇದಗಳು ಹೀಗೆ ದೃಢಪಡಿಸುತ್ತವೆ - ಮಾಯಾಂ ತು ಪ್ರಕೃತಿಂ ವಿದ್ಯಾನ್ ಮಾಯಿನಂ ತು ಮಹೇಶ್ವರಮ್. ಮಾಯೆಯು ಅಸತ್ಯ ಅಥವಾ ತಾತ್ಕಾಲಿಕವಾದರೂ ಪರಮ ಮಾಂತ್ರಿಕನಾದ ದೇವೋತ್ತಮ ಪರಮ ಪುರುಷನು ಹಿನ್ನಲೆಯಲ್ಲಿದ್ದಾನೆ. ಅವನು ಮಹೇಶ್ವರನು, ಪರಮ ನಿಯಂತ್ರಕನು (ಶ್ವೇತಾಶ್ವತರ ಉಪನಿಷತ್ತು 4.10).

ಗುಣ ಎನ್ನುವ ಶಬ್ದದ ಇನ್ನೊಂದು ಅರ್ಥ ಹಗ್ಗ. ಬದ್ಧ ಆತ್ಮವನ್ನು ಮಾಯೆಯ ಸೂತ್ರಗಳು ಬಲವಾಗಿ ಕಟ್ಟಿವೆ ಎಂದು ಅರ್ಥಮಾಡಿಕೂಳ್ಳಬೇಕು. ಕೈಕಾಲುಗಳನ್ನು ಕಟ್ಟಿಹಾಕಿದ ಮನುಷ್ಯನು ತನ್ನನ್ನು ತಾನೇ ಬಿಡಿಸಿಕೊಳ್ಳಲಾರ. ಬಂಧನಕ್ಕೆ ಸಿಕ್ಕಿಲ್ಲದ ಯಾರಾದರೂ ಅವನಿಗೆ ನೆರವಾಗಬೇಕು. ತಾನೇ ಕಟ್ಟಿಹಾಕಲ್ಪಟ್ಟವನು ಕಟ್ಟಿಹಾಕಲ್ಪಟ್ಟ ಮತ್ತೊಬ್ಬನಿಗೆ ಸಹಾಯ ಮಾಡಲಾರ. ನೆರವಾಗುವವನ ಮುಕ್ತನಾಗಿರಬೇಕು. ಆದುದರಿಂದ ಶ್ರೀಕೃಷ್ಣ ಅಥವಾ ಅವನ ನಿಜ ಪ್ರತಿನಿಧಿಯಾದ ಗುರುವು ಬದ್ಧ ಆತ್ಮವನ್ನು ಬಿಡಿಸಬಲ್ಲರು. ಇಂತಹ ಶ್ರೇಷ್ಠ ಸಹಯಾವಿಲ್ಲದೆ ಐಹಿಕ ಪ್ರಕೃತಿಯ ಬಂಧನದಿಂದ ಮನುಷ್ಯನು ಬಿಡಿಸಿಕೊಳ್ಳಲಾರ.

ಭಕ್ತಿಸೇವೆ ಅಥವಾ ಕೃಷ್ಣಪ್ರಜ್ಞೆಯು ಇಂತಹ ಬಿಡುಗಡೆಯನ್ನು ಪಡೆಯಲು ನೆರವಾಗಬಲ್ಲದು. ಮಾಯಾಶಕ್ತಿಯ ಪ್ರಭುವಾದ ಕೃಷ್ಣನು ಹೀಗೆ ದುಸ್ತರವಾದ ಶಕ್ತಿಗೆ, ಬದ್ಧ ಆತ್ಮವನ್ನು ಬಿಟ್ಟುಬಿಡುವಂತೆ ಆಜ್ಞಾಪಿಸಬಲ್ಲ. ಜೀವಿಯು ಮೂಲತಃ ಭಗವಂತನ ಪ್ರೀತಿಯ ಮಗು. ಶರಣಾಗತವಾದ ಆತ್ಮದ ವಿಷಯದಲ್ಲಿ ಅವನು ತನ್ನ ಅವ್ಯಾಜ ಕರುಣೆಯಿಂದ ಮತ್ತು ಪಿತೃವಾತ್ಸಲ್ಯದಿಂದ ಬಿಡುಗಡೆಗೆ ಅಪ್ಪಣೆ ಮಾಡುತ್ತಾನೆ. ಆದುದರಿಂದ ಐಹಿಕ ಪ್ರಕೃತಿಯ ಕಠಿಣ ಮುಷ್ಟಿಯಿಂದ ಬಿಡುಗಡೆ ಹೊಂದಲು ಭಗವಂತನ ಪಾದಕಮಲಗಳಿಗೆ ಶರಣಾಗುವುದೊಂದೇ ಮಾರ್ಗ.

ಮಾಮ್ ಏವ ಎನ್ನುವ ಪದಗಳೂ ಅರ್ಥವತ್ತಾದವು. ಮಾಮ್ ಎಂದರೆ ಕೃಷ್ಣನಿಗೆ (ವಿಷ್ಣುವಿಗೆ) ಮಾತ್ರ, ಬ್ರಹ್ಮನಿಗೆ ಅಥವಾ ಶಿವನಿಗೆ ಅಲ್ಲ ಎಂದರ್ಥ. ಬ್ರಹ್ಮ ಮತ್ತು ಶಿವ ಉಚ್ಛಸ್ಥಾನದಲ್ಲಿದ್ದು ಸ್ವಲ್ಪ ಹೆಚ್ಚೂಕಡಮೆ ವಿಷ್ಣುವಿನ ಮಟ್ಟದಲ್ಲೇ ಇದ್ದರೂ ಅವರು ರಜೋಗುಣ ಮತ್ತು ತಮೋಗುಣಗಳ ಅವತಾರಗಳು. ಆದುದರಿಂದ ಅವರು ಬದ್ಧ ಆತ್ಮವನ್ನು ಮಾಯೆಯ ಹಿಡಿತದಿಂದ ಬಿಡಿಸಲಾರರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬ್ರಹ್ಮ ಮತ್ತು ಶಿವರು ಸಹ ಮಾಯೆಯ ಪ್ರಭಾವದಲ್ಲಿದ್ದಾರೆ. ವಿಷ್ಣುವು ಮಾತ್ರ ಮಾಯೆಯ ಪ್ರಭು.

ಬದ್ಧ ಆತ್ಮಕ್ಕೆ ಮುಕ್ತಿಯನ್ನು ಕೊಡಬಲ್ಲವನು ಅವನೊಬ್ಬನೇ. ವೇದಗಳು (ಶ್ವೇತಾಶ್ವತರ ಉಪನಿಷತ್ತು 3.8) ಇದನ್ನು ತಮ್ ಏವ ವಿದಿತ್ವಾ ಅಥವಾ ಕೃಷ್ಣನನ್ನು ಅರಿಯುವುದರಿಂದ ಮಾತ್ರವೇ ಸ್ವಾತಂತ್ರ್ಯವು ಸಾಧ್ಯ ಎನ್ನುವ ಮಾತುಗಳಲ್ಲಿ ದೃಢಪಡಿಸಿವೆ. ಶಿವನೂ ಸಹ ವಿಷ್ಣುವಿನ ಕರುಣೆಯಿಂದ ಮಾತ್ರ ಮುಕ್ತಿಯನ್ನು ಪಡೆಯುವುದು ಸಾಧ್ಯ ಎಂದು ಹೇಳಿದ್ದಾನೆ. ಮುಕ್ತಿಪ್ರದಾತಾ ಸರ್ವೇಷಾಂ ವಿಷ್ಣುರೇವ ನ ಸಂಶಯಃ ಪ್ರತಿಯೊಬ್ಬರಿಗೂ ಮುಕ್ತಿಯನ್ನೂ ಅನುಗ್ರಹಿಸಬಲ್ಲವನು ವಿಷ್ಣು ಎನ್ನುವುದರಲ್ಲಿ ಸಂಶಯವಿಲ್ಲ ಎಂದು ಶಿವನು ಹೇಳುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ