logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯನ ಶರೀರ ಐಹಿಕ ಪ್ರಕೃತಿಯ ಕೊಡುಗೆ; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಮನುಷ್ಯನ ಶರೀರ ಐಹಿಕ ಪ್ರಕೃತಿಯ ಕೊಡುಗೆ; ಗೀತೆಯ ಅರ್ಥ ತಿಳಿಯಿರಿ

HT Kannada Desk HT Kannada

Dec 18, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯನ ಶರೀರ ಐಹಿಕ ಪ್ರಕೃತಿಯ ಕೊಡುಗೆ ಎಂಬ ಗೀತೆಯ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಪ್ರಕೃತೇರ್ಗುಣಸಮ್ಮೂಢಾಃ ಸಜ್ಜನ್ತೇ ಗುಣಕರ್ಮಸು |

ತಾನಕೃತ್ಸ್ನವಿದೋ ಮನ್ದಾನ್ ಕೃತ್ಸ್ನವಿನ್ನ ವಿಚಾಲಯೇತ್ ||29||

ಪ್ರಕೃತಿಯ ಗುಣಗಳಿಂದ ಮೂಢರಾದ ಅಜ್ಞಾನಿಗಳು ಸಂಪೂರ್ಣವಾಗಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯರಾಗುತ್ತಾರೆ. ಕೆಲಸ ಮಾಡುವವರ ಅಜ್ಞಾನದಿಂದ ಈ ಕರ್ತವ್ಯಗಳು ಕೆಳಮಟ್ಟದವಾದರೂ ವಿವೇಕಿಗಳು ಅವರನ್ನು ವಿಚಲಗೊಳಿಸಲು ಪ್ರಯತ್ನಿಸಬಾರದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ತಿಳಿವಳಿಕೆಯಿಲ್ಲದವರು ಸ್ಥೂಲ ಐಹಿಕ ಪ್ರಜ್ಞೆಯೊಂದಿಗೆ ತಮ್ಮನ್ನು ತಪ್ಪಾಗಿ ಗುರುತಿಸಿಕೊಳ್ಳುತ್ತಾರೆ ಮತ್ತು ಐಹಿಕ ಉಪಾಧಿಗಳಿಂದ ತುಂಬಿಹೋಗಿರುತ್ತಾರೆ. ಈ ಶರೀರವು ಐಹಿಕ ಪ್ರಕೃತಿಯ ಕೊಡುಗೆ. ದೈಹಿಕ ಪ್ರಜ್ಞೆಗೆ ಅತಿಯಾಗಿ ಅಂಟಿಕೊಂಡಿರುವವನನ್ನು ಮಂದ ಅಥವಾ ಆತ್ಮದ ಅರಿವಿಲ್ಲದ ಸೋಮಾರಿ ಎಂದು ಕರೆಯುತ್ತಾರೆ. ಅಜ್ಞಾನಿಗಳು ದೇಹವನ್ನೇ ಆತ್ಮ ಎಂದು ಭಾವಿಸುತ್ತಾರೆ. ಇತರರೊಡನೆ ದೇಹ ಬಾಂಧವ್ಯವನ್ನು ಬಂಧುತ್ವ ಎಂದು ಸ್ವೀಕರಿಸುತ್ತಾರೆ.

ತಮಗೆ ದೇಹವನ್ನು ಕೊಟ್ಟ ಭೂಮಿಯನ್ನು ಪೂಜಿಸುತ್ತಾರೆ ಮತ್ತು ಧಾರ್ಮಿಕ ವಿಧಿಗಳ ಔಪಚಾರಿಕಗಳೇ ಗುರಿ ಎಂದು ಭಾವಿಸುತ್ತಾರೆ. ಸಾಮಾಜಿಕ ಕಾರ್ಯ, ರಾಷ್ಟ್ರೀಯತೆ ಮತ್ತು ಪರೋಪಕಾರಗಳು - ಐಹಿಕವಾಗಿ ಉಪಾಧಿಗಳಿಗೆ ಒಳಗಾದ ಜನರ ಕೆಲವು ಚಟುವಟಿಕೆಗಳು. ಇಂತಹ ಉಪಾಧಿಗಳ ಮೋಡಿಯಲ್ಲಿ ಸಿಕ್ಕು ಅವರು ಯಾವಾಗಲೂ ಐಹಿಕ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುತ್ತಾರೆ. ಅವರಿಗೆ ಆತ್ಮಸಾಕ್ಷಾತ್ಕಾರವು ಒಂದು ಕಟ್ಟುಕತೆ. ಆದುದರಿಂದ ಅದರಲ್ಲಿ ಅವರಿಗೆ ಆಸಕ್ತಿಯಿಲ್ಲ.

ಆದರೆ ಆಧ್ಯಾತ್ಮಿಕ ಬದುಕಿನಲ್ಲಿ ತಿಳಿವಳಿಕೆ ಇರುವವರು, ಹೀಗೆ ಐಹಿಕವಾಗಿ ತನ್ಮಯರಾಗಿರುವ ಜನರ ಮನಸ್ಸನ್ನು ಕ್ಷೋಭೆಗೊಳಿಸಲು ಪ್ರಯತ್ನಿಸಬಾರದು. ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳನ್ನು ಸದ್ದಿಲ್ಲದೆ ಮುಂದುರಿಸಿಕೊಂಡು ಹೋಗುವುದು ಉತ್ತಮ. ಹೀಗೆ ಗಲಿಬಿಲಿಗೊಂಡವರು ಅಹಿಂಸೆಯಂತಹ ಬದುಕಿನ ಮೂಲ ನೈತಿಕ ತತ್ವಗಳಲ್ಲಿ ಮತ್ತು ಇಂತಹವೇ ಐಹಿಕ ಕಲ್ಯಾಣಕಾರ್ಯದಲ್ಲಿ ತೊಡಗಿರಬಹುದು.

ಅಜ್ಞಾನಿಗಳಾದವರು ಕೃಷ್ಣಪ್ರಜ್ಞೆಯಲ್ಲಿನ ಚಟುವಟಿಕೆಗಳನ್ನು ಮೆಚ್ಚಿಕೊಳ್ಳಲಾರರು. ಆದುದರಿಂದ ಅವರನ್ನು ಕ್ಷೋಭೆಗೊಳಿಸಿ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡಬಾರದು ಎಂದು ಶ್ರೀಕೃಷ್ಣನು ನಮಗೆ ಬೋಧಿಸುತ್ತಾನೆ. ಆದರೆ ಭಗವಂತನ ಭಕ್ತರು ಭಗವಂತನಿಗಿಂತ ಹೆಚ್ಚು ಕೃಪಾಳುಗಳು. ಏಕೆಂದರೆ ಅವರಿಗೆ ಭಗವಂತನ ಉದ್ದೇಶವು ತಿಳಿದಿರುತ್ತದೆ. ಆದುದರಿಂದ ಅವರು ಎಲ್ಲ ಅಪಾಯಗಳನ್ನು ಎದುರಿಸುವರು. ಮನುಷ್ಯನಿಗೆ ನಿಸ್ಸಂದೇಹವಾಗಿ ಅಗತ್ಯವಾದ ಕೃಷ್ಣಪ್ರಜ್ಞೆಯ ಕಾರ್ಯಗಳಲ್ಲಿ ಮಂದಮತಿಗಳನ್ನು ತೊಡಗಿಸುವ ಪ್ರಯತ್ನವನ್ನು ಮಾಡುವಷ್ಟು ದೂರ ಸಹ ಹೋಗುತ್ತಾರೆ.

ಯೇ ಮೇ ಮತಮಿದಂ ನಿತ್ಯಮನುತಿಷ್ಯನ್ತಿ ಮಾನವಾಃ |

ಶ್ರದ್ಧಾವನ್ತೋನಸೂಯನ್ತೋ ಮುಚ್ಯನ್ತೇ ತೇಪಿ ಕರ್ಮಭಿಃ ||31||

ನನ್ನ ಅಪ್ಪಣೆಗೆ ಅನುಸಾರವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಈ ಬೋಧನೆಯನ್ನು, ಅಸೂಯೆಯಿಲ್ಲದೆ, ಶ್ರದ್ಧೆಯಿಂದ ಅನುಸರಿಸುವವರು ಕರ್ಮಫಲದ ಬಂಧನದಿಂದ ಮುಕ್ತರಾಗುತ್ತಾರೆ.

ದೇವೋತ್ತಮ ಪರಮ ಪುರುಷನಾದ ಕೃಷ್ಣನ ಆಜ್ಞೆಯು ಎಲ್ಲ ವೇದಗಳ ಜ್ಞಾನದ ತಿರುಳು. ಆದುದರಿಂದ ಅದು ಆಕ್ಷೇಪಣೆಗೆ ಅವಕಾಶವಿಲ್ಲದಂತೆ ಶಾಶ್ವತವಾಗಿ ಸತ್ಯವಾಗಿರುತ್ತದೆ. ವೇದಗಳು ನಿತ್ಯವಾಗಿರುವಂತೆ ಈ ಕೃಷ್ಣಪ್ರಜ್ಞೆಯ ಸತ್ಯವೂ ನಿತ್ಯವಾದದ್ದು. ಭಗವಂತನಲ್ಲಿ ಅಸೂಯೆ ಇಲ್ಲದೆ ಮನುಷ್ಯನು ಈ ಆಜ್ಞೆಯಲ್ಲಿ ದೃಢವಾದ ನಂಬಿಕೆಯನ್ನು ಇಟ್ಟುಕೊಳ್ಳಬೇಕು. ಭಗವದ್ಗೀತೆಗೆ ಭಾಷ್ಯಗಳನ್ನು ಬರೆಯುವ ಆದರೆ ಕೃಷ್ಣನಲ್ಲಿ ನಂಬಿಕೆ ಇಲ್ಲದಿರುವ ತತ್ವಶಾಸ್ತ್ರಜ್ಞರು ಹಲವರಿದ್ದಾರೆ. ಅವರು ಎಂದೂ ಕರ್ಮಫಲದ ಬಂಧನದಿಂದ ಮುಕ್ತರಾಗುವುದಿಲ್ಲ.

ಸಾಮಾನ್ಯ ಮನುಷ್ಯನಿಗೆ ಕೃಷ್ಣನ ಅಪ್ಪಣೆಗಳನ್ನು ಕಾರ್ಯಗತ ಮಾಡಲು ಸಾಧ್ಯವಾಗದೆ ಹೋಗಬಹುದು. ಆದರೂ ಭಗವಂತನ ನಿತ್ಯವಾದ ಅಪ್ಪಣೆಗಳಲ್ಲಿ ಅವನಿಗೆ ದೃಢವಾದ ಶ್ರದ್ಧೆ ಇದ್ದರೆ ಅವನು ಕರ್ಮದ ನಿಯಮದಿಂದ ಬಿಡುಗಡೆಯನ್ನು ಹೊಂದುತ್ತಾನೆ. ಕೃಷ್ಣಪ್ರಜ್ಞೆಯ ಪ್ರಾರಂಭದಲ್ಲಿ ಮನುಷ್ಯನು ಭಗವಂತನ ಅಪ್ಪಣೆಗಳನ್ನು ಸಂಪೂರ್ಣವಾಗಿ ಪಾಲಿಸದೆ ಹೋಗಬಹುದು. ಆದರೆ ಈ ತತ್ವದ ವಿಷಯದಲ್ಲಿ ಆತನಿಗೆ ಅಸಮಾಧಾನ ಇಲ್ಲದಿರುವುದರಿಂದ ಮತ್ತು ಸೋಲು ಹಾಗೂ ನಿರಾಸೆಗಳ ಪರಿಗಣನೆ ಇಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ನಿಶ್ಚಯವಾಗಿಯೂ ಆತನು ಶುದ್ಧ ಕೃಷ್ಣಪ್ರಜ್ಞೆಗೆ ಏರುವನು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ