logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ಕೆಲವರು ಭಗವಂತನ ಬಳಿಗೆ ಬರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ಕೆಲವರು ಭಗವಂತನ ಬಳಿಗೆ ಬರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Mar 22, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಫಲಾಪೇಕ್ಷಿತ ಕರ್ಮಗಳಲ್ಲಿ ಸದಾ ಮುಳುಗಿರುವವರು ಐಹಿಕವಾಗಿ ಕಷ್ಟದಲ್ಲಿದ್ದರುವಾಗ ಭಗವಂತನ ಬಳಿಗೆ ಬರುತ್ತಾರೆ. ಭಗವದ್ಗೀತೆಯ 7ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 16

ಚತುರ್ವಿಧಾ ಭಜನ್ತೇ ಮಾಂ ಜನಾಃ ಸುಕೃತಿನೋರ್ಜನ |

ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ||16||

ಅನುವಾದ: ಭರತ ವಂಶಜರಲ್ಲಿ ಶ್ರೇಷ್ಠನಾದ ಅರ್ಜುನನೆ, ನಾಲ್ಕು ವಿಧಗಳ ಪುಣ್ಯವಂತರು ನನಗೆ ಭಕ್ತಿಸೇವೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ದುಃಖಿಗಳು, ಜಿಜ್ಞಾಸುಗಳು, ಐಶ್ವರ್ಯವನ್ನು ಬಯಸುವವರು ಮತ್ತು ಪರಾತ್ಪರದ ಜ್ಞಾನದ ಅನ್ವೇಷಣೆ ಮಾಡುವವರು - ಇವರೇ ಈ ನಾಲ್ಕು ಬಗೆಯ ಜನರು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಶಾಸ್ತ್ರಗಳ ನಿಯಂತ್ರಕ ತತ್ವಗಳನ್ನೂ ನೈತಿಕ ಮತ್ತು ಸಾಮಾಜಿಕ ನಿಯಮಗಳನ್ನೂ ಅನುಸರಿಸುವವರಿಗೆ ಸುಕೃತಿನಃ ಎಂದು ಹೆಸರು. ದುಷ್ಕೃರ್ಮಿಗಳಂತಲ್ಲದೆ ಸುಕೃತಿಗಳಾದ ಜನರು ಬಹುಮಟ್ಟಿಗೆ ಭಗವದ್ಭಕ್ತರಾಗಿರುತ್ತಾರೆ. ಇವರಲ್ಲಿ ನಾಲ್ಕು ವಿಧ - ಕೆಲವೊಮ್ಮೆ ದುಃಖಿಗಳಾಗಿರುವವರು, ಹಣದ ಅಗತ್ಯವಿರುವವರು, ಕೆಲವೊಮ್ಮೆ ಕುತೂಹಲಗಳಾಗಿರುವವರು ಮತ್ತು ಪರಮ ಸತ್ಯದ ಜ್ಞಾನವನ್ನು ಅನ್ವೇಷಿಸುವವರು. ಇವರು ಭಗವಂತನ ಭಕ್ತಿಸೇವೆಗೆ ಬೇರೆ ಬೇರೆ ಸ್ಥಿತಿಗಳಲ್ಲಿ ಬರುತ್ತಾರೆ. ಇವರು ಪರಿಶುದ್ಧ ಭಕ್ತರಲ್ಲ. ಏಕೆಂದರೆ ಭಕ್ತಿಸೇವೆಗೆ ಬದಲಾಗಿ ಯಾವುದೋ ಆಕಾಂಕ್ಷೆಯು ನೆರೆವೇರಬೇಕೆಂದು ಇವರು ಬಯಸಸುತ್ತಾರೆ. ಪರಿಶುದ್ಧ ಭಕ್ತಿಗೆ ಯಾವುದೇ ಆಕಾಂಕ್ಷೆ ಇರುವುದಿಲ್ಲ ಮತ್ತು ಯಾವುದೇ ಐಹಿಕ ಲಾಭದ ಬಯಕೆಯಿರುವುದಿಲ್ಲ. ಪರಿಶುದ್ಧ ಭಕ್ತಿಯನ್ನು ಭಕ್ತಿರಸಾಮೃತ ಸಿಂಧು (1.1.11) ಹೀಗೆ ವಿವರಿಸುತ್ತದೆ -

ಅನ್ಯಾಭಿಲಾಷಿತಾ ಶೂನ್ಯಂ ಜ್ಞಾನ ಕರ್ಮಾದ್ಯನಾವೃತಮ್ |

ಆನುಕೂಲ್ಯೇನ ಕೃಷ್ಣಾನು ಶೀಲನಂ ಭಕ್ತಿರುತ್ತಮಾ ||

ಇದನ್ನೂ ಓದಿ: ಭಗವಂತನಿಗೆ ಶರಣಾಗುವ ವ್ಯಕ್ತಿ ಜೀವನದಲ್ಲಿ ಸುಖವಾಗಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

ಪರಮ ಪ್ರಭು ಶ್ರೀಕೃಷ್ಣನಿಗೆ ದಿವ್ಯ ಪ್ರೇಮ ಸೇವೆಯನ್ನು ಸ್ನೇಹಭಾವದಿಂದ ಸಲ್ಲಿಸಬೇಕು. ಇಂತಹ ಸೇವೆ ಮಾಡುವಾಗ, ಕಾಮ್ಯ ಕರ್ಮದಿಂದ ಅಥವಾ ಊಹಾತ್ಮಕ ಚಿಂತನೆಯಿಂದ, ಐಹಿಕ ಲಾಭ ಪಡೆಯುವ ಆಸೆ ಇರಬಾರದು. ಅಂತಹುದನ್ನು ಶುದ್ಧ ಭಕ್ತಿಸೇವೆ ಎಂದು ಕರೆಯುತ್ತಾರೆ. ಈ ನಾಲ್ಕು ಬಗೆಯ ಜನರು ಭಕ್ತಿಸೇವೆ ಮಾಡಲೆಂದು ಭಗವಂತನ ಬಳಿಗೆ ಬಂದು ಪರಿಶುದ್ಧ ಭಕ್ತನೊಬ್ಬನ ಸಹಯೋಗದಿಂದ ಸಂಪೂರ್ಣವಾಗಿ ಪರಿಶುದ್ಧರಾದಾಗ ತಾವೂ ಪರಿಶುದ್ಧ ಭಕ್ತರಾಗುತ್ತಾರೆ. ದುಷ್ಕರ್ಮಿಗಳ ವಿಷಯ ಹೇಳುವುದಾದರೆ, ಅವರ ಬದುಕು ಸ್ವಾರ್ಥಪರ, ಅದರಲ್ಲಿ ನಿಯಮವಿಲ್ಲ ಮತ್ತು ಆಧ್ಯಾತ್ಮಿಕ ಗುರಿಗಳೂ ಇಲ್ಲ. ಆದುದರಿಂದ ಅವರಿಗೆ ಭಕ್ತಿಸೇವೆಯನ್ನು ಮಾಡುವುದು ಬಹಳ ಕಷ್ಟ. ಆದರೆ ಅವರಲ್ಲಿಯೂ ಸಹ ಕೆಲವರು ಅಕಸ್ಮಾತ್ತಾಗಿ ಪರಿಶುದ್ಧ ಭಕ್ತನ ಸಂಪರ್ಕಕ್ಕೆ ಬಂದಾಗ ಪರಿಶುದ್ಧ ಭಕ್ತರಾಗುತ್ತಾರೆ.

ಫಲಾಪೇಕ್ಷಿತ ಕರ್ಮಗಳಲ್ಲಿ ಸದಾ ಮುಳುಗಿರುವವರು ಐಹಿಕವಾಗಿ ಕಷ್ಟದಲ್ಲಿದ್ದರುವಾಗ ಭಗವಂತನ ಬಳಿಗೆ ಬರುತ್ತಾರೆ ಮತ್ತು ಆಗ ಪರಿಶುದ್ಧ ಭಕ್ತರೊಡನೆ ಸೇರುತ್ತಾರೆ. ಅವರು ತಮ್ಮ ನೋವಿನ ಕಾರಣದಿಂದಾಗಿ ಭಗವದ್ಭಕ್ತರಾಗುತ್ತಾರೆ. ಹತಾಶರಾದವರೂ ಸಹ ಕೆಲವೊಮ್ಮೆ ಪರಿಶುದ್ಧ ಭಕ್ತರ ಸಹವಾಸವನ್ನು ಪಡೆಯುತ್ತಾರೆ ಮತ್ತು ಭಗವಂತನ ವಿಷಯವನ್ನು ತಿಳಿದುಕೊಳ್ಳಲು ಕುತೂಹಲಿಗಳಾಗುತ್ತಾರೆ. ಇದೇ ರೀತಿಯಲ್ಲಿ ಒಣ ತತ್ವಶಾಸ್ತ್ರರು ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ನಿರಾಶರಾದಾಗ ಕೆಲವೊಮ್ಮೆ ಭಗವಂತನ ವಿಷಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅವರು ಪರಮ ಪ್ರಭುವಿನ ಭಕ್ತಿಸೇವೆಗೆ ಬರುತ್ತಾರೆ.

ನಿರಾಕಾರ ಬ್ರಹ್ಮನ ತಿಳುವಳಿಕೆಯನ್ನು, ಅಂತರ್ಯಾಮಿ ಪರಮಾತ್ಮನ ತಿಳುವಳಿಕೆಯನ್ನು ಮೀರಿ ಪರಮ ಪ್ರಭುವಿನ ಅಥವಾ ಅವನ ಪರಿಶುದ್ಧ ಭಕ್ತನ ಕೃಪೆಯಿಂದ ದೇವತ್ವದ ಸಾಕಾರ ಕಲ್ಪನೆಗೆ ಬರುತ್ತಾರೆ. ಒಟ್ಟಿನಲ್ಲಿ ದುಃಖಿಗಳು, ಜಿಜ್ಞಾಸುಗಳು, ಜ್ಞಾನಿಗಳು ಮತ್ತು ಹಣವನ್ನು ಬಯಸುವವರು - ಇವರೆಲ್ಲ ಐಹಿಕ ಬಯಕೆಗಳಿಂದ ದೂರವಾಗಿ, ಐಹಿಕ ಪ್ರತಿಫಲಕ್ಕೂ ಅಧ್ಯಾತ್ಮಿಕ ಉತ್ಕರ್ಷಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಾಗ ಪರಿಶುದ್ಧ ಭಕ್ತರಾಗುತ್ತಾರೆ. ಇಂತಹ ಶುದ್ಧ ಹಂತವನ್ನು ತಲಪುವವರೆಗೆ ಭಗವಂತನ ಅಧ್ಯಾತ್ಮಿಕ ಸೇವೆಯಲ್ಲಿ ನಿರತರಾದ ಭಕ್ತರಿಗೆ ಫಲಾಪೇಕ್ಷೆಯ ಕರ್ಮಗಳು, ಐಹಿಕ ವಿದ್ಯೆಯ ಅನ್ವೇಷಣೆ ಇಂತಹವುಗಳ ಮಾಲಿನ್ಯ ಇದ್ದೇ ಇರುತ್ತದೆ. ಮನುಷ್ಯನು ಪರಿಶುದ್ಧ ಭಕ್ತಿಸೇವೆಯ ಹಂತಕ್ಕೆ ಬರಲು ಸಾಧ್ಯವಾಗುವ ಮೊದಲು ಇವೆಲ್ಲವನ್ನೂ ದಾಟಬೇಕಾಗುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ