logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿ ಜೀವಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನಲ್ಲಿ ಜೀವಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Mar 10, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಪ್ರತಿಯೊಂದು ಜೀವಿಯೂ ಪರಮ ಪ್ರಭುವನ್ನು ಸೇವಿಸಬೇಕೆಂಬುದೇ ಉದ್ದೇಶ. ಹೀಗೆ ಮಾಡದೆ ಹೋದರೆ ಆತನು ಪತನ ಹೊಂದುತ್ತಾನೆ ಎಂದು ಭಗವದ್ಗೀತೆಯಲ್ಲಿ ಬರೆಯಲಾಗಿದೆ. 6ನೇ ಅಧ್ಯಾಯದ ಕೊನೆಯ ಹಾಗೂ 47ನೇ ಶ್ಲೋಕ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ -6: ಧ್ಯಾನ ಯೋಗ - ಶ್ಲೋಕ - 47

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ |

ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ||47||

ಅನುವಾದ: ಯಾರು ಸದಾ ನನ್ನಲ್ಲಿಯೇ ಇರುವನೋ, ತನ್ನಲ್ಲಿರುವ ನನ್ನನ್ನು ಕುರಿತು ಚಿಂತಿಸುವನೋ, ನನ್ನನ್ನು ಭಜಿಸುವನೋ ಅವನೇ ಎಲ್ಲ ಯೋಗಿಗಳಲ್ಲಿ ಯೋಗದಲ್ಲಿ ನನ್ನೊಡನೆ ಅತ್ಯಂತ ಆತ್ಮೀಯವಾಗಿ ಒಂದಾಗಿರುವವನು ಮತ್ತು ಅವನೇ ಎಲ್ಲರಿಗಿಂತ ಶ್ರೇಷ್ಠನಾದವನು. ಇದು ನನ್ನ ಅಭಿಪ್ರಾಯ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: (Bhagavad Gita Updesh in Kannada) ಇಲ್ಲಿ ಭಜತೇ ಎನ್ನುವ ಶಬ್ದವು ಮಹತ್ವಪೂರ್ಣವಾದದ್ದು. ಭಜತೇ ಎನ್ನುವ ಶಬ್ದದ ಮೂಲ ಭಜ್ ಎನ್ನುವ ಕ್ರಿಯಾಪದ. ಸೇವೆಯ ಅಗತ್ಯವಿರುವಾಗ ಇದನ್ನು ಬಳಸುತ್ತಾರೆ. ವರ್ಷಿಪ್ ಎನ್ನುವ ಇಂಗ್ಲಿಷ್ ಪದವನ್ನು ಭಜ್ ಎನ್ನುವ ಅರ್ಥದಲ್ಲಿ ಬಳಸಲು ಸಾಧ್ಯವಿಲ್ಲ. ವರ್ಷಿಪ್ ಎಂದರೆ ಪೂಜಿಸುವುದು ಅಥವಾ ಯೋಗ್ಯರಾದವರಿಗೆ ಗೌರವವನ್ನು ತೋರಿಸುವುದು. ಆದರೆ ದೇವೋತ್ತಮ ಪರಮ ಪುರುಷನ ವಿಷಯದಲ್ಲಿ ಪ್ರೀತಿ ಮತ್ತು ಶ್ರದ್ಧೆಗಳಿಂದ ಕೂಡಿದ ಸೇವೆಯನ್ನೇ ಹೇಳಲಾಗುತ್ತದೆ. ಒಬ್ಬ ಗೌರವಾರ್ಹ ಮನುಷ್ಯನ ಅಥವಾ ದೇವತೆಯ ಪೂಜೆಯನ್ನು ಬಿಡುವುದು ಸೌಜನ್ಯರಹಿತ ಎನ್ನಬಹುದು. ಆದರೆ ಪರಮ ಪ್ರಭವಿನ ಸೇವೆಯನ್ನು ಬಿಟ್ಟರೆ ಕಟುವಾದ ಖಂಡನೆಗೆ ಗುರಿಯಾಗಬೇಕಾಗುತ್ತದೆ. ಪ್ರತಿಯೊಂದು ಜೀವಿಯೂ ದೇವೋತ್ತಮ ಪರಮ ಪುರುಷನ ವಿಭಿನ್ನಾಂಶ. ತನ್ನ ಸ್ವರೂಪದ ಕಾರಣದಿಂದ ಪ್ರತಿಯೊಂದು ಜೀವಿಯೂ ಪರಮ ಪ್ರಭುವನ್ನು ಸೇವಿಸಬೇಕೆಂಬುದೇ ಉದ್ದೇಶ. ಹೀಗೆ ಮಾಡದೆ ಹೋದರೆ ಆತನು ಪತನ ಹೊಂದುತ್ತಾನೆ. ಭಾಗವತವು (11.5.3) ಇದನ್ನು ಹೀಗೆ ದೃಢಪಡಿಸುತ್ತದೆ -

ಯ ಏಷಾಂ ಪುರುಷಂ ಸಾಕ್ಷಾದ್ ಆತ್ಮಪ್ರಭವಮ್ ಈಶ್ವರಮ್ |

ನ ಭಜನ್ತ್ಯವಜಾನನ್ತಿ ಸ್ಥಾನಾದ್ ಭ್ರಷ್ಟಾಃ ಪತನ್ತ್ಯಧಃ ||

ಯಾರು ಎಲ್ಲ ಜೀವಿಗಳ ಮೂಲನಾದ ಆದಿ ಪುರುಷನಿಗೆ ಸೇವೆಯನ್ನು ಸಲ್ಲಿಸುವುದಿಲ್ಲವೋ ಮತ್ತು ಈ ವಿಷಯದಲ್ಲಿ ತನ್ನ ಕರ್ತವ್ಯವನ್ನು ನಿರ್ಲಕ್ಷಿಸುವನೋ ಅವನು ನಿಶ್ಚಯವಾಗಿಯೂ ತನ್ನ ಸಹಜ ಸ್ವರೂಪದಿಂದ ಪತನ ಹೊಂದುವನು.

ಈ ಶ್ಲೋಕದಲ್ಲಿ ಸಹ ಭಜನ್ತಿ ಎನ್ನುವ ಶಬ್ದವನ್ನು ಬಳಸಿದೆ. ಆದುದರಿಂದ ಭಜನ್ತಿ ಎನ್ನುವ ಶಬ್ದವನ್ನು ಪರಮ ಪ್ರಭುವಿನ ವಿಷಯದಲ್ಲಿ ಮಾತ್ರ ಬಳಸಬಹುದು. ಆದರೆ ವರ್ಷಿಪ್ ಎನ್ನುವ ಪದವನ್ನು ದೇವತೆಗಳ ಅಥವಾ ಯಾವುದೇ ಸಾಮಾನ್ಯ ಜೀವಿಯ ವಿಷಯದಲ್ಲಿಯೂ ಬಳಸಬಹುದು. ಶ್ರೀಮದ್ಭಾಗವತದಿಂದ ತೆಗೆದುಕೊಂಡ ಶ್ಲೋಕದಲ್ಲಿ ಅವಜಾನನ್ತಿ ಎನ್ನುವ ಶಬ್ದವನ್ನು ಭಗವದ್ಗೀತೆಯಲ್ಲೂ ಬಳಸಿದೆ. ಅವಜಾನನ್ತಿ ಮಾಂ ಮೂಢಾಃ - ಮೂರ್ಖರು ಮತ್ತು ದುಷ್ಟರು ಮಾತ್ರ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು ನಿಂದಿಸುತ್ತಾರೆ. ಇಂತಹ ಮೂರ್ಖರು ಭಗವಂತನ ವಿಷಯದಲ್ಲಿ ಸೇವಾಮನೋಭಾವವಿಲ್ಲದೆ ಭಗವದ್ಗೀತೆಯನ್ನು ಕುರಿತು ವ್ಯಾಖ್ಯಾನ ಬರೆಯಲು ಹೊರಡುತ್ತಾರೆ. ಇದರ ಪರಿಣಾಮವಾಗಿ ಅವರಿಗೆ ಭಜನ್ತಿ ಎನ್ನುವ ಶಬ್ದಕ್ಕೂ, ವರ್ಷಿಪ್ ಎನ್ನುವ ಶಬ್ದಕ್ಕೂ ಇರುವ ವ್ಯತ್ಯಾಸವು ಸರಿಯಾಗಿ ಅರ್ಥವಾಗುವುದಿಲ್ಲ.

ಎಲ್ಲ ಬಗೆಯ ಯೋಗಾಭ್ಯಾಸಗಳ ಶಿಖರ ಭಕ್ತಿಯೋಗ. ಬೇರೆಲ್ಲ ಯೋಗಗಳೂ ಭಕ್ತಿಯೋಗದಲ್ಲಿ ಭಕ್ತಿಯನ್ನು ತಲುಪಲು ಸಾಧನೆಗಳು ಮಾತ್ರ. ವಾಸ್ತವವಾಗಿ ಯೋಗ ಎಂದರೆ ಭಕ್ತಿಯೋಗ ಎಂದರ್ಥ. ಉಳಿದೆಲ್ಲ ಯೋಗಗಳೂ ಭಕ್ತಿಯೋಗದ ಗುರಿಯನ್ನು ಮುಟ್ಟುವ ಮಾರ್ಗಗಳು ಮಾತ್ರ. ಕರ್ಮಯೋಗದ ಪ್ರಾರಂಭದಿಂದ ಭಕ್ತಿಯೋಗದ ಅಂತ್ಯದವರೆಗೆ ಆತ್ಮಸಾಕ್ಷಾತ್ಕಾರಕ್ಕೆ ಇರುವ ಮಾರ್ಗ ದೀರ್ಘವಾದದ್ದು.

ಫಲಾಪೇಕ್ಷಿಯಿಲ್ಲದ ಕರ್ಮವು ಅಥವಾ ಕರ್ಮಯೋಗವು ಈ ಮಾರ್ಗದ ಪ್ರಾರಂಭ. ಕರ್ಮಯೋಗದಲ್ಲಿ ಜ್ಞಾನವೂ ವೈರಾಗ್ಯವೂ ಹೆಚ್ಚಿದಾಗ ಆ ಹಂತವನ್ನು ಜ್ಞಾನಯೋಗ ಎಂದು ಕರೆಯುತ್ತಾರೆ. ಬೇರೆ ಬೇರೆ ದೈಹಿಕ ಪ್ರಕ್ರಿಯೆಗಳಿಂದ ಜ್ಞಾನಯೋಗದಲ್ಲಿ ಪರಮಾತ್ಮನ ಧ್ಯಾನವು ಹೆಚ್ಚಿ ಮನಸ್ಸು ಅವನಲ್ಲಿ ನೆಲೆಸಿದಾಗ ಅದಕ್ಕೆ ಅಷ್ಟಾಂಗಯೋಗ ಎಂದು ಹೆಸರು. ಅಷ್ಟಾಂಗಯೋಗವನ್ನು ದಾಟಿ ದೇವೋತ್ತಮ ಪರಮ ಪುರುಷನಾದ ಕೃಷ್ಣನ ಬಳಿಗೆ ಬಂದಾಗ ಇದಕ್ಕೆ ಭಕ್ತಿಯೋಗವೆಂದು ಹೆಸರು. ಇದೇ ಶಿಖರ. ವಾಸ್ತವವಾಗಿ ಭಕ್ತಿಯೋಗವೇ ಅಂತಿಮ ಗುರಿ. ಆದರೆ ಭಕ್ತಿಯೋಗವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲು ಇತರ ಯೋಗಗಳ ತಿಳುವಳಿಕೆ ಅಗತ್ಯ.

ಮುನ್ನಡೆಯುತ್ತಿರುವ ಯೋಗಿಯು ನಿರಂತರ ಭಾಗ್ಯದ ನಿಜವಾದ ಹಾದಿಯಲ್ಲಿದ್ದಾನೆ. ಒಂದು ನಿರ್ದಿಷ್ಟ ಹಂತದಲ್ಲಿ ನಿಂತು ಮುಂದಕ್ಕೆ ಹೋಗದವನನ್ನು ಕರ್ಮಯೋಗಿ, ಜ್ಞಾನಯೋಗಿ ಅಥವಾ ಧ್ಯಾನಯೋಗಿ, ರಾಜಯೋಗಿ, ಹಠಯೋಗಿ ಮೊದಲಾದ ಒಂದು ನಿರ್ದಿಷ್ಟ ಹೆಸರಿನಿಂದ ಕರೆಯುತ್ತಾರೆ. ಭಕ್ತಿಯೋಗದವರೆಗೆ ಬರುವ ಅದೃಷ್ಟ ಮನುಷ್ಯನಿಗಿದ್ದರೆ ಅವನು ಎಲ್ಲ ಯೋಗಗಳನ್ನೂ ಮೀರಿದವನು ಎಂದು ತಿಳಿಯಬೇಕು. ನಾವು ಹಿಮಾಲಯ ಎಂದಾಗ ಜಗತ್ತಿನ ಅತಿ ಎತ್ತರದ ಪರ್ವತಗಳನ್ನು ಹೆಸರಿಸುತ್ತೇವೆ. ಅದರ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಅತ್ಯುನ್ನತ ಬಿಂದು ಎಂದು ಪರಿಗಣಿಸುತ್ತೇವೆ. ಹಾಗೆಯೇ ಕೃಷ್ಣಪ್ರಜ್ಞೆಯು ಯೋಗದ ಅತ್ಯುನ್ನತ ಹಂತ.

ವೈದಿಕ ಮಾರ್ಗದರ್ಶನಕ್ಕನುಗುಣವಾಗಿ ಯೋಗ್ಯ ನೆಲೆಯನ್ನು ಪಡೆದುಕೊಳ್ಳಲು ಭಕ್ತಿಯೋಗದ ಮಾರ್ಗವಾಗಿ ಕೃಷ್ಣಪ್ರಜ್ಞೆಗೆ ಬರುವುದು ಒಂದು ದೊಡ್ಡ ಭಾಗ್ಯ. ಆದರ್ಶಯೋಗಿಯು ತನ್ನ ಮನಸ್ಸನ್ನು ಕೃಷ್ಣನಲ್ಲಿ ಕೇಂದ್ರೀಕರಿಸುತ್ತಾನೆ. ಕೃಷ್ಣನಿಗೆ ಶ್ಯಾಮಸುಂದರನೆಂದು ಹೆಸರು. ಆತನದು ಮೋಡದ ಬಣ್ಣದಂತಹ ಸುಂದರ ಮೈಬಣ್ಣ. ಅವನ ತಾವರೆಯಂತಹ ಮುಖವು ಸೂರ್ಯನಂತೆ ಪ್ರಕಾಶಿಸುತ್ತದೆ. ಅವನ ಉಡುಪು ಆಭರಣಗಳಿಂದ ಹೊಳೆಯುತ್ತದೆ. ಅವನ ದೇಹವು ಮಾಲೆಯನ್ನು ಧರಿಸಿದೆ. ಅವನ ಸುತ್ತ ಜಾಜ್ವಲ್ಯಮಾನವಾದ ಪ್ರಭೆ. ಅದಕ್ಕೆ ಬ್ರಹ್ಮಜ್ಯೋತಿ ಎಂದು ಹೆಸರು.

ಆತನು ರಾಮ, ನರಸಿಂಹ, ವರಾಹ ಮತ್ತು ದೇವೋತ್ತಮ ಪರಮ ಪುರುಷನಾದ ಕೃಷ್ಣನಾಗಿ ಅವತಾರವೆತ್ತುತ್ತಾನೆ. ಯಶೋದೆಯ ಮಗನಾಗಿ ಮಾನವರೂಪದಲ್ಲಿ ಭೂಮಿಗಿಳಿದು ಬರುತ್ತಾನೆ. ಜನರು ಅವನನ್ನು ಕೃಷ್ಣ, ಗೋವಿಂದ ಮತ್ತು ವಾಸುದೇವ ಎಂದು ತರೆಯುತ್ತಾರೆ. ಅವನು ಪರಿಪೂರ್ಣನಾದ ಮಗು, ಪತಿ, ಗೆಳೆಯ ಮತ್ತು ಪ್ರಭು. ಆತನು ಎಲ್ಲ ಐಶ್ವರ್ಯಗಳಿಂದ ಮತ್ತು ದಿವ್ಯಗುಣಗಳಿಂದ ತುಂಬಿದ್ದಾನೆ. ಭಗವಂತನ ಈ ಲಕ್ಷಣಗಳ ಸಂಪೂರ್ಣ ಅರಿವು ಸದಾ ಇರುವ ಮನುಷ್ಯನನ್ನು ಅತ್ಯಂತ ಶ್ರೇಷ್ಠಯೋಗಿ ಎಂದು ಕರೆಯುತ್ತಾರೆ. ಯೋಗದಲ್ಲಿ ಈ ಅತ್ಯುನ್ನತ ಪರಿಪೂರ್ಣತೆಯ ಹಂತವನ್ನು ಭಕ್ತಿಯೋಗದಿಂದ ಮಾತ್ರ ಸಾಧಿಸಬಹುದು. ಇದನ್ನು ಎಲ್ಲ ವೈದಿಕ ಸಾಹಿತ್ಯವು ದೃಢಪಡಿಸುತ್ತದೆ -

ಯಸ್ಯ ದೇವೇ ಪರಾಭಕ್ತಿರ್ ಯಥಾ ದೇವೇ ತಥಾ ಗುರೌ |

ತಸ್ಯೈತೇ ಕಥಿತಾ ಹ್ಯರ್ಥಾಃಪ್ರಕಾಶನ್ತೇ ಮಹಾತ್ಮನಃ ||

ಭಗವಂತನಲ್ಲಿಯೂ ಗುರುವಿನಲ್ಲಿಯೂ ಪ್ರಶ್ನಾತೀತ ವಿಶ್ವಾಸವಿರುವ ಮಹಾ ಆತ್ಮಗಳಿಗೆ ಮಾತ್ರ ವೈದಿಕ ಜ್ಞಾನದ ಸಕಲಾರ್ಥಗಳು ತಾವಾಗಿಯೇ ಪ್ರಕಟವಾಗುತ್ತವೆ.(ಶ್ವೇತಾಶ್ವತರ ಉಪನಿಷತ್ತು 6.23)

ಭಕ್ತಿರ್ ಅಸ್ಯ ಭಜನಂ ತದ್ ಇಹಾಮುತ್ರೋಪಾಧಿ ನೈರಾಸೇನಾಮುಷ್ಮಿನ್ ಮನಃ ಕಲ್ಪನಮ್, ಏತದ್ ಏವ ನೈಷ್ಕರ್ಮ್ಯಮ್. ಭಕ್ತಿಯೆಂದರೆ ಈ ಜನ್ಮದಲ್ಲಾಗಲೀ ಮುಂದಿನ ಜನ್ಮದಲ್ಲಾಗಲೀ ಐಹಿಕ ಲಾಭದ ಅಪೇಕ್ಷೆಯಿಲ್ಲದ ಭಗವಂತನ ಭಕ್ತಿಪೂರ್ವಕವಾದ ಸೇವೆ. ಇಂತಹ ಆಸೆಗಳನ್ನು ಬಿಟ್ಟು ಮನುಷ್ಯನು ಮನಸ್ಸನ್ನು ಪರಮ ಪ್ರಭುವಿನಲ್ಲಿ ಸಂಪೂರ್ಣವಾಗಿ ಲೀನಗೊಳಿಸಬೇಕು. ಇದೇ ನೈಷ್ಕರ್ಮ್ಯದ ಉದ್ದೇಶ. (ಗೋಪಾಲ ತಾಪನೀ ಉಪನಿಷ್ತು 1.15) ಯೋಗ ಪದ್ಧತಿಯ ಅತ್ಯುನ್ನತ ಪರಿಪೂರ್ಣ ಘಟ್ಟವಾದ ಭಕ್ತಿ ಅಥವಾ ಕೃಷ್ಣಪ್ರಜ್ಞೆಯ ಅನುಷ್ಠಾನಕ್ಕೆ ಇವು ಕೆಲವು ಸಾಧನಗಳು. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ 'ಧ್ಯಾನ ಯೋಗ' ಎಂಬ ಆರನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.

(This copy first appeared in Hindustan Times Kannada website. To read more like this please logon to kannada.hindustantimes.com )

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ