logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು; ಗೀತೆಯ ಅರ್ಥ ಹೀಗಿದೆ

Bhagavad Gita: ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು; ಗೀತೆಯ ಅರ್ಥ ಹೀಗಿದೆ

Raghavendra M Y HT Kannada

Feb 10, 2024 09:02 PM IST

google News

ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

  • Bhagavad Gita Updesh: ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಭಗವಂತನಿಗೆ ಶ್ರೇಷ್ಠರು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಅಧ್ಯಾಯ - 5 ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ

ಕಾಮಕ್ರೋಧವಿಮುಕ್ತಾನಾಂ ಯತೀನಾಂ ಯತಚೇತಸಾಮ್ |

ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್ ||26||

Bhagavad Gita Updesh in Kannada: ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿರುವವರೂ ಆತ್ಮಸಾಕ್ಷಾತ್ಕಾರವನ್ನು ಪಡೆದವರೂ ಸ್ವಯಂ ಶಿಸ್ತಿರುವವನೂ ಮತ್ತು ನಿರಂತರವಾಗಿ ಪರಿಪೂರ್ಣತೆಗಾಗಿ ಶ್ರಮಿಸುತ್ತಿರುವವರೂ ಆದವರಿಗೆ ಶೀಘ್ರವಾಗಿ ಬ್ರಹ್ಮನಿರ್ವಾಹಣವು ದೊರೆಯುವುದು ಖಂಡಿತ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸದಾ ಮುಕ್ತಿಗಾಗಿ ಶ್ರಮಿಸುತ್ತಿರುವ ಸಂತರಲ್ಲಿ ಕೃಷ್ಣಪ್ರಜ್ಞೆ ಇರುವವನೇ ಶ್ರೇಷ್ಠನಾದವನು. ಭಾಗವತವು (4.22-39) ಈ ಅಂಶವನ್ನು ಹೀಗೆ ದೃಢಪಡಿಸುತ್ತದೆ -

ಯತ್ಪಾದಪನ್ಕಜಪಲಾಶವಿಲಾಸಭಕ್ತ್ಯಾ

ಕರ್ಮಾಶಯಂ ಗ್ರಥಿತಮ್ ಉದ್ದ್ರಥಯನ್ತಿ ಸನ್ತಃ |

ತದ್ವನ್ನ ರಿಕ್ತಮತಯೋ ಯತಯೋಪಿ ರುದ್ಧ -

ಸ್ತೋತೋಗಣಾಸ್ತಮ್ ಅರಣಂ ಭಜ ವಾಸುದೇವಮ್ ||

ದೇವೋತ್ತಮ ಪರಮ ಪುರುಷನಾದ ವಾಸುದೇವನನ್ನು ಭಕ್ತಿ ಸೇವೆಯಿಂದ ಪೂಜಿಸಲು ಪ್ರಯತ್ನಿಸು, ಸಾಕು. ಭಗವಂತನ ಪಾದಕಮಲಗಳ ಸೇವೆಯಿಂದ ದಿವ್ಯಾನಂದದಲ್ಲಿ ನಿರತರಾದವರು ಕಾಮ್ಯ ಕರ್ಮಗಳಿಗಾಗಿ ಬೇರೂರಿರುವ ಬಯಕೆಯನ್ನು ಬುಡಸಹಿತ ಕಿತ್ತುಹಾಕಬಲ್ಲರು. ಅವರು ಇಂದ್ರಿಯಗಳ ಆವೇಗವನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಮಹಾಸಂತರು ಕೂಡ ನಿಯಂತ್ರಿಸಲಾರರು.

ಬದ್ಧ ಆತ್ಮನಲ್ಲಿ ಕರ್ಮಫಲವನ್ನು ಸವಿಯುವ ಬಯಕೆಯು ಎಷ್ಟು ಆಳವಾಗಿದೆಯೆಂದರೆ ಮಹಾಸಂತರಿಗೂ ಕೂಡ ತುಂಬ ಶ್ರಮಪಟ್ಟರೂ ಇಂತಹ ಬಯಕೆಗಳನ್ನು ನಿಯಂತ್ರಿಸಲು ಆತ್ಮಸಾಕ್ಷಾತ್ಕಾರದಲ್ಲಿ ಪರಿಪೂರ್ಣನಾದ ಭಗವದ್ಭಕ್ತನು ಬಹುಬೇಕ ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ. ಆತ್ಮಸಾಕ್ಷಾತ್ಕಾರದಲ್ಲಿ ಸಂಪೂರ್ಣಜ್ಞಾನವಿರುವುದರಿಂದ ಆತನು ಸದಾ ಸಮಾಧಿಸ್ಥಿತಿಯಲ್ಲಿರುತ್ತಾನೆ. ಇದೇ ತೆರೆನಾದ ಒಂದು ನಿದರ್ಶವನ್ನು ಇಲ್ಲಿ ಕೊಡಬಹುದು -

ದರ್ಶನಧ್ಯಾನಸಂಸ್ಪರ್ಶೈರ್ ಮತ್ಸ್ಯಕೂರ್ಮನಿಹಙ್ಗಮಾಃ |

ಸ್ವಾನ್ಯಪತ್ಯಾನಿ ಪುಷ್ಣನ್ತಿ ತಥಾಹಮ್ ಅಪಿ ಪದ್ಮಜ ||

ನೋಟ, ಧ್ಯಾನ ಮತ್ತು ಸ್ಪರ್ಶ ಇವುಗಳಿಂದ ಮಾತ್ರವೇ ಮೀನು, ಆಮೆ ಮತ್ತು ಪಕ್ಷಿಗಳು ತಮ್ಮ ಸಂತತಿಯನ್ನು ಸಂರಕ್ಷಿಸುತ್ತವೆ. ಹೇ ಪದ್ಮಜ, ನಾನೂ ಹಾಗೆಯೇ ಮಾಡುತ್ತೇನೆ.

ಮೀನು ತನ್ನ ಮರಿಗಳತ್ತ ನೋಡುವುದರಿಂದಲೇ ಅವುಗಳನ್ನು ಪೋಷಿಸುತ್ತದೆ. ಆಮೆಯು ಧ್ಯಾನಮಾತ್ರದಿಂದಲೇ ತನ್ನ ಮರಿಗಳನ್ನು ಸಂರಕ್ಷಿಸುತ್ತದೆ. ಆಮೆಯು ತನ್ನ ಮೊಟ್ಟೆಗಳನ್ನು ಭೂಮಿಯ ಮೇಲಿಡುತ್ತದೆ ಮತ್ತು ತಾನು ನೀರಿನಲ್ಲಿದ್ದು ಮೊಟ್ಟೆಗಳನ್ನು ಕುರಿತು ಧ್ಯಾನಿಸುತ್ತದೆ. ಹಾಗೆಯೇ ಕೃಷ್ಣಪ್ರಜ್ಞೆಯಲ್ಲಿರುವ ಭಕ್ತನು ಭಗವಂತನ ನಿವಾಸದಿಂದ ದೂರವಿರಬಹುದು. ಆದರೂ ಅವನು ಭಗವಂತನನ್ನು ಕುರಿತು ಸದಾ ಚಿಂತಿಸುವುದರಿಂದ, ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿದ್ದು ಭಗವಂತನ ನಿವಾಸಕ್ಕೆ ಏರಬಲ್ಲ. ಆತನು ಐಹಿಕ ಕ್ಲೇಶಗಳ ನೋವನ್ನು ಅನುಭವಿಸುವುದಿಲ್ಲ. ಈ ಸ್ಥಿತಿಯನ್ನು ಬ್ರಹ್ಮನಿರ್ವಾಣ ಎಂದು ಕರೆಯಲಾಗುತ್ತದೆ. ಸದಾ ಬಗವಂತನಲ್ಲಿ ಮಗ್ನನಾಗಿರುವುದರಿಂದ ಐಹಿಕ ಕ್ಲೇಶಗಳು ಇಲ್ಲದಿರುವುದೇ ಈ ಸ್ಥಿತಿ.

ಲಭನ್ತೇ ಬ್ರಹ್ಮನರ್ವಾಣಮ್ ಋಷಯಃ ಕ್ಷೀಣಕಲ್ಮಷಾಃ |

ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ ||25||

ಯಾರು ಸಂದೇಹಗಳಿಂದ ಉದ್ಭವವಾಗುವ ದ್ವಂದ್ವಗಳನ್ನು ಮೀರಿರುವರೋ, ಅಂತರಂಗದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುತ್ತಾರೋ, ಎಲ್ಲ ಜೀವಿಗಳ ಹಿತಕ್ಕಾಗಿ ಸದಾ ಶ್ರಮಿಸುವರೋ, ಮತ್ತು ಎಲ್ಲ ಪಾಪಗಳಿಂದ ಮುಕ್ತರಾಗಿರುವರೋ ಅವರು ಬ್ರಹ್ಮ ನಿರ್ವಾಣವನ್ನು ಪಡೆಯುತ್ತಾರೆ.

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿರುವನ ಮನುಷ್ಯನು ಮಾತ್ರ ಎಲ್ಲ ಜೀವಿಗಳ ಕಲ್ಯಾಣಕಾರ್ಯದಲ್ಲಿ ನಿರತನಾಗಿರದ್ದಾನೆ ಎಂದು ಹೇಳಬಹುದು. ಎಲ್ಲ ವಸ್ತುಗಳು ಆದಿಮೂಲವು ಕೃಷ್ಣನೆಂಬ ವಾಸ್ತವ ಜ್ಞಾನ ಹೊಂದಿದ್ದು ಆ ಮನೋಧರ್ಮದಲ್ಲಿ ಕೆಲಸ ಮಾಡುವ ಮನುಷ್ಯನು ಎಲ್ಲರಿಗಾಗಿ ಕೆಲಸ ಮಾಡುತ್ತಾನೆ. ಕೃಷ್ಣನೇ ಪರಮ ಭೋಕ್ತಾರ, ಪರಮ ಪ್ರಭು ಮತ್ತು ಪರಮಿತ್ರ ಎನ್ನುವುದನ್ನು ಮರೆತಿರುವುದೇ ಮಾನವ ಕುಲದ ದುಃಖಗಳಿಗೆ ಕಾರಣ. ಆದುದರಿಂದ ಇಡೀ ಮಾನವ ಸಮಾಜದಲ್ಲಿ ಈ ಪ್ರಜ್ಞೆಯನ್ನು ಪುನಃಶ್ಚೇತಗೊಳಿಸಲು ಶ್ರಮಿಸುವುದೇ ಅತ್ಯುನ್ನತ ಕಲ್ಯಾಣ ಕಾರ್ಯ. ಬ್ರಹ್ಮನಿರ್ವಾಣವಾಗದೆ ಇಂತಹ ಶ್ರೇಷ್ಠ ಕಲ್ಯಾಣಕಾರ್ಯದಲ್ಲಿ ತೊಡಗುವುದು ಸಾಧ್ಯವಿಲ್ಲ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಕೃಷ್ಣನ ಪರಮಾಧಿಕಾರದ ವಿಷಯದಲ್ಲಿ ಯಾವುದೇ ಸಂದೇಹವಿರುವುದಿಲ್ಲ. ಆತನು ಎಲ್ಲ ಪಾಪಗಳಿಂದಲೂ ಬಿಡುಗಡೆ ಹೊಂದಿದವನು. ಆದುದರಿಂದ ಆತನಿಗೆ ಸಂದೇಹವೇ ಇಲ್ಲ. ಇದೇ ದೈವೀಪ್ರೇಮದ ಸ್ಥಿತಿ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ