logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣ ಯಾವಾಗಲೂ 20 ರಿಂದ 25 ವರ್ಷದ ತರುಣನಂತೆಯೇ ಕಾಣುತ್ತಾನೆ ಯಾಕೆ; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಶ್ರೀಕೃಷ್ಣ ಯಾವಾಗಲೂ 20 ರಿಂದ 25 ವರ್ಷದ ತರುಣನಂತೆಯೇ ಕಾಣುತ್ತಾನೆ ಯಾಕೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Dec 31, 2023 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಶ್ರೀಕೃಷ್ಣ ಯಾವಾಗಲೂ ತರುಣನಂತೆಯೇ ಕಾಣುತ್ತಾನೆ. ವಯಸ್ಸಾದವರಂತೆ ಯಾಕೆ ಕಾಣೋದಿಲ್ಲ ಎಂಬುದನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಜೋಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಪಿ ಸನ್ |

ಪ್ರಕೃತಿಂ ಸ್ವಾಮಧಿಷ್ಠಾಯ ಸಮ್ಭವಾಮ್ಯಾತ್ಮಮಾಯಯಾ ||6||

ನನಗೆ ಹುಟ್ಟು ಎನ್ನುವುದಿಲ್ಲ. ನನ್ನ ಆಧ್ಯಾತ್ಮಿಕ ಶರೀರವು ಕ್ಷಯಿಸುವುದಿಲ್ಲ.ನಾನು ಎಲ್ಲ ಜೀವಿಗಳ ಪ್ರಭು. ಆದರೂ ಪ್ರತಿ ಯುಗದಲ್ಲಿಯೂ ನನ್ನ ಮೂಲ ಆಧ್ಯಾತ್ಮಿಕ ರೂಪದಲ್ಲಿ ಅವತರಿಸುತ್ತೇನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಗವಂತನು ತನ್ನ ಜನ್ಮದ ವೈಚಿತ್ರ್ಯವನ್ನು ಕುರಿತು ಹೇಳುತ್ತಾನೆ. ಅವನು ಸಾಮಾನ್ಯ ಮನುಷ್ಯನಂತೆ ಕಂಡರೂ ತನ್ನ ಹಿಂದಿನ ಅಸಂಖ್ಯಾತ ಜನ್ಮಗಳ ಎಲ್ಲ ವಿಷಯಗಳೂ ಅವನಿಗೆ ನೆನಪಿರುತ್ತವೆ. ಸಾಮಾನ್ಯ ಮನುಷ್ಯನಿಗೆ ಕೆಲವೇ ಗಂಟೆಗಳ ಹಿಂದೆ ತಾನು ಏನು ಮಾಡಿದೆ ಎನ್ನುವುದು ನೆನಪಿರುವುದಿಲ್ಲ. ಹಿಂದಿನ ದಿನ ಅದೇ ಹೊತ್ತಿನಲ್ಲಿ ಅವನು ಏನು ಮಾಡುತ್ತಿದ್ದ ಎಂದು ಪ್ರಶ್ನಿಸಿದರೆ ಜ್ಞಾಪಿಸಿಕೊಳ್ಳುವುದು ಅವನಿಗೆ ಬಹು ಕಷ್ಟವಾಗುತ್ತದೆ. ಅದನ್ನು ಜ್ಞಾಪಿಸಿಕೊಳ್ಳಲು ಖಂಡಿತವಾಗಿಯೂ ಆತನು ತನ್ನ ನೆನಪಿಗೆ ಪಾತಾಳಗರಡಿಯನ್ನು ಹಾಕಬೇಕಾಗುತ್ತದೆ.

ಇಷ್ಟಾದರೂ ತಾವೇ ಭಗವಂತನ ಅಥವಾ ಕೃಷ್ಣ ಎಂದು ಹೇಳಿಕೊಳ್ಳುವ ಧಾರ್ಷ್ಟ್ಯವಿರುವವರು ಇದ್ದಾರೆ. ಅವರ ಅರ್ಥಹೀನ ಬಡಾಯಿಯಿಂದ ನಾವು ಮೋಸಹೋಗಬಾರದು. ಭಗವಂತನು ತನ್ನ ಪ್ರಕೃತಿಯನ್ನು ವಿವರಿಸುತ್ತಾನೆ. ಪ್ರಕೃತಿ ಎಂದರೆ ಸ್ವಭಾವವೂ ಹೌದು, ಸ್ವರೂಪವೂ ಹೌದು. ಭಗವಂತನು ತಾನು ತನ್ನದೇ ಆದ ಶರೀರದೊಡನೆಯೇ ಅವತರಿಸುತ್ತೇನೆ ಎಂದು ಹೇಳುತ್ತಾನೆ. ಸಾಮಾನ್ಯಜೀವಿಯು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಬದಲಾವಣೆ ಮಾಡುವಂತೆ ಭಗವಂತನು ಮಾಡುವುದಿಲ್ಲ. ಬುದ್ಧಾತ್ಮನು ಈ ಜನ್ಮದಲ್ಲಿ ಒಂದು ಬಗೆಯ ದೇಹವನ್ನು ಹೊಂದಿರಬಹುದು. ಆದರೆ ಮುಂದಿನ ಜನ್ಮದಲ್ಲಿ ಇನ್ನೊಂದು ಬಗೆಯ ದೇಹವನ್ನು ಹೊಂದಿರುತ್ತಾನೆ.

ಭೌತಿಕ ಜಗತ್ತಿನಲ್ಲಿ ಜೀವಿಗೆ ಬದಲಾವಣೆಯಾಗದ ದೇಹವಿಲ್ಲ. ಆತನು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತಾನೆ. ಆದರೆ ಭಗವಂತನು ಹಾಗೆ ಮಾಡುವುದಿಲ್ಲ. ತನ್ನ ಅಂತರಂಗ ಶಕ್ತಿಯಿಂದ ತಾನು ಅವತರಿಸಿದಾಗಲೆಲ್ಲ ಒಂದೇ ಮೂಲಶರೀರದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಕೃಷ್ಣನು ಈ ಭೌತಿಕ ಜಗತ್ತಿನಲ್ಲಿ ಎರಡು ಕೈಗೆಳೊಡನೆ ಕೊಳಲನ್ನು ಹಿಡಿದು ತನ್ನ ಮೂಲ ನಿತ್ಯ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಭೌತಿಕ ಜಗತ್ತಿನ ಕಶ್ಮಲದ ಸೋಂಕಿಲ್ಲದೆ ತನ್ನ ನಿತ್ಯ ಶರೀರದಲ್ಲಿ ಒಂದೇ ರೀತಿ ಕಾಣಿಸಿಕೊಳ್ಳುತ್ತಾನೆ. ಆತನು ತನ್ನ ಆಧ್ಯಾತ್ಮಿಕ ಶರೀರದಲ್ಲಿ ಕಾಣಿಸಿಕೊಂಡರೂ ಮತ್ತು ವಿಶ್ವದ ಪ್ರಭುವಾದರೂ ಸಾಮಾನ್ಯಜೀವಿಯಂತೆ ಜನ್ಮತಾಳಿರುವ ಹಾಗೆ ಕಾಣಿಸುತ್ತದೆ.

ಶ್ರೀಕೃಷ್ಣನು ಮುದುಕನಾದ ಚಿತ್ರವನ್ನು ನಾವು ನೋಡುವುದೇ ಇಲ್ಲ

ಭೌತಿಕ ಶರೀರದಂತೆ ಆತನ ಶರೀರವು ಕ್ಷಯಿಸುವುದಿಲ್ಲವಾದರೂ ಶ್ರೀಕೃಷ್ಣನು ಶೈಶವದಿಂದ ಬಾಲ್ಯಕ್ಕೆ, ಬಾಲ್ಯದಿಂದ ಯೌವನಕ್ಕೆ ಬೆಳೆಯುವಂತೆ ಕಾಣುತ್ತದೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಅವನಿಗೆ ಯೌವನದಾಚೆ ವಯಸ್ಸಾಗುವುದೇ ಇಲ್ಲ. ಕುರುಕ್ಷೇತ್ರದ ಯುದ್ಧದ ಹೊತ್ತಿಗೆ ಅವನಿಗೆ ಮನೆಯಲ್ಲಿ ಹಲವಾರು ಮೊಮ್ಮಕ್ಕಳಿದ್ದರು ಎಂದರೆ ಐಹಿಕ ಲೆಕ್ಕದಲ್ಲಿ ಆತನಿಗೆ ಸಾಕಷ್ಟು ವಯಸ್ಸಾಗಿತ್ತು. ಆದರೂ ಆತನು 20 ಅಥವಾ 25 ವರ್ಷ ವಯಸ್ಸಿನ ತರುಣನಂತೆ ಕಾಣುತ್ತಿದ್ದನು. ಮುದುಕನಾದ ಕೃಷ್ಣನ ಚಿತ್ರವನ್ನು ನಾವು ನೋಡುವುದೇ ಇಲ್ಲ. ಏಕೆಂದರೆ ಇಡೀ ಸೃಷ್ಟಿಯಲ್ಲಿ ಭೂತ, ವರ್ತಮಾನ, ಭವಿಷ್ಯತ್ ಕಾಲಗಳಲ್ಲಿ ಆತನೇ ಅತ್ಯಂತ ವಯಸ್ಸಾದವನಾದರೂ ಅವನಿಗೆ ನಮ್ಮಂತೆ ಮುಪ್ಪು ಬರುವುದಿಲ್ಲ.

ಆತನ ದೇಹವಾಗಲೀ ಬುದ್ಧಿಶಕ್ತಿಯಾಗಲೀ ಕ್ಷೀಣಿಸುವುದೂ ಇಲ್ಲ, ಬದಲಾಗುವುದೂ ಇಲ್ಲ. ಆದುದರಿಂದ ಆತನು ಭೌತಿಕ ಜಗತ್ತಿನಲ್ಲಿ ಇದ್ದರೂ ಆತನದು ಹುಟ್ಟಿಲ್ಲದ, ಅದೇ ಸಚ್ಛಿದಾನಂದ ಸ್ವರೂಪ ಎನ್ನುವುದು ಸ್ಪಷ್ಟವಾಗುತ್ತದೆ. ಅವನ ಆಧ್ಯಾತ್ಮಿಕ ದೇಹ ಮತ್ತು ಬುದ್ಧಿಶಕ್ತಿಗಳಿಗೆ ಬದಲಾವಣೆ ಎನ್ನುವುದಿಲ್ಲ. ವಾಸ್ತವವಾಗಿ ಅವನ ಕಾಣಿಸಿಕೊಳ್ಳುವುದು ಮತ್ತು ಕಣ್ಮರೆಯಾಗುವುದು ಸೂರ್ಯನು ಉದಯಿಸಿ, ನಮ್ಮ ಮುಂದೆಯೇ ಚಲಿಸುತ್ತಾ ಅನಂತರ ನಮ್ಮ ದೃಷ್ಟಿಯಿಂದ ಮರೆಯಾಗುವಂತೆ. ಸೂರ್ಯನು ಕಾಣಿಸದಿದ್ದಾಗ ನಾವು ಅವನು ಮುಳುಗಿದ್ದಾನೆ ಎಂದು ಭಾವಿಸುತ್ತೇನೆ. ಸೂರ್ಯನು ನಮ್ಮ ಕಣ್ಣ ಮುಂದೆ ಇದ್ದಾಗ ಸೂರ್ಯನು ಕ್ಷಿತಿಜದ ಮೇಲುಗಡೆ ಇದ್ದಾನೆ ಎಂದು ಭಾವಿಸುತ್ತೇನೆ. ವಸ್ತುತಃ ಸೂರ್ಯನು ಒಂದೇ ಅಚಲ ಸ್ಥಾನದಲ್ಲಿದ್ದಾನೆ. ಆದರೆ ನಮ್ಮ ಇಂದ್ರಿಯಗಳು ದೋಷಪೂರ್ಣವಾಗಿವೆ ಮತ್ತು ಅವಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲ. ಆದುದರಿಂದ ಆಕಾಶದಲ್ಲಿ ಸೂರ್ಯನು ಕಾಣಿಸಿಕೊಳ್ಳುವುದನ್ನು ಮತ್ತು ಅದೃಶ್ಯನಾಗುವುದು ಯಾವುದೇ ಸಾಮಾನ್ಯ ಜೀವಿಯು ಕಾಣಿಸಿಕೊಳ್ಳುವ ಮತ್ತು ಅದೃಶ್ಯವಾಗುವ ರೀತಿಯಿಂದ ಪರಿಪೂರ್ಣವಾಗಿ ಭಿನ್ನವಾದವು. ಆತನು ಅಂತರಂಗ ಶಕ್ತಿಯಿಂದ ನಿತ್ಯನಾಗಿದ್ದಾನೆ.

ಪರಮ ಪುರುಷನಿಗೆ ಹುಟ್ಟು ಎನ್ನುವುದಿಲ್ಲ

ಚಿದಾನಂದನು ಭೌತಿಕ ಪ್ರಕೃತಿಯಿಂದ ಕಲುಷಿತನಾಗುವುದೇ ಇಲ್ಲ ಎಂಬುದು ಸ್ಪಷ್ಟ. ದೇವೋತ್ತಮ ಪರಮ ಪುರುಷನಿಗೆ ಹುಟ್ಟು ಎನ್ನುವುದೇ ಇಲ್ಲವೇ ಇಲ್ಲ. ಆದರೂ ಆತನು ಹಲವು ರೂಪಗಳಲ್ಲಿ ಜನ್ಮತಾಳುವಂತೆ ಕಾಣುತ್ತದೆ ಎಂದು ವೇದಗಳು ದೃಢಪಡಿಸುತ್ತವೆ. ವೇದಕ್ಕೆ ಪೂರಕವಾದ ಸಾಹಿತ್ಯವೂ, ಭಗವಂತನು ಜನ್ಮ ತಾಳುವಂತೆ ಕಂಡರೂ ಆತನ ಶರೀರವು ಬದಲಾಗುವುದಿಲ್ಲ ಎಂದೇ ದೃಢಪಡಿಸುತ್ತದೆ. ಭಾಗವತದಲ್ಲಿ ಆತನು ನಾಲ್ಕು ಕೈಗಳುಳ್ಳ ಷಡೈಶ್ವರ್ಯ ಶೋಭಿತನಾದ ನಾರಾಯಣನಾಗಿ ತಾಯಿಗೆ ಕಾಣಿಸಿಕೊಳ್ಳುತ್ತಾನೆ. ತನ್ನ ಮೂಲ ನಿತ್ಯಸ್ವರೂಪದಲ್ಲಿ ಆತನು ಕಾಣಿಸಿಕೊಳ್ಳುವುದು ಜೀವಿಗಳ ವಿಷಯದಲ್ಲಿ ಅವನು ತೋರುವ ಅವ್ಯಾಜ ಕರುಣೆ. ತಾನು (ಭಗವಂತನು) ಇರುವ ರೂಪದಲ್ಲಿ ಮನಸ್ಸನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗಲಿ ಎನ್ನುವುದು ಆತನ ಉದ್ದೇಶ.

ನಿರಾಕಾರವಾದಿಗಳು ಮನಸ್ಸಿನ ಸುಳ್ಳು ಸೃಷ್ಟಿಗಳನ್ನು ಅಥವಾ ಕಲ್ಪನೆಗಳನ್ನು ಭಗವಂತನ ರೂಪಗಳೆಂದು ಭಾವಿಸುತ್ತಾನೆ. ಜೀವಿಗಳು ಇವುಗಳಲ್ಲಿ ಮನಸ್ಸನ್ನು ನಿಲ್ಲಿಸಬಾರದೆಂದೂ ಭಗವಂತನ ಉದ್ದೇಶ. ವಿಶ್ವಕೋಶ ನಿಘಂಟಿನ ಪ್ರಕಾರ ಮಾಯಾ ಅಥವಾ ಆತ್ಮಮಾಯಾ ಎನ್ನುವ ಪದವು ಭಗವಂತನ ಅವ್ಯಾಜ ಕರುಣೆಯನ್ನು ಸೂಚಿಸುತ್ತದೆ. ಭಗವಂತನಿಗೆ ತನ್ನ ಎಲ್ಲ ಹಿಂದಿನ ಅವತಾರಗಳ ಮತ್ತು ಅದೃಶ್ಯಗಳ ನೆನಪಿರುತ್ತದೆ. ಆದರೆ ಸಾಮಾನ್ಯ ಜೀವಿಯು ಹೊಸ ಶರೀರವನ್ನು ಪಡೆಯುತ್ತಲೇ ಹಿಂದಿನ ಶರೀರದ ವಿಷಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾನೆ. ಭಗವಂತನು ಈ ಭೂಮಿಯ ಮೇಲೆ ಇರುವಾಗ ಅದ್ಭುತವಾದ, ಮಾನವಾತೀತವಾದ ಕಾರ್ಯಗಳನ್ನು ಮಾಡುತ್ತಾನೆ. ಆತನು ಎಲ್ಲ ಜೀವಿನಗಳ ಒಡೆಯ. ಆದುದರಿಂದ ಭಗವಂತನು ಯಾವಾಗಲೂ ಅದೇ ಪರಮ ಸತ್ಯನಾಗಿದ್ದಾನೆ. ಅವನ ಶರೀರ ಮತ್ತು ಆತ್ಮಗಳಲ್ಲಿ ಅಥವಾ ಅವನ ಗುಣ ಮತ್ತು ದೇಹಗಳಲ್ಲಿ ಭಿನ್ನತೆ ಇಲ್ಲ. ಭಗವಂತನು ಈ ಜಗತ್ತಿನಲ್ಲಿ ಅವತರಿಸುವುದೇಕೆ, ಅದೃಶ್ಯನಾಗುವುದೇಕೆ ಎಂಬ ಪ್ರಶ್ನೆ ಏಳಬಹುದು. ಇದನ್ನು ಮುಂದಿನ ಶ್ಲೋಕದಲ್ಲಿ ವಿವರಿಸಿದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ