logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತಿಸೇವೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಕ್ತಿಸೇವೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 20, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಕ್ತಿಸೇವೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯ ರಹಸ್ಯತಮ ಜ್ಞಾನದ ಶ್ಲೋಕ ಎರಡರಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 2

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

ಜ್ಞಾನಂ ವಿಜ್ಞಾನಸಹಿತಂ ಯಜ್ಞ್‌ಜ್ಞಾತ್ವಾ ಮೋಕ್ಷ್ಯಸೇಶುಭಾತ್||2||

ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೇದಾಂತ ಸೂತ್ರದಲ್ಲಿ (3.2.26) ಇದನ್ನು ಹೀಗೆ ವರ್ಣಿಸಿದೆ - ಪ್ರಕಾಶಶ್ಚ ಕರ್ಮಣಿ ಅಭ್ಯಾಸಾತ್. ಭಕ್ತಿ ಸೇವೆಯ ಶಕ್ತಿಯು ಎಷ್ಟೆಂದರೆ ಭಕ್ತಿಸೇವೆಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಿಶ್ಚಯವಾಗಿಯೂ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ. ಇದರ ವಾಸ್ತವ ಉದಾಹರಣೆಯನ್ನು ನಾರದರ ಹಿಂದಿನ ಜನ್ಮದಲ್ಲಿ ನೋಡಬಹುದು. ಆ ಜನ್ಮದಲ್ಲಿ ಅವರು ಒಬ್ಬ ದಾಸಿಯ ಮನನಾಗಿದ್ದರು. ಅವರಿಗೆ ವಿದ್ಯೆಯೂ ಇರಲಿಲ್ಲ ಮತ್ತು ಅವರು ಉತ್ತಮ ಕುಟುಂಬದಲ್ಲಿ ಜನಿಸಿಯೂ ಇರಲಿಲ್ಲ. ಆದರೆ ಅವರ ತಾಯಿಯು ಮಹಾಭಕ್ತರ ಸೇವೆಯಲ್ಲಿ ತೊಡಗಿದ್ದಾಗ ನಾರದರೂ ಅದರಲ್ಲಿ ನಿರತರಾದರು ಮತ್ತು ಕೆಲವೊಮ್ಮೆ ತಾಯಿಯು ಇಲ್ಲದಿದ್ದಾಗ ಸ್ವತಃ) ನಾರದರೇ ಆ ಮಹಾಭಕ್ತರ ಸೇವೆಯನ್ನೂ ಮಾಡುತ್ತಿದ್ದರು. ನಾರದರೇ ಹೀಗೆ ಹೇಳಿದ್ದಾರೆ -

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ತತ್ರಾನ್ವಹಂ ಕೃಷ್ಣಕಥಾಃ ಪ್ರಗಾಯತಾಮ್

ಅನುಗ್ರಹೇಣಾಶೃಣವಂ ಮನೋಹರಾಃ |

ತಾಃ ಶ್ರದ್ಧಯಾ ಮೇನುಪದಂ ವಿಶೃಣ್ವತಃ

ಪ್ರಿಯಶ್ರವಸ್ಯಙ್ಗ ಮಮಾಭವದ್ ರುಚಿಃ ||

ಋಷಿಗಳ ಸಹವಾಸದಿಂದ ನಾರದರಿಗೆ ಪ್ರಭುವಿನ ದಿವ್ಯ ಮಹಿಮೆಯನ್ನು ಕೇಳುವುದರಲ್ಲಿ ಮತ್ತು ಸಂಕೀರ್ತನೆ ಮಾಡುವುದರಲ್ಲಿ ಅಭಿರುಚಿಯು ಬಂದಿತು. ಅವರು ಭಕ್ತಿಸೇವೆಗಾಗಿ ಹಂಬಲಿಸಿದರು. ಆದುದರಿಂದ ವೇದಾಂತ ಸೂತ್ರದಲ್ಲಿ ಹೇಳಿದಂತೆ ಪ್ರಕಾಶಶ್ಚ ಕರ್ಮಣಿ ಅಭ್ಯಾಸಾತ್ ಎಂದರೆ ಒಬ್ಬ ಮನುಷ್ಯನು ಭಕ್ತಿ ಸೇವೆಯಲ್ಲಿ ನಿರತನಾಗಿದ್ದರೆ ಸಾಕು, ಎಲ್ಲವೂ ಅವನಿಗೆ ತಂತಾನೇ ಪ್ರಕಟವಾಗುತ್ತದೆ ಮತ್ತು ಆತನು ಅವನ್ನೆಲ್ಲ ಅರ್ಥಮಾಡಿಕೊಳ್ಳುತ್ತಾನೆ. ಇದಕ್ಕೆ ಪ್ರತ್ಯಕ್ಷ ಎಂದರೆ ನೇರವಾಗಿ ಗ್ರಹಿಸಿದ್ದು ಎಂದು ಅರ್ಥ.

ಧರ್ಮ್ಯಮ್ ಎಂದರೆ ಧರ್ಮ ಮಾರ್ಗ ಎಂದರ್ಥ. ನಾರದರು ವಾಸ್ತವವಾಗಿ ಒಬ್ಬ ದಾಸಿಯ ಮಗ. ಅವರಿಗೆ ಶಾಲೆಗೆ ಹೋಗುವ ಅವಕಾಶ ಇರಲಿಲ್ಲ. ಅವರು ತಾಯಿಗೆ ನೆರವಾಗುತ್ತಿದ್ದರು ಅಷ್ಟೇ. ಸುದೈವದಿಂದ ಅವರ ತಾಯಿಯು ಭಕ್ತರಿಗೆ ಒಂದಿಷ್ಟು ಸೇವೆ ಮಾಡಿದಳು. ಮಗು ನಾರದರಿಗೂ ಆ ಅವಕಾಶ ದೊರೆಯಿತು. ಸಹವಾಸ ಮಾತ್ರದಿಂದಲೇ ಅವರು ಎಲ್ಲ ಧರ್ಮದ ಅತ್ಯುನ್ನತ ಗುರಿಯನ್ನು ಸಾಧಿಸಿದರು. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ ಎಲ್ಲ ಧರ್ಮದ ಅತ್ಯುನ್ನತ ಗುರಿಯನ್ನು ಸಾಧಿಸಿದರು. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ ಎಲ್ಲ ಧರ್ಮದ ಅತ್ಯುನ್ನತ ಗುರಿ ಎಂದರೆ ಭಕ್ತಿಸೇವೆ (ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರ್ ಅಧ್ಯೋಕ್ಷ ಜೇ). ಧಾರ್ಮಿಕ ಜನರಿಗೆ, ಭಕ್ತಿಸೇವೆಯೇ ಧರ್ಮದ ಅತ್ಯುನ್ನತ ಪರಿಪೂರ್ಣತೆ ಎನ್ನುವುದು ತಿಳಿದಿರುವುದಿಲ್ಲ.

ಎಂಟನೆಯ ಅಧ್ಯಾಯದ ಕಡೆಯ ಶ್ಲೋಕಕ್ಕೆ ಸಂಬಂಧಿಸಿ ನಾವು ಆಗಲೇ ಚರ್ಚಿಸಿದಂತೆ (ವೇದೇಷು ಯಜ್ಞೇಷು ತಪಃಸು ಚೈವ) ಸಾಮಾನ್ಯವಾಗಿ ಆತ್ಮಸಾಕ್ಷಾತ್ಕಾರಕ್ಕೆ ವೇದಗಳ ಜ್ಞಾನ ಅಗತ್ಯ. ಆದರೆ ಇಲ್ಲಿ ನಾರದರು ಯಾವುದೇ ಗುರುವಿನ ಪಾಥಶಾಲೆಗೂ ಹೋಗದಿದ್ದರೂ, ವೈದಿಕತತ್ವಗಳಲ್ಲಿ ಶಿಕ್ಷಣ ಪಡೆಯದಿದ್ದರೂ, ವೇದಗಳ ಅಭ್ಯಾಸದಿಂದ ಬರುವ ಅತ್ಯುನ್ನತ ಫಲಗಳನ್ನು ಪಡೆದರು. ಈ ಪ್ರಕ್ರಿಯೆಯ ಶಕ್ತಿಯು ಎಷ್ಟು ಎಂದರೆ ಧಾರ್ಮಿಕ ಪ್ರಕ್ರಿಯೆಯನ್ನು ಕ್ರಮವಾಗಿ ಆಚರಿಸಿದೆಯೂ ಮನುಷ್ಯನು ಅತ್ಯುನ್ನತ ಪರಿಪೂರ್ಣತೆಗೆ ಏರಬಹುದು. ಇದು ಹೇಗೆ ಸಾಧ್ಯ? ಇದನ್ನು ವೈದಿಕ ಸಾಹಿತ್ಯವೂ ದೃಢಪಡಿಸುತ್ತದೆ - ಆಚಾರ್ಯವಾನ್ ಪುರುಷೋ ವೇದ. ಶ್ರೇಷ್ಠ ಆಚಾರ್ಯರ ಸಹವಾಸದಲ್ಲಿ ಇರುವವನು ವಿದ್ಯಾಭ್ಯಾಸವಿಲ್ಲದಿದ್ದರೂ ಮತ್ತು ವೇದಗಳನ್ನು ಎಂದೂ ಅಧ್ಯಯನ ಮಾಡದಿದ್ದರೂ ಸಾಕ್ಷಾತ್ಕಾರಕ್ಕೆ ಅಗತ್ಯವಾದ ಎಲ್ಲ ವಿದ್ಯೆಯ ಪರಿಚಯವನ್ನೂ ಪಡೆಯಬಲ್ಲನು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ