logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ತನ್ನ ನಿರ್ದಿಷ್ಟ ಕೆಲಸಗಳೊಂದಿಗೆ ಭಗವಂತನನ್ನು ಧ್ಯಾನಿಸಬಹುದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯ ತನ್ನ ನಿರ್ದಿಷ್ಟ ಕೆಲಸಗಳೊಂದಿಗೆ ಭಗವಂತನನ್ನು ಧ್ಯಾನಿಸಬಹುದು; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Apr 04, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಮನುಷ್ಯ ತನ್ನ ನಿರ್ದಿಷ್ಟ ಕಾರ್ಯಗಳೊಂದಿಗೆ ಭಗವಂತನನ್ನು ಧ್ಯಾನಿಸಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 7ನೇ ಶ್ಲೋಕದಲ್ಲಿ ಓದಿ.  
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 6

ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯನ್ತೇ ಕಲೇವರಮ್ |

ತಂ ತಮೇವೈತಿ ಕೌನ್ತೇಯ ಸದಾ ತದ್ಬಾವಭಾವಿತಃ ||6||

ಅನುವಾದ: ಕುಂತಿಯ ಮಗನಾದ ಅರ್ಜುನನೇ, ವ್ಯಕ್ತಿಯು ತನ್ನ ದೇಹವನ್ನು ಬಿಡುವಾಗ ಯಾವ ಭಾವನ್ನು ಸ್ಮರಿಸುವನೋ ಅದೇ ಭಾವವನ್ನು ನಿಶ್ಚಯವಾಗಿಯೂ ಪಡೆಯುವನು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಾವಾರ್ಥ: ಸಾವಿನ ವಿಷಮ ಗಳಿಗೆಯಲ್ಲಿ ಮನುಷ್ಯನು ತನ್ನ ಸ್ವಭಾವವನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಇಲ್ಲಿ ವಿವರಿಸಿದೆ. ತನ್ನ ಜೀವನದ ಅಂತ್ಯದಲ್ಲಿ ಕೃಷ್ಣನನ್ನು ಕುರಿತು ಯೋಚಿಸುತ್ತ ದೇಹವನ್ನು ಬಿಡುವವನು ಪರಮ ಪ್ರಭುವಿನ ದಿವ್ಯಭಾವವನ್ನು ಪಡೆಯುತ್ತಾನೆ. ಆದರೆ ಕೃಷ್ಣನನ್ನು ಬಿಟ್ಟು ಬೇರೆ ಏನನ್ನೂ ಯೋಚಿಸುವ ಅವನು ಆ ದಿವ್ಯಸ್ಥಿತಿಯನ್ನು ಪಡೆಯುತ್ತಾನೆ ಎನ್ನುವುದು ನಿಜವಲ್ಲ. ಈ ಅಂಶವನ್ನು ನಾವು ಎಚ್ಚರದಿಂದ ಗಮನಿಸಬೇಕು. ಮನುಷ್ಯನು ಯೋಗ್ಯವಾದ ಮಾನಸಿಕ ಸ್ಥಿತಿಯಲ್ಲಿ ಸಾಯುವುದು ಹೇಗೆ? ಭರತ ಮಹಾರಾಜನು ಶ್ರೇಷ್ಠ ವ್ಯಕ್ತಿ. ಆದರೆ ತನ್ನ ಅಂತ್ಯ ಕಾಲದಲ್ಲಿ ಆತನು ಒಂದು ಜಿಂಕೆಯನ್ನು ಕುರಿತು ಯೋಚಿಸಿದನು. ಆದುದರಿಂದ ಅವನ ಮುಂದಿನ ಜನ್ಮದಲ್ಲಿ ಆತನು ಒಂದು ಜಿಂಕೆಯ ಶರೀರವನ್ನು ಪ್ರವೇಶಿಸುವಂತಾಯಿತು.

ಜಿಂಕೆಯರೂಪದಲ್ಲಿ ಆತನು ತನ್ನ ಹಿಂದಿನ ಕೆಲಸಕಾರ್ಯಗಳನ್ನು ಸ್ಮರಿಸಿದರೂ ಆತನು ಪ್ರಾಣಿಯ ದೇಹವನ್ನು ಸ್ವೀಕರಿಸಬೇಕಾಯಿತು. ಇದು ನಿಜ, ಮನುಷ್ಯನಿಗೆ ತನ್ನ ಜೀವಿತಕಾಲದಲ್ಲಿ ಬಂದ ಯೋಚನೆಗಳು ಒಟ್ಟಾಗಿ, ಸಾವಿನ ಕ್ಷಣದಲ್ಲಿ ಅವನ ಯೋಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಆದುದರಿಂದ ಈ ಜನ್ಮವು ಮುಂದಿನ ಜನ್ಮವನ್ನು ಸೃಷ್ಟಿಸುತ್ತದೆ. ಈ ಜನ್ಮದಲ್ಲಿ ಮನುಷ್ಯನು ಸತ್ವಗುಣದಲ್ಲಿ ಬಾಳಿದರೆ ಮತ್ತು ಸದಾ ಕೃಷ್ಣನ ಚಿಂತನೆ ಮಾಡಿದರೆ ತನ್ನ ಅಂತ್ಯಕಾಲದಲ್ಲಿ ಕೃಷ್ಣನನ್ನು ಸ್ಮರಿಸುವುದು ಸಾಧ್ಯವಾಗುತ್ತದೆ. ಇದರಿಂದ ಅವನಿಗೆ ಕೃಷ್ಣನ ದಿವ್ಯಭಾವಕ್ಕೆ ಸಾಗಿ ಹೋಗಲು ನೆರವಾಗುತ್ತದೆ.

ಮನುಷ್ಯನು ಕೃಷ್ಣಸೇವೆಯಲ್ಲಿ ಅಲೌಕಿಕವಾಗಿ ತನ್ಮಯನಾಗಿದ್ದರೆ ಅವನ ಮುಂದಿನ ಜನ್ಮದ ಶರೀರವು ಅಧ್ಯಾತ್ಮಿಕವಾಗಿರುತ್ತದೆ. ಭೌತಿಕವಾಗಿರುವುದಿಲ್ಲ. ಆದುದರಿಂದ ಈ ಜನ್ಮದ ಅಂತ್ಯದಲ್ಲಿ ತನ್ನ ಭಾವವನ್ನು ಯಶಸ್ವಿಯಾಗಿ ಬದಲಾವಣೆ ಮಾಡಲು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಸಂಕೀರ್ತನೆ ಮಾಡುವುದೇ ಅತ್ಯುತ್ತಮ ಪ್ರಕ್ರಿಯೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 7

ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ |

ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಃ ||7||

ಅನುವಾದ: ಆದುದರಿಂದ, ಅರ್ಜುನನೆ, ನೀನು ಯಾವಾಗಲೂ ನನ್ನನ್ನು ಕೃಷ್ಣನ ರೂಪದಲ್ಲಿ ಸ್ಮರಿಸುತ್ತಿರಬೇಕು. ಅದೇಕಾಲದಲ್ಲಿ ಯುದ್ಧಮಾಡುವ ನಿನ್ನ ವಿಧಿತ ಕರ್ತವ್ಯವನ್ನು ಮಾಡಬೇಕು. ನಿನ್ನ ಚಟುವಟಿಕೆಗಳನ್ನು ನನಗೆ ಅರ್ಪಿಸಿ ನಿನ್ನ ಮನಸ್ಸು ಮತ್ತು ಬುದ್ಧಿಶಕ್ತಿಗಳು ನನ್ನಲ್ಲಿ ನೆಲೆಸಿದ್ದರೆ ನಿಸ್ಸಂಶಯವಾಗಿಯೂ ನೀನು ನನ್ನನ್ನೇ ಹೊಂದುವೆ.

ಭಾವಾರ್ಥ: ಪ್ರಾಪಂಚಿಕ ಕೆಲಸಕಾರ್ಯಗಳಲ್ಲಿ ತೊಡಗಿರುವ ಎಲ್ಲರಿಗೆ ಅರ್ಜುನನಿಗೆ ಮಾಡಿದ ಈ ಉಪದೇಶವು ಬಹುಮುಖ್ಯವಾದದ್ದು. ಮನುಷ್ಯನು ತನ್ನ ವಿಧಿತ ಕರ್ತವ್ಯಗಳನ್ನಾಗಲೀ ಕಾರ್ಯಕ್ರಮಗಳನ್ನಾಗಲೀ ಬಿಟ್ಟುಬಿಡಬೇಕೆಂದು ಭಗವಂತನು ಹೇಳುವುದಿಲ್ಲ. ಅವುಗಳನ್ನು ಮುಂದುವರಿಸುತ್ತಲೇ ಹರೇ ಕೃಷ್ಣ ಸಂಕೀರ್ತನೆಯಿಂದ ಕೃಷ್ಣನನ್ನು ಧ್ಯಾನಿಸಬಹುದು. ಇದು ಮನುಷ್ಯನನ್ನು ಐಹಿಕ ಕಶ್ಮಲದ ಸೋಂಕಿನಿಂದ ಬಿಡಿಸಿ ಮನಸ್ಸನ್ನೂ ಬುದ್ಧಿಯನ್ನೂ ಕೃಷ್ಣನಲ್ಲಿ ನಿಲ್ಲಿಸುತ್ತದೆ. ಕೃಷ್ಣನ ಹೆಸರುಗಳ ಸಂಕೀರ್ತನೆಯಿಂದ ಆತನು ನಿಶ್ಚಯವಾಗಿ ಕೃಷ್ಣಲೋಕಕ್ಕೆ ತೆರಳುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ